ಭಾರತ ಕ್ರಿಕೆಟ್ ತಂಡ ಸದ್ಯ ಇಂಗ್ಲೆಂಡ್ (India vs England) ವಿರುದ್ಧ ಬಾಕಿ ಉಳಿದಿರುವ ಅಂತಿಮ ಐದನೇ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಅವರ ಆಕರ್ಷಕದ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 448 ರನ್ ರನ್ ಕಲೆಹಾಕಿದೆ. ಈ ಟೆಸ್ಟ್ ಪಂದ್ಯ ಅಂತ್ಯವಾದ ಬಳಿಕ ಟೀಮ್ ಇಂಡಿಯಾ ಆಂಗ್ಲರ ವಿರುದ್ಧ ಸೀಮಿತ ಓವರ್ಗಳ ಸರಣಿ ಆಡಲಿದೆ. ಈ ಪೈಕಿ ಜುಲೈ 7 ರಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಇದಕ್ಕೂ ಮುನ್ನ ಇಂಡಿಯನ್ಸ್ ತಂಡ ಡರ್ಬಿಶೈರ್ (Derbyshire vs Indians) ವಿರುದ್ಧ ಟಿ20 ಅಭ್ಯಾಸ ಪಂದ್ಯವನ್ನು ಆಡಿದೆ. ಇದರಲ್ಲಿ ದಿನೇಶ್ ಕಾರ್ತಿಕ್ (Dinesh Karthik) ನಾಯಕತ್ವದ ಇಂಡಿಯನ್ಸ್ ತಂಡ ಭರ್ಜರಿ ಆಟವಾಡಿ 7 ವಿಕೆಟ್ಗಳ ಅಮೋಘ ಗೆಲುವು ಕಂಡಿತು.
ಈ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಯುವ ಬೌಲರ್ ಉಮ್ರಾನ್ ಮಲಿಕ್ ತಮ್ಮ ಮಿಂಚಿನ ವೇಗದ ಮೂಲಕ ಎದುರಾಳಿ ಬ್ಯಾಟರ್ ಅನ್ನು ಕ್ಲೀನ್ ಬೌಲ್ಡ್ ಮಾಡಿದರು. ಡರ್ಬಿಶೈರ್ ತಂಡದ ಬ್ಯಾಟರ್ ಬ್ರೂಕ್ ಗೆಸ್ಟ್ ಅವರು ಮಲಿಕ್ ಬೌಲಿಂಗ್ ಸ್ಪೀಡ್ ಅರಿಯದೆ ಔಟಾದರು. ಮಿಡಲ್ ವಿಕೆಟ್ಗೆ ಚೆಂಡು ಬಡಿದ ರಭಸಕ್ಕೆ ವಿಕೆಟ್ ಕೊಂಚ ದೂರ ಹೋಗಿ ಬಿದ್ದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Jasprit Bumrah: ಹೆಸರಿಗಷ್ಟೇ ಬುಮ್ರಾ ಕ್ಯಾಪ್ಟನ್: ಮೈದಾನದಲ್ಲಿ ಕಿಂಗ್ ಕೊಹ್ಲಿಯದ್ದೇ ನಿರ್ಧಾರ
Umran Malik – Too Hot To Handle ??#ENGvIND #warmupmatch #indiancricket #teamindia #Derbyshire #dineshkarthik #umranmalik pic.twitter.com/Kj6PY3F6yo
— CRICKETNMORE (@cricketnmore) July 1, 2022
ಡರ್ಬಿಯ ಕೌಂಟಿ ಗ್ರೌಂಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ಗೆ ಇಳಿದ ಡರ್ಬಿಶೈರ್ ಉಮ್ರಾನ್ ಮಲಿಕ್ ಮತ್ತು ಅರ್ಶ್ದೀಪ್ ಸಿಂಗ್ ಬೌಲಿಂಗ್ ದಾಳಿಗೆ ನಲುಗಿ ಹೋಯಿತು. ಮೊದಲ ಓವರ್ನಲ್ಲೇ ವಿಕೆಟ್ ಕಳೆದುಕೊಂಡ ಡರ್ಬಿಶೈರ್ಗೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಆಸರೆಯಾದರು. ಮಡ್ಸೇನ್ 23 ಎಸೆತಗಳಲ್ಲಿ 28 ರನ್ ಗಳಿಸಿದರೆ, ಕಾರ್ಟ್ವ್ರೈಟ್ 27, ಬ್ರೂಕ್ ಗೆಸ್ಟ್ 23 ಹಾಗೂ ಅಲೆಕ್ಸ್ ಹಗ್ಸ್ 24 ರನ್ ಗಳಿಸಿದರು. ಪರಿಣಾಮ ಡರ್ಬಿಶೈರ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 150 ರನ್ ಕಲೆಹಾಕಿತು. ಇಂಡಿಯನ್ಸ್ ತಂಡದ ಪರ ಅರ್ಶ್ದೀಪ್ ಹಾಗೂ ಮಲಿಕ್ ತಲಾ 2 ವಿಕೆಟ್ ಕಿತ್ತರೆ, ಅಕ್ಷರ್ ಪಟೇಲ್ ಹಾಗೂ ವೆಂಕಟೇಶ್ ತಲಾ 1 ವಿಕೆಟ್ ಪಡೆದರು.
ಸವಾಲಿನ ಗುರಿ ಬೆನ್ನಟ್ಟಿದ ಇಂಡಿಯನ್ಸ್ ಕೂಡ ಮೊದಲ ಓವರ್ನಲ್ಲೇ ರುತುರಾಜ್ ಗಾಯಕ್ವಾಡ್ (3) ವಿಕೆಟ್ ಕಳೆದುಕೊಂಡಿತು. ಈ ಮೂಲಕ ಗಾಯಕ್ವಾಡ್ ಕಳಪೆ ಫಾರ್ಮ್ ಇಲ್ಲೂ ಮುಂದುವರೆದಿದೆ. ಆದರೆ, ಎರಡನೇ ವಿಕೆಟ್ಗೆ ಸಂಜು ಸ್ಯಾಮ್ಸನ್ ಹಾಗೂ ದೀಪಕ್ ಹೂಡ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಮತ್ತೊಮ್ಮೆ ಅಬ್ಬರಿಸಿದ ಈ ಜೋಡಿ 55 ರನ್ಗಳ ಕಾಣಿಕೆ ನೀಡಿದರು. ಸಂಜು 30 ಎಸೆತಗಳಲ್ಲಿ 38 ರನ್ ಸಿಡಿಸಿ ಔಟಾದರು.
ನಂತರ ಹೂಡ ಜೊತೆಯಾದ ಸೂರ್ಯಕುಮಾರ್ ಯಾದವ್ ಮತ್ತೊಂದು ಅಮೋಘ ಇನ್ನಿಂಗ್ಸ್ ಕಟ್ಟಿದರು. ಡರ್ಬಿಶೈರ್ ಬೌಲರ್ಗಳ ಬೆವರಿಳಿಸಿದ ಈ ಜೋಡಿ ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿದರು. ಹೂಡ ಮತ್ತೊಮ್ಮೆ ಆಕರ್ಷಕ ಅರ್ಧಶತಕ ಸಿಡಿಸಿದರು. ಕೇವಲ 37 ಎಸೆತಗಳಲ್ಲಿ 5 ಫೋರ್, 2 ಸಿಕ್ಸರ್ ನೆರವಿನಿಂದ 59 ರನ್ ಚಚ್ಚಿದರು. ಸೂರ್ಯ 22 ಎಸೆತಗಳಲ್ಲ 36 ರನ್ ಗಳಿಸಿ ಔಟಾಗದೆ ಉಳಿದರೆ ನಾಯಕ ದಿನೇಶ್ ಕಾರ್ತಿಕ್ ಅಜೇಯ 7 ರನ್ ಗಳಿಸಿದರು. ಪರಿಣಾಮ ಭಾರತ 16.4 ಓವರ್ನಲ್ಲೇ 3 ವಿಕೆಟ್ ನಷ್ಟಕ್ಕೆ 151 ರನ್ ಬಾರಿಸಿ ಭರ್ಜರಿ ಗೆಲುವು ಕಂಡಿತು. ಇಂಡಿಯನ್ಸ್ ತಂಡ ತನ್ನ ಮುಂದಿನ ಅಭ್ಯಾಸ ಪಂದ್ಯವನ್ನು ಜುಲೈ 3ರಂದು ನಾರ್ಥಾಂಪ್ಟನ್‌ಶೈರ್ ವಿರುದ್ಧ ಆಡಲಿದೆ.
Ravindra Jadeja: ಜಡೇಜಾ ಶತಕವನ್ನು ತನ್ನ ಶತಕದಂತೆ ಸಂಭ್ರಮಿಸಿದ ವಿರಾಟ್ ಕೊಹ್ಲಿ: ವೈರಲ್ ವಿಡಿಯೋ
Published On - 11:20 am, Sun, 3 July 22