
ಹದಿನೈದನೇ ಆವೃತ್ತಿಯ ಏಷ್ಯಾಕಪ್ನ (Asia Cup 2022) ಸೂಪರ್ 4 ಹಂತದಲ್ಲಿ ಆಡಿದ ಮೊದಲೆರಡು ಪಂದ್ಯದಲ್ಲಿ ಸೋತ ಪರಿಣಾಮ ಭಾರತ ಟೂರ್ನಿಯಿಂದ ಹೊರಬಿದ್ದಿದೆ. ಆದರೆ, ಭಾರತದ ಪ್ರತಿ ಪಂದ್ಯಕ್ಕೆ ಬಾಲಿವುಡ್ ನಟಿ ಊರ್ವಶಿ ರೌಟೇಲ (Urvashi Rautela) ಹಾಜರಿರುತ್ತಿದ್ದರು. ಕಳೆದ ಕೆಲವು ದಿನಗಳಿಂದ ರಿಷಭ್ ಪಂತ್ ಹೆಸರಿನೊಂದಿಗೆ ಬಾರೀ ಚರ್ಚೆಯಲ್ಲಿದ್ದ ನಟಿ ಇದೀಗ ಪಾಕಿಸ್ತಾನ ಆಟಗಾರನ ಜೊತೆ ಸುದ್ದಿಯಲ್ಲಿದ್ದಾರೆ. ಪಾಕಿಸ್ತಾನದ ಕ್ರಿಕೆಟಿಗ ನಸೀಮ್ ಶಾ (Naseem Shah) ಜೊತೆಗಿನ ವಿಡಿಯೋ ಮೂಲಕ ರೌಟೇಲ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಸ್ವತಃ ಊರ್ವಶಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋ ಸ್ಟೇಟಸ್.
ಊರ್ವಶಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪಾಕಿಸ್ತಾನದ ವೇಗದ ಬೌಲರ್ ನಸೀಮ್ ಶಾ ಹಾಗೂ ಊರ್ವಶಿ ನಗುತ್ತಿರುವುದನ್ನು ಕಾಣಬಹುದು. ಈ ವಿಡಿಯೋದ ಹಿನ್ನೆಲೆಯಲ್ಲಿ ಅತೀಫ್ ಅಸ್ಲಾಂ ಅವರ ರೊಮ್ಯಾಂಟಿಕ್ ಹಾಡು ಪ್ಲೇ ಆಗುತ್ತಿದೆ. ಅದರ ನಂತರ ಊರ್ವಶಿ ಮತ್ತು ನಸೀಮ್ ನಡುವೆ ಏನೋ ನಡೆಯುತ್ತಿದೆ ಎಂದು ಊಹಿಸಲಾಗಿದೆ. ಇಬ್ಬರು ಕಣ್ಣಲ್ಲೇ ಮಾತನಾಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದು ಊರ್ವಶಿ ಹಾಗೂ ನಸೀಮ್ ಶಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಮ್ಸ್ ಸುರಿಮಳೆಯಾಗುತ್ತಿದೆ. ಇಬ್ಬರ ಫೋಟೋಗಳು ಮತ್ತು ವಿಡಿಯೋಗಳನ್ನು ಎಡಿಟ್ ಮಾಡಿ ಹಲವು ಫನ್ನಿ ಮೀಮ್ಗಳನ್ನು ಮಾಡಲಾಗಿದೆ.
ಈ ಹಿಂದೆ ರಿಷಭ್ ಪಂತ್ ಹಾಗೂ ಊರ್ವಶಿ ರೌಟೇಲ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಸುದ್ದಿಗಳು ಮುನ್ನಲೆಗೆ ಬರುತ್ತಿದ್ದಂತೆ ಪಂತ್ ಬ್ರೇಕಪ್ ಮಾಡಿಕೊಂಡಿದ್ದರು. ಈ ವಿಷಯವನ್ನು ಇತ್ತೀಚೆಗೆ ಊರ್ವಶಿ ಕೂಡ ಸಂದರ್ಶನವೊಂದರಲ್ಲಿ ಪ್ರಸ್ತಾಪಿಸಿದ್ದರು. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಬಳಿಕ ದಿಢೀರ್ ಆಗಿ ಭಾರತ–ಪಾಕ್ ನಡುವಣ ಕದನದ ವೇಳೆ ಊರ್ವಶಿ ರೌಟೇಲ ಕಾಣಿಸಿಕೊಂಡಿದ್ದಾರೆ.
ಅಲ್ಲದೆ ಅಭಿಮಾನಿಗಳಿಗೆ ಪೋಸ್ಟ್ ನೀಡುತ್ತಾ ಸ್ಟೇಡಿಯಂನಲ್ಲಿ ಮಿಂಚಿದ್ದರು. ಆದರೆ, ಪಂತ್ ಕಳಪೆ ಫಾರ್ಮ್ನಿಂದ ಬೇಗನೆ ಔಟಾಗಿದ್ದರು. ಇದರ ನಡುವೆ ಊರ್ವಶಿ ರೌಟೇಲ ಅವರ ಖುಷಿ ಖುಷಿಯಾಗಿರುವ ವಿಡಿಯೋ ವೈರಲ್ ಆಗಿತ್ತು. ಈ ಖುಷಿಗೆ ಪಂತ್ ಬೇಗನೆ ಔಟಾಗಿದ್ದು ಕಾರಣನಾ ಎಂದು ಕೂಡ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು.
Published On - 12:39 pm, Fri, 9 September 22