AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರಿಷಭ್ ಪಂತ್ ಕಳಪೆಯಾಟ: ಖುಷಿ ಖುಷಿಯಾಗಿ ಕಾಣಿಸಿಕೊಂಡ ಮಾಜಿ ಪ್ರಿಯತಮೆ..!

IND vs PAK: ದುಬೈನಲ್ಲಿ ನಡೆದ  ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿಯ (60) ಅರ್ಧಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 181 ರನ್​ ಕಲೆಹಾಕಿತು.

Viral Video: ರಿಷಭ್ ಪಂತ್ ಕಳಪೆಯಾಟ: ಖುಷಿ ಖುಷಿಯಾಗಿ ಕಾಣಿಸಿಕೊಂಡ ಮಾಜಿ ಪ್ರಿಯತಮೆ..!
Rishabh Pant-Urvashi Rautela
TV9 Web
| Edited By: |

Updated on: Sep 05, 2022 | 12:54 PM

Share

Rishabh Pant-Urvashi Rautela: ಭಾನುವಾರ ನಡೆದ ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯದ ವೇಳೆ ಬಾಲಿವುಡ್ ನಟಿ ಊರ್ವಶಿ ರೌಟೇಲ ಕಾಣಿಸಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ರಿಷಭ್ ಪಂತ್ ಹೆಸರಿನೊಂದಿಗೆ ತಳುಕು ಹಾಕಿಕೊಂಡು ಸುದ್ದಿಯಲ್ಲಿರುವ ನಟಿ, ಇದೀಗ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ಏಕೆಂದರೆ ಅತ್ತ ಟೀಮ್ ಇಂಡಿಯಾ ಪರ ರಿಷಭ್ ಪಂತ್ ಕಳಪೆ ಪ್ರದರ್ಶನ ನೀಡಿದ್ದರೆ, ಇತ್ತ ಸ್ಟೇಡಿಯಂನಲ್ಲಿ ಊರ್ವಶಿ ಖುಷಿ ಖುಷಿಯಾಗಿ ಕಾಣಿಸಿಕೊಂಡಿದ್ದರು. ಈ ಹಿಂದೆ ರಿಷಭ್ ಪಂತ್ ಹಾಗೂ ಊರ್ವಶಿ ರೌಟೇಲ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಸುದ್ದಿಗಳು ಮುನ್ನಲೆಗೆ ಬರುತ್ತಿದ್ದಂತೆ ಪಂತ್ ಬ್ರೇಕಪ್ ಮಾಡಿಕೊಂಡಿದ್ದರು. ಈ ವಿಷಯವನ್ನು ಇತ್ತೀಚೆಗೆ ಊರ್ವಶಿ ಕೂಡ ಸಂದರ್ಶನವೊಂದರಲ್ಲಿ  ಪ್ರಸ್ತಾಪಿಸಿದ್ದರು.

ಆರ್‌ಪಿ ಹೆಸರಿನ ಕ್ರಿಕೆಟಿಗ ತನ್ನನ್ನು ಹೋಟೆಲ್‌ಗೆ ಭೇಟಿಯಾಗಲು ಬಂದಿದ್ದ. ಅಲ್ಲದೆ ಪದೇ ಪದೇ ಕರೆ ಮಾಡುತ್ತಿದ್ದ ಎಂದು ಊರ್ವಶಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಇಲ್ಲಿ ಆರ್‌ಪಿ ಎನ್ನುವ ಹೆಸರು ಉಲ್ಲೇಖಿಸಿದ್ದರಿಂದ ಅದು ರಿಷಭ್ ಪಂತ್ ಅವರನ್ನೇ ಉದ್ದೇಶಿಸಿ ಎಂದು ವರದಿಗಳಾಗಿದ್ದವು.

ಆ ಬಳಿಕ ಜನರು ಹೆಸರುಗಳಿಸಲು ಸುಳ್ಳುಗಳನ್ನು ಹೇಳುತ್ತಾರೆ ಎಂದು ರಿಷಭ್ ಪಂತ್ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಾಕಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಊರ್ವಶಿ ಛೋಟು ಭಯ್ಯಾ ಕ್ರಿಕೆಟ್‌ನತ್ತ ಗಮನ ಹರಿಸು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ಮಾಜಿ ಪ್ರೇಮಿಗಳ ನಡುವಣ ಈ ಸೋಷಿಯಲ್ ಮೀಡಿಯಾ ವಾರ್ ತಾರಕ್ಕೇರುತ್ತಿದ್ದಂತೆ ಏಷ್ಯಾಕಪ್ ಕೂಡ ಶುರುವಾಗಿತ್ತು. ಇತ್ತ ದುಬೈ ಸ್ಟೇಡಿಯಂನಲ್ಲಿ ಆಗಸ್ಟ್ 28 ರಂದು ನಡೆದ ಪಾಕ್ ವಿರುದ್ದದ ಟೀಮ್ ಇಂಡಿಯಾ ಪಂದ್ಯದ ವೇಳೆ ಕಾಣಿಸಿಕೊಳ್ಳುವ ಮೂಲಕ ಊರ್ವಶಿ ಮಿಂಚಿದ್ದರು.

ಇದೀಗ ಸೂಪರ್-4 ಹಂತದ ಭಾರತ-ಪಾಕ್ ನಡುವಣ ಕದನದ ವೇಳೆಯೂ ಊರ್ವಶಿ ರೌಟೇಲ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಅಭಿಮಾನಿಗಳಿಗೆ ಪೋಸ್ಟ್ ನೀಡುತ್ತಾ ಸ್ಟೇಡಿಯಂನಲ್ಲಿ ಮಿಂಚಿದ್ದರು. ಅತ್ತ ಮಹತ್ವದ ಪಂದ್ಯದಲ್ಲಿ 12 ಎಸೆತಗಳಲ್ಲಿ ಕೇವಲ 14 ರನ್​ಗಳಿಸಿ ರಿಷಭ್ ಪಂತ್ ಔಟಾಗಿದ್ದರು.

ಇದೀಗ ಊರ್ವಶಿ ರೌಟೇಲ ಅವರ ಖುಷಿ ಖುಷಿಯಾಗಿರುವ ವಿಡಿಯೋ ವೈರಲ್ ಆಗಿದ್ದು, ಈ ಖುಷಿಗೆ ಪಂತ್ ಬೇಗನೆ ಔಟಾಗಿದ್ದು ಕಾರಣನಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕಿಚಾಯಿಸುತ್ತಿದ್ದಾರೆ.

ಇನ್ನು ದುಬೈನಲ್ಲಿ ನಡೆದ  ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿಯ (60) ಅರ್ಧಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 181 ರನ್​ ಕಲೆಹಾಕಿತು. ಈ ಕಠಿಣ ಟಾರ್ಗೆಟ್ ಬೆನ್ನತ್ತಿದ ಪಾಕ್ ಪರ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ (71) ಅರ್ಧಶತಕ ಬಾರಿಸಿದರು. ಇದಾಗ್ಯೂ ಅಂತಿಮ ಹಂತದಲ್ಲಿ ಪಂದ್ಯವು ರೋಚಕಘಟ್ಟದತ್ತ ಸಾಗಿತು. ಅದರಂತೆ ಕೊನೆಯ ಓವರ್​ನಲ್ಲಿ 7 ರನ್​ಗಳ ಟಾರ್ಗೆಟ್ ಪಡೆದ ಪಾಕಿಸ್ತಾನ್ ತಂಡವು 1 ಎಸೆತ ಬಾಕಿಯಿರುವಾಗ 182 ರನ್​ಗಳ ಗುರಿ ಮುಟ್ಟುವ ಮೂಲಕ 5 ವಿಕೆಟ್​ಗಳ ರೋಚಕ ಜಯ ಸಾಧಿಸಿತು.