
ಭಾರತೀಯ ಕ್ರಿಕೆಟ್ನ ಮುಂದಿನ ಸೂಪರ್ ಸ್ಟಾರ್ ಎಂದೇ ಬಿಂಬಿತನಾಗಿರುವ 15 ವರ್ಷದ ಯುವ ದಾಂಡಿಗ ವೈಭವ್ ಸೂರ್ಯವಂಶಿಗೆ (Vaibhav Sooryavanshi) ಬಿಗ್ ಆಫರ್ ನೀಡಲಾಗಿದೆ. ಅದು ಕೂಡ ಬರೋಬ್ಬರಿ 12 ಕೋಟಿ ರೂ. ಭರ್ಜರಿ ಆಫರ್. ಪ್ರಮುಖ ಕಾರ್ಪೊರೇಟ್ ಟೈರ್ ಕಂಪೆನಿಯೊಂದು ತಮ್ಮ ಬ್ರ್ಯಾಂಡ್ ಲೋಗೊವನ್ನು ಬ್ಯಾಟ್ ಮೇಲೆ ಪ್ರದರ್ಶಿಸಲು ವೈಭವ್ಗೆ ಬರೋಬ್ಬರಿ 12 ಕೋಟಿ ರೂಪಾಯಿಗಳ ವಾರ್ಷಿಕ ಸ್ಪಾನ್ಸರ್‌ಶಿಪ್ ಆಫರ್ ನೀಡಿದೆ ಎಂದು ವರದಿಯಾಗಿದೆ.
ಇದರ ಜೊತೆಗೆ ಮತ್ತೊಂದು ಟೈರ್ ಕಂಪೆನಿ ಕೂಡ ವೈಭವ್ ಸೂರ್ಯವಂಶಿಯ ಬ್ಯಾಟ್ ಸ್ಪಾನ್ಸರ್ಶಿಪ್ಗಾಗಿ ತೆರೆಮರೆಯ ಪ್ರಯತ್ನ ನಡೆಸುತ್ತಿದ್ದಾರೆ. ಅಂದರೆ ಎರಡು ಪ್ರಮುಖ ಕಂಪೆನಿಗಳು ವೈಭವ್ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಬ್ಯಾಟ್ ಸ್ಪಾನ್ಸರ್ಶಿಪ್ನಿಂದಾಗಿ ಯುವ ದಾಂಡಿಗ ಕೋಟಿ ರೂ. ಎನಿಸುವುದು ಖಚಿತ ಎಂದೇ ಹೇಳಬಹುದು.
ಸದ್ಯ ವೈಭವ್ ಸೂರ್ಯವಂಶಿ ಸದ್ಯ ‘SS’ (ಸರೀನ್ ಸ್ಪೋರ್ಟ್ಸ್) ಕಂಪನಿಯೊಂದಿಗೆ ವಾರ್ಷಿಕ 50 ಲಕ್ಷ ರೂಪಾಯಿಗಳ ಬ್ಯಾಟ್ ಒಪ್ಪಂದವನ್ನು ಹೊಂದಿದ್ದಾರೆ. 3 ವರ್ಷಗಳ ಹಳೆಯ ಈ ಒಪ್ಪಂದವು ಮುಕ್ತಾಯದ ಹಂತದಲ್ಲಿದೆ. ಈ ಒಪ್ಪಂದವು ಮುಗಿಯುತ್ತಿದ್ದಂತೆ ವೈಭವ್ ಸೂರ್ಯವಂಶಿಯ ಬ್ಯಾಟ್ ಮೇಲೆ ಹೊಸ ಕಂಪೆನಿಯ ಹೆಸರು ಕಾಣಿಸಿಕೊಳ್ಳಲಿದೆ.
ಆದರೆ ಆ ಕಂಪೆನಿ ಯಾವುದು ಎಂಬುದು ಇನ್ನೂ ಕೂಡ ಬಹಿರಂಗವಾಗಿಲ್ಲ. ಇದಾಗ್ಯೂ ಭಾರತ ಸ್ಟಾರ್ ಆಟಗಾರರ ಬ್ಯಾಟ್ ಸ್ಪಾನ್ಸರ್ ಮಾಡುತ್ತಿರುವ ಎರಡು ಕಂಪೆನಿಗಳೇ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿದು ಬಂದಿದೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಅವರ ಬ್ಯಾಟ್ ಸ್ಪಾನ್ಸರ್‌ಗಳು ಮತ್ತು ಅವರ ವಾರ್ಷಿಕ ಒಪ್ಪಂದದ ಮೊತ್ತದ ವಿವರಗಳು ಈ ಕೆಳಗಿನಂತಿವೆ…
ಅಂದರೆ ಇಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಬ್ಯಾಟ್ಗಳ ಮೇಲೆ ಜಾಹೀರಾತು ನೀಡಿರುವುದು MRF ಮತ್ತು CEAT ಕಂಪೆನಿಗಳು. ಈ ದೈತ್ಯ ಟೈರ್ ಕಂಪೆನಿಗಳೇ ಈಗ ವೈಭವ್ ಸೂರ್ಯವಂಶಿಯ ಬ್ಯಾಟ್ ಮೇಲೂ ಕಣ್ಣಿಟ್ಟಿರುವ ಸಾಧ್ಯತೆಯಿದೆ.
ಸದ್ಯ ಮಾಹಿತಿ ಪ್ರಕಾರ ವೈಭವ್ ಸೂರ್ಯವಂಶಿ ಹಾಗೂ SS ಕಂಪೆನಿ ನಡುವಣ ಒಪ್ಪಂದ ಇನ್ನು ಕೆಲವೇ ತಿಂಗಳಲ್ಲಿ ಮುಗಿಯಲಿದೆ. ಅದಕ್ಕೂ ಮುನ್ನ ಎರಡು ಕಂಪೆನಿಗಳು ವೈಭವ್ ಸ್ಪಾನ್ಸರ್ಶಿಪ್ಗಾಗಿ ಕೋಟಿ ಸುರಿಯಲು ಮುಂದಾಗಿದ್ದಾರೆ.
ಇದನ್ನೂ ಓದಿ: RCB ಪರ ಈ ಬಾರಿ ಒಂದೇ ಒಂದು ಪಂದ್ಯವಾಡದ 9 ಆಟಗಾರರು ಇವರೇ!
ಹೀಗೆ ಕೋಟಿ ಪೈಪೋಟಿಯೊಂದಿಗೆ ವೈಭವ್ ಸೂರ್ಯವಂಶಿ 12 ಕೋಟಿ ರೂ.ಗೆ ಡೀಲ್ ಕುದುರಿಸಿಕೊಳ್ಳಲಿದ್ದಾರಾ ಅಥವಾ 12 ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಆಫರ್ ಪಡೆದು ವಿರಾಟ್ ಕೊಹ್ಲಿಯ (12.5 ಕೋಟಿ ರೂ.) ಬ್ಯಾಟ್ ಸ್ಪಾನ್ಸರ್‌ಶಿಪ್ ದಾಖಲೆ ಮುರಿಯಲಿದ್ದಾರಾ ಕಾದು ನೋಡಬೇಕಿದೆ.