‘ಇದು ಐಪಿಎಲ್ ಅಲ್ಲ, ಮನೆಗೆ ಹೋಗು’; ವೈಭವ್ ಕೆರಳುವಂತೆ ಮಾಡಿದ್ದೇ ಲಂಕಾ ಕ್ರಿಕೆಟಿಗ..!
Vaibhav Sooryavanshi Row Explained: ಶ್ರೀಲಂಕಾದಲ್ಲಿ ನಡೆದ ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ ತ್ರಿಕೋನ ಸರಣಿಯ ಪಂದ್ಯದಲ್ಲಿ ದೊಡ್ಡ ವಿವಾದವೊಂದು ಹುಟ್ಟಿಕೊಂಡಿತ್ತು. ಆರಂಭದಲ್ಲಿ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಮೇಲೆ ಆರೋಪ ಕೇಳಿಬಂದಿತ್ತು. ಆದರೆ, ಈಗ ನಿಜಾಂಶ ಬಹಿರಂಗವಾಗಿದೆ. ಶ್ರೀಲಂಕಾ ಆಟಗಾರ ವಿಷೇನ್ ಹಲಂಬಗೆ "ಮನೆಗೆ ಹೋಗು, ಇದು ಐಪಿಎಲ್ ಅಲ್ಲ" ಎಂದು ವೈಭವ್ಗೆ ನಿಂದಿಸಿದ್ದೇ ಗದ್ದಲಕ್ಕೆ ಕಾರಣ ಎಂಬುದು ವರದಿಯಾಗಿದೆ.

ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಎ ಹಾಗೂ ಭಾರತ ಎ (India A vs Sri Lanka A) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಶ್ರೀಲಂಕಾ ಗೆದ್ದಿತ್ತಾದರೂ, ಪಂದ್ಯ ಮುಗಿದ ಬಳಿಕ ಉಂಟಾಗಿದ್ದ ಗದ್ದಲದಿಂದಾಗಿ ವಿವಾದವೊಂದು ಹುಟ್ಟಿಕೊಂಡಿತ್ತು. ಆರಂಭದಲ್ಲಿ ಆ ಗದ್ದಲದ ವಿಡಿಯೋವನ್ನು ನೋಡಿದವರು ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ದುರಹಂಕಾರಿ ಎಂದು ಟೀಕಿಸಿದ್ದರು. ಅಲ್ಲದೆ ವೈಭವ್ಗೆ ಸರಿಯಾದ ಶಿಕ್ಷೆಯಾಗಬೇಕೆಂಬ ಬೇಡಿಕೆಯನ್ನು ಇಟ್ಟಿದ್ದರು. ಆದರೆ ಪಂದ್ಯ ನಡೆದ ಒಂದು ದಿನದ ಬಳಿಕ ಇಡೀ ಘಟನೆಗೆ ಕಾರಣವೇನು? ವೈಭವ್ ಅಷ್ಟು ಕೋಪಗೊಳ್ಳುವಂತದ್ದು ಏನು ನಡೆಯಿತು ಎಂಬುದು ಈಗ ಬಹಿರಂಗವಾಗಿದೆ.
ವೈಭವ್ ಜಗಳದ ಹಿಂದಿನ ಕಾರಣ ಬಹಿರಂಗ
ವಾಸ್ತವವಾಗಿ ಜೂನ್ 15 ರಂದು ನಡೆದ ಈ ಪಂದ್ಯ ಸೂಪರ್ ಓವರ್ನಲ್ಲಿ ಅಂತ್ಯಗೊಂಡಿತು. ಈ ಸೂಪರ್ ಓವರ್ನಲ್ಲಿ ಆತಿಥೇಯ ತಂಡ ಗೆಲುವು ಸಾಧಿಸಿತು. ಇತ್ತ ಸೋಲಿನ ಹತಾಶೆಯೊಂದಿಗೆ ಡಗೌಟ್ಗೆ ಮರಳುತ್ತಿದ್ದ ವೈಭವ್ ಸೂರ್ಯವಂಶಿ ಬಳಿ ಲಂಕಾ ಕ್ರಿಕೆಟಿಗರು ಕಾಲ್ಕೆರೆದು ಜಗಳ ಮಾಡಿದ್ದರು. ಇದರಿಂದ ಕೋಪಗೊಂಡಿದ್ದ ವೈಭವ್ ಕೂಡ ಲಂಕಾ ಕ್ರಿಕೆಟಿಗರ ವಿರುದ್ಧ ಸೆಟೆದು ನಿಂತಿದ್ದರು. ಆದರೆ ಆ ಸಮಯದಲ್ಲಿ ಈ ಇಡೀ ಘಟನೆಗೆ ಕಾರಣ ಏನು ಎಂಬುದು ತಿಳಿದುಬಂದಿರಲಿಲ್ಲ. ಆದರೀಗ ವೈಭವ್ ಅಷ್ಟು ಆಕ್ರೋಶಗೊಳ್ಳಲು ಏನು ಕಾರಣ ಎಂಬುದು ಬಹಿರಂಗವಾಗಿದೆ. ಈ ಇಡೀ ಘಟನೆಗೆ ಶ್ರೀಲಂಕಾದ ಆಲ್‌ರೌಂಡರ್ ವಿಷೇನ್ ಹಲಂಬಗೆ ಕಾರಣ ಎಂಬುದು ತಿಳಿದುಬಂದಿದೆ.
Vaibhav got into a heated argument with Sri Lankan players after the super over pic.twitter.com/wnGyEF6Nvw
— Abhi (@AbhiMSD_07) June 15, 2026
ಮನೆಗೆ ಹೋಗು, ಇದು ಐಪಿಎಲ್ ಅಲ್ಲ
ಕ್ರಿಕ್‌ಬಜ್ ವರದಿಯ ಪ್ರಕಾರ, ಸೂಪರ್ ಓವರ್ನಲ್ಲಿ ಪಂದ್ಯ ಮುಗಿದ ಬಳಿಕ ಡಗೌಟ್ನತ್ತ ಬರುತ್ತಿದ್ದ ವೈಭವ್ ಬಳಿ ವಿಷೇನ್ ಹಲಂಬಗೆ, ‘ಮನೆಗೆ ಹೋಗು, ಇದು ಐಪಿಎಲ್ ಅಲ್ಲ’ ಎಂದು ಹೇಳಿದ್ದಾರೆ. ಇದನ್ನು ಕೇಳಿದ ವೈಭವ್ ಸೂರ್ಯವಂಶಿ ಕೋಪಗೊಂಡು ಅವರೊಂದಿಗೆ ಜಗಳಕ್ಕಿಳಿದಿದ್ದಾರೆ. ವಿಷೇನ್ ಹಲಂಬಗೆ ನಿನ್ನೆ ನಡೆದ ಪಂದ್ಯದಲ್ಲಿ ಮಾತ್ರವಲ್ಲದೆ ಜೂನ್ 9 ರಂದು ನಡೆದಿದ್ದ ಪಂದ್ಯದಲ್ಲೂ ವೈಭವ್ಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ. ಆ ಪಂದ್ಯದಲ್ಲಿ ವೈಭವ್ನನ್ನು ಪದೇ ಪದೇ ಸ್ಲೆಡ್ಜ್ ಮಾಡಲು ಪ್ರಯತ್ನಿಸಿದ್ದ ವಿಷೇನ್ ಹಲಂಬಗೆ, ಸೋಮವಾರ ನಡೆದ ಪಂದ್ಯದಲ್ಲಿ ವೈಭವ್ ಬ್ಯಾಟಿಂಗ್ ಮಾಡುವಾಗಲೂ ಅದನ್ನು ಮುಂದುವರಿಸಿದ್ದರು ಎಂದು ವರದಿಯಾಗಿದೆ.
ಮೈದಾನದಲ್ಲಿ ಜಗಳ ಮಾಡಿಕೊಂಡಿದ್ದ ವೈಭವ್ ಬೆನ್ನಿಗೆ ನಿಂತ ಶ್ರೀಲಂಕಾದ ಮಾಜಿ ಕ್ರಿಕೆಟಿಗರು
ಅಷ್ಟಕ್ಕೆ ನಿಲ್ಲದ ವಿಷೇನ್ ಹಲಂಬಗೆ, ಸೂಪರ್ ಓವರ್ನಲ್ಲಿ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಮಾಡಲು ಬಂದಾಗಲೂ ತನ್ನ ನೀಚತನವನ್ನು ಪ್ರದರ್ಶಿಸಿದ್ದಾರೆ. ಇದೇ ವೇಳೆ ವೈಭವ್ಗೆ “ಮನೆಗೆ ಹೋಗು, ಇದು ಐಪಿಎಲ್ ಅಲ್ಲ” ಎಂದು ಟೀಕಿಸಿದ್ದಾರೆ ಎಂದು ವರದಿಯಾಗಿದೆ. ಮಾತ್ರವಲ್ಲದೆ ಸೂಪರ್ ಓವರ್ ಮುಗಿದ ನಂತರ ವಿಷೇನ್ ಹಲಂಬಗೆ, ವೈಭವ್ ಸೂರ್ಯವಂಶಿ ಜೊತೆಗೆ ಕಾಲ್ಕೆರೆದು ಮತ್ತೆ ಜಗಳಕ್ಕಿಳಿದಿದ್ದಾರೆ. ಇದರಿಂದ ಕೋಪಗೊಂಡ ವೈಭವ್ ಅವರೊಂದಿಗೆ ವಾಗ್ವಾದ ಶುರು ಮಾಡಿದ್ದಾರೆ. ಈ ಜಗಳಕ್ಕೆ ತಾರಕಕ್ಕೇರುತ್ತಿರುವುದನ್ನು ನೋಡಿದ ಇತರ ಆಟಗಾರರು ಇಬ್ಬರ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:25 pm, Tue, 16 June 26




