AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಮುಂದಿನ ಪಂದ್ಯದಲ್ಲಿ 200 ರನ್ ಹೊಡಿತೀನಿ; ವೈಭವ್ ಸೂರ್ಯವಂಶಿ ಶಪಥ

Vaibhav Suryavanshi: ವೈಭವ್ ಸೂರ್ಯವಂಶಿ ಅವರು ಇಂಗ್ಲೆಂಡ್ ವಿರುದ್ಧದ ಯೂತ್ ಏಕದಿನ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ ಶತಕ ಬಾರಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಕಳೆದ ಪಂದ್ಯದಲ್ಲಿ 78 ಎಸೆತಗಳಲ್ಲಿ 143 ರನ್ ಗಳಿಸಿದ್ದ ವೈಭವ್, ಮುಂದಿನ ಪಂದ್ಯದಲ್ಲಿ ದ್ವಿಶತಕ ಗಳಿಸುವ ಗುರಿ ಹೊಂದಿದ್ದಾರೆ ಎಂದು ಬಿಸಿಸಿಐ ಬಿಡುಗಡೆ ಮಾಡಿದ ವೀಡಿಯೋದಲ್ಲಿ ತಿಳಿಸಿದ್ದಾರೆ. ಅವರ ಈ ಸಾಧನೆ ಭಾರತ ತಂಡಕ್ಕೆ ಸರಣಿ ಗೆಲುವು ತಂದುಕೊಟ್ಟಿದೆ.

IND vs ENG: ಮುಂದಿನ ಪಂದ್ಯದಲ್ಲಿ 200 ರನ್ ಹೊಡಿತೀನಿ; ವೈಭವ್ ಸೂರ್ಯವಂಶಿ ಶಪಥ
Vaibhav Suryavanshi
ಪೃಥ್ವಿಶಂಕರ
|

Updated on:Jul 06, 2025 | 5:32 PM

Share

ಕೇವಲ 14 ನೇ ವಯಸ್ಸಿನಲ್ಲಿ 2025 ರ ಐಪಿಎಲ್‌ಗೆ (IPL) ಪಾದಾರ್ಪಣೆ ಮಾಡಿ 35 ಎಸೆತಗಳಲ್ಲಿ ಶತಕ ಬಾರಿಸಿದ್ದ ವೈಭವ್ ಸೂರ್ಯವಂಶಿ (Vaibhav Suryavanshi) ಈಗಾಗಲೇ ಸೂಪರ್‌ಸ್ಟಾರ್ ಆಗಿದ್ದಾರೆ. ಇದೀಗ 19 ವರ್ಷದೊಳಗಿನವರ ತಂಡದೊಂದಿಗೆ ಇಂಗ್ಲೆಂಡ್‌ ಪ್ರವಾಸದಲ್ಲಿರುವ ವೈಭವ್, ಇಂಗ್ಲೆಂಡ್ ವಿರುದ್ಧದ ಯೂತ್ ಏಕದಿನ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಉಭಯ ತಂಡಗಳ ನಡುವಿನ 4ನೇ ಏಕದಿನ ಪಂದ್ಯದಲ್ಲಿ ವೈಭವ್ ಕೇವಲ 52 ಎಸೆತಗಳಲ್ಲಿ ಬಾರಿಸಿದ್ದು ಯೂತ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ದಾಖಲೆಯನ್ನು ನಿರ್ಮಿಸಿದ್ದಾರೆ. ವೈಭವ್ ಅವರ ಈ ಸ್ಫೋಟಕ ಇನ್ನಿಂಗ್ಸ್​ನಿಂದಾಗಿ ಭಾರತ ತಂಡ ಸರಣಿಯನ್ನು ವಶಪಡಿಸಿಕೊಂಡಿದೆ. ಇದೀಗ ಸರಣಿಯ ಕೊನೆಯ ಪಂದ್ಯಕ್ಕೂ ಮುನ್ನ ವೈಭವ್ ಮಾತನಾಡಿರುವ ವಿಡಿಯೋವನ್ನು ಬಿಸಿಸಿಐ (BCCI) ಬಿಡುಗಡೆ ಮಾಡಿದ್ದು, ಇದರಲ್ಲಿ ಅವರು ಮುಂದಿನ ಪಂದ್ಯದಲ್ಲಿ 200 ರನ್ ಹೊಡೆಯುವುದಾಗಿ ಹೇಳಿದ್ದಾರೆ.

ವೈಭವ್ ಸೂರ್ಯವಂಶಿ ದ್ವಿಶತಕ

ವೈಭವ್ ಸೂರ್ಯವಂಶಿ ಮುಂದಿನ ಪಂದ್ಯದಲ್ಲಿ ದ್ವಿಶತಕ ಬಾರಿಸುವ ಬಗ್ಗೆ ಮಾತನಾಡಿರುವ ವೀಡಿಯೊವನ್ನು ಬಿಸಿಸಿಐ ಹಂಚಿಕೊಂಡಿದೆ. ಆ ವೀಡಿಯೊದಲ್ಲಿ, ವೈಭವ್ ಸೂರ್ಯವಂಶಿ ದ್ವಿಶತಕ ಗಳಿಸುವ ಬಗ್ಗೆ ಮಾತನಾಡುತ್ತಿರುವುದು ಮಾತ್ರವಲ್ಲದೆ ಈ ಗುರಿಯನ್ನು ಹೇಗೆ ಸಾಧಿಸಬಹುದು ಎಂಬುದರ ಬಗ್ಗೆಯೂ ಅವರು ಮಾಹಿತಿಯನ್ನು ನೀಡುತ್ತಿದ್ದಾರೆ. ನಾನು ಇಡೀ 50 ಓವರ್‌ಗಳನ್ನು ಆಡಲು ಪ್ರಯತ್ನಿಸುತ್ತೇನೆ. ನಾನು 50 ಓವರ್‌ಗಳನ್ನು ಆಡಿದರೆ, ಗರಿಷ್ಠ ರನ್ ಗಳಿಸಲು ಸಾಧ್ಯವಾಗುತ್ತದೆ ಮಾತ್ರವಲ್ಲದೆ ತಂಡಕ್ಕೂ ಅದರಿಂದ ಪ್ರಯೋಜನವಾಗುತ್ತದೆ ಎಂದಿದ್ದಾರೆ.

IND vs ENG: ಅಬ್ಬರ ಸಿಡಿಲಬ್ಬರ.. ಇಂಗ್ಲೆಂಡ್​ನಲ್ಲಿ ಸ್ಫೋಟಕ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ

78 ಎಸೆತಗಳಲ್ಲಿ 143 ರನ್

ಮುಂದುವರೆದು ಮಾತನಾಡಿರುವ ವೈಭವ್, ಕಳೆದ ಪಂದ್ಯದಲ್ಲಿ ನಾನು ಔಟಾಗುವಾಗ ಇನ್ನೂ 22 ಓವರ್‌ಗಳು ಉಳಿದಿದ್ದವು. ಅಂದರೆ ನಾನು ಪೂರ್ಣ 22 ಓವರ್‌ಗಳನ್ನು ಆಡಿದ್ದರೆ, ಸುಲಭವಾಗಿ ದ್ವಿಶತಕ ಗಳಿಸಬಹುದಿತ್ತು. ಇದೀಗ ಮುಂದಿನ ಪಂದ್ಯದಲ್ಲಿ ಪೂರ್ಣ 50 ಓವರ್​ಗಳನ್ನು ಆಡಿ ಕಳೆದ ಪಂದ್ಯದಲ್ಲಿ ಮಾಡಲು ಸಾಧ್ಯವಾಗದ ದ್ವಿಶತಕ ಬಾರಿಸುವ ಸಾಧನೆಯನ್ನು ಮುಂದಿನ ಪಂದ್ಯದಲ್ಲಿ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ವಾಸ್ತವವಾಗಿ ಕಳೆದ ಪಂದ್ಯದಲ್ಲಿ ವೈಭವ್ 78 ಎಸೆತಗಳನ್ನು ಎದುರಿಸಿ 143 ರನ್ ಗಳಿಸಿದ್ದರು. ಇದೀಗ ಕೊನೆಯ ಪಂದ್ಯದಲ್ಲಿ 200 ರನ್ ಬಾರಿಸುವುದಾಗಿ ಹೇಳಿರುವ ವೈಭವ್, ಎಷ್ಟು ರನ್ ಬಾರಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:29 pm, Sun, 6 July 25