AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತೀರಾ ಸಾಧಾರಣ ತಂಡ’; ಟೀಂ ಇಂಡಿಯಾಗೆ ಮತ್ತೊಮ್ಮೆ ಛೀಮಾರಿ ಹಾಕಿದ ವೆಂಕಟೇಶ್ ಪ್ರಸಾದ್

Venkatesh Prasad: ತಂಡದ ಪ್ರದರ್ಶನದ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಭಾರತದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಟೀಂ ಇಂಡಿಯಾಗೆ ಛೀಮಾರಿ ಹಾಕಿದ್ದಾರೆ.

‘ತೀರಾ ಸಾಧಾರಣ ತಂಡ’;  ಟೀಂ ಇಂಡಿಯಾಗೆ ಮತ್ತೊಮ್ಮೆ ಛೀಮಾರಿ ಹಾಕಿದ ವೆಂಕಟೇಶ್ ಪ್ರಸಾದ್
ಟೀಂ ಇಂಡಿಯಾ, ವೆಂಕಟೇಶ್ ಪ್ರಸಾದ್
ಪೃಥ್ವಿಶಂಕರ
|

Updated on:Jul 31, 2023 | 8:03 AM

Share

ಅವಕಾಶ ಸಿಕ್ಕಾಗಲೆಲ್ಲ ಟೀಂ ಇಂಡಿಯಾದ (Team India) ಮೇಲೆ ಮುರಿದು ಬೀಳುವ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಹಾಗೂ ಕನ್ನಡಿಗ ವೆಂಕಟೇಶ್ ಪ್ರಸಾದ್ (Venkatesh Prasad) ಇದೀಗ ಮತ್ತೊಮ್ಮೆ ಟೀಂ ಇಂಡಿಯಾವನ್ನು ಗುರಿಯಾಗಿಸಿಕೊಂಡು ಸ್ಫೋಟಕ ಹೇಳಿಕೆ ನೀಡಿದ್ದಾರೆ. ವಾಸ್ತವವಾಗಿ ವೆಸ್ಟ್ ಇಂಡೀಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಟೀಂ ಇಂಡಿಯಾ (India vs West Indies) ಟೀಕಕಾರರ ಬಾಯಿಗೆ ತುತ್ತಾಗಿದೆ. ವಿಶ್ವಕಪ್ (ODI World Cup 2023) ಆರಂಭಕ್ಕೆ 2 ತಿಂಗಳು ಬಾಕಿ ಇದ್ದು, ಇದುವರೆಗಿನ ತಂಡದ ಪ್ರದರ್ಶನ ನೋಡಿದರೆ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ತಂಡಗಳಲ್ಲಿ ಒಂದಾಗಿರುವಂತೆ ಕಾಣುತ್ತಿಲ್ಲ ಎಂಬುದು ಕ್ರಿಕೆಟ್ ಪಂಡಿತರ ಮಾತಾಗಿದೆ. ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಟೀಂ ಇಂಡಿಯಾವನ್ನು 6 ವಿಕೆಟ್‌ಗಳಿಂದ ಸೋಲಿಸಿ 3 ಪಂದ್ಯಗಳ ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿತು. ಈ ಪಂದ್ಯದ ನಂತರ ಟೀಂ ಇಂಡಿಯಾವನ್ನು ಗುರಿಯಾಗಿಸಿಕೊಂಡು ಟ್ರೋಲ್ ಮಾಡಲಾಗುತ್ತಿದೆ. ಇದೀಗ ಈ ಪಟ್ಟಿಗೆ ವೆಂಕಟೇಶ್ ಪ್ರಸಾದ್ ಕೂಡ ಸೇರಿಕೊಂಡಿದ್ದಾರೆ.

ತಂಡ ತೀರಾ ಸಾಧಾರಣವಾಗಿ ಕಾಣುತ್ತಿದೆ

ತಂಡದ ಪ್ರದರ್ಶನದ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಭಾರತದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಟೀಂ ಇಂಡಿಯಾಗೆ ಛೀಮಾರಿ ಹಾಕಿದ್ದಾರೆ. ಟೆಸ್ಟ್ ಹೊರತುಪಡಿಸಿ ಉಳಿದೆರಡು ಮಾದರಿಗಳಲ್ಲಿ ತಂಡ ತೀರಾ ಸಾಧಾರಣವಾಗಿ ಕಾಣುತ್ತಿದೆ ಎಂದಿದ್ದಾರೆ. ಟೀಂ ಇಂಡಿಯಾ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಸೋತಿದೆ. ಕಳೆದ 2 ಟಿ20 ವಿಶ್ವಕಪ್‌ನಲ್ಲೂ ಅತ್ಯಂತ ಕಳಪೆ ಪ್ರದರ್ಶನ ತೋರಿದೆ ಎಂದು ವೆಂಕಟೇಶ್ ಟ್ವೀಟ್ ಮಾಡಿದ್ದಾರೆ.

IND vs AUS: ತೆಗಳಿದವರಿಂದಲೇ ಹೊಗಳಿಕೆ; ರಾಹುಲ್ ಆಟಕ್ಕೆ ವೆಂಕಟೇಶ್ ಪ್ರಸಾದ್ ಹೇಳಿದ್ದೇನು ಗೊತ್ತಾ?

ಸಣ್ಣ ವಿಜಯಗಳನ್ನು ಆಚರಿಸುವ ಅಭ್ಯಾಸ

ಟೀಂ ಇಂಡಿಯಾ ಇಂಗ್ಲೆಂಡ್‌ನಂತೆ ಉತ್ಸಾಹಭರಿತ ತಂಡವಲ್ಲ ಅಥವಾ ಆಸ್ಟ್ರೇಲಿಯಾದಂತಹ ಆಕ್ರಮಣಕಾರಿ ತಂಡವೂ ಅಲ್ಲ ಎಂದು ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ. ಮುಂದೆ ಹಣ, ಅಧಿಕಾರವಿದ್ದರೂ ಸಣ್ಣಪುಟ್ಟ ಗೆಲುವನ್ನು ಸಂಭ್ರಮಿಸುವ ಪರಿಪಾಠ ತಂಡಕ್ಕೆ ಬಂದಿದೆ. ಚಾಂಪಿಯನ್ ತಂಡವಾಗಿ ಟೀಂ ಇಂಡಿಯಾ ಸಾಕಷ್ಟು ದೂರ ಸಾಗಿದೆ. ಪ್ರತಿ ತಂಡವು ಗೆಲ್ಲಲು ಆಡುತ್ತದೆ. ಟೀಂ ಇಂಡಿಯಾ ಕೂಡ ಅದನ್ನೇ ಮಾಡುತ್ತದೆ. ಆದರೆ ಕಾಲಾನಂತರದಲ್ಲಿ ಆಡುವ ವಿಧಾನ ಮತ್ತು ವರ್ತನೆ ಬದಲಾಗುವುದು ತಂಡದ ಕಳಪೆ ಪ್ರದರ್ಶನಕ್ಕೆ ದೊಡ್ಡ ಕಾರಣವಾಗಿದೆ ಎಂದು ವೆಂಕಟೇಶ್ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ವಾಸ್ತವವಾಗಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಸಾಕಷ್ಟು ಪ್ರಯೋಗಗಳನ್ನು ಮಾಡಿದೆ. ಇದೀಗ ಆ ಪ್ರಯೋಗಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿವೆ. ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವುದು ಸಹ ಈ ಪ್ರಯೋಗದ ಭಾಗವಾಗಿತ್ತು. ಆದರೆ ಈ ಇಬ್ಬರು ಅನುಭವಿಗಳನ್ನು ಹೊರಗಿಟ್ಟಿದ್ದ ಟೀಂ ಇಂಡಿಯಾ ಸೋಲಿನ ಭಾರವನ್ನು ಹೊರಬೇಕಾಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:01 am, Mon, 31 July 23