ಪೂರನ್ ಸಿಡಿಲಬ್ಬರದ ಶತಕ; ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿದ ಎಂಐ ನ್ಯೂಯಾರ್ಕ್

MLC 2023: ಅಮೇರಿಕಾದಲ್ಲಿ ನಡೆದ ಚೊಚ್ಚಲ ಆವೃತ್ತಿಯ ಮೇಜರ್ ಲೀಗ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಸಿಯಾಟಲ್ ಓರ್ಕಾಸ್‌ ತಂಡವನ್ನು 7 ವಿಕೆಟ್​​ಗಳಿಂದ ಮಣಿಸಿದ ಅಂಬಾನಿ ಒಡೆತನದ ಎಂಐ ನ್ಯೂಯಾರ್ಕ್ ತಂಡ ಚೊಚ್ಚಲ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಪೂರನ್ ಸಿಡಿಲಬ್ಬರದ ಶತಕ; ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿದ ಎಂಐ ನ್ಯೂಯಾರ್ಕ್
ಎಂಐ ನ್ಯೂಯಾರ್ಕ್ ಚಾಂಪಿಯನ್
Follow us
ಪೃಥ್ವಿಶಂಕರ
| Updated By: Digi Tech Desk

Updated on:Jul 31, 2023 | 10:45 AM

ಅಮೇರಿಕಾದಲ್ಲಿ ನಡೆದ ಚೊಚ್ಚಲ ಆವೃತ್ತಿಯ ಮೇಜರ್ ಲೀಗ್ ಕ್ರಿಕೆಟ್ (Major League Cricket) ಫೈನಲ್ ಪಂದ್ಯದಲ್ಲಿ ಸಿಯಾಟಲ್ ಓರ್ಕಾಸ್‌ ತಂಡವನ್ನು 7 ವಿಕೆಟ್​​ಗಳಿಂದ ಮಣಿಸಿದ ಅಂಬಾನಿ ಒಡೆತನದ ಎಂಐ ನ್ಯೂಯಾರ್ಕ್ (Seattle Orcas vs MI New York) ತಂಡ ಚೊಚ್ಚಲ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತಂಡದ ಗೆಲುವಿನ ಪ್ರಮುಖ ರುವಾರಿ ಎನಿಸಿಕೊಂಡ ನಾಯಕ ನಿಕೋಲಸ್ ಪೂರನ್ (Nicholas Pooran) ಸಂಕಷ್ಟದ ಸಮಯದಲ್ಲಿ ಬ್ಯಾಟಿಂಗ್​ಗೆ ಇಳಿದು ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಯಾಟಲ್ ಓರ್ಕಾಸ್‌ ತಂಡ ಆರಂಭಿಕ ಕ್ವಿಂಟನ್ ಡಿ ಕಾಕ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತ್ತು. ಈ ಗುರಿ ಬೆನ್ನಟ್ಟಿದ ಎಂಐ ನ್ಯೂಯಾರ್ಕ್ ತಂಡ ಇನ್ನು 24 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಎಂಐ ಪರ ನಿಕೋಲಸ್ ಪೂರನ್ ಹೊರತಾಗಿ ಬೌಲಿಂಗ್​ನಲ್ಲಿ ಮಿಂಚಿದ ಟ್ರೆಂಟ್ ಬೌಲ್ಟ್ (Trent Boult) ಹಾಗೂ ರಶೀದ್ ಖಾನ್ (Rashid Khan) ತಲಾ 3 ವಿಕೆಟ್ ಪಡೆದು ಮಿಂಚಿದರು.

ಉಭಯ ತಂಡದಲ್ಲೂ ಹೆಸರಾಂತ ಕ್ರಿಕೆಟಿಗರ ದಂಡೆ ಇದ್ದಿದ್ದರಿಂದ ಫೈನಲ್ ಪಂದ್ಯದಲ್ಲಿ ಸಾಕಷ್ಟು ರೋಚಕತೆಯನ್ನು ನಿರೀಕ್ಷಿಸಲಾಗಿತ್ತು. ಅದರಂತೆ ಪಂದ್ಯ ಕೂಡ ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಯಾಟಲ್ ಓರ್ಕಾಸ್‌ ತಂಡಕ್ಕೆ ಆರಂಭಿಕ ಕ್ವಿಂಟನ್ ಡಿ ಕಾಕ್ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಆದರೆ ಮತ್ತೊಬ್ಬ ಆರಂಭಿಕ ನೌಮಾನ್ ಅನ್ವರ್​ಗೆ ಒಂದಂಕಿ ದಾಟಿ ಮುಂದಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ತಂಡ 25 ರನ್​ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು.

MLC 2023: ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಫೈನಲ್​ಗೆ ಎಂಟ್ರಿಕೊಟ್ಟ ಎಂಐ ನ್ಯೂಯಾರ್ಕ್!

ಕೈಕೊಟ್ಟ ಕ್ಲಾಸೆನ್

ಆ ನಂತರ ಮೂರನೇ ಕ್ರಮಾಂಕದಲ್ಲಿ ಶೆಹನ್ ಜಯಸೂರ್ಯ 19 ರನ್​ಗಳ ಇನ್ನಿಂಗ್ಸ್ ಆಡುವುದರೊಂದಿಗೆ ತಂಡದ ಮೊತ್ತವನ್ನು 60ರ ಗಡಿ ದಾಟಿಸಿದರು. ಆದರೆ ಈ ಹಿಂದೆ ಎಂಐ ನ್ಯೂಯಾರ್ಕ್​ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ ಹೆನ್ರಿಚ್ ಕ್ಲಾಸೆನ್, ಈ ಪಂದ್ಯದಲ್ಲಿ ತೀರ ನಿರಾಸೆ ಮೂಡಿಸಿದರು. ಕಳೆದ ಪಂದ್ಯದಲ್ಲಿ ಕ್ಲಾಸೆನ್ ಎದುರು ದುಬಾರಿಯಾಗಿದ್ದ ರಶೀದ್ ಖಾನ್, ಈ ಬಾರಿ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಮಧ್ಯಮ ಕ್ರಮಾಂಕದಲ್ಲಿ ಶುಭಂ ರಂಜನೆ 29 ರನ್​ಗಳ ಕೊಡುಗೆ ನೀಡಿದರೆ, ಡ್ವೈನ್ ಪ್ರಿಟೋರಿಯಸ್ 21 ರನ್​ಗಳ ಇನ್ನಿಂಗ್ಸ್ ಆಡಿದರು.

ಡಿ ಕಾಕ್ ಏಕಾಂಗಿ ಹೋರಾಟ

ಒಂದೆಡೆ ಮಧ್ಯಮ ಕ್ರಮಾಂಕ ಕುಸಿತ ಕಂಡರೂ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಕ್ವಿಂಟನ್ ಡಿ ಕಾಕ್ ನಿರ್ಣಾಯಕ ಪಂದ್ಯದಲ್ಲಿ 87 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 52 ಎಸೆತಗಳನ್ನು ಎದುರಿಸಿದ ಡಿ ಕಾಕ್ 9 ಬೌಂಡರಿ ಹಾಗೂ 4 ಸಿಕ್ಸರ್ ಸಿಹಿತ 87 ರನ್ ಸಿಡಿಸಿ, ಬೌಲ್ಟ್​ಗೆ ಬಲಿಯಾದರು. ಅಂತಿಮವಾಗಿ ಸಿಯಾಟಲ್ ಓರ್ಕಾಸ್‌ ತಂಡ 183 ರನ್ ಕಲೆಹಾಕಿ, ಎಂಐ ನ್ಯೂಯಾರ್ಕ್ ತಂಡಕ್ಕೆ 184 ರನ್​ಗಳ ಟಾರ್ಗೆಟ್ ನೀಡಿತು.

ಎಂಐ ನ್ಯೂಯಾರ್ಕ್ ತಂಡದ ಕಳಪೆ ಆರಂಭ

ಇನ್ನು 184 ರನ್​ಗಳ ಗುರಿ ಬೆನ್ನಟ್ಟಿದ ಎಂಐ ನ್ಯೂಯಾರ್ಕ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಸ್ಟೀವನ್ ಟೇಲರ್ ಕೇವಲ 3 ಎಸೆತಗಳನ್ನು ಎದುರಿಸಿ, ಖಾತೆ ತೆರೆಯಲು ಸಾಧ್ಯವಾಗದೆ ಪೆವಿಲಿಯನ್ ಸೇರಿಕೊಂಡರು. ಮತ್ತೊಬ್ಬ ಆರಂಭಿಕ ಶಯಾನ್ ಜಹಾಂಗೀರ್ ಕೂಡ 10 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಹೀಗಾಗಿ ಅಂಬಾನಿ ಹುಡುಗರ ಆರಂಭದಲ್ಲೇ ಒತ್ತಡಕ್ಕೆ ಸಿಲುಕಬೇಕಾಯಿತು. ಆದರೆ ಆ ನಂತರ ಜೊತೆಯಾದ ನಾಯಕ ನಿಕೋಲಸ್ ಪೂರನ್ ಹಾಗೂ ಟಿಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಜೊತೆಗೆ ಶತಕದ ಜೊತೆಯಾಟವನ್ನು ಹಂಚಿಕೊಂಡರು. ಈ ನಡುವೆ ಪೂರನ್ ಶತಕ ಸಿಡಿಸಿ ಮಿಂಚಿದರೆ, ಡೇವಿಡ್ 20 ರನ್​ಗಳಿಗೆ ರನೌಟ್​ಗೆ ಬಲಿಯಾದರು. ಆದರೆ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದ ಪೂರನ್ ತಂಡವನ್ನು ಗೆಲುವಿನ ದಡ ಸೇರಿಸಿದರು.

13 ಸಿಕ್ಸರ್, 10 ಬೌಂಡರಿ, ಸ್ಫೋಟಕ ಶತಕ

ಒಂದೆಡೆ ಕಳಪೆ ಆರಂಭದ ಹೊರತಾಗಿಯೂ ತನ್ನ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ ನಾಯಕ ನಿಕೋಲಸ್ ಪೂರನ್ ಕೇವಲ 55 ಎಸೆತಗಳಲ್ಲಿ 10 ಬೌಂಡರಿ ಹಾಗೂ ಬರೋಬ್ಬರಿ 13 ಸಿಕ್ಸರ್​ಗಳ ಸಹಿತ ಅಜೇಯ 137 ರನ್ ಸಿಡಿಸಿದರು. ಹೀಗಾಗಿ ಆರಂಭದಲ್ಲೇ ಸೋಲಿನ ದವಡೆಗೆ ಸಿಲುಕ್ಕಿದ್ದ ಎಂಐ ನ್ಯೂಯಾರ್ಕ್ ತಂಡ ಚಾಂಪಿಯನ್​ ಪಟ್ಟಕ್ಕೇರಿತ್ತೆಂದರೆ ಅದು ಪೂರನ್ ಅವರ ಸ್ಫೋಟಕ ಬ್ಯಾಟಿಂಗ್​ಗೆ ಪ್ರಮುಖ ಕಾರಣ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:28 am, Mon, 31 July 23

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್