VHT 2025-26: ತನ್ನ ವಿಕೆಟ್ ಉರುಳಿಸಿದ ಸ್ಪಿನ್ನರ್ಗೆ ಸ್ಮರಣೀಯ ಉಡುಗೊರೆ ನೀಡಿದ ಕೊಹ್ಲಿ
Virat Kohli's Gesture: ವಿಜಯ್ ಹಜಾರೆ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ 77 ರನ್ ಗಳಿಸಿ ಮಿಂಚಿದರು. ಗುಜರಾತ್‌ನ ಯುವ ಸ್ಪಿನ್ನರ್ ವಿಶಾಲ್ ಜೈಸ್ವಾಲ್ ಅವರ ಎಸೆತದಲ್ಲಿ ಕೊಹ್ಲಿ ಸ್ಟಂಪ್ ಔಟ್ ಆದರು. ಪಂದ್ಯದ ನಂತರ, ಕೊಹ್ಲಿ ವಿಶಾಲ್ ಜೈಸ್ವಾಲ್‌ರನ್ನು ಭೇಟಿಯಾಗಿ, ತಮ್ಮ ವಿಕೆಟ್ ಪಡೆದ ಚೆಂಡಿನ ಮೇಲೆ ಆಟೋಗ್ರಾಫ್ ನೀಡಿ ಅಚ್ಚರಿ ಮೂಡಿಸಿದರು. ಈ ವಿಶೇಷ ಉಡುಗೊರೆ ಕ್ರೀಡಾಮನೋಭಾವಕ್ಕೆ ಉತ್ತಮ ನಿದರ್ಶನವಾಗಿದೆ.

ಡಿಸೆಂಬರ್ 26 ರಂದು ನಡೆದ ವಿಜಯ್ ಹಜಾರೆ ಪಂದ್ಯಾವಳಿಯಲ್ಲಿ (Vijay Hazare Trophy) ದೆಹಲಿ ಮತ್ತು ಗುಜರಾತ್ (Delhi vs Gujarat) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ದೆಹಲಿ ತಂಡದ ಪರ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) 77 ರನ್ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ವಾಸ್ತವವಾಗಿ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ವಿರಾಟ್ ಭರ್ಜರಿ ಶತಕ ಸಿಡಿಸಿದ್ದರು. ಹೀಗಾಗಿ ಎರಡನೇ ಪಂದ್ಯದಲ್ಲೂ ಕೊಹ್ಲಿಯಿಂದ ಅದೇ ರೀತಿಯ ಪ್ರದರ್ಶನವನ್ನು ನಿರೀಕ್ಷಿಸಲಾಗಿತ್ತು. ಅದಕ್ಕೆ ಪೂರಕವಾಗಿ ಕೊಹ್ಲಿ ಕೂಡ ಅರ್ಧಶತಕ ಸಿಡಿಸಿ ಶತಕದತ್ತ ಮುನ್ನುಗ್ಗುತ್ತಿದ್ದರು. ಆದರೆ ಗುಜರಾತ್ ತಂಡದ ಯುವ ಸ್ಪಿನ್ನರ್ ವಿಶಾಲ್ ಜೈಸ್ವಾಲ್ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಕೊಹ್ಲಿ ಸ್ಟಂಪ್ ಔಟಾದರು. ಕೊಹ್ಲಿ ವಿಕೆಟ್ ಪಡೆದ ಸಂತಸದಲ್ಲಿ ವಿಶಾಲ್ ಕೂಡ ಸಂಭ್ರಮಿಸಿದ್ದರು. ಇದೀಗ ಪಂದ್ಯ ಮುಗಿದ ಬಳಿಕ ವಿಶಾಲ್ರನ್ನು ಭೇಟಿಯಾಗಿರುವ ಕೊಹ್ಲಿ, ಅವರಿಗೆ ಸ್ಮರಣೀಯ ಉಡುಗೊರೆಯೊಂದನ್ನು ನೀಡಿದ್ದಾರೆ.
ವಿಶಾಲ್ ಜೈಸ್ವಾಲ್ಗೆ ವಿಶೇಷ ಉಡುಗೊರೆ
ಈ ಟೂರ್ನಿಯಲ್ಲಿ ದೆಹಲಿ ಪರ ಎರಡನೇ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ಸತತ ಎರಡನೇ ಶತಕ ಗಳಿಸುವ ಗುರಿಯೊಂದಿಗೆ ಅವರು 61 ಎಸೆತಗಳಲ್ಲಿ 77 ರನ್ ಕೂಡ ಬಾರಿಸಿದ್ದರು. ಆದರೆ ಜೈಸ್ವಾಲ್ ಅವರ ಅದ್ಭುತ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಯತ್ನದಲ್ಲಿ ಕ್ರೀಸ್ನಿಂದ ಹೊರಬಂದ ಕೊಹ್ಲಿ ಸ್ಟಂಪ್ ಔಟ್ ಆಗಿ ಹೊರನಡೆದರು.
ಕೊಹ್ಲಿ ವಿಕೆಟ್ ಪಡೆದ ಜೈಸ್ವಾಲ್ ಕೂಡ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದ್ದರು.ಇದೀಗ ಪಂದ್ಯ ಮುಗಿದ ನಂತರ ಕೊಹ್ಲಿಯನ್ನು ಭೇಟಿಯಾಗಿರುವ ವಿಶಾಲ್ ಜೈಸ್ವಾಲ್ ಅವರೊಂದಿಗೆ ಫೋಟೋ ತೆಗೆಸಿಕೊಂಡಿರುವುದು ಮಾತ್ರವಲ್ಲದೆ, ಕೊಹ್ಲಿಯ ವಿಕೆಟ್ ಪಡೆದ ಚೆಂಡಿನ ಮೇಲೆ ಕೊಹ್ಲಿಯ ಆಟೋಗ್ರಾಫ್ ಪಡೆದಿದ್ದಾರೆ. ಇದೀಗ ಅದರ ಫೋಟೋವನ್ನು ಜೈಸ್ವಾಲ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹರಿಬಿಟ್ಟಿದ್ದು ಸಾಕಷ್ಟು ವೈರಲ್ ಆಗುತ್ತಿದೆ.
Gujarat’s left-arm spinner Vishal Jayswal, who dismissed Virat Kohli, shared an emotional post after receiving a signed ball as a special memento. ✨#ViratKohli #VijayHazareTrophy #Sportskeeda pic.twitter.com/AvoQDRKNZ1
— Sportskeeda (@Sportskeeda) December 27, 2025
ಫೋಟೋ ಜೊತೆಗೆ ಕೆಲವು ಸಾಲುಗಳನ್ನು ಬರೆದುಕೊಂಡಿರುವ ವಿಶಾಲ್, ‘ಕೊಹ್ಲಿ ಅವರು ವಿಶ್ವ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸುವುದನ್ನು ನೋಡುವುದರಿಂದ ಹಿಡಿದು ಅವರಂತೆಯೇ ಅದೇ ಮೈದಾನದಲ್ಲಿ ಆಡುವ ಮತ್ತು ಅವರ ವಿಕೆಟ್ ಪಡೆಯುವವರೆಗೆ , ಇದು ನಾನು ಎಂದಿಗೂ ಊಹಿಸದ ಕ್ಷಣವಾಗಿದೆ. ವಿರಾಟ್ ಭಾಯ್ ಅವರ ವಿಕೆಟ್ ಪಡೆಯುವುದು ನಾನು ಶಾಶ್ವತವಾಗಿ ಪಾಲಿಸುವ ಅನುಭವವಾಗಿದೆ. ಈ ಸಂದರ್ಭದಲ್ಲಿ, ಈ ಪ್ರಯಾಣ ಮತ್ತು ಈ ಸುಂದರ ಆಟ ನನಗೆ ನೀಡಿದ ಎಲ್ಲದಕ್ಕೂ ನಾನು ತುಂಬಾ ಕೃತಜ್ಞನಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
VHT 2025-26: 77 ರನ್ ಬಾರಿಸಿದ ಕೊಹ್ಲಿಗೆ 10000 ರೂ. ಬಹುಮಾನ ನೀಡಿದ ಬಿಸಿಸಿಐ
4 ವಿಕೆಟ್ ಪಡೆದ ವಿಶಾಲ್ ಜೈಸ್ವಾಲ್
ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ವಿಶಾಲ್ ಜೈಸ್ವಾಲ್, ಹತ್ತು ಓವರ್‌ಗಳಲ್ಲಿ 42 ರನ್ ನೀಡಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಕೊಹ್ಲಿ ಜೊತೆಗೆ, ಅವರು ರಿಷಭ್ ಪಂತ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು ಹಾಗೆಯೇ ಅರ್ಪಿತ್ ರಾಣಾ ಮತ್ತು ನಿತೀಶ್ ರಾಣಾ ಅವರನ್ನು ಔಟ್ ಮಾಡಿದರು. ಜೈಸ್ವಾಲ್ ಅವರ ಈ ದಾಳಿಯಿಂದಾಗಿ ದೆಹಲಿ 50 ಓವರ್‌ಗಳಲ್ಲಿ 254 ರನ್ ಕಲೆಹಾಕಿತು. ಆದಾಗ್ಯೂ, ವಿಶಾಲ್ ಜೈಸ್ವಾಲ್ ತಂಡವು ಪಂದ್ಯವನ್ನು ಗೆಲ್ಲುವಲ್ಲಿ ವಿಫಲವಾಯಿತು. ಅಂತಿಮವಾಗಿ ಗುಜರಾತ್ ತಂಡವು 47.4 ಓವರ್‌ಗಳಲ್ಲಿ 247 ರನ್‌ಗಳಿಗೆ ಆಲೌಟ್ ಆಗಿ ಪಂದ್ಯವನ್ನು ಏಳು ರನ್‌ಗಳಿಂದ ಸೋತಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
