VHT 2025-26: 77 ರನ್ ಬಾರಿಸಿದ ಕೊಹ್ಲಿಗೆ 10000 ರೂ. ಬಹುಮಾನ ನೀಡಿದ ಬಿಸಿಸಿಐ
Virat Kohli Vijay Hazare Trophy: ವಿರಾಟ್ ಕೊಹ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಎರಡು ಪಂದ್ಯಗಳನ್ನು ಆಡಿ ಅಬ್ಬರಿಸಿದರು. 131 ಮತ್ತು 77 ರನ್ ಗಳಿಸಿ ತಂಡಕ್ಕೆ ಜಯ ತಂದರು. ಆದರೆ ಪಂದ್ಯ ಶ್ರೇಷ್ಠ ಪ್ರಶಸ್ತಿಯಾಗಿ 10,000 ರೂ. ಪಡೆದದ್ದು ಅಭಿಮಾನಿಗಳ ಟೀಕೆಗೆ ಗುರಿಯಾಯಿತು. ಬಿಸಿಸಿಐನಂತಹ ಶ್ರೀಮಂತ ಮಂಡಳಿ ನೀಡುವ ಅಲ್ಪ ಮೊತ್ತದ ಬಹುಮಾನದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

ಬಿಸಿಸಿಐ (BCCI) ಆದೇಶದಂತೆ ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಎರಡು ಪಂದ್ಯಗಳನ್ನಾಡಿದ ಕಿಂಗ್ ಕೊಹ್ಲಿ, ಆಡಿದ ಎರಡರಲ್ಲೂ ಅಮೋಘ ಪ್ರದರ್ಶನ ನೀಡಿದರು. ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ (Virat Kohli), ಎರಡನೇ ಪಂದ್ಯದಲ್ಲಿ 77 ರನ್ಗಳ ಗೆಲುವಿನ ಇನ್ನಿಂಗ್ಸ್ ಆಡಿದರು. ಕೊಹ್ಲಿಯ ಈ ಅರ್ಧಶತಕದ ನೆರವಿನಿಂದ ಡೆಲ್ಲಿ ತಂಡ ಗುಜರಾತ್ ವಿರುದ್ಧದ ಈ ಪಂದ್ಯವನ್ನು 7 ರನ್ಗಳಿಂದ ಗೆದ್ದುಕೊಂಡಿದಲ್ಲದೆ, ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿತು. ಈ ಪಂದ್ಯದೊಂದಿಗೆ ಕೊಹ್ಲಿ ಟೂರ್ನಿಯಲ್ಲಿ ಆಡುವುದು ಕೂಡ ಅಂತ್ಯವಾಗಿದೆ. ವಾಸ್ತವವಾಗಿ ಬಿಸಿಸಿಐ, ಟೀಂ ಇಂಡಿಯಾ ಆಟಗಾರರು ಕನಿಷ್ಠ 2 ಪಂದ್ಯಗಳಲ್ಲಾದರೂ ದೇಶಿ ಟೂರ್ನಿಯಲ್ಲಿ ಆಡಬೇಕು ಎಂಬ ಆದೇಶ ಹೊರಡಿಸಿತ್ತು. ಆ ಪ್ರಕಾರ ಕೊಹ್ಲಿ ಎರಡು ಪಂದ್ಯಗಳನ್ನು ಆಡಿದ್ದು, ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
ಇದು ಒಂದೆಡೆಯಾದರೆ, ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ 13 ಬೌಂಡರಿ ಮತ್ತು ಒಂದು ಸಿಕ್ಸರ್‌ಗಳ ಸಹಿತ 77 ರನ್ ಬಾರಿಸಿದರು. ಕೊಹ್ಲಿಯ ಈ ಇನ್ನಿಂಗ್ಸ್‌ನಿಂದಾಗಿ ದೆಹಲಿ ತಂಡವು 50 ಓವರ್‌ಗಳಲ್ಲಿ 254 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಗುರಿ ಬೆನ್ನಟ್ಟಿದ ಗುಜರಾತ್ 247 ರನ್ ಕಲೆಹಾಕಲಷ್ಟೇ ಶಕ್ತವಾಗಿ 7 ರನ್ಗಳ ಜಯ ದಾಖಲಿಸಿತು. ತಮ್ಮ ಅರ್ಧಶತಕದ ಇನ್ನಿಂಗ್ಸ್ನಿಂದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಹೀಗಾಗಿ ಕೊಹ್ಲಿಗೆ ಪ್ರಶಸ್ತಿ ರೂಪದಲ್ಲಿ 10000 ರೂ. ಬಹುಮಾನವೂ ಸಿಕ್ಕಿತು.
TWITTER HAS CHANGED THE LIKE BUTTON TO Virat Kohli Player Of The Match #VijayHazareTrophy2025
Tap to check ♥️
King Kohli Virat Kohli pic.twitter.com/7qzOOmZMCC
— desikishu (@desikishu) December 26, 2025
ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಕೊಹ್ಲಿ
ಈ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ವಿರಾಟ್ ಕೊಹ್ಲಿ ಅವರಿಗೆ 10,000 ರೂಪಾಯಿಗಳ ಚೆಕ್ ನೀಡಲಾಯಿತು. ಡಿಡಿಸಿಎ ವಿರಾಟ್ ಅವರ ಈ ಫೋಟೋವನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಅಭಿಮಾನಿಗಳು ಬಿಸಿಸಿಐ ಅನ್ನು ಅಪಹಾಸ್ಯ ಮಾಡಲು ಪ್ರಾರಂಭಿಸಿದ್ದಾರೆ. ವಾಸ್ತವವಾಗಿ ತಾನು ಕುಡಿಯುವ ನೀರಿಗಾಗಿ ಒಂದು ದಿನಕ್ಕೆ ಸಾವಿರಾರು ರೂ. ಖರ್ಚು ಮಾಡುವ ಕೊಹ್ಲಿಗೆ ಬಿಸಿಸಿಐ 10 ಸಾವಿರ ರೂ. ನೀಡಿರುವುದು ಅಭಿಮಾನಿಗಳ ಟೀಕೆಗೆ ಗುರಿಯಾಗಿದೆ. ಅಲ್ಲದೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐ ಇಷ್ಟು ಕಡಿಮೆ ಮೊತ್ತದ ಬಹುಮಾನವನ್ನು ನಿಗದಿಪಡಿಸಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಆದರೆ ವಿಜಯ್ ಹಜಾರೆ ಟ್ರೋಫಿ ಲೀಗ್ ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆಲ್ಲುವ ಆಟಗಾರರಿಗೆ 10,000 ರೂಪಾಯಿಗಳನ್ನು ನೀಡಲಾಗುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.
ಎರಡೂ ಪಂದ್ಯಗಳಲ್ಲಿ ಮಿಂಚಿದ ವಿರಾಟ್
ವಿಜಯ್ ಹಜಾರೆ ಟ್ರೋಫಿಯ ಮೊದಲ ಪಂದ್ಯದಲ್ಲಿ ಮಿಂಚಿದ್ದ ವಿರಾಟ್ ಕೊಹ್ಲಿ ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ 131 ರನ್ ಬಾರಿಸಿದ್ದರು. ಆ ನಂತರ ಗುಜರಾತ್ ವಿರುದ್ಧದ ಪಂದ್ಯದಲ್ಲಿ 77 ರನ್ ಸಿಡಿಸಿದರು. ಎರಡು ಪಂದ್ಯಗಳಲ್ಲಿ 100 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 208 ರನ್ ಕಲೆಹಾಕಿದ ಕೊಹ್ಲಿ, ವಿಜಯ್ ಹಜಾರೆ ಟ್ರೋಫಿಯಲ್ಲಿ 1,000 ರನ್ಗಳನ್ನು ಪೂರೈಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:11 pm, Fri, 26 December 25
