IPL 2025: ಗುರಾಯಿಸಿದ ಖಲೀಲ್​ಗೆ ಬಹಿರಂಗವಾಗಿಯೇ ವಾರ್ನಿಂಗ್ ಕೊಟ್ಟ ಕೊಹ್ಲಿ; ವಿಡಿಯೋ ವೈರಲ್

|

Updated on: Mar 29, 2025 | 4:11 PM

Virat Kohli Warns Khalil Ahmed: ಐಪಿಎಲ್ 2025ರಲ್ಲಿ ಆರ್‌ಸಿಬಿ ತಂಡವು ಚೆಪಾಕ್‌ನಲ್ಲಿ ನಡೆದ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 31 ರನ್ ಗಳಿಸಿದರಾದರೂ, ಪಂದ್ಯದ ನಂತರ ಕೊಹ್ಲಿ, ಸಿಎಸ್​ಕೆ ವೇಗಿ ಖಲೀಲ್ ಅಹ್ಮದ್​ಗೆ ಗಂಭೀರವಾಗಿಯೇ ಎಚ್ಚರಿಕೆ ನೀಡಿದ್ದಾರೆ. ಇದೀಗ ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

IPL 2025: ಗುರಾಯಿಸಿದ ಖಲೀಲ್​ಗೆ ಬಹಿರಂಗವಾಗಿಯೇ ವಾರ್ನಿಂಗ್ ಕೊಟ್ಟ ಕೊಹ್ಲಿ; ವಿಡಿಯೋ ವೈರಲ್
Virat Kohli
Follow us on

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಸಿಎಸ್​ಕೆ ವಿರುದ್ಧದ ಪಂದ್ಯವಲ್ಲಿ ಗೆಲುವು ಸಾಧಿಸುವ ಮೂಲಕ 2025 ರ ಐಪಿಎಲ್‌ನಲ್ಲಿ (IPL 2025) ಆರ್​ಸಿಬಿ ಸತತ 2ನೇ ಗೆಲುವು ದಾಖಲಿಸಿದಂತಾಗಿದೆ. ಮಾರ್ಚ್ 28 ರಂದು ನಡೆದ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ 50 ರನ್‌ಗಳಿಂದ ಗೆದ್ದ ಆರ್​ಸಿಬಿ (RCB) ಪಾಯಿಂಟ್ ಪಟ್ಟಿಯಲ್ಲೂ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಆದಾಗ್ಯೂ, ಈ ಪಂದ್ಯದಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿಗೆ (Virat Kohli) ಮುಕ್ತವಾಗಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಕೊಹ್ಲಿ ತಮ್ಮ ಇನ್ನಿಂಗ್ಸ್​ನಲ್ಲಿ 30 ಎಸೆತಗಳನ್ನು ಎದುರಿಸಿ ಕೇವಲ 31 ರನ್ ಕಲೆಹಾಕಲಷ್ಟೇ ಶಕ್ತರಾದರು. ಈ ಮಧ್ಯೆ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಪಂದ್ಯದ ನಂತರ ವಿರಾಟ್ ಕೊಹ್ಲಿ ಸಿಎಸ್‌ಕೆ ಬೌಲರ್ ಖಲೀಲ್ ಅಹ್ಮದ್ ಅವರಿಗೆ ಬಹಿರಂಗವಾಗಿಯೇ ವಾರ್ನಿಂಗ್ ನೀಡುತ್ತಿರುವುದನ್ನು ಕಾಣಬಹುದಾಗಿದೆ.

ವೈರಲ್ ವಿಡಿಯೋದಲ್ಲಿ ಇರುವುದೇನು?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ವೇಗಿ ಖಲೀಲ್ ಅಹ್ಮದ್ ವಿರಾಟ್ ಕೊಹ್ಲಿ ಜೊತೆ ಕಾಣಿಸಿಕೊಂಡಿದ್ದಾರೆ. ಪಂದ್ಯದ ನಂತರ ವಿರಾಟ್ ಕೊಹ್ಲಿ ರವೀಂದ್ರ ಜಡೇಜಾ ಅವರೊಂದಿಗೆ ನಿಂತು ನಗುತ್ತಾ ತಮಾಷೆ ಮಾಡುತ್ತಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಆಗ ಖಲೀಲ್ ಅಹ್ಮದ್ ಈ ಇಬ್ಬರ ಬಳಿಗೆ ಬರುತ್ತಾರೆ. ಆದರೆ ಖಲೀಲ್ ಅವರನ್ನು ನೋಡಿದ ತಕ್ಷಣ ವಿರಾಟ್ ಕೊಹ್ಲಿ ಕೋಪದಿಂದ ಏನನ್ನೋ ಹೇಳುತ್ತಿರುವುದನ್ನು ವಿಡಿಯೋದಲ್ಲಿ ನಾವು ಕಾಣಬಹುದು. ಕೊಹ್ಲಿ ಕೋಪದಿಂದ ಹೇಳುತ್ತಿರುವುದನ್ನು ಖಲೀಲ್ ಅಹ್ಮದ್ ಮೌನವಾಗಿ ನಿಂತು ಕೇಳಿಸಿಕೊಳ್ಳುತ್ತಿದ್ದಾರೆ. ಆ ಬಳಿಕ ಕೊಹ್ಲಿಯನ್ನು ಸಮಾಧಾನಪಡಿಸುವುದಕ್ಕೂ ಮುಂದಾಗಿದ್ದಾರೆ. ಆದರೆ ಇದಕ್ಕೆ ಜಗ್ಗದ ಕೊಹ್ಲಿ ಅವರಿಗೆ ಹಸ್ತಲಾಘವ ಮಾಡಿ ಅಲ್ಲಿಂದ ತೆರಳಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಇದನ್ನೂ ಓದಿ
ಆರ್​ಸಿಬಿ ಫ್ಯಾನ್ಸ್ ಹಾವಳಿಗೆ 1 ವಾರ ಸೋಶಿಯಲ್ ಮೀಡಿಯಾಗೆ ರಾಯುಡು ಗುಡ್​ಬೈ
ಸಿಎಸ್​ಕೆಗೆ ಅವರ ನೆಲದಲ್ಲೇ ಅಟ್ಟಾಡಿಸಿ ಹೊಡೆದ ಆರ್​ಸಿಬಿ
ಆರ್​ಸಿಬಿ ಆಟಗಾರನನ್ನು ಗೇಲಿ ಮಾಡಿದ ಸಿಎಸ್​ಕೆ; ವೈರಲ್ ವಿಡಿಯೋ
ಬಲಿಷ್ಠ ತಂಡಗಳ ನಡುವಿನ ಪಂದ್ಯದ ದಿನಾಂಕದಲ್ಲಿ ಬದಲಾವಣೆ

ಪಂದ್ಯದ ವೇಳೆ ಖಲೀಲ್ ಅಧಿಕಪ್ರಸಂಗತನ

ವಾಸ್ತವವಾಗಿ, ಪಂದ್ಯದ ವೇಳೆ ವಿರಾಟ್ ಕೊಹ್ಲಿ, ಖಲೀಲ್ ಅಹ್ಮದ್ ಅವರ ಬೌಲಿಂಗ್ ಎದುರು ರನ್ ಗಳಿಸಲು ಸ್ವಲ್ಪ ಕಷ್ಟಪಡುತ್ತಿದ್ದರು. ಅಲ್ಲದೆ ಮೊದಲ ಎಸೆತದಲ್ಲೇ ಔಟಾಗುವುದರಿಂದ ಪಾರಾಗಿದ್ದರು. ಅದೇ ಓವರ್‌ನ ಮೂರನೇ ಎಸೆತದಲ್ಲಿ ಖಲೀಲ್ ಅಹ್ಮದ್ ಬೌನ್ಸರ್ ಎಸೆದರು, ಅದನ್ನು ಕೊಹ್ಲಿ ಪುಲ್ ಮಾಡಲು ಪ್ರಯತ್ನಿಸಿದರು, ಆದರೆ ಚೆಂಡು ಬ್ಯಾಟ್‌ಗೆ ತಾಗಲಿಲ್ಲ. ಇದಾದ ನಂತರ, ಖಲೀಲ್ ಫಾಲೋ ಥ್ರೂ ಸಮಯದಲ್ಲಿ ಕೊಹ್ಲಿಯ ಹತ್ತಿರ ಬಂದು ಬಹಳ ಹೊತ್ತು ದಿಟ್ಟಿಸುತ್ತಲೇ ನಿಂತಿದ್ದರು. ಇದಾದ ನಂತರ ವಿರಾಟ್ ಕೂಡ ಖಲೀಲ್ ಕಡೆಗೆ ಕೋಪದಿಂದ ನೋಡಿದರು. ಅಲ್ಲಿಗೆ ವಾತಾವರಣ ತಿಳಿಯಾಯಿತ್ತಾದರೂ, ಪಂದ್ಯದ ನಂತರ ವಿರಾಟ್ ಈ ಘಟನೆಯ ಬಗ್ಗೆ ಖಲೀಲ್ ಅವರಿಗೆ ಬುದ್ದಿ ಮಾತು ಹೇಳುತ್ತಿರಬಹುದು ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ.

ಇದನ್ನೂ ಓದಿ: IPL 2025: ಆರ್​ಸಿಬಿ ಜೋಕರ್ ತಂಡವಾ?; ಮತ್ತೊಮ್ಮೆ ಗೇಲಿ ಮಾಡಿದ ಅಂಬಟಿ ರಾಯುಡು

31 ರನ್​ಗಳಿಗೆ ಸುಸ್ತಾದ ಕೊಹ್ಲಿ

ಈ ಪಂದ್ಯ ವಿರಾಟ್ ಕೊಹ್ಲಿಗೆ ವಿಶೇಷವಾದದ್ದೇನೂ ಆಗಿರಲಿಲ್ಲ. ಅವರು 30 ಎಸೆತಗಳನ್ನು ಎದುರಿಸಿ ಕೇವಲ 31 ರನ್ ಗಳಿಸಲಷ್ಟೇ ಶಕ್ತರಾದರು. 103.33 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ ಕೊಹ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು. ಆದರೆ, ಈ ಸೀಸನ್​ನ ಮೊದಲ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ್ದ ಕೊಹ್ಲಿ, ಕೆಕೆಆರ್ ವಿರುದ್ಧ ಅಜೇಯ ಅರ್ಧಶತಕ ಗಳಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:03 pm, Sat, 29 March 25