Virat Kohli: ವಿರಾಟ್ ಕೊಹ್ಲಿ-ಕೆಎಲ್ ರಾಹುಲ್ ಜಗಳಕ್ಕೆ ಏನು ಕಾರಣ?: ಪಂದ್ಯದ ನಂತರವೂ ಫೈಟ್ ನಡೆದಿದ್ದೇಕೆ?

DC vs RCB, IPL 2025: ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರನ್ನು ಉತ್ತಮ ಸ್ನೇಹಿತರು ಎಂದು ಪರಿಗಣಿಸಲಾಗುತ್ತದೆ. ಆದರೆ ಐಪಿಎಲ್ 2025ರ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯದ ಸಮಯದಲ್ಲಿ ವಿರಾಟ್ ಕೊಹ್ಲಿ ಬಹುಶಃ ಕೆಎಲ್ ಮೇಲೆ ಯಾವುದೋ ವಿಷಯಕ್ಕೆ ಕೋಪಗೊಂಡಂತೆ ಕಂಡುಬಂತು. ಇದರ ವಿಡಿಯೋ ವೈರಲ್ ಆಗುತ್ತಿದೆ.

Virat Kohli: ವಿರಾಟ್ ಕೊಹ್ಲಿ-ಕೆಎಲ್ ರಾಹುಲ್ ಜಗಳಕ್ಕೆ ಏನು ಕಾರಣ?: ಪಂದ್ಯದ ನಂತರವೂ ಫೈಟ್ ನಡೆದಿದ್ದೇಕೆ?
Virat Kohli And Kl Rahul Fight Reason

Updated on: Apr 28, 2025 | 7:54 AM

ಬೆಂಗಳೂರು (ಏ. 28): ವಿರಾಟ್ ಕೊಹ್ಲಿ (Virat Kohli) ಸದ್ಯ ಭರ್ಜರಿ ಫಾರ್ಮ್​ನಲ್ಲಿದ್ದು ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಐಪಿಎಲ್ 2025 ರಲ್ಲಿ ಅಬ್ಬರಿಸುತ್ತಿದ್ದಾರೆ. ಭಾನುವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿರಾಟ್ ಅರ್ಧಶತಕ ಸಿಡಿಸಿ ಆರ್‌ಸಿಬಿಯನ್ನು ಗೆಲುವಿನತ್ತ ಕೊಂಡೊಯ್ದರು. ಆರ್‌ಸಿಬಿ ಗೆಲುವಿನ ಜೊತೆಗೆ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಮೈದಾನದಲ್ಲಿ ಆಡಿದ ಜಗಳದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ವಿಕೆಟ್ ಕೀಪಿಂಗ್ ಮಾಡುವಾಗ ಕೆಎಲ್ ರಾಹುಲ್ ಅವರು ವಿರಾಟ್ ಕೊಹ್ಲಿ ಜೊತೆ ವಾಗ್ವಾದ ನಡೆಸುತ್ತಿದ್ದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ.

ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರನ್ನು ಉತ್ತಮ ಸ್ನೇಹಿತರು ಎಂದು ಪರಿಗಣಿಸಲಾಗುತ್ತದೆ, ಆದರೆ ಐಪಿಎಲ್ ಪಂದ್ಯದ ಸಮಯದಲ್ಲಿ ವಿರಾಟ್ ಕೊಹ್ಲಿ ಬಹುಶಃ ಕೆಎಲ್ ಮೇಲೆ ಯಾವುದೋ ವಿಷಯಕ್ಕೆ ಕೋಪಗೊಂಡಿದ್ದಾರೆ. ಕುಲದೀಪ್ ಯಾದವ್ ಬೌಲಿಂಗ್ ಮಾಡುತ್ತಿದ್ದಾಗ ಇನ್ನಿಂಗ್ಸ್‌ನ 8 ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದೆ. ಮೈದಾನದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ನಡುವಿನ ವಾದ ಸ್ವಲ್ಪ ಸಮಯದ ನಂತರ ಸರಿಯಾಯಿತು.

ಇದನ್ನೂ ಓದಿ
ಕೃನಾಲ್ ಆಲ್​ರೌಂಡರ್ ಆಟ; ಆರ್​ಸಿಬಿಗೆ 7ನೇ ಜಯ
ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಒಂದೇ ಓವರ್​ನಲ್ಲಿ 3ಕ್ಕಿಂತ ಹೆಚ್ಚು ವಿಕೆಟ್; ಬುಮ್ರಾ ದಾಖಲೆ
ಮುಂಬೈ ಇಂಡಿಯನ್ಸ್ ವಿರುದ್ಧ ಮುಗ್ಗರಿಸಿದ ಪಂತ್ ಪಡೆ

 

ಆದರೆ ಪಂದ್ಯದ ನಂತರ ಈ ಜಗಳ ಮತ್ತೆ ಮುಂದೆವರೆದಿದೆ. ಇಬ್ಬರೂ ಗಂಭೀರವಾಗಿ ಮಾತನಾಡುತ್ತಿರುವುದು ವಿಡಿಯದಲ್ಲಿ ಸೆರೆಯಾಗಿದೆ. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಮಾತನಾಡುತ್ತಿರುವಾಗ, ದೇವದತ್ ಪಡಿಕ್ಕಲ್ ಮತ್ತು ಕರುಣ್ ನಾಯರ್ ಕೂಡ ಒಟ್ಟಿಗೆ ನಿಂತಿದ್ದರು. ಆರನೇ ಓವರ್​ನಲ್ಲಿ ಡೆಲ್ಲಿ ಫೀಲ್ಡರ್​ಗಳು ದಿಢೀರ್ ತಮ್ಮ ಸ್ಥಾನವನ್ನು ಬದಲಾಯಿಸಿದ್ದಕ್ಕೆ ಕೊಹ್ಲಿ ಇಲ್ಲಿ ರಾಹುಲ್ ಜೊತೆ ವಾಗ್ವಾದಕ್ಕೆ ಇಳಿದಿದ್ದರು ಎಂದು ಹೇಳಲಾಗಿದೆ.

IPL 2025: ಸತತ 5ನೇ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಮುಂಬೈ

ಡೆಲ್ಲಿ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಂಡ ಆರ್​ಸಿಬಿ:

ಐಪಿಎಲ್ 2025 ರಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್‌ಸಿಬಿ ಎರಡನೇ ಬಾರಿಗೆ ಪರಸ್ಪರ ಮುಖಾಮುಖಿಯಾಗಿದ್ದವು. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರ್‌ಸಿಬಿಯನ್ನು ತನ್ನ ತವರು ನೆಲದಲ್ಲಿ ಸೋಲಿಸಿತ್ತು. ಅಂತಹ ಪರಿಸ್ಥಿತಿಯಲ್ಲಿ, ಈಗ ದೆಹಲಿಯನ್ನು ಅವರ ತವರು ನೆಲದಲ್ಲೇ ಸೋಲಿಸಿದೆ. ಆರ್‌ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಬ್ಯಾಟಿಂಗ್ ತುಂಬಾ ನಿಧಾನವಾಗಿತ್ತು. ಆರ್​ಸಿಬಿ ಟೀಮ್ ದೆಹಲಿ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೇವಲ 162 ರನ್ ಗಳಿಸಲಷ್ಟೇ ಶಕ್ತವಾಯಿತು.

ಗುರಿಯನ್ನು ರಕ್ಷಿಸುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲಿಂಗ್ ಉತ್ತಮ ಆರಂಭ ನೀಡಿತು. ಡೆಲ್ಲಿ ತಂಡ ಕೇವಲ 26 ರನ್‌ಗಳಿಗೆ ಆರ್‌ಸಿಬಿಯ ಮೂರು ವಿಕೆಟ್‌ಗಳನ್ನು ಕಬಳಿಸಿತ್ತು, ಆದರೆ ಅದಾದ ನಂತರ ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ಒಟ್ಟಾಗಿ ಇನ್ನಿಂಗ್ಸ್ ಮೇಲೆ ಹಿಡಿತ ಸಾಧಿಸಿ ಡೆಲ್ಲಿಯನ್ನು ಪಂದ್ಯದಿಂದ ಹೊರದಬ್ಬಿದರು. ಆರ್‌ಸಿಬಿ ಪರ ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 51 ರನ್ ಗಳಿಸಿ ಔಟಾದರು. ಇದಾದ ನಂತರ, ಕೃನಾಲ್ ಪಾಂಡ್ಯ 47 ಎಸೆತಗಳಲ್ಲಿ 73 ರನ್ ಗಳಿಸಿ ಅಜೇಯರಾಗುಳಿದರು. ಕೊನೆಯಲ್ಲಿ, ಟಿಮ್ ಡೇವಿಡ್ 5 ಎಸೆತಗಳಲ್ಲಿ 19 ರನ್ ಗಳಿಸಿದರು. ಈ ಮೂಲಕ ಆರ್‌ಸಿಬಿ 9 ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ