Virat Kohli: ರಜತ್ ನಾಯಕತ್ವದಿಂದ ಕೋಪಗೊಂಡ ಕೊಹ್ಲಿ: ಪಂದ್ಯದ ಮಧ್ಯೆಯೇ ಕಾರ್ತಿಕ್ ಜೊತೆ ಜಗಳ?

RCB vs DC IPL 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ಕೊನೆಯ ಹಂತದಲ್ಲಿ ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಆಗ ಆರ್‌ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಕೋಚ್ ದಿನೇಶ್ ಕಾರ್ತಿಕ್ ಅವರೊಂದಿಗೆ ಏನೋ ಜೋರಾಗಿ ಕೋಪದಿಂದ ಮಾತನಾಡುತ್ತಿರುವುದು ಕಂಡುಬಂದಿತು. ರಜತ್ ಪಾಟಿದಾರ್ ನಿರ್ಧಾರದಿಂದ ಕೊಹ್ಲಿ ಕೋಪಗೊಂಡಿದ್ದಾರೆ ಎನ್ನಲಾಗಿದೆ.

Virat Kohli: ರಜತ್ ನಾಯಕತ್ವದಿಂದ ಕೋಪಗೊಂಡ ಕೊಹ್ಲಿ: ಪಂದ್ಯದ ಮಧ್ಯೆಯೇ ಕಾರ್ತಿಕ್ ಜೊತೆ ಜಗಳ?
Virat Kohli Dinesh Karthik And Rajat Patidar

Updated on: Apr 11, 2025 | 9:49 AM

ಬೆಂಗಳೂರು (ಏ. 11): ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ತವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ((Royal Challengers Bengaluru vs Delhi Capitals)) ವಿರುದ್ಧ 6 ವಿಕೆಟ್‌ಗಳ ಸೋಲು ಅನುಭವಿಸಿತು.  ಟಾರ್ಗೆಟ್ ಬೆನ್ನಟ್ಟುವಾಗ ಡೆಲ್ಲಿಗೆ ಆರ್‌ಸಿಬಿ ಆರಂಭದಲ್ಲಿ ಆಘಾತ ನೀಡಿತು. ಡಿಸಿ ತಂಡದ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳನ್ನು ಕೇವಲ 30 ರನ್‌ಗಳಿಗೆ ಔಟ್ ಮಾಡಿದರು. ಆದರೆ, ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಮಾಡಿ ಅಜೇಯ 93 ರನ್ ಗಳಿಸಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟರು. ಪಂದ್ಯದ ಕೊನೆಯ ಹಂತದಲ್ಲಿ ರಾಹುಲ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಆಗ ಆರ್‌ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಕೋಚ್ ದಿನೇಶ್ ಕಾರ್ತಿಕ್ ಅವರೊಂದಿಗೆ ಏನೋ ಜೋರಾಗಿ ಕೋಪದಿಂದ ಮಾತನಾಡುತ್ತಿರುವುದು ಕಂಡುಬಂದಿತು.

ಈ ವಿಡಿಯೋ ಕೊಹ್ಲಿ ನಾಯಕ ರಜತ್ ಪತಿದಾರ್ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂಬ ಊಹಾಪೋಹಕ್ಕೆ ಕಾರಣವಾಗಿದೆ. ಆರ್‌ಸಿಬಿ ಮತ್ತು ಡಿಸಿ ನಡುವಿನ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದ ಅಂಶ ಇದಾಗಿದೆ. ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ನಡುವೆ ಮುಖ್ಯವಾದ ಸಂಭಾಷಣೆ ನಡೆದಿದೆ. ಈ ಮಾತಿನ ವಿಚಾರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದಾದ ನಂತರ, ಕೊಹ್ಲಿ ನಾಯಕ ರಜತ್ ಪತಿದಾರ್ ಬಗ್ಗೆ ಅತೃಪ್ತರಾಗಿದ್ದಾರೆಂಬ ಮಾತು ಕೇಳುಬರುತ್ತಿದೆ.

ಇದನ್ನೂ ಓದಿ
ಇದು ನನ್ನೂರು-ನನ್ನ ಗ್ರೌಂಡ್: ರಾಹುಲ್ ಮಾತು ಕೇಳಿ ಕೊಹ್ಲಿ ಸೈಲೆಂಟ್
ಸೋಲಿಗೆ ಚಿನ್ನಸ್ವಾಮಿಯನ್ನೇ ದೂರಿದ್ರ ರಜತ್ ಪಾಟಿದಾರ್?: ಏನಂದ್ರು?
ಆರ್​ಸಿಬಿ ನಾಯಕನಿಂದಲೇ ಕೈ ಜಾರಿತು ಪಂದ್ಯ: ರಜತ್ ಮಾಡಿದ್ರು ದೊಡ್ಡ ಎಡವಟ್ಟು
ಇದು ನನ್ನ ಟೆರಿಟರಿ; RCB ವಿರುದ್ಧ ಅಬ್ಬರಿಸಿ ಸನ್ನೆ ಮೂಲಕ ತೋರಿಸಿದ ರಾಹುಲ್

 

ವಿಡಿಯೋದಲ್ಲಿ, ಕೊಹ್ಲಿ ಕೆಲವು ನಿರ್ಧಾರಗಳ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸುವುದನ್ನು ಕಾಣಬಹುದು. ಈ ಬಗ್ಗೆ ಕಾಮೆಂಟೇಟರ್ ಆಕಾಶ್ ಚೋಪ್ರಾ ಮತ್ತು ವೀರೇಂದ್ರ ಸೆಹ್ವಾಗ್ ಕೂಡ ಮಾತನಾಡಿದರು. ಕೊಹ್ಲಿಗೆ ಯಾವುದೇ ಸಮಸ್ಯೆ ಇದ್ದರೂ ಅದನ್ನು ನಾಯಕ ಪಾಟಿದಾರ್ ಅವರಿಗೆ ಹೇಳಬೇಕು, ಏಕೆಂದರೆ ಈಗ ಕೊಹ್ಲಿ ತಂಡದ ನಾಯಕನಲ್ಲ ಎಂದು ಅವರು ಹೇಳಿದ್ದಾರೆ.

 

ಅಭಿಮಾನಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹೀಗೆ ಬರೆದಿದ್ದಾರೆ- ವಿರಾಟ್ ಕೊಹ್ಲಿ ನಾಯಕನ ನಿರ್ಧಾರಗಳಿಂದ ಕೋಪಗೊಂಡರು. ಅವರು ದಿನೇಶ್ ಕಾರ್ತಿಕ್ ಅವರೊಂದಿಗೆ ಬೌಲಿಂಗ್ ಬದಲಾವಣೆಗಳ ಬಗ್ಗೆ ಚರ್ಚಿಸಿದ್ದಾರೆ. ಕೊಹ್ಲಿ ಕೆಲವು ನಿರ್ಧಾರಗಳ ಬಗ್ಗೆ ಕಾರ್ತಿಕ್ ಮತ್ತು ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಇತರ ಕೆಲವು ಅಭಿಮಾನಿಗಳು ಹೇಳಿದ್ದಾರೆ. ಆದರೆ, ಕೊಹ್ಲಿ ಮತ್ತು ಕಾರ್ತಿಕ್ ನಡುವಿನ ಸಂಭಾಷಣೆಯ ಹಿಂದಿನ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

KL Rahul: ಇದು ನನ್ನ ಊರು.. ನನ್ನ ಗ್ರೌಂಡ್: ಪೋಸ್ಟ್ ಮ್ಯಾಚ್ನಲ್ಲಿ ಕೆಎಲ್ ರಾಹುಲ್ ಮಾತು ಕೇಳಿ ಕೊಹ್ಲಿ ಸೈಲೆಂಟ್

ಪಂದ್ಯದ ನಂತರ, ಪಾಟಿದಾರ್ ದೆಹಲಿ ವಿರುದ್ಧದ ಸೋಲಿನ ಹೊಣೆಯನ್ನು ತಂಡದ ಬ್ಯಾಟ್ಸ್‌ಮನ್‌ಗಳ ಮೇಲೆ ಹೊರಿಸಿದ್ದಾರೆ. “ನಾವು ವಿಕೆಟ್ ನೋಡಿದ ರೀತಿ ತುಂಬಾ ಭಿನ್ನವಾಗಿತ್ತು ಎಂದು ನಾನು ಭಾವಿಸುತ್ತೇನೆ. ಅದು ಉತ್ತಮ ಬ್ಯಾಟಿಂಗ್ ವಿಕೆಟ್ ಎಂದು ನಾವು ಭಾವಿಸಿದ್ದೆವು, ಆದರೆ ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಲಿಲ್ಲ. ಬ್ಯಾಟರ್‌ಗಳು ಅತಿಯಾದ ಆತ್ಮವಿಶ್ವಾಸ ಹೊಂದಿದ್ದರೆ ಎಂದು ಹೇಳಲು ಸಾಧ್ಯವಿಲ್ಲ, ಪ್ರತಿಯೊಬ್ಬ ಬ್ಯಾಟರ್ ಉತ್ತಮ ಮನಸ್ಥಿತಿಯಲ್ಲಿದ್ದರು, ಸರಿಯಾದ ಉದ್ದೇಶವನ್ನು ತೋರಿಸುತ್ತಿದ್ದರು. ಆದರೆ 80 ಕ್ಕೆ 1 ರಿಂದ 90 ಕ್ಕೆ 4 ಕ್ಕೆ ಹೋಗುವುದು ಸ್ವೀಕಾರಾರ್ಹವಲ್ಲ, ನಮ್ಮಲ್ಲಿ ಉತ್ತಮ ಬ್ಯಾಟಿಂಗ್ ಲೈನ್-ಅಪ್ ಇದೆ, ಆದರೆ ನಾವು ಪರಿಸ್ಥಿತಿಯನ್ನು ನಿರ್ಣಯಿಸಬೇಕಾಗಿದೆ’’ ಎಂದು ಹೇಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ