‘ಬೆಂಗಳೂರು ನನ್ನ ಟೆರಿಟರಿ’; ಗೆದ್ದ ಬಳಿಕ ಬ್ಯಾಟ್ನಲ್ಲೇ ವೃತ್ತ ಎಳೆದು ತೋರಿಸಿದ ರಾಹುಲ್
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರ್ಸಿಬಿ ವಿರುದ್ಧ ರೋಮಾಂಚಕ ಗೆಲುವು ಸಾಧಿಸಿದೆ. ಕನ್ನಡಿಗ ಕೆಎಲ್ ರಾಹುಲ್ ಅವರ ಅದ್ಭುತ 93 ರನ್‌ಗಳ ಇನಿಂಗ್ಸ್‌ನಿಂದಾಗಿ ಈ ಗೆಲುವು ಸಾಧ್ಯವಾಗಿದೆ. 53 ಎಸೆತಗಳಲ್ಲಿ 6 ಸಿಕ್ಸ್ ಮತ್ತು 7 ಬೌಂಡರಿಗಳನ್ನು ಸಿಡಿಸಿದ ರಾಹುಲ್ ಅವರು ತಮ್ಮ ಗೆಲುವಿನ ಸಂಭ್ರಮದ ವೇಳೆ ‘ಇದು ನನ್ನ ಟೆರಿಟರಿ, ಬೆಂಗಳೂರು ಹೃದಯದಲ್ಲಿದೆ’ ಎಂದಿದ್ದಾರೆ.

ಆರ್ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದು ಬೀಗಿದೆ. ಆರ್ಸಿಬಿ (RCB) ನೀಡಿದ ಕೇವಲ 163 ರನ್‌ಗಳ ಟಾರ್ಗೆಟ್ ಬೆನ್ನು ಹತ್ತಿದ ಡೆಲ್ಲಿ ಆರಂಭದಲ್ಲಿ ಮುಗ್ಗರಿಸಿತು. ಆದರೆ, ಕನ್ನಡಿಗ ಕೆಎಲ್ ರಾಹುಲ್ ಎಚ್ಚರಿಕೆಯ ಆಟದಿಂದ ಡೆಲ್ಲಿಗೆ ಗೆಲುವು ಸಿಕ್ಕಿತು. ಕೇವಲ 53 ಬಾಲ್ಗಳಲ್ಲಿ 93 ರನ್ ಸಿಡಿಸಿ ರಾಹುಲ್ ಡೆಲ್ಲಿಗೆ ಆಸರೆ ಆದರು. ವಿನ್ ಆದ ಬಳಿಕ ಕೆಎಲ್ ರಾಹುಲ್ ಅವರು ಮಾಡಿದ ಸೆಲೆಬ್ರೇಷನ್ ಗಮನ ಸೆಳೆದಿದೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಟಾಸ್ ಸೋತು ಕಣಕ್ಕೆ ಇಳಿದ ಆರ್ಸಿಬಿ ಉತ್ತಮ ಆರಂಭ ಕಂಡಿತು. ಒಂದೇ ಓವರ್ನಲ್ಲಿ ಫಿಲಿಪ್ ಸಾಲ್ಟ್ 30ರನ್ ಚಚ್ಚಿ ದೊಡ್ಡ ಮೊತ್ತ ಕಲೆ ಹಾಕುವ ಸೂಚನೆ ಕೊಟ್ಟರು. 37 ರನ್ ಗಳಿಸಿರುವಾಗ ಸಾಲ್ಟ್ ರನೌಟ್ಗೆ ಬಲಿಯಾದರು. ನಂತರ ವಿರಾಟ್ ಕೊಹ್ಲಿ (22) , ದೇವದತ್ ಪಡಿಕ್ಕಲ್ (1), ತಂಡದ ನಾಯಕ ರಜತ್ ಪಾಟಿದಾರ್ (25), ಲಿವಿಂಗ್ಸ್ಟನ್ (4), ಜಿತೇಶ್ ಶರ್ಮಾ (3), ಕೃನಾಲ್ ಪಾಂಡ್ಯ (18) ಕಡೆಯಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಟಿಮ್ ಡೇವಿಡ್ ಅವರು 37 ರನ್ ಗಳಿಸಿ ಕೊನೆಯಲ್ಲಿ ತಂಡಕ್ಕೆ ಆಸರೆ ಆದರು. ಈ ಮೂಲಕ ತಂಡದ ಮೊತ್ತ 163 ರನ್ ಆಯಿತು.
ಇದನ್ನೂ ಓದಿ: RCB vs DC Highlights, IPL 2025: ರಾಹುಲ್ ಕ್ಯಾಚ್ ಕೈಚೆಲ್ಲಿ ಪಂದ್ಯ ಸೋತ ಆರ್ಸಿಬಿ
ಸುಲಭ ಗುರಿ ಬೆನ್ನು ಹತ್ತಿದ ಡೆಲ್ಲಿಗೆ ಆರಂಭದಲ್ಲೇ ಆಘಾತ ಆಯಿತು. 58 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ತಂಡಕ್ಕೆ ರಾಹುಲ್ ಆಸರೆ ಆದರು. 53 ಬಾಲ್ಗಳನ್ನು ಎದುರಿಸಿದ ಅವರು 6 ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಸಿಡಿಸಿ, 175 ಸ್ಟ್ರೈಕ್ ರೇಟ್ ಒಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಆಡಿದ ನಾಲ್ಕೂ ಪಂದ್ಯಗಳಲ್ಲಿ ನಾಲ್ಕನ್ನೂ ಗೆದ್ದು ತಂಡ ಸಾಧನೆ ಮಾಡಿದೆ.
I just want to see KL Rahul pull off that same cold-blooded celebration in Lucknow right in front of Goenka and 30k wild fans.
That’s top of my 2025 watchlist. Nothing would hit harder 🥵#KLRahul #RCBvDC pic.twitter.com/JojPayF5uw
— Mohit Kamal Rath (@mkr4411) April 10, 2025
Have you ever seen this aggressive #KLRahul ? He just made a STATEMENT! 🔥#RCBvDC pic.twitter.com/KM6ZJmx9UF
— Shilpa (@shilpa_cn) April 10, 2025
View this post on Instagram
ರಾಹುಲ್ ಅವರ ಭರ್ಜರಿ ಆಟದ ಬಳಿಕ ಕೆಎಲ್ ರಾಹುಲ್ ಸೆಲೆಬ್ರೇಷನ್ ಗಮನ ಸೆಳೆದಿದೆ. ಕೊನೆಯ ಬಾಲ್ಗೆ ಸಿಕ್ಸ್ ಹೊಡೆದ ಅವರು, ಎರಡು ರೀತಿಯಲ್ಲಿ ಸೆಲೆಬ್ರೇಷನ್ ಮಾಡಿದ್ದಾರೆ. ‘ಇದು ನನ್ನ ಟೆರಟರಿ ಎಂದು ಬ್ಯಾಟ್ ಊರಿದಿದ್ದಾರೆ. ಮತ್ತೊಂದು ಕಡೆ, ‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’ ಎಂಬ ರೀತಿಯಲ್ಲಿ ತೋರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.