AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG 1st Test: ರೋಹಿತ್ ಕಾಲು ಮುಟ್ಟಿ ಸಮಸ್ಕರಿಸಿದ ಕೊಹ್ಲಿ ಅಭಿಮಾನಿ ಜೈಲು ಪಾಲು

Fan touches Rohit Sharma feet: ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ನ ಮೊದಲ ದಿನ ರೋಹಿತ್ ಶರ್ಮಾ ಪಾದಗಳಿಗೆ ಸಮಸ್ಕರಿಸಿದ ವಿರಾಟ್ ಕೊಹ್ಲಿ ಅಭಿಮಾನಿ ಜೈಲು ಪಾಲಾಗಿದ್ದಾರೆ. ಈ ಘಟನೆಯನ್ನು ರಾಚಕೊಂಡ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

IND vs ENG 1st Test: ರೋಹಿತ್ ಕಾಲು ಮುಟ್ಟಿ ಸಮಸ್ಕರಿಸಿದ ಕೊಹ್ಲಿ ಅಭಿಮಾನಿ ಜೈಲು ಪಾಲು
Rohit Sharma Fan and Jail
Vinay Bhat
|

Updated on: Jan 28, 2024 | 8:28 AM

Share

ಹೈದರಾಬಾದ್​ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಪ್ರಥಮ ಟೆಸ್ಟ್ ಪಂದ್ಯ ರೋಚಕತೆ ಸೃಷ್ಟಿಸಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಆಂಗ್ಲರು 6 ವಿಕೆಟ್ ಕಳೆದುಕೊಂಡು 316 ರನ್ ಗಳಿಸಿದ್ದಾರೆ. 126 ರನ್​ಗಳ ಮುನ್ನಡೆಯಲ್ಲಿದೆ. ಇನ್ನು ಎರಡು ದಿನಗಳ ಆಟ ಬಾಕಿ ಇರುವ ಕಾರಣ ಇಂದಿನ ನಾಲ್ಕನೇ ದಿನದಾಟ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಈ ಪಂದ್ಯ ಆರಂಭದ ಮೊದಲ ದಿನದಾಟದಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆಯಿತು. ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕಾಲುಗಳನ್ನು ಮುಟ್ಟಿದರು.

ಈ ಅಭಿಮಾನಿ ವಿರಾಟ್ ಕೊಹ್ಲಿ ಅವರ ಜೆರ್ಸಿ ಸಂಖ್ಯೆ 18 ಅನ್ನು ಧರಿಸಿದ್ದರು. ಜೆರ್ಸಿಯಲ್ಲಿ ಕೊಹ್ಲಿ ಮತ್ತು 18 ನಂಬರ್ ಬರೆಯಲಾಗಿತ್ತು. ಇದೀಗ ರೋಹಿತ್ ಪಾದಗಳಿಗೆ ಸಮಸ್ಕರಿಸಿದ ಅಭಿಮಾನಿ ಜೈಲು ಪಾಲಾಗಿದ್ದಾರೆ. ಈ ಘಟನೆಯನ್ನು ರಾಚಕೊಂಡ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಅಭಿಮಾನಿಯನ್ನು ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಅಶ್ವರಾವ್ ಪೇಟೆಯ ರಾಮಚಂದ್ರಾಪುರ ಗ್ರಾಮದ ಹರ್ಷಿತ್ ರೆಡ್ಡಿ ಎಂದು ಗುರುತಿಸಲಾಗಿದೆ. ಉಪ್ಪಳ ಪೊಲೀಸರು ಹರ್ಷಿತ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಮ್ಯಾಜಿಸ್ಟ್ರೇಟ್ ಅವರನ್ನು 14 ದಿನಗಳ ರಿಮಾಂಡ್ ನೀಡಿ ಜೈಲಿಗೆ ಕಳುಹಿಸಿದ್ದಾರೆ.

ಇದನ್ನೂ ಓದಿ
Image
ಆಂಗ್ಲರಿಗೆ ಪೋಪ್ ಆಸರೆ: ರೋಚಕತೆ ಸೃಷ್ಟಿಸಿದ ಇಂದಿನ ನಾಲ್ಕನೇ ದಿನದಾಟ
Image
ಆರ್​ಸಿಬಿಗೆ ಬಿಗ್ ಶಾಕ್; ಟೂರ್ನಿಯಿಂದ ಹೊರಬಿದ್ದ ಸ್ಟಾರ್ ವಿದೇಶಿ ಪ್ಲೇಯರ್
Image
ವಿಂಡೀಸ್ ಆಟಗಾರನ ಕಾಲ್ಬೆರಳನ್ನು ಮುರಿದ ಸ್ಟಾರ್ಕ್​ ಎಸೆದ ಬೆಂಕಿ ಚೆಂಡು!
Image
13 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ಅಫ್ರಿಕಾ ಬ್ಯಾಟರ್..! ವಿಡಿಯೋ ನೋಡಿ

ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸುವ ಪ್ರೇಕ್ಷಕರು ತಮಗೆ ನಿಗದಿಪಡಿಸಿದ ಆಸನಗಳಲ್ಲಿ ಮಾತ್ರ ಕುಳಿತುಕೊಳ್ಳಬೇಕು ಎಂದು ಪೊಲೀಸರು ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯ ನಂತರ ಕ್ರಿಕೆಟಿಗರ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಕ್ರೀಡಾಂಗಣದಲ್ಲಿ ಸೆಕ್ಯೂರಿಟಿ ಹೆಚ್ಚಿಸಲಾಗಿದೆ.

IPL 2024: ಐಪಿಎಲ್​ಗೆ ಸ್ಟಾರ್ ಆಟಗಾರರು ಕೈ ಕೊಡುವ ಸಾಧ್ಯತೆ

ಮೂರನೇ ದಿನದ ಆಟ

ಉಪ್ಪಳದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್​ಗೆ ಬ್ಯಾಟ್ಸ್‌ಮನ್ ಓಲಿ ಪೋಪ್ (148*) ಭರ್ಜರಿ ಶತಕ ಬಾರಿಸಿ ಆಸರೆಯಾದರು. ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮುನ್ನಡೆ ಸಾಧಿಸಿದ್ದ ಭಾರತ ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ್ನು ಬೇಗನೆ ಆಲೌಟ್ ಮಾಡಲಿದೆ ಎಂದು ಭಾವಿಸಲಾಗಿತ್ತು. ಆದರೆ, ಒಲಿ ಪೋಪ್ ಕ್ರೀಸ್ ನಲ್ಲಿ ಬೇರೂರಿದ್ದಾರೆ. ಎರಡನೇ ಇನಿಂಗ್ಸ್ ನಲ್ಲಿ ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ಆರು ವಿಕೆಟ್ ನಷ್ಟಕ್ಕೆ 316 ರನ್ ಗಳಿಸಿದೆ. ಪೋಪ್ ಜೊತೆಗೆ ರೆಹಾನ್ (16*) ಕ್ರೀಸ್‌ನಲ್ಲಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 190 ರನ್‌ಗಳ ಹಿನ್ನಡೆಯಲ್ಲಿದ್ದ ಇಂಗ್ಲೆಂಡ್ ಅಂತಿಮವಾಗಿ 126 ರನ್‌ಗಳ ಮುನ್ನಡೆ ಸಾಧಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ