AUS vs WI: ವಿಂಡೀಸ್ ಆಟಗಾರನ ಕಾಲ್ಬೆರಳನ್ನು ಮುರಿದ ಸ್ಟಾರ್ಕ್​ ಎಸೆದ ಬೆಂಕಿ ಚೆಂಡು! ವಿಡಿಯೋ ನೋಡಿ

AUS vs WI: ವೆಸ್ಟ್ ಇಂಡೀಸ್ ತಂಡದ ಎರಡನೇ ಇನ್ನಿಂಗ್ಸ್ ವೇಳೆ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಎಸೆದ ಮಾರಕ ವೇಗದ ಚೆಂಡು ವಿಂಡೀಸ್ ಆಟಗಾರ ಶಮರ್ ಜೋಸೆಫ್ ಅವರ ಕಾಲ್ಬೆರಳನ್ನು ಮುರಿದಿದೆ. ಪರಿಣಾಮವಾಗಿ ಶಮರ್ ಜೋಸೆಫ್ ಬ್ಯಾಟಿಂಗ್‌ ಮಾಡಲು ಸಾಧ್ಯವಾಗದೆ ರಿಟೈರ್ಡ್​ ಹರ್ಟ್ ಆಗಿ ಮೈದಾನ ತೊರೆಯಬೇಕಾಯಿತು.

AUS vs WI: ವಿಂಡೀಸ್ ಆಟಗಾರನ ಕಾಲ್ಬೆರಳನ್ನು ಮುರಿದ ಸ್ಟಾರ್ಕ್​ ಎಸೆದ ಬೆಂಕಿ ಚೆಂಡು! ವಿಡಿಯೋ ನೋಡಿ
ಶಮರ್ ಜೋಸೆಫ್, ಮಿಚೆಲ್ ಸ್ಟಾರ್ಕ್
Follow us
|

Updated on:Jan 27, 2024 | 9:33 PM

ಬ್ರಿಸ್ಬೇನ್ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ (West Indies vs Australia) ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಗೆಲುವಿಗೆ 156 ರನ್​ಗಳ ಸವಾಲಿದೆ. ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಮೂರನೇ ದಿನ ವಿಂಡೀಸ್ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 193 ರನ್ ಗಳಿಸಿ ಆಲೌಟ್ ಆಗಿತ್ತು. ಇದಾದ ಬಳಿಕ ಪಂದ್ಯದ ನಾಲ್ಕನೇ ಇನಿಂಗ್ಸ್‌ನಲ್ಲಿ ಗೆಲುವಿಗೆ 216 ರನ್‌ಗಳ ಗುರಿ ಪಡೆದ ಕಾಂಗರೂ ತಂಡ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿದ್ದು, ಇನ್ನೂ 156 ರನ್ ಗಳಿಸಬೇಕಿದೆ. ಆದರೆ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಎರಡನೇ ಇನ್ನಿಂಗ್ಸ್ ವೇಳೆ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ (Mitchell Starc) ಎಸೆದ ಮಾರಕ ವೇಗದ ಚೆಂಡು ವಿಂಡೀಸ್ ಆಟಗಾರ ಶಮರ್ ಜೋಸೆಫ್ (Shamar Joseph) ಅವರ ಕಾಲ್ಬೆರಳನ್ನು ಮುರಿದಿದೆ. ಪರಿಣಾಮವಾಗಿ ಶಮರ್ ಜೋಸೆಫ್ ಬ್ಯಾಟಿಂಗ್‌ ಮಾಡಲು ಸಾಧ್ಯವಾಗದೆ ರಿಟೈರ್ಡ್​ ಹರ್ಟ್ ಆಗಿ ಮೈದಾನ ತೊರೆಯಬೇಕಾಯಿತು.

ಶಮರ್ ಜೋಸೆಫ್ ಕಾಲ್ಬೆರಳಿಗೆ ಇಂಜುರಿ

ವೆಸ್ಟ್ ಇಂಡೀಸ್‌ನ ಎರಡನೇ ಇನ್ನಿಂಗ್ಸ್‌ನ 73 ನೇ ಓವರ್‌ ಬೌಲ್ ಮಾಡಲು ಸ್ಟಾರ್ಕ್ ದಾಳಿಗಿಳಿದರು. ಆ ಸಮಯದಲ್ಲಿ ವೆಸ್ಟ್ ಇಂಡೀಸ್ ತಂಡದ ಸ್ಕೋರ್ 9 ವಿಕೆಟ್ ನಷ್ಟಕ್ಕೆ 193 ರನ್ ಆಗಿತ್ತು. ವಿಂಡೀಸ್ ಪರ ಶಮರ್ ಜೋಸೆಫ್ ಸ್ಟ್ರೈಕ್‌ನಲ್ಲಿದ್ದರು. ಸ್ಟಾರ್ಕ್ ಈ ಓವರ್‌ನ ನಾಲ್ಕನೇ ಎಸೆತವನ್ನು ಇನ್ಸ್ವಿಂಗ್ ಯಾರ್ಕರ್ ಬೌಲ್ ಮಾಡಿದರು. ಆ ಚೆಂಡು ನೇರವಾಗಿ ಜೋಸೆಫ್ ಅವರ ಕಾಲಿಗೆ ಬಡಿಯಿತು. ಇದರ ಮೇಲೆ ಆಸ್ಟ್ರೇಲಿಯಾ ತಂಡ ಎಲ್‌ಬಿಡಬ್ಲ್ಯುಗಾಗಿ ಮನವಿ ಕೂಡ ಮಾಡಿತು. ಆದರೆ ಸ್ಟಾರ್ಕ್ ನೋ ಬಾಲ್‌ ಬೌಲ್ ಮಾಡಿದ್ದರಿಂದ ಶಮರ್ ಔಟಾಗುವುದರಿಂದ ಬದುಕುಳಿದರು. ಆದರೆ ಜೋಸೆಫ್ ಅವರ ಹೆಬ್ಬೆರಳಿಗೆ ಚೆಂಡು ಬಲವಾಗಿ ಬಡಿದ ಕಾರಣ ಅವರು ನೋವಿನಿಂದ ನರಳಾಡಲಾರಂಭಿಸಿದರು.

193 ರನ್‌ಗಳಿಗೆ ಆಲೌಟ್

ಬಳಿಕ ಶಮರ್ ಜೋಸೆಫ್ ಅವರು ತಕ್ಷಣವೇ ಶೂಗಳನ್ನು ತೆಗೆದು ಮೈದಾನದಲ್ಲೇ ಮಲಗಿದರು. ಕೂಡಲೇ ಡ್ರೆಸ್ಸಿಂಗ್ ರೂಮ್‌ನಿಂದ ಓಡಿ ಬಂದ ಫಿಸಿಯೋ ಪ್ರಥಮ ಚಿಕಿತ್ಸೆ ನೀಡಿದರು. ಇದರ ನಂತರ, ಶಮರ್ ಎದ್ದು ನಿಲ್ಲಲು ಪ್ರಯತ್ನಿಸಿದರು. ಆದರೆ ಅವರಿಗೆ ಎದ್ದು ನಿಂತು ನಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ರಿಟೈರ್ಡ್​ ಹರ್ಟ್​ ಆಗಿ ಮೈದಾನ ತೊರೆಯಬೇಕಾಯಿತು. ಇದರೊಂದಿಗೆ ವೆಸ್ಟ್ ಇಂಡೀಸ್ ತಂಡದ ಎರಡನೇ ಇನ್ನಿಂಗ್ಸ್ ಕೂಡ 193 ರನ್‌ಗಳಿಗೆ ಕೊನೆಗೊಂಡಿತು.

ಅಲ್ಪ ರನ್​ಗಳಿಗೆ ವಿಂಡೀಸ್ ಇನ್ನಿಂಗ್ಸ್ ಅಂತ್ಯ

ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಎರಡನೇ ಇನ್ನಿಂಗ್ಸ್ ಬಗ್ಗೆ ಹೇಳುವುದಾದರೆ, ತಂಡದ ಪರ ಕ್ರಿಕ್ ಮೆಕೆಂಜಿ ಅತ್ಯಧಿಕ 41 ರನ್‌ಗಳ ಅತ್ಯಧಿಕ ಇನ್ನಿಂಗ್ಸ್‌ ಆಡಿದರೆ, ಅಲಿಕ್ ಅಥಾನಾಜೆ 35 ಹಾಗೂ ಜಸ್ಟಿನ್ ಗ್ರೀವ್ಸ್ 33 ರನ್​ಗಳ ಕೊಡುಗೆ ನೀಡಿದರು. ಇವರನ್ನು ಹೊರತುಪಡಿಸಿದರೆ ತಂಡದ ಉಳಿದವರಿಂದ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಬರಲಿಲ್ಲ. ಹೀಗಾಗಿ ತಂಡ 193 ರನ್‌ಗಲಿಗೆ ಆಲೌಟ್ ಆಯಿತು. ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ಮತ್ತು ನಾಥನ್ ಲಿಯಾನ್ ತಲಾ 3 ವಿಕೆಟ್ ಕಬಳಿಸಿದರೆ, ಮಿಚೆಲ್ ಸ್ಟಾರ್ಕ್ ಮತ್ತು ಕ್ಯಾಮರೂನ್ ಗ್ರೀನ್ ತಲಾ 1 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:31 pm, Sat, 27 January 24

‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ