ICC Test Ranking: 2053 ದಿನಗಳ ನಂತರ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಟಾಪ್ 10 ರಿಂದ ಹೊರಬಿದ್ದ ವಿರಾಟ್ ಕೊಹ್ಲಿ..!

| Updated By: ಪೃಥ್ವಿಶಂಕರ

Updated on: Jul 06, 2022 | 2:24 PM

ICC Test Ranking: ಕಳೆದ 6 ವರ್ಷಗಳಿಂದ ಟಾಪ್ 10 ರಲ್ಲಿದ್ದ ವಿರಾಟ್ ಕೊಹ್ಲಿ, 2053 ದಿನಗಳ ನಂತರ ಟಾಪ್​ 10 ರೊಳಗೆ ಸ್ಥಾನ ಕಳೆದುಕೊಂಡಿದ್ದಾರೆ.

ICC Test Ranking: 2053 ದಿನಗಳ ನಂತರ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಟಾಪ್ 10 ರಿಂದ ಹೊರಬಿದ್ದ ವಿರಾಟ್ ಕೊಹ್ಲಿ..!
Virat Kohli
Follow us on

ಎರಡೂವರೆ ವರ್ಷದಿಂದ ಒಂದೇ ಒಂದು ಶತಕ ಸಿಡಿಸಿಲು ಅರಸಾಹಸ ಪಡುತ್ತಿರುವ ವಿರಾಟ್ ಕೊಹ್ಲಿ (Virat Kohli)ಗೆ ಮತ್ತೊಂದು ಹಿನ್ನಡೆ ಎದುರಾಗಿದೆ. ಐಸಿಸಿ ಇತ್ತೀಚೆಗೆ ಬಿಡುಗಡೆ ಮಾಡಿರುವ ಟೆಸ್ಟ್ ಶ್ರೇಯಾಂಕ (ICC Test Ranking)ದಲ್ಲಿ ವಿರಾಟ್ ಕೊಹ್ಲಿ ಟಾಪ್ 10 ರಿಂದ ಹೊರಬಿದ್ದಿದ್ದಾರೆ. ಬುಧವಾರ ಬಿಡುಗಡೆಯಾದ ನೂತನ ಟೆಸ್ಟ್ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ 13ನೇ ಸ್ಥಾನಕ್ಕೆ ಕುಸಿದಿದ್ದಾರೆ. ಎಡ್ಜ್‌ಬಾಸ್ಟನ್ ಟೆಸ್ಟ್‌ಗೂ ಮುನ್ನ ವಿರಾಟ್ ಕೊಹ್ಲಿ 10ನೇ ಸ್ಥಾನದಲ್ಲಿದ್ದರು. ಆದರೆ ಕಳಪೆ ಪ್ರದರ್ಶನದಿಂದಾಗಿ 3 ಸ್ಥಾನ ಕಳೆದುಕೊಂಡು, 13ನೇ ಸ್ಥಾನಕ್ಕೆ ಬಂದು ತಲುಪಿದ್ದಾರೆ. ಎಡ್ಜ್‌ಬಾಸ್ಟನ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕಗಳನ್ನು ಗಳಿಸಿದ ಜಾನಿ ಬೈರ್‌ಸ್ಟೋವ್ (Jonny Bairstow) 10ನೇ ಸ್ಥಾನಕ್ಕೆ ಏರಿದ್ದು, ಕೊಹ್ಲಿ ಸ್ಥಾನವನ್ನು ಅಲಂಕರಿಸಿದ್ದಾರೆ. ಕಳೆದ 6 ವರ್ಷಗಳಿಂದ ಟಾಪ್ 10 ರಲ್ಲಿದ್ದ ವಿರಾಟ್ ಕೊಹ್ಲಿ, 2053 ದಿನಗಳ ನಂತರ ಟಾಪ್​ 10 ರೊಳಗೆ ಸ್ಥಾನ ಕಳೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಕಳಪೆ ಫಾರ್ಮ್‌ ಕಾರಣ

ವಿರಾಟ್ ಕೊಹ್ಲಿ ಟಾಪ್ 10 ರಿಂದ ಹೊರಗುಳಿಯಲು ಅವರ ನಿರಂತರ ಕಳಪೆ ಪ್ರದರ್ಶನವೇ ಕಾರಣ. ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಲ್ಲಿ 16 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 29.78 ರ ಸರಾಸರಿಯಲ್ಲಿ ಕೇವಲ 834 ರನ್ ಗಳಿಸಿದ್ದಾರೆ. ಈ ವೇಳೆ ವಿರಾಟ್‌ ಬ್ಯಾಟ್‌ನಿಂದ ಒಂದೇ ಒಂದು ಶತಕ ಸಿಡಿಯಲಿಲ್ಲ. ವಿರಾಟ್ ಕೇವಲ 6 ಅರ್ಧ ಶತಕಗಳನ್ನು ಗಳಿಸಲು ಶಕ್ತರಾಗಿದ್ದು, 4 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

ಇದನ್ನೂ ಓದಿ
IND vs ENG: ಶ್ರೇಯಸ್​ಗೆ ಮುಳುವಾಯ್ತ ಐಪಿಎಲ್? ಮೆಕಲಮ್ ತೋಡಿದ ಖೆಡ್ಡಾಕ್ಕೆ ಸುಲಭವಾಗಿ ಬಿದ್ದ ಅಯ್ಯರ್; ವಿಡಿಯೋ
IND vs ENG: ರಿಷಬ್ ಪಂತ್ ಆಟಕ್ಕೆ 69 ವರ್ಷಗಳ ಹಳೆಯ ದಾಖಲೆ ಉಡೀಸ್! ಆದರೆ..?

ಇದನ್ನೂ ಓದಿ: IND vs ENG: 6 ಎಸೆತಗಳಲ್ಲಿ ವಿಶ್ವದಾಖಲೆ ಬರೆದ ಬಮ್ರಾ; ಕೊಹ್ಲಿ- ದ್ರಾವಿಡ್ ಸೆಲೆಬ್ರೇಷನ್ ಹೇಗಿತ್ತು ಗೊತ್ತಾ?

ರಿಷಬ್ ಪಂತ್ ಟೆಸ್ಟ್ ಶ್ರೇಯಾಂಕದಲ್ಲಿ ಏರಿಕೆ

ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋ ರೂಟ್ ನಂಬರ್ 1 ಸ್ಥಾನದಲ್ಲಿ ಉಳಿದಿದ್ದಾರೆ. ಜೊತೆಗೆ ಜೋ ರೂಟ್ 900 ಕ್ಕಿಂತ ಹೆಚ್ಚು ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿರುವ ಏಕೈಕ ಬ್ಯಾಟ್ಸ್‌ಮನ್ ಆಗಿದ್ದಾರೆ. ಆಸ್ಟ್ರೇಲಿಯಾದ ಮಾರ್ನಸ್ ಲ್ಯಾಬುಸ್ಚಾಗ್ನೆ 879 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಸ್ಟೀವ್ ಸ್ಮಿತ್ ಮೂರನೇ ಮತ್ತು ಬಾಬರ್ ಅಜಮ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ರಿಷಬ್ ಪಂತ್ ಟೆಸ್ಟ್ ಶ್ರೇಯಾಂಕದಲ್ಲಿ ಐದನೇ ಸ್ಥಾನವನ್ನು ತಲುಪಿದ್ದು, ಈ ಮೂಲಕ ಟಾಪ್ 5ರಲ್ಲಿ ಕಾಣಿಸಿಕೊಂಡ ಭಾರತದ ಅಗ್ರ ಟೆಸ್ಟ್ ಬ್ಯಾಟ್ಸ್‌ಮನ್ ಕೂಡ ಆಗಿದ್ದಾರೆ. ಜೊತೆಗೆ ಟೀಂ ಇಂಡಿಯಾದ ಹಾಲಿ ರೋಹಿತ್ ಶರ್ಮಾ 9 ನೇ ಸ್ಥಾನ ಪಡೆದಿದ್ದಾರೆ.

ಜಾನಿ ಬೈರ್‌ಸ್ಟೋಗೆ ಮುಂಬಡ್ತಿ

ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನಕ್ಕಾಗಿ ಅಗ್ರ 10 ರೊಳಗೆ ಸ್ಥಾನ ಪಡೆದಿದ್ದಾರೆ. ಬೈರ್‌ಸ್ಟೋವ್ ಕೊನೆಯ ಐದು ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ನಾಲ್ಕರಲ್ಲಿ ಶತಕ ಗಳಿಸಿದ್ದು, ಈ ಸಮಯದಲ್ಲಿ ಅವರ ಸರಾಸರಿ 190 ನ್ನೂ ಮೀರಿದೆ.

Published On - 2:10 pm, Wed, 6 July 22