AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA 2nd Test: ಆಫ್ರಿಕಾ ಬೌಲರ್​ಗಳನ್ನು ಎದುರಿಸಲು ವಿರಾಟ್ ಕೊಹ್ಲಿ ಮಾಸ್ಟರ್ ಪ್ಲಾನ್: ಯಾರನ್ನು ಕರೆಸಿದ್ದಾರೆ ನೋಡಿ

South Africa vs India 2nd Test: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆದ್ದು ಸೇಡು ತೀರಿಸಿಕೊಳ್ಳಲು ಸಿದ್ಧವಾಗಿರುವ ವಿರಾಟ್ ಕೊಹ್ಲಿ ನ್ಯಾಂಡ್ರೆ ಬರ್ಗರ್ ಮಾರಕ ದಾಳಿಯನ್ನು ಎದುರಿಸಲು ನೆಟ್‌ಗಳಲ್ಲಿ ವಿಶೇಷವಾಗಿ ಪ್ರ್ಯಾಕ್ಟೀಸ್ ನಡೆಸುತ್ತಿದ್ದಾರೆ. ಇದಕ್ಕಾಗಿ ವಿಶೇಷ ಬೌಲರ್​ ಅನ್ನು ಕರೆಸಿದ್ದಾರೆ.

IND vs SA 2nd Test: ಆಫ್ರಿಕಾ ಬೌಲರ್​ಗಳನ್ನು ಎದುರಿಸಲು ವಿರಾಟ್ ಕೊಹ್ಲಿ ಮಾಸ್ಟರ್ ಪ್ಲಾನ್: ಯಾರನ್ನು ಕರೆಸಿದ್ದಾರೆ ನೋಡಿ
Virat Kohli Practice
Vinay Bhat
|

Updated on:Jan 02, 2024 | 7:15 AM

Share

ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಹೀನಾಯ ಸೋಲು ಅನುಭವಿಸಿದ ನಂತರ ಟೀಮ್ ಇಂಡಿಯಾ ಸೇಡು ತೀರಿಸಿಕೊಳ್ಳಲು ಸಜ್ಜಾಗುತ್ತಿದೆ. ಇದಕ್ಕಾಗಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಕೂಡ ಕಾದು ಕುಳಿತಿದ್ದಾರೆ. ಪ್ರೋಟೀಸ್ ವೇಗಿ ನ್ಯಾಂಡ್ರೆ ಬರ್ಗರ್ ವಿರುದ್ಧ ಬ್ಯಾಟಿಂಗ್ ಸಿಮ್ಯುಲೇಶನ್‌ಗೆ ಒಳಗಾದ ಕೊಹ್ಲಿ ಹೊಸ ವರ್ಷದ ದಿನದಂದು ಸುದೀರ್ಘ ಅಭ್ಯಾಸವನ್ನು ನಡೆಸಿದರು. ಇಂಡೋ-ಆಫ್ರಿಕಾ ಅಂತಿಮ ಎರಡನೇ ಟೆಸ್ಟ್ ಪಂದ್ಯ ಜನವರಿ 3 ರಿಂದ ಕೇಪ್‌ಟೌನ್​ನ ನ್ಯೂಲ್ಯಾಂಡ್ಸ್​ನಲ್ಲಿ ಶುರುವಾಗಲಿದೆ. ಸರಣಿಯಲ್ಲಿ 0-1 ಹಿನ್ನಡೆಯಲ್ಲಿರುವ ಕಾರಣ ಟೀಮ್ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಈ ಮಹತ್ವದ ಪದ್ಯಕ್ಕೆ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಉತ್ತಮಗೊಳಿಸಲು ನಿರ್ಧರಿಸಿದ್ದಾರೆ. ಅವರು ಕೇಪ್ ಟೌನ್‌ನಲ್ಲಿ ಪ್ರ್ಯಾಕ್ಟೀಸ್ ಸೆಷನ್ ವೇಳೆ ಒಂದು ಗಂಟೆ ಬ್ಯಾಟಿಂಗ್ ಮಾಡಿದರು. ಆರಂಭದಲ್ಲಿ, ಬೌಲರ್‌ಗಳೊಂದಿಗೆ ಅಭ್ಯಾಸ ನಡೆಸಿದರೆ ನಂತರ ದಕ್ಷಿಣ ಆಫ್ರಿಕಾ ವೇಗಿಗಳ ವೇಗದ ದಾಳಿಯನ್ನು ನಿಭಾಯಿಸಲು ಕೆಲವು ಗಂಭೀರವಾದ ಥ್ರೋಡೌನ್‌ಗಳನ್ನು ಎದುರಿಸಿದರು.

ಇದನ್ನೂ ಓದಿ
Image
ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ಬಗ್ಗೆ ಕೋಪಗೊಂಡ ಸ್ಟೀವ್ ವಾ
Image
2ನೇ ಟೆಸ್ಟ್: ಕೇಪ್​ಟೌನ್​ಗೆ ಆಗಮನಿಸಿದ ಟೀಮ್ ಇಂಡಿಯಾ ಆಟಗಾರರು: ವಿಡಿಯೋ
Image
ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಭಾರತದ ಟೆಸ್ಟ್ ದಾಖಲೆ ಹೇಗಿದೆ?
Image
ಹೊಸ ವರ್ಷದಂದು ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್: ಸ್ಟಾರ್ ಆಟಗಾರನಿಗೆ ಇಂಜುರಿ

Allan donald: ದಕ್ಷಿಣ ಆಫ್ರಿಕಾದಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಭಾರತಕ್ಕೆ ಟಿಪ್ಸ್ ಕೊಟ್ಟ ಆಫ್ರಿಕಾ ಆಟಗಾರ

ಆದರೆ ವಿರಾಟ್ ಕೊಹ್ಲಿ ಅಭ್ಯಾಸದ ಪ್ರಮುಖ ಹೈಲೈಟ್ ಎಂದರೆ ಎಡಗೈ ವೇಗಿ ವಿರುದ್ಧ ಎದುರಿಸಲು ವಿಶೇಷ ತರಬೇತಿ. ನ್ಯಾಂಡ್ರೆ ಬರ್ಗರ್ ಅನ್ನು ಎದುರಿಸಲು ಕೊಹ್ಲಿಗೆ ಇದು ಉತ್ತಮ ಮಾರ್ಗವಾಗಿದೆ. ಇದಕ್ಕಾಗಿ ಆಫ್ರಿಕಾದ ಸ್ಥಳೀಯ ನೆಟ್ ಬೌಲರ್ ಅನ್ನು ಅಭ್ಯಾಸದ ಅವಧಿಗೆ ಕರೆತರಲಾಯಿತು. ಭಾರತೀಯ ತಂಡವು ಯಾವುದೇ ಎಡಗೈ ವೇಗಿಗಳನ್ನು ಹೊಂದಿಲ್ಲದ ಪರಿಣಾಮವಾಗಿ ಸ್ಥಳೀಯ ನೆಟ್ಸ್ ಬೌಲರ್ ಅನ್ನು ಕರೆಸಿ ಅಭ್ಯಾಸ ಮಾಡಿದ್ದಾರೆ.

ಸೆಂಚುರಿಯನ್‌ನಲ್ಲಿ ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿ 7 ವಿಕೆಟ್‌ಗಳನ್ನು ಉರುಳಿಸಿದ ನಂತರ ನ್ಯಾಂಡ್ರೆ ಬರ್ಗರ್ ಭಾರತೀಯ ಬ್ಯಾಟರ್‌ಗಳಿಗೆ ಅಪಾಯಕಾರಿ ಆಗಿದ್ದಾರೆ. ಯುವ ನೆಟ್ಸ್ ಬೌಲರ್ ಬರ್ಗರ್‌ಗಿಂತ ಕಡಿಮೆ ವೇಗವನ್ನು ಹೊಂದಿದ್ದರೂ, ಕೊಹ್ಲಿ ತನಗೆ ಸಿಕ್ಕಿ ಅವಕಾಶವನ್ನು ಉಪಯೋಗಿಸಿಕೊಂಡರು. ಕೊಹ್ಲಿ ಕವರ್ ಡ್ರೈವ್‌ಗಳ ಮೂಲಕ ಜಸ್ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಪ್ರ್ಯಾಕ್ಟೀಸ್ ನಡೆಸಿದರೆ, ರವಿ ಅಶ್ವಿನ್ ಬೌಲಿಂಗ್​ನಲ್ಲಿ ಬೃಹತ್ ಸಿಕ್ಸರ್‌ ಸಿಡಿಸಿದ್ದು ಕಂಡುಬಂತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:14 am, Tue, 2 January 24

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ