2023 ರ ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ (ICC ODI World Cup Final) ಆಸ್ಟ್ರೇಲಿಯಾ ವಿರುದ್ಧ ಹೃದಯವಿದ್ರಾವಕ ಸೋಲಿನ ನಂತರ ಐಸಿಸಿ ಪ್ರಶಸ್ತಿ ಬರವನ್ನು ನೀಗಿಸುವ ಭಾರತದ ಕನಸು ಕಸನಾಗಿಯೇ ಉಳಿಯಿತು. ಸತತ 10 ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದ ರೋಹಿತ್ ಶರ್ಮಾ ನೇತೃತ್ವದ ಭಾರತ ಟ್ರೋಫಿ ಎತ್ತುವ ನೆಚ್ಚಿನ ತಂಡವಾಗಿತ್ತು. ಆದರೆ ಕಾಂಗರೂಗಳು ಆತಿಥೇಯ ತಂಡವನ್ನು ಸೋಲಿಸಿ ಆರು ವಿಕೆಟ್‌ಗಳ ದೊಡ್ಡ ಗೆಲುವನ್ನು ದಾಖಲಿಸಿದರು. ಭಾರತದ ಆಟಗಾರರು ಸೋಲಿನ ನಂತರ ದುಃಖಿತರಾಗಿದ್ದರು. ಇದೀಗ ಫೈನಲ್ ಮುಗಿದ ಒಂದುವರೆ ತಿಂಗಳ ನಂತರ, ಪಂದ್ಯದ ಮುಗಿದ ಸಂದರ್ಭ ವಿರಾಟ್ ಕೊಹ್ಲಿ ಪ್ರತಿಕ್ರಿಯೆಯ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಆಸ್ಟ್ರೇಲಿಯಾ ತಂಡ ಗೆಲುವಿನ ದಡ ಮುಟ್ಟುತ್ತಿದ್ದಂತೆ ಭಾರತದ ಆಟಗಾರರು ನಿರಾಸೆಗೊಂಡಂತೆ ಕಂಡುಬಂದಿತು. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಸ್ಟಂಪ್‌ಗಳ ಕಡೆಗೆ ನಡೆದುಕೊಂಡು ಹೋಗುವುದನ್ನು ನೋಡಬಹುದು. ಆಗ ಸಾಂಪ್ರದಾಯಿಕ ಹ್ಯಾಂಡ್‌ಶೇಕ್‌ಗಾಗಿ ಸಹ ಆಟಗಾರರ ಬಳಿಗೆ ಹೋಗುವ ಮೊದಲು ಕೊಹ್ಲಿ ತನ್ನ ಕ್ಯಾಪ್‌ನಿಂದ ಬೇಲ್ಸ್ ತೆಗೆದಿದ್ದಾರೆ. ಬೇಸರದಲ್ಲಿ ಕೊಹ್ಲಿ ತಮ್ಮ ಕ್ಯಾಪ್ ತೆಗೆದು ಬೇಲ್ ಗಳನ್ನು ಕಳಚಿದ್ದಾರೆ. ಅಭಿಮಾನಿಯೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
Australia vs Pakistan: ಏನಿದು ಪಿಂಕ್ ಟೆಸ್ಟ್?
One of the unseen videos of Virat Kohli after the 2023 World Cup Final.pic.twitter.com/XINHzkqxcf
— Mufaddal Vohra (@mufaddal_vohra) January 1, 2024
ತವರು ನೆಲದಲ್ಲಿ ನಡೆದ ಪಂದ್ಯಾವಳಿಯುದ್ದಕ್ಕೂ, ಭಾರತವು ಸತತ 10 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಾಬಲ್ಯವನ್ನು ಪ್ರದರ್ಶಿಸಿತು. ಭಾಗವಹಿಸಿದ ಪ್ರತಿ ತಂಡವನ್ನು ಸೋಲಿಸಿತು. ಪ್ರಶಸ್ತಿ ಗೆಲ್ಲುವ ಫೇವರಿಟ್ ಆಗಿ ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯದಲ್ಲಿ ಭಾರತ 240 ರನ್ ಗಳಿಸುವಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಲಗೈ ಬ್ಯಾಟ್ಸ್‌ಮನ್ 63 ಎಸೆತಗಳಲ್ಲಿ 54 ರನ್ ಗಳಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್ 107 ಎಸೆತಗಳಲ್ಲಿ 66 ರನ್ ಕಲೆಹಾಕಿದ್ದರು.
ಆದರೆ, ಟ್ರಾವಿಸ್ ಹೆಡ್ ಅವರ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಆಸ್ಟ್ರೇಲಿಯಾ, 241 ರನ್ ಗುರಿಯನ್ನು ಆರು ವಿಕೆಟ್‌ಗಳು ಮತ್ತು ಏಳು ಓವರ್‌ಗಳು ಬಾಕಿ ಇರುವಂತೆಯೇ ಯಶಸ್ವಿಯಾಗಿ ಬೆನ್ನಟ್ಟಿತು. ಹೆಡ್ ಪಂದ್ಯಶ್ರೇಷ್ಠ 137 ರನ್ ಗಳಿಸಿದರೆ, ಲ್ಯಾಬುಸ್ಚಾಗ್ನೆ 110 ಎಸೆತಗಳಲ್ಲಿ 58 ರನ್ ಗಳಿಸಿ ಅಜೇಯರಾಗಿ ಉಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:14 am, Tue, 2 January 24