IPL 2024: ನ್ಯೂಝಿಲೆಂಡ್​ನಲ್ಲಿ ಸಿಎಸ್​ಕೆ ಅಭಿಮಾನಿಯನ್ನು ಕಂಡು ರಚಿನ್ ರವೀಂದ್ರ ಏನು ಮಾಡಿದ್ರು ನೋಡಿ

Rachin Ravindra CSK Fans: ಡಿಸೆಂಬರ್ 19 ರಂದು ದುಬೈನಲ್ಲಿ ನಡೆದ ಐಪಿಎಲ್ 2024 ಮಿನಿ ಹರಾಜಿನಲ್ಲಿ ರಚಿನ್ ರವೀಂದ್ರ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ 1.80 ಕೋಟಿ ರೂ. ನೀಡಿ ಖರೀದಿಸಿತು. ಇದೀಗ ನ್ಯೂಝಿಲೆಂಡ್‌ನಲ್ಲಿ ರಚಿನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಯ ಹೃದಯವನ್ನು ಗೆದ್ದಿದ್ದಾರೆ.

IPL 2024: ನ್ಯೂಝಿಲೆಂಡ್​ನಲ್ಲಿ ಸಿಎಸ್​ಕೆ ಅಭಿಮಾನಿಯನ್ನು ಕಂಡು ರಚಿನ್ ರವೀಂದ್ರ ಏನು ಮಾಡಿದ್ರು ನೋಡಿ
Rachin Ravindra CSK
Follow us
Vinay Bhat
|

Updated on: Jan 02, 2024 | 10:23 AM

ಇಂಡಿಯನ್ ಪ್ರೀಮಿಯರ್ ಲೀಗ್ 2024 ಹರಾಜು (IPL 2024 Auction) ಪ್ರಕ್ರಿಯೆ ಇತ್ತೀಚೆಗಷ್ಟೆ ಮುಕ್ತಾಯಗೊಂಡಿತು. ಈ ಬಾರಿಯ ಹರಾಜಿನಲ್ಲಿ ಕೆಲ ಅಚ್ಚರಿಯ ಆಯ್ಕೆಗಳು, ದುಬಾರಿ ಹರಾಜು ಕೂಡ ನಡೆದವು. ಕೆಲವೇ ದಿನಗಳಲ್ಲಿ ಐಪಿಎಲ್ 2024 ವೇಳಾಪಟ್ಟಿ ಕೂಡ ಪ್ರಕಟವಾಗುವ ಸಾಧ್ಯತೆ ಇದೆ. ಕಳೆದ ವರ್ಷ ನಡೆದ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಮಿಂಚಿದ್ದ ಕೆಲ ಸ್ಟಾರ್ ಆಟಗಾರರು ಈ ಬಾರಿಯ ಹರಾಜಿನಲ್ಲಿ ಉತ್ತಮ ಮೊತ್ತಕ್ಕೆ ಸೇಲ್ ಆದರು. ಈ ಪೈಕಿ ನ್ಯೂಝಿಲೆಂಡ್ ತಂಡದ ಭವಿಷ್ಯದ ಆಲ್ರೌಂಡರ್ ರಚಿನ್ ರವೀಂದ್ರ ಕೂಡ ಒಬ್ಬರು.

ಡಿಸೆಂಬರ್ 19 ರಂದು ದುಬೈನಲ್ಲಿ ನಡೆದ ಐಪಿಎಲ್ 2024 ಮಿನಿ ಹರಾಜಿನಲ್ಲಿ ರಚಿನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಖರೀದಿಸಿತು. ಯುವ ಆಲ್‌ರೌಂಡರ್​ಗಾಗಿ ಸಿಎಸ್‌ಕೆ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್‌ ಬಿಡ್‌ ಮಾಡಿತು. ಅಂತಿಮವಾಗಿ ಎಂಎಸ್ ಧೋನಿ ನೇತೃತ್ವದ ತಂಡ ರಚಿನ್ ಅವರನ್ನು 1.80 ಕೋಟಿ ರೂ. ನೀಡಿ ಖರೀದಿಸಿತು.

ಇದನ್ನೂ ಓದಿ
Image
ಎಲ್ಲರನ್ನೂ ಹಿಂದಿಕ್ಕಿ ಸಿಕ್ಸರ್ ಕಿಂಗ್ ಎನಿಸಿಕೊಂಡ ಯುಎಇ ಬ್ಯಾಟರ್..!
Image
ಹಸಿರು ಪಿಚ್, ಬೌನ್ಸಿ ಟ್ರ್ಯಾಕ್: ಭಾರತಕ್ಕೆ ಮಾರಕವಾಗಲಿದೆ ಕೇಪ್ ಟೌನ್
Image
ODI ಕ್ರಿಕೆಟ್​ಗೆ ಕೊಹ್ಲಿ-ರೋಹಿತ್ ವಿದಾಯ?: ಕೇಳಿಬರುತ್ತಿವೆ ಹೀಗೊಂದು ಮಾತು
Image
ಎರಡನೇ ಟೆಸ್ಟ್​ಗೆ ಕೊಹ್ಲಿ ಮಾಸ್ಟರ್ ಪ್ಲಾನ್: ಯಾರನ್ನು ಕರೆಸಿದ್ದಾರೆ ನೋಡಿ

David Warner: ನಿವೃತ್ತಿ ಬೆನ್ನಲ್ಲೇ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಆದ ವಾರ್ನರ್

ಇದೀಗ ರಚಿನ್ ರವೀಂದ್ರ ಅವರು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಯ ಹೃದಯವನ್ನು ಗೆದ್ದಿದ್ದಾರೆ. ನ್ಯೂಝಿಲೆಂಡ್‌ನಲ್ಲಿ ರವೀಂದ್ರ ಸಿಎಸ್​ಕೆ ಅಭಿಮಾನಿಗಳ ಪೋಸ್ಟರ್‌ಗೆ ಸಹಿ ಹಾಕಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ರಚಿನ್ ತನ್ನ ಕಾರಿನಿಂದ ಇಳಿದ ತಕ್ಷಣ ಚೆನ್ನೈ ಅಭಿಮಾನಿಯ ಮನವಿಗೆ ಸಮ್ಮತಿಸುತ್ತಿರುವುದನ್ನು ಕಾಣಬಹುದು. ಪೋಸ್ಟರ್‌ನಲ್ಲಿ ಸಿಎಸ್‌ಕೆ ಲಾಂಛನದ ಮೇಲೆ ರಚಿನ್ ಸಹಿ ಮಾಡಿದ್ದಾರೆ.

ರಚಿನ್ ಈ ಋತುವಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಚೊಚ್ಚಲ ಪ್ರವೇಶವನ್ನು ಮಾಡಲಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಖಚಿತಪಡಿಸಿದ್ದಾರೆ. 2023ರ ವಿಶ್ವಕಪ್‌ನಲ್ಲಿ ಅದ್ಭುತ ಆಟವಾಡಿದ ರಚಿನ್ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದರು. ಚೊಚ್ಚಲ ವಿಶ್ವಕಪ್ ಆಡಿದ ರಚಿನ್ 10 ಪಂದ್ಯಗಳಲ್ಲಿ 578 ರನ್ ಗಳಿಸಿದರು. ಇವರು ಈವರೆಗೆ 53 ಟಿ20 ಪಂದ್ಯಗಳನ್ನು ಆಡಿದ್ದು, 618 ರನ್ ಹಾಗೂ 41 ವಿಕೆಟ್ ಪಡೆದಿದ್ದಾರೆ.

ರಚಿನ್ ಹೊರತಾಗಿ, ಸಿಎಸ್​ಕೆ ಹರಾಜಿನಲ್ಲಿ ನ್ಯೂಝಿಲೆಂಡ್ ತಂಡದ ಆಟಗಾರ ಡ್ಯಾರಿಲ್ ಮಿಚೆಲ್ ಅವರನ್ನು ಕೂಡ ಖರೀದಿಸಿತು. ಈ ಸ್ಟಾರ್ ಆಲ್ ರೌಂಡರ್​ಗೆ ಹರಾಜಿನಲ್ಲಿ ಹಣದ ಮಳೆ ಸುರಿಯಿತು. ಬರೋಬ್ಬರಿ 14 ಕೋಟಿ ರೂ. ಗೆ ಸಿಎಸ್​ಕೆ ಸೇರಿದರು. ಅಂತೆಯೆ ಚೆನ್ನೈ ಶಾರ್ದೂಲ್ ಠಾಕೂರ್ ಅವರನ್ನು 4 ಕೋಟಿ ನೀಡಿ ಮರಳಿ ಕರೆಸಿದೆ. ಹಳದಿ ಸೇನೆಯು ಅನ್ ಕ್ಯಾಪ್ಡ್ ಸಮೀರ್ ರಿಜ್ವಿಗಾಗಿ 8.40 ಕೋಟಿ ರೂ. ನೀಡಿದೆ. ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಡ್ ಮಾಡಿದ ಏಕೈಕ ತಂಡ ಸಿಎಸ್​ಕೆ ಆಗಿದ್ದು, ಅವರು ತಮ್ಮ ಮೂಲ ಬೆಲೆ 2 ಕೋಟಿಗೆ ಸೇರಿಕೊಂಡರು.

ಅಂತೆಯೆ ಐಪಿಎಲ್ 2024 ರಲ್ಲಿ ಧೋನಿ ಸಿಎಸ್‌ಕೆಯನ್ನು ಮುನ್ನಡೆಸುವುದು ಖಚಿತವಾಗಿದೆ. ಐಪಿಎಲ್ 2023ರ ವೇಳೆ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ಧೋನಿ ಇದೀಗ ಚೇತರಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಐಪಿಎಲ್ 2024ಕ್ಕೆ ಸಿದ್ಧತೆಗಳನ್ನು ಪ್ರಾರಂಭಿಸಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?