ಕೊನೆಯ ಪಂದ್ಯಕ್ಕೂ ಮುನ್ನ ಗ್ರೀನ್ ಕ್ಯಾಪ್ ಕಳವು: ದಯವಿಟ್ಟು ಕೊಟ್ಬಿಡಿ ಎಂದ ವಾರ್ನರ್..!

David Warner: ಸಿಡ್ನಿಯಲ್ಲಿ ಜನವರಿ 3 ರಿಂದ ಶುರುವಾಗಲಿರುವ ಪಾಕಿಸ್ತಾನ್ ವಿರುದ್ಧದ ಪಂದ್ಯದ ಮೂಲಕ ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ. ಆದರೆ ಕಡೆಯ ಟೆಸ್ಟ್ ಪಂದ್ಯಕ್ಕೂ ಮುನ್ನ ಕಳೆದ 12 ವರ್ಷ ಅವರು ಧರಿಸಿದ್ದ ಬ್ಯಾಗಿ ಗ್ರೀನ್ ಕ್ಯಾಪ್ ಕಳೆದು ಹೋಗಿದೆ.

ಕೊನೆಯ ಪಂದ್ಯಕ್ಕೂ ಮುನ್ನ ಗ್ರೀನ್ ಕ್ಯಾಪ್ ಕಳವು: ದಯವಿಟ್ಟು ಕೊಟ್ಬಿಡಿ ಎಂದ ವಾರ್ನರ್..!
David Warner
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jan 02, 2024 | 10:07 AM

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ದಿಗ್ಗಜ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (David Warner) ಅವರ ‘ಬ್ಯಾಗಿ ಗ್ರೀನ್ ಕ್ಯಾಪ್’ ಕಳವಾಗಿದೆ. ಈ ಬಗ್ಗೆ ಖುದ್ದು ವಾರ್ನರ್ ಅವರೇ ಮಾಹಿತಿ ನೀಡಿದ್ದು, ದಯವಿಟ್ಟು ಹಿಂತಿರುಗಿಸುವಂತೆ ಮನವಿ ಮಾಡಿದ್ದಾರೆ. ಬಾಕ್ಸಿಂಗ್ ಡೇ ಟೆಸ್ಟ್ ಮುಗಿದ ನಂತರ ಡೇವಿಡ್ ವಾರ್ನರ್ ಮೆಲ್ಬೋರ್ನ್‌ನಿಂದ ಸಿಡ್ನಿಗೆ ಬಂದಿದ್ದರು. ಇದಾಗ್ಯೂ ಅವರ ಒಂದು ಬ್ಯಾಕ್​ಪ್ಯಾಕ್ ಲಗೇಜ್ ಸಿಡ್ನಿಗೆ ತಲುಪಿರಲಿಲ್ಲ. ಹೋಟೆಲ್ ಹಾಗೂ ಏರ್​ಪೋರ್ಟ್​ನಲ್ಲಿ ಕ್ಯಾಮೆರಾಗಳನ್ನು ಪರಿಶೀಲಿಸಿದರೂ ಈ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾ ಮೂಲಕ ಗ್ರೀನ್ ಕ್ಯಾಪ್ ಹಿಂತಿರುಗಿಸುವಂತೆ ವಾರ್ನರ್ ಮನವಿ ಮಾಡಿದ್ದಾರೆ.

ನನ್ನ ಬ್ಯಾಗ್‌ಗಳನ್ನು ತೆರೆದು ಬ್ಯಾಕ್‌ಪ್ಯಾಕ್ ತೆಗೆದುಕೊಂಡು ಹೋಗುವುದನ್ನು ಯಾರೂ ನೋಡಿಲ್ಲ. ನೀವು ವಿಮಾನ ನಿಲ್ದಾಣದಲ್ಲಿ ಅಥವಾ ಹೊರಗೆ ಕೆಲಸ ಮಾಡುತ್ತಿದ್ದರೆ, ಅಚಾತುರ್ಯದಿಂದ ನನ್ನ ಬ್ಯಾಕ್​ಪ್ಯಾಕ್ ಅನ್ನು ತೆಗೆದುಕೊಂಡಿದ್ದರೆ, ಅದನ್ನು ನನಗೆ ಹಿಂತಿರುಗಿಸಿ. ನಾನು ನಿಮಗೆ ಬೇರೊಂದು ಬ್ಯಾಕ್​ಪ್ಯಾಕ್ ನೀಡುತ್ತೇನೆ ಎಂದು ವಾರ್ನರ್ ತಿಳಿಸಿದ್ದಾರೆ.

ಸದ್ಯ ಕಳುವಾಗಿರುವ ಬ್ಯಾಕ್​ಪ್ಯಾಕ್​ನಲ್ಲಿ ಡೇವಿಡ್ ವಾರ್ನರ್ ಅವರ ಬ್ಯಾಗಿ ಗ್ರೀನ್ ಕ್ಯಾಪ್ ಇದ್ದು, ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನ ಅದನ್ನು ಹಿಂತಿರುಗಿಸುವಂತೆ ಸೋಷಿಯಲ್ ಮೀಡಿಯಾ ಮೂಲಕ ಮನವಿ ಸಲ್ಲಿಸಿದ್ದಾರೆ.

ಬ್ಯಾಗಿ ಗ್ರೀನ್ ಕ್ಯಾಪ್ ಎಂದರೇನು?

ಟೆಸ್ಟ್ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯನ್ನರು ಧರಿಸುವ ಕ್ಯಾಪ್ ಅನ್ನು ಬ್ಯಾಗಿ ಗ್ರೀನ್ ಕ್ಯಾಪ್ ಎಂದು ಕರೆಯಲಾಗುತ್ತದೆ. ಈ ಕ್ಯಾಪ್ ಇದೀಗ ವಾರ್ನರ್ ಪಾಲಿಗೆ ಅತ್ಯಮೂಲ್ಯ. ಏಕೆಂದರೆ ಪಾದಾರ್ಪಣೆ ಸಮಯದಲ್ಲಿ ಪಡೆದ ಬ್ಯಾಗಿ ಗ್ರೀನ್ ಕ್ಯಾಪ್ ಅನ್ನು ಬದಲಿಸುವ ಸಂಪ್ರದಾಯ ಆಸ್ಟ್ರೇಲಿಯಾ ಕ್ರಿಕೆಟ್​ನಲ್ಲಿಲ್ಲ.

ಕಳೆದ ಒಂದು ದಶಕದಿಂದಲೂ ಕಾಪಾಡಿಕೊಂಡು ಬಂದಿದ್ದ ಈ ಕ್ಯಾಪ್ ನಿವೃತ್ತಿಗೂ ಮುನ್ನ ಕಳೆದು ಹೋಗಿರುವುದು ಡೇವಿಡ್ ವಾರ್ನರ್ ಅವರನ್ನು ಚಿಂತೆಗೀಡು ಮಾಡಿದೆ. ಹೀಗಾಗಿಯೇ ನನ್ನ ಲಗೇಜ್ ಬ್ಯಾಗ್ ಅನ್ನು ನೀವಿಟ್ಟುಕೊಳ್ಳಿ, ದಯವಿಟ್ಟು ಗ್ರೀನ್ ಕ್ಯಾಪ್ ಹಿಂತಿರುಗಿಸಿ ಎಂದು ಡೇವಿಡ್ ವಾರ್ನರ್ ಮನವಿ ಮಾಡಿದ್ದಾರೆ.

ವಾರ್ನರ್ ನಿವೃತ್ತಿ:

ಸಿಡ್ನಿಯಲ್ಲಿ ಜನವರಿ 3 ರಿಂದ ಶುರುವಾಗಲಿರುವ ಪಾಕಿಸ್ತಾನ್ ವಿರುದ್ಧದ ಪಂದ್ಯದ ಮೂಲಕ ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ. ಆದರೆ ಕಡೆಯ ಟೆಸ್ಟ್ ಪಂದ್ಯಕ್ಕೂ ಮುನ್ನ ಕಳೆದ 12 ವರ್ಷ ಅವರು ಧರಿಸಿದ್ದ ಬ್ಯಾಗಿ ಗ್ರೀನ್ ಕ್ಯಾಪ್ ಕಳೆದು ಹೋಗಿದೆ. ಇದೀಗ ನಿವೃತ್ತಿಗೂ ಮುನ್ನ ತನ್ನ ಕ್ಯಾಪ್ ಅನ್ನು ಹಿಂತಿರುಗಿಸುವಂತೆ ವಾರ್ನರ್ ಸೋಷಿಯಲ್ ಮೀಡಿಯಾದಲ್ಲಿ ಅಂಗಲಾಚಿದ್ದಾರೆ.

ಏಕೆಂದರೆ ಪಾದಾರ್ಪಣೆ ಪಂದ್ಯದಲ್ಲಿ ಧರಿಸಿದ್ದ ಕ್ಯಾಪ್​ನೊಂದಿಗೆ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳುವ ಇರಾದೆಯಲ್ಲಿದ್ದಾರೆ ಡೇವಿಡ್ ವಾರ್ನರ್. ಆದರೆ ಕೊನೆಯ ಪಂದ್ಯಕ್ಕೂ ಮುನ್ನ ಅವರು ಕ್ಯಾಪ್ ಕಳುವಾಗಿರುವುದು ಅವರನ್ನು ಚಿಂತೆಗೀಡು ಮಾಡಿದೆ.

ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ವಿಡಿಯೋವನ್ನು ಹಂಚಿಕೊಂಡಿದ್ದು, ನನ್ನ ಬ್ಯಾಗಿ ಗ್ರೀನ್ ಕ್ಯಾಪ್ ಅನ್ನು ಯಾರಾದರೂ ಹೊಂದಿದ್ದರೆ ದಯವಿಟ್ಟು ಅದನ್ನು ಹಿಂತಿರುಗಿಸಿ. ಮೆಲ್ಬೋರ್ನ್‌ನಿಂದ ಸಿಡ್ನಿಗೆ ಬರುತ್ತಿದ್ದಾಗ ಈ ಕ್ಯಾಪ್ ಕಳವಾಗಿದೆ.

ಇದನ್ನೂ ಓದಿ: ಎಲ್ಲರನ್ನೂ ಹಿಂದಿಕ್ಕಿ ಸಿಕ್ಸರ್ ಕಿಂಗ್ ಎನಿಸಿಕೊಂಡ ಯುಎಇ ಬ್ಯಾಟರ್..!

ತಂಡದ ಹೋಟೆಲ್ ಮತ್ತು ಏರ್‌ಲೈನ್‌ಗಳ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಪರಿಶೀಲಿಸಿದರೂ, ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಈ ವಿಡಿಯೋ ನೋಡಿಯಾದರೂ ನನ್ನ ಗ್ರೀನ್ ಕ್ಯಾಪ್​ ಅನ್ನು ಹಿಂತಿರುಗಿಸುವಂತೆ ಡೇವಿಡ್ ವಾರ್ನರ್  ಮನವಿ ಮಾಡಿದ್ದಾರೆ.

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ