AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: 81 ಎಸೆತಗಳ ಬಳಿಕ ಮೊದಲ ಫೋರ್ ಬಾರಿಸಿದಾಗ ವಿರಾಟ್ ಕೊಹ್ಲಿ ಸೆಲೆಬ್ರಿಟ್ ಮಾಡಿದ್ದು ಹೇಗೆ ನೋಡಿ

India vs West Indies 1st Test: 96 ಎಸೆತಗಳಲ್ಲಿ 1 ಫೋರ್ ಬಾರಿಸಿ ವಿರಾಟ್ ಅಜೇಯ 36 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸುತ್ತಿರುವ ಕೊಹ್ಲಿ ಒಂದು ಫೋರ್ ಸಿಡಿಸಲು ತೆಗೆದುಕೊಂಡಿದ್ದು ಬರೋಬ್ಬರಿ 81 ಎಸೆತ.

Virat Kohli: 81 ಎಸೆತಗಳ ಬಳಿಕ ಮೊದಲ ಫೋರ್ ಬಾರಿಸಿದಾಗ ವಿರಾಟ್ ಕೊಹ್ಲಿ ಸೆಲೆಬ್ರಿಟ್ ಮಾಡಿದ್ದು ಹೇಗೆ ನೋಡಿ
Virat Kohli Celebration
Vinay Bhat
|

Updated on:Jul 14, 2023 | 9:44 AM

Share

ಡೊಮಿನಿಕಾದ ವಿಂಡ್ಸರ್ ಪಾರ್ಕ್​ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತ (India vs West Indies) ಭರ್ಜರಿ ಆಟ ಪ್ರದರ್ಶಿಸುತ್ತಿದೆ. ಯಶಸ್ವಿ ಜೈಸ್ವಾಲ್ (Yashasvi Jaiswal) ಹಾಗೂ ನಾಯಕ ರೋಹಿತ್ ಶರ್ಮಾ ಶತಕ ಸಿಡಿಸಿ ಅಬ್ಬರಿಸಿದ್ದು, ಟೀಮ್ ಇಂಡಿಯಾ ಉತ್ತಮ ಸ್ಥಿತಿಯಲ್ಲಿದೆ. ದ್ವಿತೀಯ ದಿನದಾಟದ ಅಂತ್ಯಕ್ಕೆ ಭಾರತ 113 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿದೆ. 162 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ವಿರಾಟ್ ಕೊಹ್ಲಿ (Virat Kohli) ಹಾಗೂ ಯಶಸ್ವಿ ಜೈಸ್ವಾಲ್ ಕ್ರೀಸ್​ನಲ್ಲಿದ್ದಾರೆ. ಈ ಹಿಂದೆ ಟೆಸ್ಟ್​ನಲ್ಲಿ ಕಳಪೆ ಪ್ರದರ್ಶನ ತೋರಿದ್ದ ಪರಿಣಾಮ ಒತ್ತಡದ ನಡುವೆ ಬ್ಯಾಟ್ ಬೀಸುತ್ತಿರುವ ಕೊಹ್ಲಿ ಅರ್ಧಶತಕದತ್ತ ದಾಪುಗಾಲಿಡುತ್ತಿದ್ದಾರೆ.

96 ಎಸೆತಗಳಲ್ಲಿ 1 ಫೋರ್ ಬಾರಿಸಿ ವಿರಾಟ್ ಅಜೇಯ 36 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸುತ್ತಿರುವ ಕೊಹ್ಲಿ ಒಂದು ಫೋರ್ ಸಿಡಿಸಲು ತೆಗೆದುಕೊಂಡಿದ್ದು ಬರೋಬ್ಬರಿ 81 ಎಸೆತ. ಸಾಮಾನ್ಯವಾಗಿ ನೀರು ಕುಡಿದಂತೆ ಫೋರ್ ಬಾರಿಸುವ ಕೊಹ್ಲಿ ಈ ಬಾರಿ ಇಷ್ಟು ಎಸೆತ ತೆಗೆದುಕೊಂಡಿದ್ದು ಸ್ವತಃ ಕೊಹ್ಲಿಗೂ ಅಚ್ಚರಿ ತಂದಿತು. ಇದನ್ನು ವಿಶೇಷವಾಗಿ ಸಂಭ್ರಮಿಸಿದ ಇವರು ನಗುತ್ತಾ ಕೈಮೇಲೆತ್ತಿ ಸಾಧನೆ ಎಂಬಂತೆ ಖುಷಿ ಪಟ್ಟರು. ಇಲ್ಲಿದೆ ನೋಡಿ ಆ ವಿಡಿಯೋ.

ಇದನ್ನೂ ಓದಿ
Image
ICC New Rule: ಬಹುಮಾನ ತಾರತಮ್ಯಕ್ಕೆ ತೆರೆ ಎಳೆದ ಐಸಿಸಿ; ಸ್ಲೋ ಓವರ್​ ರೇಟ್ ದಂಡದಲ್ಲೂ ಭಾರಿ ಬದಲಾವಣೆ..!
Image
Virat Kohli: ಕೊಹ್ಲಿ ಬ್ಯಾಟ್​ನಿಂದ ಬರುತ್ತಾ 76ನೇ ಶತಕ?: ದ್ವಿಶತಕದತ್ತ ಯಶಸ್ವಿ ಕಣ್ಣು
Image
IND vs WI 1st Test Day 2: 2ನೇ ದಿನದಾಟ ಅಂತ್ಯ; ರೋಹಿತ್- ಜೈಸ್ವಾಲ್ ಶತಕ, ಭಾರತಕ್ಕೆ ಭಾರಿ ಮುನ್ನಡೆ
Image
Rohit Sharma Century: ಕೆರಿಬಿಯನ್ ನಾಡಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ ಹಿಟ್​ಮ್ಯಾನ್ ರೋಹಿತ್..!

Yashasvi Jaiswal Century: ಚೊಚ್ಚಲ ಶತಕ ಸಿಡಿಸಿ ಯಶಸ್ವಿ ಜೈಸ್ವಾಲ್ ಬರೆದ ದಾಖಲೆಗಳಿವು

ಈ ಪಂದ್ಯದಲ್ಲಿ ಮೊದಲ ದಿನ ವೆಸ್ಟ್ ಇಂಡೀಸ್ ತಂಡವನ್ನು 150 ರನ್​ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಭಾರತ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 80 ರನ್ ಬಾರಿಸಿತ್ತು. ನಾಯಕ ರೋಹಿತ್ ಶರ್ಮಾ (30) ಹಾಗೂ ಯಶಸ್ವಿ ಜೈಸ್ವಾಲ್ 40 ರನ್ ಗಳಿಸಿ ಕ್ರೀಸ್​ನಲ್ಲಿದ್ದರು. ದ್ವಿತೀಯ ದಿನದಾಟದ ಆರಂಭಿಸಿದ ರೋಹಿತ್-ಜೈಸ್ವಾಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ವೆಸ್ಟ್ ಇಂಡೀಸ್ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ಇವರು ಆಕರ್ಷಕ ಶತಕ ಸಿಡಿಸಿ ಮಿಂಚಿದರು.

ರೋಹಿತ್ ಶತಕ ಬಾರಿಸಿ ಔಟಾದರು. 221 ಎಸೆತಗಳಲ್ಲಿ 10 ಫೋರ್, 2 ಸಿಕ್ಸರ್​ನೊಂದಿಗೆ 103 ರನ್​ಗಳಿಗೆ ಬ್ಯಾಟ್ ಕೆಳಗಿಟ್ಟರು. ಈ ಮೂಲಕ ಮೊದಲ ವಿಕೆಟ್​ಗೆ 229 ರನ್​ಗಳ ಜೊತೆಯಾಟ ಮೂಡಿಬಂತು. ಪೂಜಾರ ಸ್ಥಾನದಲ್ಲಿ ಕಣಕ್ಕಿಳಿದ ಶುಭ್​ಮನ್ ಗಿಲ್ ವೈಫಲ್ಯ ಅನುಭವಿಸಿದರು. 6 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ನಂತರ ಜೈಸ್ವಾಲ್ ಜೊತೆಯಾದ ವಿರಾಟ್ ಕೊಹ್ಲಿ ಅದ್ಭುತ ಆಟ ಪ್ರದರ್ಶಿಸಿದರು. ತನ್ನ ಚೊಚ್ಚಲ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ದಾಖಲೆ ಬರೆದ ಜೈಸ್ವಾಲ್ 350 ಎಸೆತಗಳಲ್ಲಿ 14 ಫೋರ್​ನೊಂದಿಗೆ 143 ರನ್ ಗಳಿಸಿದ್ದರೆ, ಕೊಹ್ಲಿ 96 ಎಸೆತಗಳಲ್ಲಿ 36 ರನ್ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:43 am, Fri, 14 July 23