AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರಿಯಲ್ಲ ಎಂದು ಭಾವಿಸಿದೆ; ಕೊಹ್ಲಿ ಜೊತೆಗಿನ 12 ವರ್ಷಗಳ ಹಿಂದಿನ ಘಟನೆ ನೆನೆದ ಸಚಿನ್ ತೆಂಡೂಲ್ಕರ್

Virat Kohli Retires From Test Cricket: ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಆಘಾತವನ್ನುಂಟುಮಾಡಿದೆ. ಸಚಿನ್ ತೆಂಡೂಲ್ಕರ್ ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಕೊಹ್ಲಿಯ ನಿವೃತ್ತಿಗೆ ಭಾವುಕವಾಗಿ ಪ್ರತಿಕ್ರಿಯಿಸಿದ್ದು, 12 ವರ್ಷಗಳ ಹಿಂದಿನ ಒಂದು ವೈಯಕ್ತಿಕ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಕೊಹ್ಲಿ ಅವರ ಟೆಸ್ಟ್ ವೃತ್ತಿಜೀವನ ಮತ್ತು ಅವರು ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆಯನ್ನು ಸಚಿನ್ ಹೊಗಳಿದ್ದಾರೆ.

ಸರಿಯಲ್ಲ ಎಂದು ಭಾವಿಸಿದೆ; ಕೊಹ್ಲಿ ಜೊತೆಗಿನ 12 ವರ್ಷಗಳ ಹಿಂದಿನ ಘಟನೆ ನೆನೆದ ಸಚಿನ್ ತೆಂಡೂಲ್ಕರ್
Sachin, Kohli
ಪೃಥ್ವಿಶಂಕರ
|

Updated on: May 12, 2025 | 5:42 PM

Share

ಕ್ರಿಕೆಟ್ ಲೋಕದ ಅನಭಿಷಿಕ್ತ ದೊರೆ ವಿರಾಟ್ ಕೊಹ್ಲಿ (Virat Kohli) ತಮ್ಮ ಒಂದೇ ಒಂದು ನಿರ್ಧಾರದಿಂದ 140 ಕೋಟಿ ಭಾರತೀಯರಿಗೆ ದೊಡ್ಡ ಆಘಾತ ನೀಡಿದ್ದಾರೆ. ಇದ್ದಕ್ಕಿದ್ದಂತೆ ತನ್ನ ನೆಚ್ಚಿನ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ವಿರಾಟ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ನಿವೃತ್ತಿ ಘೋಷಿಸಿದ್ದಾರೆ. ಕಳೆದ ವರ್ಷವಷ್ಟೇ ಟಿ20 ಮಾದರಿಗೆ ವಿದಾಯ ಹೇಳಿದ್ದ ವಿರಾಟ್ ಇನ್ನು ಮುಂದೆ ಟೀಂ ಇಂಡಿಯಾ ಪರ ಏಕದಿನ ಮಾದರಿಯಲ್ಲಿ ಮಾತ್ರ ಆಡಲಿದ್ದಾರೆ. ಇದೀಗ ಕೊಹ್ಲಿಯ ನಿವೃತ್ತಿಯ ಬಗ್ಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದು, ವಿರಾಟ್ ನಿವೃತ್ತಿಗೆ ಅಭಿನಂದನೆ ಸಲ್ಲಿಸುತ್ತಾ, 12 ವರ್ಷಗಳ ಹಿಂದಿನ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.

ತುಂಬಾ ವೈಯಕ್ತಿಕ ವಿಷಯವಾಗಿತ್ತು

ವಿರಾಟ್ ನಿವೃತ್ತಿಯ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ‘ನೀವು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗುತ್ತಿದ್ದಂತೆ, 12 ವರ್ಷಗಳ ಹಿಂದೆ ನಾನು ನನ್ನ ಕೊನೆಯ ಟೆಸ್ಟ್ ಆಡಿದ ಆ ಸಮಯದ ಸುಂದರ ಘಟನೆಯೊಂದು ನನಗೆ ನೆನಪಾಗುತ್ತದೆ. ಆ ಸಮಯದಲ್ಲಿ ನೀವು ನಿಮ್ಮ ದಿವಂಗತ ತಂದೆಯ ನೆನಪಿಗಾಗಿ ನನಗೆ ಒಂದು ದಾರವನ್ನು (ಮಂತ್ರಿಸಿ ಕೊಡುವ ದಾರಗಳು ಕಷ್ಟ ನಿವಾರಿಸಿ ಹೊಸ ದಾರಿ ತೋರಿಸುತ್ತವೆ ಎಂಬ ನಂಬಿಕೆ ಬಹಳ ಜನರದ್ದು) ಉಡುಗೊರೆಯಾಗಿ ನೀಡಲು ಮುಂದಾದಿರಿ. ಅದು ತುಂಬಾ ವೈಯಕ್ತಿಕ ವಿಷಯವಾಗಿತ್ತು, ಆದ್ದರಿಂದ ಅದನ್ನು ತೆಗೆದುಕೊಳ್ಳುವುದು ಸರಿಯಲ್ಲ ಎಂದು ನಾನು ಭಾವಿಸಿದೆ. ಆದರೆ ನಿಮ್ಮ ಭಾವನೆಗಳು ಇನ್ನೂ ನನ್ನ ಹೃದಯವನ್ನು ಮುಟ್ಟುತ್ತವೆ.

ನಿಮ್ಮ ಬಗ್ಗೆ ತುಂಬಾ ಗೌರವವಿದೆ

ಪ್ರತಿಯಾಗಿ ನೀಡಲು ನನ್ನ ಬಳಿ ಯಾವುದೇ ಥ್ರೆಡ್ ಇಲ್ಲದಿದ್ದರೂ, ನನಗೆ ನಿಮ್ಮ ಬಗ್ಗೆ ತುಂಬಾ ಗೌರವವಿದೆ. ನಿಮ್ಮ ನಿವೃತ್ತಿಗೆ ನಾನು ಹೃದಯಾಂತರಾಳದಿಂದ ಶುಭಾಶಯಗಳು. ವಿರಾಟ್, ನಿಮ್ಮ ನಿಜವಾದ ಪರಂಪರೆಯೆಂದರೆ ದೇಶದ ಅಸಂಖ್ಯಾತ ಯುವಕರನ್ನು ಕ್ರಿಕೆಟ್ ಆಡಲು ಪ್ರೇರೇಪಿಸಿದ್ದೀರಿ. ನಿಮ್ಮ ಟೆಸ್ಟ್ ವೃತ್ತಿಜೀವನವು ಅತ್ಯುತ್ತಮವಾಗಿದೆ. ನೀವು ಕೇವಲ ರನ್ ಮಾತ್ರ ಕಲೆಹಾಕಿಲ್ಲ, ಬದಲಿಗೆ ಭಾರತೀಯ ಕ್ರಿಕೆಟ್‌ಗೆ ಹೊಸ ಗುರುತು, ಹೊಸ ಶಕ್ತಿ ಮತ್ತು ಹೊಸ ಅಭಿಮಾನಿಗಳನ್ನು ನೀಡಿದ್ದೀರಿ. ನಿಮ್ಮ ಅದ್ಭುತ ಟೆಸ್ಟ್ ವೃತ್ತಿಜೀವನಕ್ಕೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ. ಕೊಹ್ಲಿ ಬಗ್ಗೆ ಸಚಿನ್ ತೆಂಡೂಲ್ಕರ್ ಈ ರೀತಿಯ ಹೃದಯಸ್ಪರ್ಶಿ ಮಾತುಗಳನ್ನು ಹೇಳಿರುವುದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ENG vs IND: ರೋಹಿತ್- ಕೊಹ್ಲಿ ನಿವೃತ್ತಿ; ಇಂಗ್ಲೆಂಡ್ ಪ್ರವಾಸಕ್ಕೆ ಹೇಗಿರಲಿದೆ ಭಾರತ ಟೆಸ್ಟ್ ತಂಡ?

ಒಟ್ಟಿಗೆ 17 ಟೆಸ್ಟ್ ಪಂದ್ಯಗಳು

ಸಚಿನ್ ತೆಂಡೂಲ್ಕರ್ 2013 ರಲ್ಲಿ ಟೆಸ್ಟ್ ಸ್ವರೂಪಕ್ಕೆ ವಿದಾಯ ಹೇಳಿದರು. ಆಗ ವಿರಾಟ್ ಕೊಹ್ಲಿ ಯುವ ಆಟಗಾರ. ಅವರಿಗೆ ಸಚಿನ್ ಜೊತೆ ಹೆಚ್ಚು ಟೆಸ್ಟ್ ಕ್ರಿಕೆಟ್ ಆಡಲು ಅವಕಾಶ ಸಿಗಲಿಲ್ಲ. ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾ ಪರ 17 ಟೆಸ್ಟ್ ಪಂದ್ಯಗಳನ್ನು ಒಟ್ಟಿಗೆ ಆಡಿದ್ದಾರೆ. ಈ ಅವಧಿಯಲ್ಲಿ ಭಾರತ ತಂಡ 9 ಪಂದ್ಯಗಳಲ್ಲಿ ಗೆದ್ದು 6 ಪಂದ್ಯಗಳಲ್ಲಿ ಸೋತಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ