ಸೆಕ್ಯುರಿಟಿ ಗಾರ್ಡ್ನ ತಲೆಗೆ ಬಿದ್ದ ವಿರಾಟ್ ಕೊಹ್ಲಿಯ ಅಪ್ಪರ್ ಕಟ್ ಸಿಕ್ಸ್
Australia vs India, 1st Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ ಪರ್ತ್ನ ಒಪ್ಟಸ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 150 ರನ್ಗಳಿಸಿದರೆ, ಆಸ್ಟ್ರೇಲಿಯಾ 104 ರನ್ಗಳಿಗೆ ಆಲೌಟ್ ಆಗಿದೆ.
ಪರ್ತ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಸಿಕ್ಸ್ವೊಂದು ಸೆಕ್ಯುರಿಟಿ ಗಾರ್ಡ್ನ ತಲೆಗೆ ಬಡಿದಿದೆ. ಒಪ್ಟಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ದ್ವಿತೀಯ ಇನಿಂಗ್ಸ್ನ 101ನೇ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಎಸೆತಕ್ಕೆ ವಿರಾಟ್ ಕೊಹ್ಲಿ ಅಪ್ಪರ್ ಕಟ್ ಶಾಟ್ ಬಾರಿಸಿದ್ದರು.
ಅತ್ತ ಚೆಂಡು ನೇರವಾಗಿ ಹೋಗಿ ಬೌಂಡರಿ ಬಳಿ ಸೆಕ್ಯುರಿಟಿಗೆ ಕೂತಿದ್ದ ಗಾರ್ಡ್ ತಲೆಗೆ ಬಡಿದಿದೆ. ತಕ್ಷಣವೇ ಆಸ್ಟ್ರೇಲಿಯಾ ತಂಡದ ಫಿಸಿಯೋ ಸೆಕ್ಯುರಿಟಿ ಗಾರ್ಡ್ನತ್ತ ತೆರಳಿ ಉಪಚರಿಸಿದರು. ಅಲ್ಲದೆ ಯಾವುದೇ ಗಂಭೀರ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.
ವಿರಾಟ್ ಕೊಹ್ಲಿಯ ಅಪ್ಪರ್ ಕಟ್ ಸಿಕ್ಸ್ ವಿಡಿಯೋ:
📂 Virat Kohli’s Swashbuckling six .MP4
📺 #AUSvINDOnStar 👉 1st Test, Day 3, LIVE NOW! #AUSvIND #ToughestRivalry pic.twitter.com/w0KmBbFznu
— Star Sports (@StarSportsIndia) November 24, 2024
ಇನ್ನು ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಮುಮದುವರೆಸಿದೆ. ಮೊದಲ ಇನಿಂಗ್ಸ್ನಲ್ಲಿ ಕೇವಲ 150 ರನ್ಗಳಿಗೆ ಆಲೌಟ್ ಆಗಿದ್ದ ಟೀಮ್ ಇಂಡಿಯಾ 2ನೇ ಇನಿಂಗ್ಸ್ನಲ್ಲಿ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಭರ್ಜರಿ ಆರಂಭ ಒದಗಿಸಿದ್ದಾರೆ.
ಮೊದಲ ವಿಕೆಟ್ಗೆ 201 ರನ್ಗಳ ಜೊತೆಯಾಟವಾಡಿದ ಬಳಿಕ ಕೆಎಲ್ ರಾಹುಲ್ (77) ವಿಕೆಟ್ ಒಪ್ಪಿಸಿದರು. ಇನ್ನು ಯಶಸ್ವಿ ಜೈಸ್ವಾಲ್ 161 ರನ್ಗಳ ಬೃಹತ್ ಇನಿಂಗ್ಸ್ ಆಡಿ ಟೀಮ್ ಇಂಡಿಯಾ ಮೊತ್ತವನ್ನು 300ರ ಗಡಿದಾಟಿಸಿದರು.
ಇದರ ನಡುವೆ ದೇವದತ್ ಪಡಿಕ್ಕಲ್ 25 ರನ್ಗಳ ಕೊಡುಗೆ ನೀಡಿದರೆ, ರಿಷಭ್ ಪಂತ್ (1) ಹಾಗೂ ಧ್ರುವ್ ಜುರೇಲ್ (1) ನಿರಾಸೆ ಮೂಡಿಸಿದರು. ಸದ್ಯ ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ (40) ಹಾಗೂ ವಾಷಿಂಗ್ಟನ್ ಸುಂದರ್ (14) ಬ್ಯಾಟಿಂಗ್ ಮಾಡುತ್ತಿದ್ದು, ಟೀ ವಿರಾಮದ ವೇಳೆಗೆ ಭಾರತ ತಂಡವು 5 ವಿಕೆಟ್ ಕಳೆದುಕೊಂಡು 359 ರನ್ ಕಲೆಹಾಕಿದೆ.
ಅಲ್ಲದೆ ಮೊದಲ ಇನಿಂಗ್ಸ್ನಲ್ಲಿನ 46 ರನ್ಗಳ ಮುನ್ನಡೆಯೊಂದಿಗೆ ಭಾರತ ತಂಡವು ಒಟ್ಟು 405 ರನ್ಗಳಿಸಿದ್ದು, ಮೂರನೇ ದಿನದಾಟದ ಅಂತ್ಯದವರೆಗೆ ಬ್ಯಾಟಿಂಗ್ ಮುಂದುವರೆಸಿದ ಆಸ್ಟ್ರೇಲಿಯಾಗೆ ಬೃಹತ್ ಮೊತ್ತದ ಗುರಿ ನೀಡುವ ಯೋಜನೆಯಲ್ಲಿದೆ.
ಭಾರತ ಪ್ಲೇಯಿಂಗ್ 11: ಜಸ್ಪ್ರೀತ್ ಬುಮ್ರಾ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೇಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ.
ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಇತಿಹಾಸ ನಿರ್ಮಿಸಿದ ರಿಷಭ್ ಪಂತ್
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಉಸ್ಮಾನ್ ಖ್ವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಝಲ್‌ವುಡ್.