AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 32 ಕೋಟಿ ರೂ. ಬಂಗಲೆ: ಹೊಸ ಮನೆಯ ಗೃಹಪ್ರವೇಶಕ್ಕೆ ವಿರಾಟ್ ಕೊಹ್ಲಿ ಸಿದ್ಧತೆ

Virat Kohli Alibaug Bungalow: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಶೀಘ್ರದಲ್ಲೇ ಅಲಿಬಾಗ್​ನಲ್ಲಿರುವ ಹೊಸ ಮನೆಗೆ ಎಂಟ್ರಿ ಕೊಡಲಿದ್ದಾರೆ. ಎರಡು ವರ್ಷಗಳ ಹಿಂದೆ ಖರೀದಿಸಿದ್ದ ಜಾಗದಲ್ಲಿ ಕೊಹ್ಲಿ ದಂಪತಿ ಭವ್ಯ ಬಂಗಲೆಯನ್ನು ನಿರ್ಮಿಸಿದ್ದು, ಈ ಮನೆಯ ಗೃಹ ಪ್ರವೇಶದ ಸಿದ್ಧತೆಗಳು ಶುರುವಾಗಿದೆ. ಇದೇ ಕಾರಣದಿಂದಾಗಿ ಕಳೆದ ಕೆಲ ದಿನಗಳಿಂದ ಕೊಹ್ಲಿ ಮುಂಬೈನಲ್ಲಿದ್ದಾರೆ.

ಬರೋಬ್ಬರಿ 32 ಕೋಟಿ ರೂ. ಬಂಗಲೆ: ಹೊಸ ಮನೆಯ ಗೃಹಪ್ರವೇಶಕ್ಕೆ ವಿರಾಟ್ ಕೊಹ್ಲಿ ಸಿದ್ಧತೆ
Virushka
TV9 Web
| Edited By: |

Updated on: Jan 16, 2025 | 11:08 AM

Share

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹೊಸ ಮನೆಯ ಗೃಹಪ್ರವೇಶದ ಸಿದ್ಧತೆಯಲ್ಲಿದ್ದಾರೆ. ದಕ್ಷಿಣ ಮುಂಬೈನ ಅಲಿಬಾಗ್​ನಲ್ಲಿ ವಿರುಷ್ಕಾ ದಂಪತಿ ನೂತನ ಮನೆ ನಿರ್ಮಿಸಿದ್ದು, ಈ ಮನೆಯ ಗೃಹ ಪ್ರವೇಶ ಇದೇ ವಾರ ನಡೆಯಲಿದೆ ಎಂದು ವರದಿಯಾಗಿದೆ. ವಿರಾಟ್ ಕೊಹ್ಲಿ 2022 ರಲ್ಲಿ ಅಲಿಬಾಗ್​ನಲ್ಲಿ 19 ಕೋಟಿ ರೂ.ಗೆ 8 ಎಕರೆ ಜಾಗ ಖರೀದಿಸಿದ್ದರು.

ಈ ಜಾಗದಲ್ಲಿ ಇದೀಗ ಭವ್ಯ ಬಂಗಲೆಯನ್ನು ನಿರ್ಮಿಸಲಾಗಿದೆ. ಆರ್ಕಿಟೆಕ್ಚರಲ್ ಡೈಜೆಸ್ಟ್ ಪ್ರಕಾರ, ಹೆಸರಾಂತ SAOTA (ಸ್ಟೀಫನ್ ಆಂಟೋನಿ ಒಲ್ಮೆಸ್‌ಡಾಲ್ ಟ್ರೂಯೆನ್ ಆರ್ಕಿಟೆಕ್ಟ್ಸ್) ವಿನ್ಯಾಸಗೊಳಿಸಿದ ಶೈಲಿಯಲ್ಲಿ ವಿರಾಟ್ ಕೊಹ್ಲಿಯ ಹೊಸ ಮನೆಯನ್ನು ಕಟ್ಟಲಾಗಿದೆ.

ಈ ಬಂಗಲೆಯೊಂದಿಗೆ ತಾಪಮಾನ-ನಿಯಂತ್ರಿತ ಸ್ಮಿಮ್ಮಿಂಗ್ ಪೂಲ್, ಜಕುಝಿ, ಬೆಸ್ಪೋಕ್ ಅಡುಗೆಮನೆ, ವಿಶಾಲವಾದ ಉದ್ಯಾನವನ, ಒಳಗೊಂಡಿದೆ. ಇನ್ನು ಒಳಾಂಗಣವು ಇಟಾಲಿಯನ್ ಅಮೃತಶಿಲೆ, ಟರ್ಕಿಶ್ ಸುಣ್ಣದ ಕಲ್ಲು ಮತ್ತು ಪ್ರಾಚೀನ ಕಲ್ಲುಗಳನ್ನು ಬಳಸಿ ವಿನ್ಯಾಸಗೊಳಿಸಿರುವುದು ವಿಶೇಷ.

ಇದೀಗ ಪೂಜಾ ಸಮಾರಂಭಕ್ಕಾಗಿ ವಿರಾಟ್ ಕೊಹ್ಲಿಯ ಬಂಗಲೆಯ ಬಾಗಿಲುಗಳನ್ನು ಹೂವುಗಳಿಂದ ಅಲಂಕರಿಸಲ್ಪಟ್ಟ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಈ ಹಿಂದೆ ಅಲಿಬಾಗ್​ನಲ್ಲಿ ತಮ್ಮ ಹಾಲಿಡೇ ಹೋಮ್ ಹೇಗಿರಲಿದೆ ಎಂಬುದನ್ನು ಹಂಚಿಕೊಂಡಿದ್ದ ವಿರಾಟ್ ಕೊಹ್ಲಿಯ ವಿಡಿಯೋ ವೈರಲ್ ಆಗಿದೆ.

ವಿರಾಟ್ ಕೊಹ್ಲಿ ಮನೆ ವಿಡಿಯೋ:

ಸೌತ್ ಮುಂಬೈನ ಕೋಸ್ಟಲ್ ಟೌನ್ ಎಂದೇ ಗುರುತಿಸಿಕೊಂಡಿರುವ ಅಲಿಬಾಗ್​ನಲ್ಲಿರುವ ಈ ವಿಲ್ಲಾ 7,171 ಚದರ ಅಡಿಗಳನ್ನು ವ್ಯಾಪಿಸಿದೆ. ಅಲ್ಲದೆ ಇದಕ್ಕಾಗಿ ವಿರಾಟ್ ಕೊಹ್ಲಿ ಬರೋಬ್ಬರಿ 32 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಟೀಮ್ ಇಂಡಿಯಾ ಮಹಿಳೆಯರ ಅಬ್ಬರಕ್ಕೆ ಪುರುಷರ ದಾಖಲೆಯೇ ಉಡೀಸ್

ಈ ಮನೆಯಲ್ಲದೇ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಗುರುಗ್ರಾಮ್‌ನಲ್ಲಿ ಸುಮಾರು 80 ಕೋಟಿ ರೂಪಾಯಿ ಮೌಲ್ಯದ ಭವ್ಯ ಭವನವನ್ನು ಹೊಂದಿದೆ. ಇದೀಗ ಅಲಿಬಾಗ್​ನಲ್ಲಿ ಫಾರ್ಮ್ ಹೌಸ್ ಮಾದರಿಯಲ್ಲಿ ಕೊಹ್ಲಿ ದಂಪತಿ ಹೊಸ ಮನೆ ನಿರ್ಮಿಸಿದ್ದಾರೆ.