WCL 2024 Final: ಇಂದು ಇಂಡಿಯಾ vs ಪಾಕಿಸ್ತಾನ್ ಫೈನಲ್ ಫೈಟ್: ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
Pakistan Champions vs India Champions Final: ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಲೀಗ್ ಹಂತದಲ್ಲಿ ಇಂಡಿಯಾ ಚಾಂಪಿಯನ್ಸ್ ಮತ್ತು ಪಾಕಿಸ್ತಾನ್ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಇಂಡಿಯಾ ಚಾಂಪಿಯನ್ಸ್ ವಿರುದ್ಧ ಪಾಕಿಸ್ತಾನ್ ಚಾಂಪಿಯನ್ಸ್ 68 ರನ್ಗಳ ಜಯ ಸಾಧಿಸಿತ್ತು. ಇದೀಗ ಇಂಡಿಯಾ ಚಾಂಪಿಯನ್ಸ್ ಈ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ.
ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL 2024) ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ (India Champions) ಮತ್ತು ಪಾಕಿಸ್ತಾನ್ ಚಾಂಪಿಯನ್ಸ್ (Pakistan Champions) ತಂಡಗಳು ಮುಖಾಮುಖಿಯಾಗಲಿದೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡವನ್ನು 20 ರನ್ಗಳಿಂದ ಮಣಿಸಿ ಪಾಕಿಸ್ತಾನ್ ಚಾಂಪಿಯನ್ಸ್ ಫೈನಲ್ಗೆ ಪ್ರವೇಶಿಸಿದರೆ, ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡವನ್ನು 86 ರನ್ಗಳಿಂದ ಬಗ್ಗು ಬಡಿದು ಇಂಡಿಯಾ ಚಾಂಪಿಯನ್ಸ್ ಫೈನಲ್ಗೆ ಲಗ್ಗೆಯಿಟ್ಟಿದೆ. ಅದರಂತೆ ಇಂದು (ಜು.13) ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಲಿದ್ದಾರೆ.
ಎಷ್ಟು ಗಂಟೆಗೆ ಪಂದ್ಯ ಶುರು?
ಜುಲೈ 13 ರಂದು ನಡೆಯಲಿರುವ ಇಂಡಿಯಾ ಚಾಂಪಿಯನ್ಸ್ ಮತ್ತು ಪಾಕಿಸ್ತಾನ್ ಚಾಂಪಿಯನ್ಸ್ ನಡುವಣ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 9 ಗಂಟೆಯಿಂದ ಶುರುವಾಗಲಿದೆ.
ನೇರ ಪ್ರಸಾರ ವೀಕ್ಷಿಸುವುದೇಗೆ?
ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
ಲೈವ್ ಸ್ಟ್ರೀಮಿಂಗ್ ಆ್ಯಪ್ ಯಾವುದು?
ಇಂಡಿಯಾ ಚಾಂಪಿಯನ್ಸ್ ಮತ್ತು ಪಾಕಿಸ್ತಾನ್ ಚಾಂಪಿಯನ್ಸ್ ನಡುವಿನ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ ಫೈನಲ್ ಪಂದ್ಯವನ್ನು ಫ್ಯಾನ್‌ಕೋಡ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು.
ಉಭಯ ತಂಡಗಳ ಆಟಗಾರರು:
ಇಂಡಿಯಾ ಚಾಂಪಿಯನ್ಸ್ ತಂಡ: ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್), ಅಂಬಾಟಿ ರಾಯುಡು, ಸುರೇಶ್ ರೈನಾ, ಯುವರಾಜ್ ಸಿಂಗ್ (ನಾಯಕ), ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಗುರುಕೀರತ್ ಸಿಂಗ್ ಮಾನ್, ಪವನ್ ನೇಗಿ, ವಿನಯ್ ಕುಮಾರ್, ಹರ್ಭಜನ್ ಸಿಂಗ್, ಧವಳ್ ಕುಲಕರ್ಣಿ, ರಾಹುಲ್ ಶುಕ್ಲಾ, ಆರ್ ಪಿ ಸಿಂಗ್, ನಮನ್ ಓಜಾ, ಸೌರಭ್ ತಿವಾರಿ, ಅನುರೀತ್ ಸಿಂಗ್, ರಾಹುಲ್ ಶರ್ಮಾ.
ಇದನ್ನೂ ಓದಿ: James Anderson: ವಿಶ್ವ ದಾಖಲೆಗಳೊಂದಿಗೆ ವಿದಾಯ ಹೇಳಿದ ಜೇಮ್ಸ್ ಅ್ಯಂಡರ್ಸನ್
ಪಾಕಿಸ್ತಾನ್ ಚಾಂಪಿಯನ್ಸ್ ತಂಡ: ಕಮ್ರಾನ್ ಅಕ್ಮಲ್ (ವಿಕೆಟ್ ಕೀಪರ್), ಶರ್ಜೀಲ್ ಖಾನ್, ಸೊಹೈಬ್ ಮಕ್ಸೂದ್, ಶೋಯೆಬ್ ಮಲಿಕ್, ಯೂನಿಸ್ ಖಾನ್ (ನಾಯಕ), ಶಾಹಿದ್ ಅಫ್ರಿದಿ, ಮಿಸ್ಬಾ-ಉಲ್-ಹಕ್, ಅಮರ್ ಯಾಮಿನ್, ಸೊಹೈಲ್ ತನ್ವೀರ್, ವಹಾಬ್ ರಿಯಾಜ್, ಸೊಹೈಲ್ ಖಾನ್, ಅಬ್ದುಲ್ ರಜಾಕ್, ತೌಫೀಕ್ ಉಮರ್, ಮೊಹಮ್ಮದ್ ಹಫೀಜ್, ಯಾಸಿರ್ ಅರಾಫತ್, ಸಯೀದ್ ಅಜ್ಮಲ್, ಉಮರ್ ಅಕ್ಮಲ್, ತನ್ವಿರ್ ಅಹ್ಮದ್.