Viral Video: ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ಗೆ ಎಚ್ಚರಿಕೆ ನೀಡಿದ ಪೊಲಾರ್ಡ್

| Updated By: ಝಾಹಿರ್ ಯೂಸುಫ್

Updated on: Jul 27, 2021 | 6:54 PM

West Indies vs Australia 3rd ODI: ಈ ಹಿಂದೆ ಕಪಿಲ್ ದೇವ್ ಕೂಡ ಮಂಕಡಿಂಗ್ ರನೌಟ್ ಮಾಡಿ ಗಮನ ಸೆಳೆದಿದ್ದರು. 1991-92 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಏಕದಿನ ಪಂದ್ಯದ ವೇಳೆ ನಾನ್​ಸ್ಟ್ರೈಕರ್ ತುದಿಯಲ್ಲಿದ್ದ ಪೀಟರ್ ಕರ್ಸ್ಟೆನ್ ಬೌಲ್ ಮಾಡುವ ಮುನ್ನ ಕ್ರೀಸ್ ಬಿಡುತ್ತಿದ್ದರು.

Viral Video: ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ಗೆ ಎಚ್ಚರಿಕೆ ನೀಡಿದ ಪೊಲಾರ್ಡ್
Kieron Pollard
Follow us on

ಕ್ರಿಕೆಟ್ ಅಂಗಳದಲ್ಲಿ ಮಂಕಡಿಂಗ್ ರನೌಟ್ ಸದಾ ಸುದ್ದಿಯಲ್ಲಿರುತ್ತೆ. ಈ ಹಿಂದೆ ರವಿಚಂದ್ರನ್ ಅಶ್ವಿನ್ ಶ್ರೀಲಂಕಾ ವಿರುದ್ದ ಹಾಗೂ ಐಪಿಎಲ್​ನಲ್ಲಿ ಮಂಕಡಿಂಗ್ ರನೌಟ್ ಮಾಡಿ ಗಮನ ಸೆಳೆದಿದ್ದರು. ಅಶ್ವಿನ್ ಅವರ ನಡೆಗೆ ಪರ-ವಿರೋಧಗಳು ವ್ಯಕ್ತವಾಗಿದ್ದವು. ಆದರೆ ಕ್ರಿಕೆಟ್ ನಿಯಮಗಳ ಪ್ರಕಾರ ಮಂಕಡಿಂಗ್ ರನೌಟ್ ಮೂಲಕ ಬ್ಯಾಟ್ಸ್​ಮನ್​ನ್ನು ವಜಾಗೊಳಿಸಬಹುದು. ಆದರೆ ಅದಕ್ಕೂ ಮುನ್ನ ಬ್ಯಾಟ್ಸ್​ಮನ್​​ಗಳಿಗೆ ಎಚ್ಚರಿಕೆ ನೀಡುವುದು ಕ್ರೀಡಾ ಸ್ಪೂರ್ತಿ ಎಂದು ಪರಿಗಣಿಸಲಾಗುತ್ತದೆ. ಇದೀಗ ಮತ್ತೊಮ್ಮೆ ಮಂಕಡಿಂಗ್ ಎಚ್ಚರಿಕೆ ಸುದ್ದಿಯಲ್ಲಿದೆ. ಆಸ್ಟ್ರೇಲಿಯಾ ವಿರುದ್ದದ 3ನೇ ಏಕದಿನ ಪಂದ್ಯದ ವೇಳೆ ವೆಸ್ಟ್ ಇಂಡೀಸ್ ನಾಯಕ ಕೀರನ್ ಪೊಲಾರ್ಡ್​ ಅವರಿಗೆ ಮಂಕಡಿಂಗ್ ರನೌಟ್ ಮಾಡುವ ಅವಕಾಶ ಲಭಿಸಿತ್ತು.

ಸಾಮಾನ್ಯವಾಗಿ ಮಧ್ಯಮ ವೇಗದಲ್ಲಿ ಬೌಲಿಂಗ್ ಮಾಡುವ ಪೊಲಾರ್ಡ್ ಈ ಪಂದ್ಯದಲ್ಲಿ ಆಫ್ ಸ್ಪಿನ್ನರ್ ಆಗಿ ಚೆಂಡೆಸೆದಿದ್ದರು. ಹೀಗೆ ಚೆಂಡೆಸೆಯುವ ಮುನ್ನವೇ ಆಸೀಸ್ ಬ್ಯಾಟ್ಸ್​ಮನ್ ಮಾಥ್ಯೂ ವೇಡ್ ಕ್ರೀಸ್ ಬಿಟ್ಟಿದ್ದರು. ಇದನ್ನು ಗಮನಿಸಿದ ಪೊಲಾರ್ಡ್ ಚೆಂಡೆಸದಿರಲಿಲ್ಲ. ತಕ್ಷಣವೇ ಎಚ್ಚೆತ್ತುಕೊಂಡ ವೇಡ್ ಎಡಗಾಲನ್ನು ಹಿಂದಕ್ಕಿಟ್ಟು ಕ್ರೀಸ್ ಸೇರಿಕೊಂಡರು. ಅತ್ತ ಔಟ್ ಮಾಡುವ ಅವಕಾಶ ಹೊಂದಿದ್ದರೂ ಪೊಲಾರ್ಡ್​ ವೇಡ್​ಗೆ ಎಚ್ಚರಿಕೆ ನೀಡಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

2019ರ ಐಪಿಎಲ್​ನಲ್ಲಿ ಅಶ್ವಿನ್ ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್‌ನನ್ನು ಮಂಕಡಿಂಗ್ ಮಾಡಿ ಔಟ್ ಮಾಡಿದ್ದರು. ಈ ಬಗ್ಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದವು. ಇದಾಗ್ಯೂ ಅಂದು ಈ ಅಶ್ವಿನ್ ನಡೆ ಬಗ್ಗೆ ಪ್ರತಿಕ್ರಿಯಿಸಿದ್ದ ಲೆಜೆಂಡ್ ಕಪಿಲ್ ದೇವ್ ಬೆಂಬಲ ವ್ಯಕ್ತಪಡಿಸಿದ್ದರು. ಬೌಲರ್ ಚೆಂಡೆಸೆಯುವ ಮೊದಲೇ ಬ್ಯಾಟ್ಸ್​ಮನ್​ ಕ್ರೀಸ್ ಬಿಟ್ಟರೆ ರನೌಟ್ ಮಾಡುವುದು ನನ್ನ ಪ್ರಕಾರ ತಪ್ಪಲ್ಲ ಎಂದಿದ್ದರು.

ಏಕೆಂದರೆ ಐಸಿಸಿ ನಿಯಮ 42.15 ರ ಪ್ರಕಾರ ಚೆಂಡನ್ನು ಎಸೆಯುವ ಮುನ್ನ ನಾನ್ ಸ್ಟ್ರೈಕ್​ನಲ್ಲಿರುವ ಬ್ಯಾಟ್ಸ್​ಮನ್​ ಕ್ರೀಸ್ ಬಿಟ್ಟರೆ ಬೌಲರ್​ಗೆ ರನೌಟ್ ಮಾಡುವ ಅವಕಾಶವಿದೆ. ಕ್ರಿಕೆಟ್ ನಿಯಮವೇ ಹೀಗಿರುವಾಗ ಇಲ್ಲಿ ಕ್ರೀಡಾ ಸ್ಪೂರ್ತಿ ಎಲ್ಲಿ ಬರುತ್ತೆ. ಹೀಗೆ ಮೊದಲೇ ಕ್ರೀಸ್ ಬಿಟ್ಟು ಲಾಭ ಪಡೆಯುತ್ತಿರುವುದು ಬ್ಯಾಟ್ಸ್​ಮನ್​ ಅಲ್ಲವೇ? ಅವರಿಗೆ ಕ್ರೀಡಾ ಸ್ಪೂರ್ತಿ ಅನ್ವಯವಾಗುದಿಲ್ಲವೇ ಎಂದು ಕಪಿಲ್ ದೇವ್ ಪ್ರಶ್ನಿಸಿದ್ದರು.

ಅಷ್ಟೇ ಅಲ್ಲದೆ ಈ ಹಿಂದೆ ಕಪಿಲ್ ದೇವ್ ಕೂಡ ಮಂಕಡಿಂಗ್ ರನೌಟ್ ಮಾಡಿ ಗಮನ ಸೆಳೆದಿದ್ದರು. 1991-92 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಏಕದಿನ ಪಂದ್ಯದ ವೇಳೆ ನಾನ್​ಸ್ಟ್ರೈಕರ್ ತುದಿಯಲ್ಲಿದ್ದ ಪೀಟರ್ ಕರ್ಸ್ಟೆನ್ ಬೌಲ್ ಮಾಡುವ ಮುನ್ನ ಕ್ರೀಸ್ ಬಿಡುತ್ತಿದ್ದರು. ಈ ವೇಳೆ ಒಂದೆರಡು ಬಾರಿ ಕಪಿಲ್ ದೇವ್ ಎಚ್ಚರಿಕೆ ನೀಡಿದ್ದರು. ಆದರೆ ಅದೇ ತಪ್ಪನ್ನು ಮರಕಳಿಸಿದ್ದ ಪೀಟರ್​ನ್ನು ಮಂಕಡಿಂಗ್ ರನೌಟ್ ಮಾಡಿ ಕಪಿಲ್ ದೇವ್ ಪೆವಿಲಿಯನ್​ಗೆ ಕಳುಹಿಸಿದ್ದರು.

ಇದನ್ನೂ ಓದಿ: Viral Story: ಟ್ರಾಫಿಕ್​ ಪೊಲೀಸ್​ ಮನೆಯಲ್ಲಿ ಚಿನ್ನದ ಟಾಯ್ಲೆಟ್

ಇದನ್ನೂ ಓದಿ: ಈವರೆಗೆ ಟೀಮ್ ಇಂಡಿಯಾ ಪರ ಎಷ್ಟು ಮಂದಿ ಆಡಿದ್ದಾರೆ ಗೊತ್ತಾ?

(Kieron Pollard warns Australian player on the field, video goes viral)

 

Published On - 6:51 pm, Tue, 27 July 21