IND vs WI: 15 ದಾಖಲೆಗಳ ಮೇಲೆ ಉಭಯ ತಂಡಗಳ ಆಟಗಾರರ ಕಣ್ಣು..!
West Indies vs India, 1st Test: ಭಾರತ-ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 7.30 ರಿಂದ ಶುರುವಾಗಲಿದೆ.
West Indies vs India, 1st Test: ಭಾರತ-ವೆಸ್ಟ್ ಇಂಡೀಸ್ ನಡುವಣ ಮೊದಲ ಟೆಸ್ಟ್ ಪಂದ್ಯವು ಇಂದಿನಿಂದ (ಜುಲೈ 12) ಶುರುವಾಗಲಿದೆ. ಡೊಮಿನಿಕಾದ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಒಟ್ಟು 15 ದಾಖಲೆಗಳು ನಿರ್ಮಾಣವಾಗಬಹುದು. ಅಂದರೆ ಕೆಲ ಆಟಗಾರರು ದಾಖಲೆಯ ಸನಿಹದಲ್ಲಿದ್ದು, ಹೀಗಾಗಿ ಮೊದಲ ಪಂದ್ಯದಲ್ಲೇ ವಿಶೇಷ ರೆಕಾರ್ಡ್ಗಳನ್ನು ಎದುರು ನೋಡಬಹುದು. ಈ ದಾಖಲೆಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
- ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 5ನೇ ಬ್ಯಾಟರ್ ಎನಿಸಿಕೊಳ್ಳಲು ವಿರಾಟ್ ಕೊಹ್ಲಿಗೆ ಇನ್ನು ಕೇವಲ 150 ರನ್ ಅಗತ್ಯವಿದೆ.
- ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ 5ನೇ ಆಟಗಾರ ಎನಿಸಿಕೊಳ್ಳಲು ಕಿಂಗ್ ಕೊಹ್ಲಿ 25 ರನ್‌ಗಳಿಸಬೇಕಿದೆ.
- ವೆಸ್ಟ್ ಇಂಡೀಸ್ನ ಜೋಶುವಾ ಡಾ ಸಿಲ್ವಾ ಟೆಸ್ಟ್ ಕ್ರಿಕೆಟ್‌ನಲ್ಲಿ 1000 ರನ್ ಪೂರ್ಣಗೊಳಿಸಲು 143 ರನ್ ಅಗತ್ಯವಿದೆ .
- ವಿದೇಶಿ ಟೆಸ್ಟ್‌ನಲ್ಲಿ 500 ಬೌಂಡರಿಗಳನ್ನು ಪೂರೈಸಲು ವಿರಾಟ್ ಕೊಹ್ಲಿಗೆ 13 ಬೌಂಡರಿಗಳ ಅಗತ್ಯವಿದೆ.
- ರೋಹಿತ್ ಶರ್ಮಾ (3437) ಟೆಸ್ಟ್ ಕ್ರಿಕೆಟ್‌ನಲ್ಲಿ 3500 ರನ್ ಪೂರ್ಣಗೊಳಿಸಲು 63 ರನ್ ಅಗತ್ಯವಿದೆ.
- ವಿರಾಟ್ ಕೊಹ್ಲಿ ( 8479) 8500 ಟೆಸ್ಟ್ ಕ್ರಿಕೆಟ್ ರನ್ ಪೂರ್ಣಗೊಳಿಸಲು 21 ರನ್ ಅಗತ್ಯವಿದೆ.
- ಜೋಶುವಾ ಡಾ ಸಿಲ್ವಾ (94) ಟೆಸ್ಟ್ ಕ್ರಿಕೆಟ್‌ನಲ್ಲಿ 100 ಬೌಂಡರಿಗಳನ್ನು ಪೂರೈಸಲು ಆರು ಬೌಂಡರಿಗಳ ಅವಶ್ಯಕತೆಯಿದೆ.
- ಶುಭಮನ್ ಗಿಲ್ (921) ಟೆಸ್ಟ್‌ನಲ್ಲಿ 1000 ರನ್‌ಗಳನ್ನು ಪೂರ್ಣಗೊಳಿಸಲು 79 ರನ್‌ಗಳಿಸಬೇಕಿದೆ.
- ರವಿಚಂದ್ರನ್ ಅಶ್ವಿನ್ (697) ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳನ್ನು ಪೂರ್ಣಗೊಳಿಸಲು ಮೂರು ವಿಕೆಟ್ಗಳ ಅವಶ್ಯಕತೆಯಿದೆ.
- ಕೆಮರ್ ರೋಚ್ (396) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ವಿಕೆಟ್‌ಗಳನ್ನು ಪೂರ್ಣಗೊಳಿಸಲು ನಾಲ್ಕು ವಿಕೆಟ್‌ಗಳನ್ನು ಪಡೆಯಬೇಕಿದೆ.
- ಅಕ್ಷರ್ ಪಟೇಲ್ (145) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳನ್ನು ಪೂರ್ಣಗೊಳಿಸಲು 5 ವಿಕೆಟ್‌ಗಳನ್ನು ಕಬಳಿಸಬೇಕಿದೆ.
- ತೇಜ್ನರೈನ್ ಚಂದ್ರಪಾಲ್ (42) ಟೆಸ್ಟ್‌ನಲ್ಲಿ 50 ಬೌಂಡರಿಗಳನ್ನು ತಲುಪಲು ಎಂಟು ಬೌಂಡರಿಗಳ ಅಗತ್ಯವಿದೆ.
- ಈ ಪಂದ್ಯದೊಂದಿಗೆ ಅಜಿಂಕ್ಯ ರಹಾನೆ (49) ವಿದೇಶದಲ್ಲಿ 50 ಟೆಸ್ಟ್ ಪಂದ್ಯಗಳನ್ನಾಡಿದ ಭಾರತೀಯ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.
- ರೋಹಿತ್ ಶರ್ಮಾ (195) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ಕ್ಯಾಚ್‌ಗಳ ಸಾಧನೆ ಮಾಡಲು ಕೇವಲ 5 ಕ್ಯಾಚ್‌ಗಳ ಅವಶ್ಯಕತೆಯಿದೆ.
- ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಭಾರತೀಯ ಬೌಲರ್ ಎನಿಸಿಕೊಳ್ಳಲು ಅಶ್ವಿನ್ ಬೇಕಿರುವುದು ಕೇವಲ 4 ವಿಕೆಟ್ ಮಾತ್ರ. ಹೀಗಾಗಿ ಮೊದಲ ಟೆಸ್ಟ್ನಲ್ಲೇ ಅಶ್ವಿನ್ ಕಡೆಯಿಂದ ಭರ್ಜರಿ ದಾಖಲೆಗಳನ್ನು ನಿರೀಕ್ಷಿಸಬಹುದು.