ಟೀಮ್ ಇಂಡಿಯಾ ಪಾಲಿಗೆ ಯಾರು ಗೆಲ್ಲಬೇಕು? ಯಾರು ಸೋಲಬೇಕು?

T20 World Cup 2026: ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ಇಂಗ್ಲೆಂಡ್ ತಂಡವು ಸೆಮಿಫೈನಲ್​ಗೇರಿದೆ. ಇದಾಗ್ಯೂ ಇತ್ತ ಗ್ರೂಪ್-1 ರಿಂದ ಯಾವುದೇ ತಂಡ ನಾಕೌಟ್ ಹಂತಕ್ಕೇರಿಲ್ಲ. ಇಲ್ಲಿ ಭಾರತ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ ನಡುವೆ ನೇರ ಪೈಪೋಟಿ ಇದೆ.

ಟೀಮ್ ಇಂಡಿಯಾ ಪಾಲಿಗೆ ಯಾರು ಗೆಲ್ಲಬೇಕು? ಯಾರು ಸೋಲಬೇಕು?
Team India

Updated on: Feb 25, 2026 | 10:07 AM

T20 World Cup 2026: ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಸ್ಥಿತಿ ಪ್ರಸ್ತುತ ನಿರ್ಣಾಯಕ ಹಂತದಲ್ಲಿದೆ. ಸೂಪರ್ 8 ಹಂತದ ಮೊದಲ ಪಂದ್ಯದಲ್ಲಿ ಸೋತ ನಂತರ, ಸೆಮಿಫೈನಲ್‌ಗೇರಲು ಭಾರತಕ್ಕೆ ಮುಂದಿನ ಪಂದ್ಯಗಳು ಅತ್ಯಂತ ಮುಖ್ಯವಾಗಿವೆ. ಅದರಂತೆ ಝಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ ಗೆಲ್ಲಲೇಬೇಕು. ಈ ಗೆಲುವುಗಳ ಹೊರತಾಗಿಯೂ ಭಾರತ ತಂಡ ನೇರವಾಗಿ ಸೆಮಿಫೈನಲ್​ಗೇರುತ್ತೆ ಎಂದೇಳಲಾಗುವುದಿಲ್ಲ.

ಏಕೆಂದರೆ ಸೆಮಿಫೈನಲ್ ರೇಸ್​ನಲ್ಲಿ ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ತಂಡಗಳಿವೆ. ಹೀಗಾಗಿ ಈ ಮೂರು ತಂಡಗಳಿಗೂ ಮುಂದಿನ ಮ್ಯಾಚ್​ಗಳು ನಿರ್ಣಾಯಕ. ಅದರಲ್ಲೂ ನೆಟ್ ರನ್ ರೇಟ್​ನಲ್ಲಿ ಹಿಂದೆ ಉಳಿದಿರುವ ಟೀಮ್ ಇಂಡಿಯಾಗೆ ಎದುರಾಳಿ ತಂಡಗಳ ಫಲಿತಾಂಶಗಳು ಕೂಡ ಇಲ್ಲಿ ಮುಖ್ಯವಾಗುತ್ತದೆ. ಹಾಗಿದ್ರೆ ಟೀಮ್ ಇಂಡಿಯಾ ಪಾಲಿಗೆ ಯಾರು ಗೆಲ್ಲಬೇಕು? ಯಾರು ಸೋಲಬೇಕು ಎಂದು ನೋಡುವುದಾದರೆ…

  • ಝಿಂಬಾಬ್ವೆ ತಂಡವು ಮುಂದಿನ ಪಂದ್ಯಗಳಲ್ಲಿ ಸೋಲುವುದನ್ನು ಟೀಮ್ ಇಂಡಿಯಾ ಎದುರು ನೋಡಬೇಕು.
  • ವೆಸ್ಟ್  ಇಂಡೀಸ್ ತಂಡ ಸೌತ್ ಆಫ್ರಿಕಾ ವಿರುದ್ಧ ಸೋತರೆ ಟೀಮ್ ಇಂಡಿಯಾ ಹಾದಿ ಸುಗಮ.
  • ಸೌತ್ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ವಿರುದ್ಧ ಗೆಲ್ಲಬೇಕು.

ಅಂದರೆ ಇಲ್ಲಿ ಸೌತ್ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ ವಿರುದ್ಧ ಗೆದ್ದರೆ ಭಾರತ ತಂಡಕ್ಕೆ ನೆಟ್ ರನ್ ರೇಟ್ ಪರಿಗಣನೆಗೆ ಬರುವುದಿಲ್ಲ. ಏಕೆಂದರೆ ಮುಂದಿನ ಎರಡು ಮ್ಯಾಚ್​ಗಳ ಗೆಲುವುಗಳೊಂದಿಗೆ ಸೌತ್ ಆಫ್ರಿಕಾ ತಂಡವು 6 ಅಂಕಗಳೊಂದಿಗೆ ಸೆಮಿಫೈನಲ್​ಗೇರಲಿದೆ.

ಇತ್ತ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ವಿರುದ್ಧ ಗೆದ್ದರೆ ಒಟ್ಟು 4 ಅಂಕಗಳನ್ನು ಪಡೆಯಲಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿ ಸೆಮಿಫೈನಲ್​ಗೇರಬಹುದು.

ಒಂದು ವೇಳೆ ವೆಸ್ಟ್ ಇಂಡೀಸ್ ತಂಡವು ಸೌತ್ ಆಫ್ರಿಕಾ ವಿರುದ್ಧ ಗೆದ್ದರೆ ಭಾರತ ತಂಡವು ಝಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಭಾರೀ ಅಂತರದಿಂದ ಗೆಲುವು ಸಾಧಿಸಬೇಕು. ಏಕೆಂದರೆ ವಿಂಡೀಸ್ ವಿರುದ್ಧ ಸೋತು ಸೌತ್ ಆಫ್ರಿಕಾ ತಂಡ ಝಿಂಬಾಬ್ವೆ ವಿರುದ್ಧ ಗೆದ್ದರೆ 4 ಅಂಕಗಳನ್ನು ಪಡೆಯಲಿದೆ.

ಇದರಿಂದ ಸೆಮಿಫೈನಲ್​ಗೇರಲು ನೆಟ್ ರನ್ ರೇಟ್ ಪರಿಗಣನೆಗೆ ಬರಲಿದೆ. ಹೀಗಾಗಿ ಸೌತ್ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವಣ ಪಂದ್ಯದಲ್ಲಿ ಆಫ್ರಿಕಾ ಪಡೆ ಗೆಲ್ಲುವುದನ್ನು ಟೀಮ್ ಇಂಡಿಯಾ ಎದುರು ನೋಡಲಿದೆ.

ಇನ್ನು ಸೌತ್ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ವಿರುದ್ಧ ಸೋತರೂ ಕೂಡ ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿ ಸುಗಮವಾಗಲಿದೆ.

ಇದನ್ನೂ ಓದಿ: ಪಾಕಿಸ್ತಾನ್ ತಂಡಕ್ಕೆ ಸೆಮಿಫೈನಲ್​ಗೇರಲು ಇನ್ನೂ ಇದೆ ಚಾನ್ಸ್​..!

ಇಲ್ಲದಿದ್ದರೆ ಝಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಭಾರೀ ಅಂತರದಿಂದ ಗೆಲ್ಲುವ ಮೂಲಕ ಮಾತ್ರ ಭಾರತ ತಂಡಕ್ಕೆ ಸೆಮಿಫೈನಲ್​ಗೇರಲು ಅವಕಾಶ ಇರಲಿದೆ. ಹೀಗಾಗಿಯೇ ಭಾರತ ತಂಡಕ್ಕೆ ತನ್ನ ಪಂದ್ಯಗಳಲ್ಲದೇ ಎದುರಾಳಿ ಮ್ಯಾಚ್​ ಕೂಡ ನಿರ್ಣಾಯಕ. ಈ ನಿರ್ಣಾಯಕ ಪಂದ್ಯಗಳ ಫಲಿತಾಂಶಗಳ ಮೂಲಕ ಟೀಮ್ ಇಂಡಿಯಾ ಸೆಮಿಫೈನಲ್​ಗೇರುತ್ತಾ ಕಾದು ನೋಡಬೇಕಿದೆ.

 

 

 

Follow Us