ಐಪಿಎಲ್-2022 (IPL 2022)ರಲ್ಲಿ ಶನಿವಾರದಂದು ಎರಡು ಪಂದ್ಯಗಳು ನಡೆಯಲಿವೆ. ದಿನದ ಎರಡನೇ ಪಂದ್ಯ ಐದು ಬಾರಿ ವಿಜೇತ ತಂಡ ಮುಂಬೈ ಇಂಡಿಯನ್ಸ್ (Mumbai Indians) ಮತ್ತು 2008 ರ ವಿಜೇತ ತಂಡ ರಾಜಸ್ಥಾನ ರಾಯಲ್ಸ್ (Rajasthan Royals) ನಡುವೆ ನಡೆಯಲಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಈ ಸೀಸನ್ನಲ್ಲಿ ಮುಂಬೈ ಪ್ರದರ್ಶನ ತೀರ ಕಳಪೆಯಾಗಿದೆ. ಮುಂಬೈ ಇಲ್ಲಿಯವರೆಗೆ ಒಂದೇ ಒಂದು ಗೆಲುವು ಸಾಧಿಸದೆ, ಪ್ಲೇ ಆಫ್ ರೇಸ್‌ನಿಂದ ಹೊರಗುಳಿದಿದೆ. ಮುಂಬೈ ಇದುವರೆಗೆ ಒಟ್ಟು ಎಂಟು ಪಂದ್ಯಗಳನ್ನು ಆಡಿದ್ದು, ಎಂಟರಲ್ಲೂ ಸೋಲು ಕಂಡಿದೆ. ಆದರೆ ಮುಂಬೈಗೆ ಸತತವಾಗಿ ಉತ್ತಮ ಪ್ರದರ್ಶನ ತೋರುತ್ತಿರುವ ರಾಜಸ್ಥಾನ ಎದುರಾಗಿದೆ.
ಪಾಯಿಂಟ್ ಪಟ್ಟಿಯಲ್ಲಿ ರಾಜಸ್ಥಾನ ಪ್ರಸ್ತುತ ಎರಡನೇ ಸ್ಥಾನದಲ್ಲಿದೆ. ಎಂಟು ಪಂದ್ಯಗಳನ್ನು ಆಡಿರುವ ಅವರು ಆರರಲ್ಲಿ ಗೆದ್ದಿದ್ದರೆ ಎರಡರಲ್ಲಿ ಸೋತಿದ್ದಾರೆ. ಅವರ ಈಗಿನ ಫಾರ್ಮ್ ನೋಡಿದರೆ ಮುಂಬೈ ಮೊದಲ ಗೆಲುವಿಗಾಗಿ ಇನ್ನಿಲ್ಲದ ಹೋರಾಟ ನಡೆಸಬೇಕು ಅಥವಾ ಅವರ ಕಾಯುವಿಕೆ ಮತ್ತಷ್ಟು ಹೆಚ್ಚಾಗಬಹುದು ಎಂದು ಅನಿಸುತ್ತಿದೆ.
ಮುಖಾಮುಖಿ ವರದಿ ಇಲ್ಲಿದೆ
ಪ್ರಸ್ತುತ ಫಾರ್ಮ್‌ನಲ್ಲಿ ಮುಂಬೈ ಮೇಲೆ ರಾಜಸ್ಥಾನ ಖಂಡಿತವಾಗಿಯೂ ಪ್ರಾಬಲ್ಯ ಹೊಂದಿದೆ. ಆದರೆ ನಾವು ಈ ಎರಡು ತಂಡಗಳ ನಡುವಿನ ಒಟ್ಟು ಪಂದ್ಯಗಳ ಅಂಕಿಅಂಶಗಳನ್ನು ನೋಡಿದರೆ, ನಂತರ ಮುಂಬೈ ತಂಡವು ಪ್ರಾಬಲ್ಯ ಹೊಂದಿದೆ. ಆದರೆ, ಉಭಯ ತಂಡಗಳ ನಡುವಿನ ವ್ಯತ್ಯಾಸ ಒಂದೇ ಒಂದು ಪಂದ್ಯ. ಉಭಯ ತಂಡಗಳ ನಡುವೆ ಇದುವರೆಗೆ 28 ಪಂದ್ಯಗಳು ನಡೆದಿದ್ದು, ಅದರಲ್ಲಿ ರಾಜಸ್ಥಾನ 13 ಪಂದ್ಯಗಳನ್ನು ಗೆದ್ದಿದ್ದರೆ, ಮುಂಬೈ 14 ಪಂದ್ಯಗಳನ್ನು ಗೆದ್ದಿದೆ, ಆದರೆ ಒಂದು ಪಂದ್ಯದಲ್ಲಿ ಫಲಿತಾಂಶ ಹೊರಬಿದ್ದಿಲ್ಲ.
ಕಳೆದ ಐದು ಪಂದ್ಯಗಳ ಅಂಕಿಅಂಶ
ಈ ಎರಡು ತಂಡಗಳ ನಡುವಣ ಕಳೆದ ಐದು ಪಂದ್ಯಗಳ ಅಂಕಿ-ಅಂಶಗಳನ್ನು ನೋಡಿದರೆ ಇಲ್ಲೂ ಮುಂಬೈ ತಂಡವೇ ಭಾರಿ ಮೇಲುಗೈ ಸಾಧಿಸಿದೆ. ಈ ಋತುವಿನಲ್ಲಿ ಈ ಎರಡು ತಂಡಗಳು ಒಮ್ಮೆ ಮುಖಾಮುಖಿಯಾಗಿವೆ. ಏಪ್ರಿಲ್ 2 ರಂದು ಉಭಯ ತಂಡಗಳ ನಡುವೆ ಪಂದ್ಯ ನಡೆದಿದ್ದು, ಇದರಲ್ಲಿ ರಾಜಸ್ಥಾನ ಗೆಲುವು ಸಾಧಿಸಿತ್ತು. ಇದಕ್ಕೂ ಮೊದಲು ಅಕ್ಟೋಬರ್ 5, 2021 ರಂದು ನಡೆದ ಪಂದ್ಯವನ್ನು ಮುಂಬೈ ಗೆದ್ದಿತ್ತು ಮತ್ತು ಅದಕ್ಕೂ ಮೊದಲು ಏಪ್ರಿಲ್ 29 ರಂದು ನಡೆದ ಪಂದ್ಯದಲ್ಲಿ ಮುಂಬೈ ಗೆದ್ದಿತ್ತು. ರಾಜಸ್ಥಾನ 25 ಅಕ್ಟೋಬರ್ 2020 ರಂದು ಗೆದ್ದಿತ್ತು. ಮುಂಬೈ 6 ಅಕ್ಟೋಬರ್ 2020 ರಂದು ಗೆಲುವು ಸಾಧಿಸಿತ್ತು.
ಇದನ್ನೂ ಓದಿ:IPL 2022: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಡಕೌಟ್ ಆದ ಐವರು ವಿದೇಶಿ ಕ್ರಿಕೆಟಿಗರಿವರು..!