IPL 2022: ಕಳೆದ ಐಪಿಎಲ್​ನ ಫ್ಲಾಪ್ ಸ್ಟಾರ್​ಗಳೇ ಈ ಆವೃತ್ತಿಯ ಮ್ಯಾಚ್​ ವಿನ್ನರ್​ಗಳು! ಇಲ್ಲಿದೆ ನೋಡಿ ವಿವರ

IPL 2022: ಕಳೆದ ವರ್ಷ ಕಳಪೆ ಪ್ರದರ್ಶನದಿಂದಾಗಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಹಲವು ಕ್ರಿಕೆಟಿಗರು ಈ ಆವೃತ್ತಿಯಲ್ಲಿ ಸೂಪರ್​ಸ್ಟಾರ್​ಗಳಾಗಿ ಮಿಂಚುತ್ತಿದ್ದಾರೆ. ಅದೂ ಸಾಲದೆಂಬಂತೆ ತಮ್ಮನ್ನು ಹೀನಾಯವಾಗಿ ನಡೆಸಿಕೊಂಡಿದ್ದ ಹಳೆಯ ತಂಡಗಳೆದುರು ಭರ್ಜರಿ ಪ್ರದರ್ಶನ ನೀಡುವ ಮೂಲಕ ತಕ್ಕ ಎದುರೇಟು ನೀಡುತ್ತಿರುವುದು ಈ ಆವೃತ್ತಿಯ ವಿಶೇಷವಾಗಿದೆ.

IPL 2022: ಕಳೆದ ಐಪಿಎಲ್​ನ ಫ್ಲಾಪ್ ಸ್ಟಾರ್​ಗಳೇ ಈ ಆವೃತ್ತಿಯ ಮ್ಯಾಚ್​ ವಿನ್ನರ್​ಗಳು! ಇಲ್ಲಿದೆ ನೋಡಿ ವಿವರ
Kuldeep Yadav
Follow us
TV9 Web
| Updated By: ಪೃಥ್ವಿಶಂಕರ

Updated on: Apr 29, 2022 | 6:05 PM

ಇಂಡಿಯನ್ ಪ್ರೀಮಿಯರ್ ಲೀಗ್​ (Indian Premier League)ನಲ್ಲಿ ಒಂದೇ ರಾತ್ರಿಯಲ್ಲಿ ಕೆಲವು ಕ್ರಿಕೆಟಿಗರು ಸ್ಟಾರ್​ಗಳಾದರೆ ಇನ್ನು ಕೆಲವರು ಫ್ಲಾಪ್ ಸ್ಟಾರ್​ಗಳಾಗಿಬಿಡುತ್ತಾರೆ. ಯಾರು ಮ್ಯಾಚ್​ ವಿನ್ನರ್​ಗಳಾಗುತ್ತಾರೆ, ಯಾರು ಪಂದ್ಯವನ್ನು ಸೋಲುವಂತೆ ಮಾಡುತ್ತಾರೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಅದಕ್ಕೆ ತಕ್ಕ ಉದಾಹರಣೆ ಎಂದರೆ, ಈ ಐಪಿಎಲ್​ನಲ್ಲಿ ಮಿಂಚುತ್ತಿರುವ ಕ್ರಿಕೆಟಿಗರಾಗಿದ್ದಾರೆ. ಕಳೆದ ವರ್ಷ ಕಳಪೆ ಪ್ರದರ್ಶನದಿಂದಾಗಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಹಲವು ಕ್ರಿಕೆಟಿಗರು ಈ ಆವೃತ್ತಿಯಲ್ಲಿ ಸೂಪರ್​ಸ್ಟಾರ್​ಗಳಾಗಿ (IPL 2022 Top Performers) ಮಿಂಚುತ್ತಿದ್ದಾರೆ. ಅದೂ ಸಾಲದೆಂಬಂತೆ ತಮ್ಮನ್ನು ಹೀನಾಯವಾಗಿ ನಡೆಸಿಕೊಂಡಿದ್ದ ಹಳೆಯ ತಂಡಗಳೆದುರು ಭರ್ಜರಿ ಪ್ರದರ್ಶನ ನೀಡುವ ಮೂಲಕ ತಕ್ಕ ಎದುರೇಟು ನೀಡುತ್ತಿರುವುದು ಈ ಆವೃತ್ತಿಯ ವಿಶೇಷವಾಗಿದೆ. ಅಂತಹ ಕೆಲವು ಆಟಗಾರರ ಬಗ್ಗೆ ನಾವಿಲ್ಲಿ ನಿಮಗೆ ಹೇಳಲಿದ್ದೇವೆ.

  1. ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ಕುಲದೀಪ್ ಯಾದವ್ ಬೆಂಚ್ ಮೇಲೆ ಕುಳಿತಿದ್ದೆ ಬಂತು. ಈ ಆಟಗಾರನಿಗೆ ಕೆಲವೇ ಕೆಲವು ಅವಕಾಶಗಳನ್ನು ನೀಡಲಾಯಿತು. ಕಳೆದ ಋತುವಿನಲ್ಲಿ ಕೋಲ್ಕತ್ತಾ ಈ ಆಟಗಾರನನ್ನು ಕೇವಲ 5 ಪಂದ್ಯಗಳಲ್ಲಿ ಆಡಿಸಿತ್ತು. ಆ ಪಂದ್ಯಗಳಲ್ಲಿ ಕುಲ್ದೀಪ್ ಕೇವಲ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿತ್ತು. ಆದರೆ ಈ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಚೈನಾಮನ್ ಬೌಲರ್ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಕುಲದೀಪ್ 8 ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿದ್ದು, ನಾಲ್ಕು ಪಂದ್ಯಗಳಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಅವರು 18 ವಿಕೆಟ್‌ಗಳನ್ನು ಹೊಂದಿರುವ ಯುಜ್ವೇಂದ್ರ ಚಹಾಲ್‌ಗೆ ಕಠಿಣ ಪೈಪೋಟಿ ನೀಡುತ್ತಿದ್ದಾರೆ.
  2. ಕಳೆದ ಋತುವಿನಲ್ಲಿ ಹಾರ್ದಿಕ್ ಪಾಂಡ್ಯ ಕೂಡ ವಿಫಲರಾಗಿದ್ದರು, ಆದರೆ ಈ ಬಾರಿ ಈ ಆಟಗಾರ ಪ್ರತಿ ಪಂದ್ಯದಲ್ಲೂ ರನ್ ಗಳಿಸುವ ಪ್ರತಿಜ್ಞೆ ಮಾಡಿದ್ದಾರೆ. ಪಾಂಡ್ಯ ಕಳೆದ ಋತುವಿನಲ್ಲಿ 11 ಇನ್ನಿಂಗ್ಸ್‌ಗಳಲ್ಲಿ ಕೇವಲ 14.11 ಸರಾಸರಿಯಲ್ಲಿ 127 ರನ್ ಗಳಿಸಿದ್ದರು. ಆದರೆ ಈ ಬಾರಿ ಈ ಆಟಗಾರ 7 ಪಂದ್ಯಗಳಲ್ಲಿ 305 ರನ್ ಗಳಿಸಿದ್ದಾರೆ. ಪಾಂಡ್ಯ ಬ್ಯಾಟ್‌ನಿಂದ ಮೂರು ಅರ್ಧಶತಕಗಳು ಬಂದಿವೆ.
  3. ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಅಭಿಷೇಕ್ ಶರ್ಮಾ ಕಳೆದ ಋತುವಿನಲ್ಲಿ 7 ಇನ್ನಿಂಗ್ಸ್‌ಗಳಲ್ಲಿ 98 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅವರ ಬ್ಯಾಟಿಂಗ್ ಸರಾಸರಿ ಪ್ರತಿ ಇನ್ನಿಂಗ್ಸ್‌ಗೆ 17 ರನ್‌ಗಳಿಗಿಂತ ಕಡಿಮೆ ಇತ್ತು .ಆದರೆ ಈ ಬಾರಿ ಈ ಆಟಗಾರನಿಗೆ ಆರಂಭಿಕರಾಗಿ ಅವಕಾಶ ಸಿಕ್ಕಿದ್ದು ಅವರು 35 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 285 ರನ್ ಗಳಿಸಿದ್ದಾರೆ. ಅಭಿಷೇಕ್ ಶರ್ಮಾ 2 ಅರ್ಧಶತಕಗಳನ್ನು ಗಳಿಸಿದ್ದಾರೆ.
  4. ಸನ್‌ರೈಸರ್ಸ್ ಹೈದರಾಬಾದ್‌ನ ಏಕೈಕ ಬ್ಯಾಟ್ಸ್‌ಮನ್ ಏಡೆನ್ ಮಾರ್ಕ್ರಂ ಕಳೆದ ಋತುವಿನಲ್ಲಿ ತಮ್ಮ ಪ್ರತಿಭೆಗೆ ಅನುಗುಣವಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅವರ ಬ್ಯಾಟ್ 6 ಪಂದ್ಯಗಳಲ್ಲಿ 146 ರನ್ ಗಳಿಸಿತ್ತು. ಆದರೆ ಈ ಋತುವಿನಲ್ಲಿ ಈ ಆಟಗಾರ ಹೈದರಾಬಾದ್ ಪರ ಪ್ರತಿ ಪಂದ್ಯದಲ್ಲೂ ರನ್ ಗಳಿಸುತ್ತಿದ್ದಾರೆ. ಮಾರ್ಕ್ರಾಮ್ 6 ಇನ್ನಿಂಗ್ಸ್‌ಗಳಲ್ಲಿ 123 ಸರಾಸರಿಯಲ್ಲಿ 246 ರನ್ ಗಳಿಸಿದ್ದಾರೆ.
  5. ಕಳೆದ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ಮ್ಯಾಚ್ ಫಿನಿಶರ್ ಡೇವಿಡ್ ಮಿಲ್ಲರ್ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಅವರ ಬ್ಯಾಟ್‌ನಿಂದ 8 ಇನ್ನಿಂಗ್ಸ್‌ಗಳಲ್ಲಿ 24.80 ಸರಾಸರಿಯಲ್ಲಿ ಕೇವಲ 124 ರನ್ ಗಳಿಸಲಾಯಿತು. ಆದರೆ ಈ ಬಾರಿ ಈ ಆಟಗಾರ 59.25ರ ಸರಾಸರಿಯಲ್ಲಿ 237 ರನ್ ಗಳಿಸಿದ್ದಾರೆ. ತಂಡದ ಸ್ಟ್ರೈಕ್ ರೇಟ್ ಕೂಡ 150ರ ಸಮೀಪದಲ್ಲಿದೆ.

ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ