AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ರೋಚಕ ಪಂದ್ಯದ ಮಧ್ಯೆ ಕ್ಯಾಮೆರಾ ಕಣ್ಣಿಗೆ ಕಂಡ ಇಬ್ಬರು ಸುಂದರ ಯುವತಿಯರು: ಯಾರಿವರು?

Kat Kristian and Avantika Sharma: ಬುಧವಾರ ನಡೆದ ಗುಜರಾತ್ ಟೈಟಾನ್ಸ್ ಮತ್ತು ಸನ್​ರೈಸರ್ಸ್​ ಹೈದರಾಬಾದ್ ನಡುವಣ ಹೈ ಸ್ಕೋರ್ ಪಂದ್ಯ ಕೂಡ ಅಭಿಮಾನಿಗಳನ್ನು ತುದಿ ಗಾಲಿನಲ್ಲಿ ನಿಲ್ಲಿಸಿತ್ತು. ಈ ಪಂದ್ಯದ ಮಧ್ಯೆ ಒಮ್ಮೆ ಎಲ್ಲರ ಕಣ್ಣು ಬಿದ್ದಿದ್ದು ಆ ಇಬ್ಬರು ಯುವತಿಯರ ಮೇಲೆ.

IPL 2022: ರೋಚಕ ಪಂದ್ಯದ ಮಧ್ಯೆ ಕ್ಯಾಮೆರಾ ಕಣ್ಣಿಗೆ ಕಂಡ ಇಬ್ಬರು ಸುಂದರ ಯುವತಿಯರು: ಯಾರಿವರು?
Kat Kristian and Avantika Sharma IPL 2022
TV9 Web
| Updated By: Vinay Bhat|

Updated on: Apr 29, 2022 | 11:25 AM

Share

ಐಪಿಎಲ್ 2022 (IPL 2022) ಟೂರ್ನಿ ಆರಂಭವಾಗಿ ತಿಂಗಳು ಕಳೆದಿದ್ದು ಇದೀಗ ಅಸಲಿ ಆಟ ಶುರುವಾಗಿದೆ. ಅತಿ ಹೆಚ್ಚು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಾಜಿ ಚಾಂಪಿಯನ್, ಹಾಲಿ ಚಾಂಪಿಯನ್ನರು ಅತ್ಯಂತ ಕಳಪೆ ಪ್ರದರ್ಶನ ತೋರಿ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದೆ. ಎರಡು ಹೊಸ ತಂಡಗಳಾದ ಲಖನೌ ಸೂಪರ್ ಜೇಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ (Gujarat Taitans) ಬೊಂಬಾಟ್ ಪ್ರದರ್ಶನ ನೀಡುತ್ತಿದೆ. ಬುಧವಾರ ನಡೆದ ಗುಜರಾತ್ ಟೈಟಾನ್ಸ್ ಮತ್ತು ಸನ್​ರೈಸರ್ಸ್​ ಹೈದರಾಬಾದ್ (GT vs SRH) ನಡುವಣ ಹೈ ಸ್ಕೋರ್ ಪಂದ್ಯ ಕೂಡ ಅಭಿಮಾನಿಗಳನ್ನು ತುದಿ ಗಾಲಿನಲ್ಲಿ ನಿಲ್ಲಿಸಿತ್ತು. ಈ ಪಂದ್ಯದ ಮಧ್ಯೆ ಒಮ್ಮೆ ಎಲ್ಲರ ಕಣ್ಣು ಬಿದ್ದಿದ್ದು ಆ ಇಬ್ಬರು ಯುವತಿಯರ ಮೇಲೆ. ಅತ್ತ ರೋಚಕ ಕಾದಾಟ ನಡೆಯುತ್ತಿದ್ದರೆ ಇತ್ತ ಕ್ಯಾಮೆರಾ ಕಣ್ಣು ಮಾತ್ರ ಆ ಸುಂದರ ಹುಡುಗಿರ ಮೇಲಿತ್ತು.

ಹೌದು, ಐಪಿಎಲ್ ನಿಂದ ಹೊಸ ಯುವ ಆಟಗಾರರು ಬೆಳಕಿಗೆ ಬರುವ ಜೊತೆಗೆ ಪಂದ್ಯ ನೋಡಲು ಬಂದ ಅಭಿಮಾನಿಗಳು ಕೂಡ ಫೇಮಸ್ ಆಗುತ್ತಿದ್ದಾರೆ. ಈ ಹಿಂದೆ ಐಪಿಎಲ್ ಪಂದ್ಯದ ಮಧ್ಯೆ ಅನೇಕ ಮಿಸ್ಟರಿ ಗರ್ಲ್ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಇದೀಗ ಜಿಟಿ ಹಾಗೂ ಎಸ್​ಆರ್​ಹೆಚ್ ನಡುವಣ ಪಂದ್ಯದಲ್ಲಿ ಕ್ಯಾಮೆರಾ ಮ್ಯಾನ್ ಕಣ್ಣಿಗೆ ಇಬ್ಬರು ಸುಂದರಿಯರು ಕಂಡಿದ್ದು ಇವರ ಫೋಟೋ ಸಖತ್ ವೈರಲ್ ಆಗುತ್ತಿದೆ. ಇವರು ಯಾರೆಂದು ಅನೇಕರು ಹುಡುಕುತ್ತಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿರುವ ಇವರ ಹೆಸರು ಕ್ಯಾಟ್ ಕ್ರಿಸ್ಟಿಯನ್ ಮತ್ತು ಅವಂತಿಕಾ ಶರ್ಮಾ. ಇವರಿಬ್ಬರು ಪ್ರಸಿದ್ಧ ರಿಯಾಲಿಟಿ ಶೋ Splitsvilla 13 ಸೀಸನ್​ನಲ್ಲಿ ಭಾಗವಹಿಸಿದ್ದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇವರು ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡಕ್ಕೆ ಪ್ರೋತ್ಸಾಹ ನೀಡಲು ಬಂದಿದ್ದರು. ಇದೀಗ ಈ ಮಿಸ್ಟರಿ ಗರ್ಲ್ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಭರ್ಜರಿ ವೈರಲ್ ಆಗುತ್ತಿದೆ.

ಇನ್ನು ಈ ಪಂದ್ಯದ ಬಗ್ಗೆ ಮಾತನಾಡುವುದಾದರೆ, ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮ್ಯಾಚ್​ನಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್‌ ತಂಡ ಯುವ ಆರಂಭಿಕ ಅಭಿಷೇಕ್ ಶರ್ಮ (65 ರನ್, 42 ಎಸೆತ, 6 ಬೌಂಡರಿ, 3 ಸಿಕ್ಸರ್) ಮತ್ತು ಏಡನ್ ಮಾರ್ಕ್ರಮ್ (56 ರನ್, 40 ಎಸೆತ, 2 ಬೌಂಡರಿ, 3 ಸಿಕ್ಸರ್) ಅರ್ಧಶತಕಗಳ ನೆರವಿನಿಂದ 6 ವಿಕೆಟ್‌ಗೆ 195 ರನ್ ಪೇರಿಸಿತು. ಅನುಭವಿ ವೇಗಿ ಮೊಹಮದ್ ಶಮಿ (39) ಬಿಗಿ ಬೌಲಿಂಗ್ ದಾಳಿಯ ನಡುವೆಯೂ ಸನ್‌ರೈಸರ್ಸ್‌ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಗುಜರಾತ್ ತಂಡ ವೃದ್ಧಿಮಾನ್ ಸಾಹ (68 ರನ್, 38 ಎಸೆತ, 11 ಬೌಂಡರಿ, 1 ಸಿಕ್ಸರ್) ಬಿರುಸಿನ ಆಟದಿಂದ ಉತ್ತಮ ಆರಂಭ ಪಡೆಯಿತು. ಕೊನೆಯಲ್ಲಿ ತೆವಾಟಿಯ-ರಶೀದ್ ಖಾನ್ ಮುರಿಯದ 6ನೇ ವಿಕೆಟ್‌ಗೆ 24 ಎಸೆತಗಳಲ್ಲಿ 59 ರನ್ ಸೇರಿಸಿದ ಪರಿಣಾಮ 5 ವಿಕೆಟ್‌ಗೆ 199 ರನ್ ಗಳಿಸಿ ಗೆಲುವು ಕಂಡಿತು. ಉಭಯ ತಂಡಗಳೂ ಸಂಪೂರ್ಣ 20 ಓವರ್ ಆಡಿದರು.

IPL 2022 Points Table: ಪರ್ಪಲ್ ಕ್ಯಾಪ್ ಪಕ್ಕ ಬಂದ ಕುಲ್ದೀಪ್: ಪಾಯಿಂಟ್ ಟೇಬಲ್, ಆರೆಂಜ್ ಕ್ಯಾಪ್ ಪಟ್ಟಿ ಇಲ್ಲಿದೆ ನೋಡಿ

Shreyas Iyer: ಸತತ ಐದನೇ ಸೋಲು: ಪಂದ್ಯ ಮುಗಿದ ಬಳಿಕ ಶ್ರೇಯಸ್ ಅಯ್ಯರ್ ಗರಂ: ಏನು ಹೇಳಿದ್ರು ಕೇಳಿ