PBKS vs LSG: ಐಪಿಎಲ್​​ನಲ್ಲಿಂದು ಕನ್ನಡಿಗರ ಸೆಣೆಸಾಟ: ಗೆಲ್ಲಬೇಕಾದ ಒತ್ತಡದಲ್ಲಿ ಪಂಜಾಬ್

PBKS vs LSG: ಐಪಿಎಲ್​​ನಲ್ಲಿಂದು ಕನ್ನಡಿಗರ ಸೆಣೆಸಾಟ: ಗೆಲ್ಲಬೇಕಾದ ಒತ್ತಡದಲ್ಲಿ ಪಂಜಾಬ್
LSG vs PBKS

IPL 2022: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಮತ್ತು ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೇಂಟ್ಸ್ (PBKS vs LSG) ತಂಡ ಮುಖಾಮುಖಿ ಆಗಲಿದೆ.

TV9kannada Web Team

| Edited By: Vinay Bhat

Apr 29, 2022 | 9:57 AM

ಇಂಡಿಯನ್ ಪ್ರೀಮಿಯರ್ ಲೀಗ್​ 15ನೇ ಆವೃತ್ತಿಯಲ್ಲಿಂದು (IPL 2022) ಪ್ರಮುಖ ಪಂದ್ಯ ನಡೆಯಲಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಮತ್ತು ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೇಂಟ್ಸ್ (PBKS vs LSG) ತಂಡ ಮುಖಾಮುಖಿ ಆಗಲಿದೆ. ಬಲಿಷ್ಟ ಆಟಗಾರರನ್ನು ಹಿಂದಿರುವ ರಾಹುಲ್ (KL Rahul) ಪಡೆ ಉತ್ತಮ ಪ್ರದರ್ಶನ ನೀಡುತ್ತಿದ್ದು ಆಡಿರುವ 8 ಪಂದ್ಯಗಳ ಪೈಕಿ 5 ರಲ್ಲಿ ಗೆಲುವು ಸಾಧಿಸಿದ್ದು 3 ಸೋಲು ಅನುಭವಿಸಿದೆ. ಹೀಗಾಗಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ತಂಡ ಆಡಿರುವ 8 ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ 4 ಪಂದ್ಯಗಳಲ್ಲಿ ಸೋಲಿನ ಕಹಿ ಅನುಭವಿಸಿದೆ. ಉಭಯ ತಂಡಗಳಿಗೆ ಮುಂದಿನ ಪ್ರತಿಯೊಂದು ಪಂದ್ಯದ ಫಲಿತಾಂಶ ಕೂಡ ಬಹಳ ಮುಖ್ಯವಾಗುತ್ತದೆ. ಹೀಗಾಗಿ ಕನ್ನಡಿಗರಿಬ್ಬರ ಕಾದಾಟ ಹೈವೋಲ್ಟೇಜ್ ಪಂದ್ಯ ಆಗುವುದರಲ್ಲಿ ಅನುಮಾನವಿಲ್ಲ.

ಕಳೆದ ಪಂದ್ಯದಲ್ಲಿ ಲಖನೌ ತಂಡ ಮುಂಬೈ ವಿರುದ್ಧ 36 ರನ್‌ಗಳಿಂದ ಗೆದ್ದು ಬೀಗಿತ್ತು. ನಾಯಕ ಕೆಎಲ್ ರಾಹುಲ್ ಟೂರ್ನಿಯಲ್ಲಿ ಇದುವರೆಗೆ 2 ಶತಕ ಸಿಡಿಸಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಈ ಎರಡು ಶತಕಗಳು ಮುಂಬೈ ಇಂಡಿಯನ್ಸ್ ವಿರುದ್ಧಧ ಪಂದ್ಯದಲ್ಲಿಯೇ ಬಂದಿರುವುದು ಕುತೂಹಲಕಾರಿ ಅಂಶ. ಈ ಅದ್ಭುತ ಫಾರ್ಮ್‌ಅನ್ನು ತನ್ನ ಹಿಂದಿನ ತಂಡದ ವಿರುದ್ಧವೂ ಕೆಎಲ್ ರಾಹುಲ್ ಮುಂದುವರಿಸಲಿದ್ದಾರಾ ಎಂಬುದು ಕುತೂಹಲ ಮೂಡಿಸಿದೆ. ಆದರೆ ರಾಹುಲ್​ಗೆ ಇತರೆ ಆಟಗಾರರು ಸಾಥ್ ನೀಡದಿರುವುದು ನಾಯಕನಿಗೆ ತಲೆನೋವಾಗಿದೆ. ಕ್ವಿಂಟನ್‌ ಡಿಕಾಕ್‌, ಮನೀಷ್‌ ಪಾಂಡೆ, ಸ್ಟೋಯಿನಿಸ್‌, ಕೃನಾಲ್‌ ಪಾಂಡ್ಯ, ದೀಪಕ್ ಹೂಡಾ ದೊಡ್ಡ ಮಟ್ಟದ ಬ್ಯಾಟಿಂಗ್‌ ಪ್ರದರ್ಶಿಸಿಲ್ಲ. ಆಯುಷ್‌ ಬದೋನಿ ಮೊದಲ ಕೆಲವು ಪಂದ್ಯಗಳ ಬಳಿಕ ಮಂಕಾಗಿದ್ದಾರೆ.

ಲಖನೌ ಬೌಲಿಂಗ್ ವಿಭಾಗ ಕೂಡ ಹೇಳಿಕೊಳ್ಳುವಷ್ಟರ ಮಟ್ಟಿಗೆ ಅಪಾಯಕಾರಿಯೇನಲ್ಲ. ದುಶ್ಮಂತಾ ಚಮೀರ, ಮೊಹ್ಸಿನ್‌ ಖಾನ್‌, ಹೋಲ್ಡರ್‌, ಬಿಷ್ಣೋಯಿ ದೊಡ್ಡ ಮಟ್ಟದಲ್ಲಿ ಕೈಚಳಕ ತೋರಬೇಕಿದೆ. ಸ್ಪಿನ್‌ ವಿಭಾಗದಲ್ಲಿ ಕೈನಾಲ್ ಪಾಂಡ್ಯ-ಬಿಷ್ಣೋಯಿ ಹೆಚ್ಚು ಬಿರುಸುಗೊಳ್ಳಬೇಕಿದೆ. ಪಾಂಡೆ ಬ್ಯಾಟ್ ಸದ್ದು ಮಾಡದಿರುವ ಕಾರಣ ಅವರ ಬದಲಿಗೆ ಮನನ್ ವೊಹ್ರಾ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಇತ್ತ ಪಂಜಾಬ್ ಕಿಂಗ್ಸ್ ಪರವಾಗಿ ನಾಯಕ ಮಯಾಂಕ್ ಅಗರ್ವಾಲ್ ಅವರಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ. ಆದರೆ ಮತ್ತೋರ್ವ ಆರಂಭಿಕ ಆಟಗಾರ ಶಿಖರ್ ಧವನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮದ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್ಸ್ಟನ್, ಭಾನುಕಾ ರಾಜಪಕ್ಷ ಅವರಂತಾ ಆಟಗಾರರು ಸ್ಪೋಟಕ ಪ್ರದರ್ಶನ ನಿಡುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ ಇಂಡಿನ ಪಂದ್ಯದಲ್ಲಿ ತೀವ್ರ ಪೈಪೋಟಿ ನಡೆಯುವುದು ಸ್ಪಷ್ಟವಾಗಿದೆ. ಬೌಲಿಂಗ್‌ನಲ್ಲಿ ರಿಷಿ ಧವನ್‌ ಟ್ರಂಪ್‌ಕಾರ್ಡ್‌ ಆಗಿದ್ದಾರೆ. ಜತೆಗೆ ರಬಾಡ, ಸಂದೀಪ್‌ ಶರ್ಮ, ಆರ್ಷದೀಪ್‌, ರಾಹುಲ್‌ ಚಹರ್‌ ಉತ್ತಮ ನಿಯಂತ್ರಣ ಸಾಧಿಸಬಲ್ಲರು. ಕಳೆದ ಪಂದ್ಯದಲ್ಲಿ ಕೆಲ ಬದಲಾವಣೆ ಮಾಡಿ ಯಶಸ್ಸು ಕಂಡಿದ್ದ ಪಂಜಾಬ್ ತಂಡದ ಸಂಯೋಜನೆ ಈ ಬಾರಿ ಬದಲಾಗುವ ಸಾಧ್ಯತೆಗಳಿಲ್ಲ.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI:

ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್ಸ್ಟನ್, ಜಾನಿ ಬೈರ್‌ಸ್ಟೋ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಹಾರ್, ಅರ್ಶ್‌ದೀಪ್ ಸಿಂಗ್ ಮತ್ತು ಸಂದೀಪ್ ಶರ್ಮಾ.

ಲಖನೌ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಮನನ್ ವೊಹ್ರಾ, ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ರವಿ ಬಿಷ್ಣೋಯ್, ದುಷ್ಮಂತ ಚಮೀರಾ ಮತ್ತು ಅವೇಶ್ ಖಾನ್.

Shreyas Iyer: ಸತತ ಐದನೇ ಸೋಲು: ಪಂದ್ಯ ಮುಗಿದ ಬಳಿಕ ಶ್ರೇಯಸ್ ಅಯ್ಯರ್ ಗರಂ: ಏನು ಹೇಳಿದ್ರು ಕೇಳಿ

DC vs KKR: ಬರೋಬ್ಬರಿ 8 ಆಟಗಾರರಿಗೆ ಬೌಲಿಂಗ್ ನೀಡಿದ ಶ್ರೇಯಸ್: ಆದರೂ ಗೆಲ್ಲಲಿಲ್ಲ ಕೆಕೆಆರ್

Follow us on

Related Stories

Most Read Stories

Click on your DTH Provider to Add TV9 Kannada