ಗುಜರಾತ್ ಟೈಟಾನ್ಸ್ ತನ್ನ ಮೊದಲ ಸೀಸನ್ನಲ್ಲೇ ಅದ್ಭುತ ಪ್ರದರ್ಶನ ನೀಡುವ ಮೂಲಕ 15ನೇ ಆವೃತ್ತಿಯ ಚಾಂಪಿಯನ್ (IPL 2022 Final)) ಆಗಿ ಹೊರಹೊಮ್ಮಿತು. ಭಾನುವಾರ ಅಹಮದಾಬಾದ್‌ನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಗುಜರಾತ್ ತಂಡ ರಾಜಸ್ಥಾನ್ ರಾಯಲ್ಸ್ (Gujarat defeated Rajasthan Royals) ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಕೇವಲ 131 ರನ್ಗಳ ಗುರಿ ಬೆನ್ನತ್ತಿದ ಗುಜರಾತ್ ತಂಡ 11 ಎಸೆತಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಹಾರ್ದಿಕ್ ಪಾಂಡ್ಯ ತಮ್ಮ ನಾಯಕತ್ವವನ್ನು ಸಾಬೀತುಪಡಿಸಿದರು. ಮೊದಲ ಬಾರಿಗೆ ಐಪಿಎಲ್‌ನಂತಹ ದೊಡ್ಡ ಟೂರ್ನಿಯಲ್ಲಿ ನಾಯಕರಾಗಿದ್ದ ಪಾಂಡ್ಯ ಬ್ಯಾಟ್ ಮತ್ತು ಬಾಲ್‌ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಶ್ರಮಿಸಿದರು. ಆದರೆ, ಗುಜರಾತ್ ತಂಡದ ನಾಯಕ ಈ ಗೆಲುವನ್ನು ಮುಖ್ಯ ಕೋಚ್ ಆಶಿಶ್ ನೆಹ್ರಾ ಅವರಿಗೆ ತೊಡಿಸಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಪಾಂಡ್ಯ, ನೆಹ್ರಾ ತಂಡದೊಂದಿಗೆ ಹೇಗೆ ಶ್ರಮಿಸಿದರು ಎಂಬುದನ್ನು ವಿವರಿಸಿದರು.
IPL 2022 ಚಾಂಪಿಯನ್ ಆದ ನಂತರ, ಗುಜರಾತ್ ಟೈಟಾನ್ಸ್ ಮುಖ್ಯ ಕೋಚ್ ಆಶಿಶ್ ನೆಹ್ರಾ ನಾಯಕ ಪಾಂಡ್ಯ ಅವರೊಂದಿಗೆ ಮಾತನಾಡಿದರು. ಐಪಿಎಲ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಈ ವಿಡಿಯೋದಲ್ಲಿ, ಆಶಿಶ್ ನೆಹ್ರಾ, ನಾಯಕ ಹಾರ್ದಿಕ್ ಪಾಂಡ್ಯ ಬಳಿ ಈ ಐಪಿಎಲ್ ಜರ್ನಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವಂತೆ ಕೇಳಿಕೊಂಡರು. ಇದಕ್ಕೆ ಪಾಂಡ್ಯ ಆಸಕ್ತಿದಾಯಕ ಉತ್ತರವನ್ನು ಸಹ ನೀಡಿದ್ದರು. ಆರಂಭದಲ್ಲಿ ಗುಜರಾತ್‌ನ ಬ್ಯಾಟಿಂಗ್-ಬೌಲಿಂಗ್ ದುರ್ಬಲವಾಗಿದೆ ಎಂದು ಜನರು ಹೇಳುತ್ತಿದ್ದರು. ಆದರೆ ನಮ್ಮ ಹುಡುಗರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದರು. ಹಾರ್ದಿಕ್ ಪಾಂಡ್ಯ, ‘ನಾನು ಮೊದಲ ವರ್ಷದಲ್ಲಿಯೇ ಸಿಕ್ಸರ್ ಬಾರಿಸಿದ್ದೇನೆ. ನಾನು ತುಂಬಾ ಸಂತೋಷವಾಗಿದ್ದೇನೆ. ಮೊದಮೊದಲು ಜನರು ಈ ತಂಡದಲ್ಲಿ ಅಂತ ಹೇಳಿಕೊಳ್ಳುವಂತಹ ಬ್ಯಾಟಿಂಗ್, ಹಾಗೂ ಬೌಲಿಂಗ್ ಇಲ್ಲ ಎಂದಿದ್ದರು. ಆದರೆ ನಾವು ಚಾಂಪಿಯನ್ ಆಗಿದ್ದೇವೆ, ಇದು ಹೆಮ್ಮೆಯ ವಿಚಾರ ಎಂದಿದ್ದಾರೆ.
Emotions, insights & a recap of the maiden IPL triumph in their maiden IPL season! ☺️ ?
On the mic with the @gujarat_titans‘ title-winning Captain @hardikpandya7 & Head Coach Ashish Nehra. ? ? – By @RajalArora
Full interview ? ? #TATAIPL | #GTvRR https://t.co/mzJxEOwIAT pic.twitter.com/KnYtoojKTt
— IndianPremierLeague (@IPL) May 30, 2022
ಟ್ರೋಫಿ ಗೆಲ್ಲುವುದಕ್ಕಿಂತ ಹೆಚ್ಚು ಸಂತೋಷವಿಲ್ಲ- ನೆಹ್ರಾ
ಗುಜರಾತ್ ಟೈಟಾನ್ಸ್ ತಂಡದ ಮುಖ್ಯ ಕೋಚ್ ಆಶಿಶ್ ನೆಹ್ರಾ ಮಾತನಾಡಿ, ಗುಜರಾತ್ ತಂಡ ಆಡುವ ರೀತಿ ನನಗೆ ತುಂಬಾ ಖುಷಿ ತಂದಿದೆ. ಟ್ರೋಫಿ ಗೆದ್ದಿರುವುದು ಸರಿಯೇ ಆದರೆ ನಮ್ಮ ತಂಡ ಆಡುವ ರೀತಿ ನನಗೆ ಅತ್ಯಂತ ಖುಷಿ ತಂದಿದೆ ಎಂದರು. ಹುಡುಗರು ಆಟ ತೋರಿದ ರೀತಿ, ಪರಸ್ಪರ ಬೆರೆತ ರೀತಿ. ಮೊದಲ ಸೀಸನ್‌ನಲ್ಲಿ ಚಾಂಪಿಯನ್ ಆಗಿರುವುದು ಅದ್ಭುತವಾಗಿದೆ ಎಂದಿದ್ದಾರೆ.
ಪಾಂಡ್ಯಗೆ ನೆಹ್ರಾ ಹೇಳಿದ ಸುಳ್ಳು!
ಐಪಿಎಲ್ ಗೆಲ್ಲುವಲ್ಲಿ ಯಶಸ್ವಿಯಾದ ಮೊದಲ ಭಾರತೀಯ ಮುಖ್ಯ ಕೋಚ್ ಆಶಿಶ್ ನೆಹ್ರಾ ಎಂಬುದು ಇಲ್ಲಿ ಹೆಗ್ಗಳಿಕೆಯಾಗಿದೆ. ಆಶಿಶ್ ನೆಹ್ರಾ ಗುಜರಾತ್‌ನ ಪ್ರತಿಯೊಬ್ಬ ಆಟಗಾರರೊಂದಿಗೆ ಹೇಗೆ ಶ್ರಮಿಸಿದರು ಎಂಬುದನ್ನು ಹಾರ್ದಿಕ್ ಪಾಂಡ್ಯ ಅಭಿಮಾನಿಗಳಿಗೆ ತಿಳಿಸಿದರು. ಆಶಿಶ್ ನೆಹ್ರಾಗೆ ಗೆಲುವಿನ ಮುಖ ಒಲಿದಿದೆ, ಏಕೆಂದರೆ ಅವರು ಪ್ರತಿಯೊಬ್ಬ ಆಟಗಾರನೊಂದಿಗೆ ತುಂಬಾ ಕಠಿಣವಾಗಿ ಕೆಲಸ ಮಾಡಿದರು. ಅವರು ಪ್ರತಿಯೊಬ್ಬ ಬ್ಯಾಟ್ಸ್‌ಮನ್, ಬೌಲರ್‌ನತ್ತ ಗಮನ ಹರಿಸಿದರು. ನೆಹ್ರಾ ಕೋಚಿಂಗ್ನಲ್ಲಿ ಅಭ್ಯಾಸ ಮಾಡುತ್ತಿದ್ದ ಪ್ರತಿಯೊಬ್ಬ ಆಟಗಾರನೂ ಅಭ್ಯಾಸದ ನಂತರ ಕ್ರೀಸ್‌ಗೆ ಹೋಗಿ ಬಾಲನ್ನು ಬ್ಯಾಟ್ ಮಧ್ಯದಲ್ಲಿ ಆಡಿ ಸಿಕ್ಸರ್ ಬಾರಿಸುವೆ ಎಂದು ಯೋಚಿಸುತ್ತಿದ್ದರು ಎಂಬ ಹೊಗಳಿಕೆಯ ಮಾತನ್ನು ಪಾಂಡ್ಯ ನೆಹ್ರಾ ಬಗ್ಗೆ ಹೇಳಿದ್ದರು. ಈ ಮಾತು ಕೇಳಿದ ಆಶಿಶ್ ನೆಹ್ರಾ ಈ ವಿಚಾರದಲ್ಲಿ ಸ್ವಲ್ಪ ನಾಚಿಕೆಪಟ್ಟು ಹಾರ್ದಿಕ್ ಪಾಂಡ್ಯ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದ್ದರು. ಇದಾದ ಬಳಿಕ ಆಶಿಶ್ ನೆಹ್ರಾ ಅಲ್ಲಿಂದ ಎದ್ದು ಹೋದರು.
Published On - 3:59 pm, Mon, 30 May 22