
2026 ರ ಮಹಿಳಾ ಏಷ್ಯಾಕಪ್‌ನಲ್ಲಿ (Women’s Asia Cup 2026) ಭಾರತ ಮಹಿಳಾ ಕ್ರಿಕೆಟ್ ತಂಡ ಥೈಲ್ಯಾಂಡ್ (India vs Thailand Women) ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಿತು. ಈ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಥೈಲ್ಯಾಂಡ್ ತಂಡವನ್ನು ಮಣಿಸಿದ ಹರ್ಮನ್‌ಪ್ರೀತ್ ಕೌರ್ ಪಡೆ ಟೂರ್ನಿಯಲ್ಲಿ ಗೆಲುವಿನ ಆರಂಭ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಥೈಲ್ಯಾಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿ ಥೈಲ್ಯಾಂಡ್‌ಗೆ ಗೆಲ್ಲಲು 160 ರನ್‌ಗಳ ಗುರಿಯನ್ನು ನೀಡಿತು. ಈ ಗುರಿ ಬೆನ್ನಟ್ಟಿದ ಥೈಲ್ಯಾಂಡ್ ಕೇವಲ 65 ರನ್ ಕಲೆಹಾಕಲಷ್ಟೇ ಶಕ್ತವಾಗಿ 94 ರನ್ಗಳಿಂದ ಸೋಲೊಪ್ಪಿಕೊಂಡತು.
ಈ ಪಂದ್ಯದಲ್ಲಿ ಭಾರತ ತಂಡ ಉತ್ತಮ ಆರಂಭ ಪಡೆದರೂ, ಮೂರನೇ ಓವರ್‌ನಲ್ಲಿ ಸ್ಮೃತಿ ಮಂಧಾನ ರನೌಟ್ ಆದರು. ನಂತರ ಶೆಫಾಲಿ ವರ್ಮಾ ಜವಾಬ್ದಾರಿ ವಹಿಸಿಕೊಂಡು ಕೇವಲ 36 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ ಅದ್ಭುತ 64 ರನ್ ಗಳಿಸಿ ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು. ಪ್ರತಿಕಾ ರಾವಲ್ 18 ಎಸೆತಗಳಲ್ಲಿ 22 ರನ್ ಬಾರಿಸಿ ಶಫಾಲಿಗೆ ಬೆಂಬಲ ನೀಡಿದರು. ಅಂತಿಮವಾಗಿ, ಕ್ರಾಂತಿ ಗೌಡ್ ಎಂಟು ಎಸೆತಗಳಲ್ಲಿ ಅಜೇಯ 15 ರನ್ ಗಳಿಸಿ ತಂಡವನ್ನು 159ರನ್‌ಗಳಿಗೆ ತಲುಪಿಸಿದರು. ಇವರನ್ನು ಹೊರತುಪಡಿಸಿ, ಬೇರೆ ಯಾವುದೇ ಬ್ಯಾಟರ್ಗೆ ಹೆಚ್ಚಿನದನ್ನು ಮಾಡಲು ಸಾಧ್ಯವಾಗಲಿಲ್ಲ. ಭಾರತದ ಆರು ಬ್ಯಾಟರ್ಗಳು ಎರಡಂಕಿ ತಲುಪಲು ವಿಫಲರಾಗಿದ್ದು ತಂಡವನ್ನು 200 ರನ್ ದಾಟದಂತೆ ತಡೆಯಿತು.
ನಾಯಕಿ ಹರ್ಮನ್‌ಪ್ರೀತ್ ಕೌರ್ 9 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿದರೆ, ಭಾರತಿ ಫುಲ್ಮಾಲಿ ಕೂಡ 13 ರನ್‌ಗಳಿಗೆ ಸುಸ್ತಾದರು. ಸ್ಫೋಟಕ ಬ್ಯಾಟರ್ ರಿಚಾ ಘೋಷ್ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡರು. ದೀಪ್ತಿ ಶರ್ಮಾ ಕೂಡ 5 ರನ್ ಗಳಿಸಿ ರನೌಟ್ ಆದರು. ಪ್ರೇಮಾ ರಾವತ್ 6 ರನ್, ನಂದನಿ ಶರ್ಮಾ ಕೇವಲ 1 ರನ್ ಬಾರಿಸಿ ಔಟಾದರೆ, ಶ್ರೀ ಚರಣಿ 8 ಎಸೆತಗಳಲ್ಲಿ 6 ರನ್ ಗಳಿಸಿ ಅಜೇಯರಾಗಿ ಉಳಿದರು. ಥೈಲ್ಯಾಂಡ್ ಪರ ಅತ್ಯಂತ ಯಶಸ್ವಿ ಬೌಲರ್ ಸುಲೀಪೋರ್ನ್ ಲಾವೋಮಿ ನಾಲ್ಕು ಓವರ್‌ಗಳಲ್ಲಿ ಕೇವಲ 26 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಬಳಿಸಿದರು.
Women’s T20 Asia Cup: ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್
ಭಾರತ ನೀಡಿದ 160 ರನ್‌ಗಳ ಗುರಿ ಬೆನ್ನಟ್ಟಿದ ಥೈಲ್ಯಾಂಡ್ನ ಅನಾನುಭವಿ ಬ್ಯಾಟಿಂಗ್ ವಿಭಾಗಕ್ಕೆ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ತಂಡದ ಪರ ನನ್ನಪತ್ ಕೊಂಚರೋಯೆಂಕೈ ಅತ್ಯಧಿಕ 41 ರನ್‌ಗಳ ಇನ್ನಿಂಗ್ಸ್ ಆಡಿದನ್ನು ಬಿಟ್ಟರೆ ಉಳಿದವರಲ್ಲಿ ಯಾರೂ ಕೂಡ ಒಂದಂಕಿ ಮೊತ್ತ ದಾಟಲಿಲ್ಲ. ಅಂತಿಮವಾಗಿ ಥೈಲ್ಯಾಂಡ್ ತಂಡ 16.1 ಓವರ್‌ಗಳಲ್ಲಿ ಕೇವಲ 65 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ದೀಪ್ತಿ ಶರ್ಮಾ ಹಾಗೂ ನಂದನಿ ಶರ್ಮಾ ತಲಾ 3 ವಿಕೆಟ್‌ಗಳನ್ನು ಪಡೆದರು.
Published On - 11:01 pm, Sun, 30 August 26