AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women’s T20 Asia Cup: ಭಾರತ ಮಹಿಳಾ ತಂಡಕ್ಕೆ ಮರ್ಮಾಘಾತ ನೀಡಿದ ಥೈಲ್ಯಾಂಡ್

Women's Asia Cup 2026: ದುಬೈನಲ್ಲಿ ನಡೆದ ಮಹಿಳಾ ಟಿ20 ಏಷ್ಯಾಕಪ್​ನಲ್ಲಿ ಭಾರತ ಥೈಲ್ಯಾಂಡ್ ಎದುರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಭರ್ಜರಿ ಆರಂಭದ ಹೊರತಾಗಿಯೂ, ಥೈಲ್ಯಾಂಡ್‌ನ ಶಿಸ್ತುಬದ್ಧ ಬೌಲಿಂಗ್ ಮತ್ತು ಭಾರತದ ಹುಂಬತನದಿಂದ 150 ರನ್ ಗಳಿಸಲೂ ಪರದಾಡಿತು. ಶಫಾಲಿ ವರ್ಮಾ ಏಕಾಂಗಿ ಹೋರಾಟ (64 ರನ್) ನಡೆಸದಿದ್ದರೆ, ಸ್ಕೋರ್ ಇನ್ನಷ್ಟು ಕಡಿಮೆಯಾಗುತ್ತಿತ್ತು. ಭಾರತೀಯ ಆಟಗಾರ್ತಿಯರ ನಿರ್ಲಕ್ಷ್ಯ ಈ ಕಳಪೆ ಪ್ರದರ್ಶನಕ್ಕೆ ಕಾರಣವಾಯಿತು. ಥೈಲ್ಯಾಂಡ್ ತಂಡದ ಆಟ ಅಮೋಘವಾಗಿತ್ತು.

Women's T20 Asia Cup: ಭಾರತ ಮಹಿಳಾ ತಂಡಕ್ಕೆ ಮರ್ಮಾಘಾತ ನೀಡಿದ ಥೈಲ್ಯಾಂಡ್
India Vs Thailand
ಪೃಥ್ವಿಶಂಕರ
|

Updated on:Aug 30, 2026 | 9:46 PM

Share

ದುಬೈನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ (Women’s Asia Cup 2026) ಭಾರತ ಮಹಿಳಾ ತಂಡ ತನ್ನ ಮೊದಲ ಪಂದ್ಯವನ್ನಾಡಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಿಸಿದ್ದು, ಮಹಿಳಾ ಕ್ರಿಕೆಟ್​ನ ಶಿಶು ಥೈಲ್ಯಾಂಡ್ (India vs Thailand) ತಂಡವನ್ನು. ಟೀಂ ಇಂಡಿಯಾಕ್ಕೆ ಹೋಲಿಸಿದರೆ, ಥೈಲ್ಯಾಂಡ್ ತಂಡಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಅನುಭವ, ಅದರಲ್ಲೂ ಬಲಿಷ್ಠ ತಂಡವನ್ನು ಎದುರಿಸಿದ ಅನುಭವ ಇರಲಿಲ್ಲ. ಹೀಗಾಗಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪಡೆದುಕೊಂಡ ಆರಂಭವನ್ನು ನೋಡಿದರೆ, ಇಂದು 250 ರನ್ ಗಡಿ ದಾಟುವುದು ಖಚಿತ ಎನ್ನಲಾಗುತ್ತಿತ್ತು. ಆದರೆ ಥೈಲ್ಯಾಂಡ್ ತಂಡ ತೋರಿದ ಆ ಶಿಸ್ತುಬದ್ಧ ಪ್ರದರ್ಶನ ಟೀಂ ಇಂಡಿಯಾವನ್ನು 150 ರ ಗಡಿ ದಾಟುವುದಕ್ಕೂ ಪರಿತಪಿಸುವಂತೆ ಮಾಡಿತು. ಅಂತಿಮವಾಗಿ ಟೀಂ ಇಂಡಿಯಾ ಕಲೆಹಾಕಿದ್ದು ಕೇವಲ 159 ರನ್ ಮಾತ್ರ. ಇದಕ್ಕಾಗಿ ಕಳೆದುಕೊಂಡಿದ್ದು ಬರೋಬ್ಬರಿ 9 ವಿಕೆಟ್.

ಸ್ಮೃತಿ ಮಂಧಾನ ರನೌಟ್

ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ನಿರೀಕ್ಷಿಸಿದ ಆರಂಭವನ್ನೇ ಪಡೆಯಿತು. ಆದರೆ ಥೈಲ್ಯಾಂಡ್ ತಂಡವನ್ನು ಕಡಿಮೆ ಅಂದಾಜು ಮಾಡಿ ರನೌಟ್​ಗೆ ಬಲಿಯಾದ ಸ್ಮೃತಿ ಮಂಧಾನ ಅವರ ವಿಕೆಟ್ ಪತನವೇ ಟೀಂ ಇಂಡಿಯಾಕ್ಕೆ ಎಚ್ಚರಿಕೆಯ ಕರೆಗಂಟೆಯಾಗಬೇಕಿತ್ತು. ಆದರೆ ಥೈಲ್ಯಾಂಡ್ ತಂಡವನ್ನು ಕಡೆಗಣಿಸಿದ ಭಾರತ ತಂಡಕ್ಕೆ ಎದುರಾಗಿದ್ದು ಮಾತ್ರ ಕನಸಲ್ಲೂ ಊಹಿಸದ ಆಘಾತ. ಮಂಧಾನ 19 ರನ್​ ಗಳಿಸಿ ರನೌಟ್​ಗೆ ಬಲಿಯಾದರೆ, ಪ್ರತೀಕಾ ರಾವಲ್ ಅವರ ವಿಕೆಟ್ ಕೂಡ 22 ರನ್​ಗಳಿಗೆ ಪತನವಾಯಿತು.

ಥೈಲ್ಯಾಂಡ್ ಬೌಲರ್​ಗಳ ಶಿಸ್ತುಬದ್ಧ ದಾಳಿ

ಆದಾಗ್ಯೂ ಪ್ರತೀಕಾ ಹಾಗೂ ಶಫಾಲಿ ಎರಡನೇ ವಿಕೆಟ್​ಗೆ ತಂಡವನ್ನು ಕೇವಲ 9 ಓವರ್​ಗಳಲ್ಲಿ 91 ರನ್​ಗಳಿಗೆ ಕೊಂಡೊಯ್ದರು. ಆದರೆ ಪ್ರತೀಕಾ ವಿಕೆಟ್ ಪತನದ ಬಳಿಕ ಟೀಂ ಇಂಡಿಯಾದ ಪೆವಿಲಿಯನ್ ಪರೇಡ್ ಶುರುವಾಯಿತು. ಟೀಂ ಇಂಡಿಯಾದ ಸತತ ವಿಕೆಟ್ ಪತನಕ್ಕೆ ಒಂದೆಡೆ ಥೈಲ್ಯಾಂಡ್ ಬೌಲರ್​ಗಳ ಶಿಸ್ತುಬದ್ಧ ದಾಳಿ ಕಾರಣವಾದರೆ, ಇನ್ನೊಂದೆಡೆ ಟೀಂ ಇಂಡಿಯಾ ಆಟಗಾರ್ತಿಯರ ಹುಂಬತನ ಪ್ರಮುಖ ಕಾರಣವಾಯಿತು.

ಕೈಕೊಟ್ಟ ಮಧ್ಯಮ ಕ್ರಮಾಂಕ

ನನ್ನ ಅನುಭವದ ಮುಂದೆ ಥೈಲ್ಯಾಂಡ್ ಯಾವ ಲೆಕ್ಕಕ್ಕೂ ಇಲ್ಲವೆಂಬ ರೀತಿಯಲ್ಲಿ ಬ್ಯಾಟಿಂಗ್‌ ಪ್ರದರ್ಶಿಸಲು ಹೋದ ಟೀಂ ಇಂಡಿಯಾ ಆಟಗಾರ್ತಿಯರಿಗೆ ಎದುರಾಗಿದ್ದು ಮಾತ್ರ ಬರಿ ನಿರಾಶೆ. ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ಇನ್ನಿಂಗ್ಸ್ 9 ರನ್​ಗಳಿಗೆ ಅಂತ್ಯವಾದರೆ, ಆ ಬಳಿಕ ಬಂದ ರಿಚಾ ಘೋಷ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾದರು. ಈ ನಡುವೆ ತಂಡದ ಪರ ಏಕಾಂಗಿ ಹೋರಾಟ ನೀಡಿದ ಶಫಾಲಿ ವರ್ಮಾ 36 ಎಸೆತಗಳಲ್ಲಿ 64 ರನ್ ಬಾರಿಸಿ ಔಟಾದರು.

ಥೈಲ್ಯಾಂಡ್ ತಂಡವನ್ನು ಲಘುವಾಗಿ ಪರಿಗಣಿಸಿ ವಿಕೆಟ್ ಕೈಚೆಲ್ಲಿದ ಸ್ಮೃತಿ

ಶಫಾಲಿ ಏಕಾಂಗಿ ಹೋರಾಟ

ಶಫಾಲಿ ವರ್ಮಾರಿಂದ ಈ ಸ್ಫೋಟಕ ಇನ್ನಿಂಗ್ಸ್ ಬರದೆ ಹೋಗಿದ್ದರೆ, ಟೀಂ ಇಂಡಿಯಾ 100 ರನ್ ದಾಟುವುದು ಕಷ್ಟವಾಗುತ್ತಿತ್ತು. ಇನ್ನು ಸ್ಮೃತಿ ರನೌಟ್​ನಿಂದ ಎಚ್ಚೆತ್ತುಕೊಳ್ಳದ ದೀಪ್ತಿ ಶರ್ಮಾ ಕೂಡ ಇಲ್ಲದ ರನ್ ಕದಿಯಲು ಹೋಗಿ ರನೌಟ್​ಗೆ ಬಲಿಯಾದರು. ಆ ಬಳಿಕ ಬಂದ ಬಂದವರೆಲ್ಲ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಕೊನೆಯಲ್ಲಿ ಕ್ರಾಂತಿ ಗೌಡ್ 15 ರನ್​ಗಳ ಇನ್ನಿಂಗ್ಸ್ ಆಡದೆ ಹೋಗಿದ್ದರೆ, ಟೀಂ ಇಂಡಿಯಾ 140 ರನ್​ಗಳ ಗಡಿ ಕೂಡ ದಾಟುತ್ತಿರಲಿಲ್ಲ. ಅಂತಿಮವಾಗಿ ಪಂದ್ಯದ ಫಲಿತಾಂಶ ಏನೆ ಬರಲಿ ಆದರೆ ಇಂದಿನ ಪಂದ್ಯದಲ್ಲಿ ಥೈಲ್ಯಾಂಡ್ ತೋರಿದ ಪ್ರದರ್ಶನ ನಿಜಕ್ಕೂ ಅಮೋಘವಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:42 pm, Sun, 30 August 26

Follow Us
ಪ್ರಕಾಶ್ ರಾಜ್​​​ಗೆ ಘೇರಾವ್ ಹಾಕಲು ಯತ್ನ: ಬಿಜೆಪಿ ಕಾರ್ಯಕರ್ತರು ವಶಕ್ಕೆ
ಪ್ರಕಾಶ್ ರಾಜ್​​​ಗೆ ಘೇರಾವ್ ಹಾಕಲು ಯತ್ನ: ಬಿಜೆಪಿ ಕಾರ್ಯಕರ್ತರು ವಶಕ್ಕೆ
ಮೋದಿ ಮೆಚ್ಚಿದ ಬೆಂಗಳೂರಿನ ನಿಂಗಮ್ಮನಿಗೆ ಒತ್ತುವರಿ ತೆರವು ಭಯ!
ಮೋದಿ ಮೆಚ್ಚಿದ ಬೆಂಗಳೂರಿನ ನಿಂಗಮ್ಮನಿಗೆ ಒತ್ತುವರಿ ತೆರವು ಭಯ!
ಬಿಗ್​​ಬಾಸ್ ಶುರುವಾಗಿ 13 ಸೀಸನ್ ಆದ್ರೂ ಗೆದ್ದವ್ರಿಗೆ 50 ಲಕ್ಷ ಮಾತ್ರ ಏಕೆ?
ಬಿಗ್​​ಬಾಸ್ ಶುರುವಾಗಿ 13 ಸೀಸನ್ ಆದ್ರೂ ಗೆದ್ದವ್ರಿಗೆ 50 ಲಕ್ಷ ಮಾತ್ರ ಏಕೆ?
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್: ಮತ್ತೆ ಮರುಪರಿಶೀಲನೆಗೆ ಮುಂದಾದ ಸರ್ಕಾರ!
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್: ಮತ್ತೆ ಮರುಪರಿಶೀಲನೆಗೆ ಮುಂದಾದ ಸರ್ಕಾರ!
ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲಿಗೆ!
ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲಿಗೆ!
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..