AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿರವಿಲ್ಲದ ಗಣಪತಿ: ಉತ್ತರಾಖಂಡದ ವಿಸ್ಮಯಕಾರಿ ದೇವಾಲಯದ ಬಗ್ಗೆ ಇಲ್ಲಿ ತಿಳಿಯಿರಿ

ಉತ್ತರಾಖಂಡದ ಮುಂಡಕಟಿಯಾದಲ್ಲಿರುವ ಅಪರೂಪದ ಗಣೇಶ ದೇವಾಲಯದಲ್ಲಿ ತಲೆಯಿಲ್ಲದ 'ಮುಂಡ' ರೂಪದಲ್ಲಿ ಗಣೇಶನನ್ನು ಪೂಜಿಸಲಾಗುತ್ತದೆ. ಪರಶಿವನು ಬಾಲ ಗಣೇಶನ ಶಿರಚ್ಛೇದ ಮಾಡಿದ ಸ್ಥಳ ಇದೇ ಎಂಬುದು ಪ್ರತೀತಿ. ಕೇದಾರನಾಥ ಯಾತ್ರೆಗೆ ಹೋಗುವ ಭಕ್ತರು ಈ ವಿಶಿಷ್ಟ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಾರೆ, ಇದು ಶಿವಪುರಾಣದಲ್ಲಿಯೂ ಉಲ್ಲೇಖಿತವಾಗಿದೆ.

ಶಿರವಿಲ್ಲದ ಗಣಪತಿ: ಉತ್ತರಾಖಂಡದ ವಿಸ್ಮಯಕಾರಿ ದೇವಾಲಯದ ಬಗ್ಗೆ ಇಲ್ಲಿ ತಿಳಿಯಿರಿ
ಶಿರವಿಲ್ಲದ ಗಣಪತಿ
ಅಕ್ಷತಾ ವರ್ಕಾಡಿ
|

Updated on: Sep 22, 2026 | 8:51 AM

Share

ಸಾಮಾನ್ಯವಾಗಿ ಗಜಮುಖ ಹೊಂದಿರುವ ಲಂಬೋದರನನ್ನು ಪೂಜಿಸಲಾಗುತ್ತದೆ. ಆದರೆ, ಇಲ್ಲೊಂದು ವಿಶಿಷ್ಟ ದೇವಾಲಯದಲ್ಲಿ ಯಾವುದೇ ತಲೆಯಿಲ್ಲದ, ಕೇವಲ ‘ಮುಂಡ’ (ದೇಹ) ರೂಪದಲ್ಲಿರುವ ಗಣೇಶನನ್ನು ಆರಾಧಿಸಲಾಗುತ್ತದೆ. ಈ ಅಪರೂಪದ ದೇವಾಲಯವು ದೇವಭೂಮಿ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಕೇದಾರ ಕಣಿವೆ ಪ್ರದೇಶದ ‘ಮುಂಡಕಟಿಯಾ’ (Mundkatiya) ಎಂಬ ಪುಟ್ಟ ಗ್ರಾಮದಲ್ಲಿದೆ. ಪವಿತ್ರ ಕೇದಾರನಾಥ ಕ್ಷೇತ್ರಕ್ಕೆ ಸಾಗುವ ಮಾರ್ಗದಲ್ಲಿ, ಸೋನಪ್ರಯಾಗದಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿ ಹಾಗೂ ಮಂದಾಕಿನಿ ನದಿಯ ದಡದಲ್ಲಿ ಪ್ರಕೃತಿಯ ಮಡಿಲಲ್ಲಿ ಈ ದೇವಾಲಯ ನೆಲೆಸಿದೆ. ಹಿಮಾಲಯದ ಹಿಮಭರಿತ ಶಿಖರಗಳ ನಡುವೆ ಇರುವ ಈ ಸ್ಥಳದ ಮಹಿಮೆಯ ಬಗ್ಗೆ ಪ್ರಾಚೀನ ಶಿವಪುರಾಣದಲ್ಲಿಯೂ ಉಲ್ಲೇಖವಿದೆ.

‘ಮುಂಡಕಟಿಯಾ’ ಹೆಸರಿನ ಹಿಂದಿನ ಪೌರಾಣಿಕ ಕಥೆ:

ಈ ದೇವಾಲಯದ ಹಿಂದೆ ಅತ್ಯಂತ ಸ್ವಾರಸ್ಯಕರವಾದ ಪೌರಾಣಿಕ ಹಿನ್ನೆಲೆಯಿದೆ. ಒಮ್ಮೆ ಪಾರ್ವತಿ ದೇವಿಯು ಸ್ನಾನಕ್ಕೆ ತೆರಳುವ ಮುನ್ನ, ತನಗೆ ರಕ್ಷಣೆ ನೀಡಲು ಯಾರೂ ಇಲ್ಲದ ಕಾರಣ, ತನಗೊಬ್ಬ ನಂಬಿಕಸ್ಥ ದ್ವಾರಪಾಲಕ ಬೇಕು ಎಂದು ಯೋಚಿಸುತ್ತಾಳೆ. ಅದರಂತೆ ಆಕೆ ತನ್ನ ದೇಹಕ್ಕೆ ಹಚ್ಚಿಕೊಂಡಿದ್ದ ಸುಗಂಧಭರಿತ ಧಾನ್ಯದ ಹಿಟ್ಟಿನಿಂದ (ಕೆಲವೆಡೆ ಅರಿಶಿನ ಮತ್ತು ಚಂದನದ ಹಿಟ್ಟು ಎನ್ನಲಾಗುತ್ತದೆ) ಬಾಲ ಗಣೇಶನನ್ನು ಸೃಷ್ಟಿಸಿ ಯಾರನ್ನೂ ಒಳಗೆ ಬಿಡದಂತೆ ಕಾವಲು ಕಾಯಲು ಆಜ್ಞಾಪಿಸಿದಳು. ತಾಯಿಯ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತಿದ್ದ ಬಾಲ ಗಣೇಶನು ಸ್ವತಃ ಪರಶಿವನನ್ನೇ ಒಳಗೆ ಹೋಗದಂತೆ ತಡೆದಾಗ, ಶಿವನು ಕೋಪಗೊಂಡು ತನ್ನ ತ್ರಿಶೂಲದಿಂದ ಗಣೇಶನ ಶಿರಚ್ಛೇದ ಮಾಡಿದನು.

ಇದನ್ನೂ ಓದಿ: ಮನೆಯಲ್ಲಿ ಬೆಳ್ಳಿಯ ಗಣೇಶ ಮೂರ್ತಿ ಇಡುವುದು ಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?

ಶಿವನು ಗಣೇಶನ ಶಿರಚ್ಛೇದ ಮಾಡಿದ ಪವಿತ್ರ ಸ್ಥಳ:

ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿ ‘ಮುಂಡ’ ಎಂದರೆ ತಲೆ ಹಾಗೂ ‘ಕಟಿಯಾ’ ಎಂದರೆ ಕತ್ತರಿಸುವುದು ಎಂದರ್ಥ. ಶಿವನು ಬಾಲ ಗಣೇಶನ ತಲೆಯನ್ನು ಕತ್ತರಿಸಿದ ಪವಿತ್ರ ಘಟನೆ ನಡೆದ ಸ್ಥಳ ಇದೇ ಎಂಬುದು ಸ್ಥಳೀಯ ಭಕ್ತರ ದೃಢ ನಂಬಿಕೆಯಾಗಿದೆ. ಈ ಪ್ರಮುಖ ಪೌರಾಣಿಕ ಘಟನೆಯ ಸಂಕೇತವಾಗಿ ಈ ಸ್ಥಳಕ್ಕೆ ‘ಮುಂಡಕಟಿಯಾ’ ಎಂಬ ಹೆಸರು ಬಂದಿದೆ.

ಕೇದಾರನಾಥ ಯಾತ್ರಿಕರ ಪ್ರಮುಖ ಆಧ್ಯಾತ್ಮಿಕ ಕೇಂದ್ರ:

ಅಪಾರ ಆಧ್ಯಾತ್ಮಿಕ ಶಕ್ತಿ ಹಾಗೂ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಈ ದೇವಾಲಯವು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಕ್ತರ ಗಮನ ಸೆಳೆಯುತ್ತಿದೆ. ಕೇದಾರನಾಥ ಮತ್ತು ಗೌರಿಕುಂಡಕ್ಕೆ ಪ್ರಯಾಣ ಬೆಳೆಸುವ ಭಕ್ತರು ಈ ಮುಂಡಕತಿಯಾ ದೇವಾಲಯದಲ್ಲಿ ಕ್ಷಣಕಾಲ ನಿಂತು, ತಲೆಯಿಲ್ಲದ ವಿಘ್ನೇಶ್ವರನಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಪಡೆಯುತ್ತಾರೆ. ಶತಮಾನಗಳ ಇತಿಹಾಸ ಹೊಂದಿರುವ ಈ ವಿಸ್ಮಯಕಾರಿ ದೇವಾಲಯವು ಇಂದು ಜಗತ್ತಿನಾದ್ಯಂತ ಇರುವ ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಇಂದು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಗೆ ವಿಶೇಷ ದಿನ
ಇಂದು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಗೆ ವಿಶೇಷ ದಿನ
ಕೆಪಿಎಸ್​ಸಿ ನೇಮಕಾತಿ ಹಗರಣ: ಸಿಐಡಿ ತನಿಖೇಲಿ ಮತ್ತಷ್ಟು ಸ್ಫೋಟಕ ವಿಚಾರ ಬಯಲು
ಕೆಪಿಎಸ್​ಸಿ ನೇಮಕಾತಿ ಹಗರಣ: ಸಿಐಡಿ ತನಿಖೇಲಿ ಮತ್ತಷ್ಟು ಸ್ಫೋಟಕ ವಿಚಾರ ಬಯಲು
ಕೆಪಿಎಸ್​​ಸಿ ನೇಮಕಾತಿ ಹಗರಣ: 1.5 ಕೋಟಿ, 22 ಲಕ್ಷದ ಚಿನ್ನಾಭರಣ ಜಪ್ತಿ
ಕೆಪಿಎಸ್​​ಸಿ ನೇಮಕಾತಿ ಹಗರಣ: 1.5 ಕೋಟಿ, 22 ಲಕ್ಷದ ಚಿನ್ನಾಭರಣ ಜಪ್ತಿ
ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ‘ಬಿಗ್ ಬಾಸ್ ಕನ್ನಡ 13’ ಶೋ ಸ್ಪರ್ಧಿಗಳು
ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ‘ಬಿಗ್ ಬಾಸ್ ಕನ್ನಡ 13’ ಶೋ ಸ್ಪರ್ಧಿಗಳು
ಕೊಪ್ಪಳದಲ್ಲಿ ಕೋತಿಯ ಚೇಷ್ಟೆಯಿಂದ ಪ್ರಾಣ ಕಳೆದುಕೊಂಡ 91 ವರ್ಷದ ಅಜ್ಜಿ!
ಕೊಪ್ಪಳದಲ್ಲಿ ಕೋತಿಯ ಚೇಷ್ಟೆಯಿಂದ ಪ್ರಾಣ ಕಳೆದುಕೊಂಡ 91 ವರ್ಷದ ಅಜ್ಜಿ!
ಗುಜರಾತ್‌ನಲ್ಲಿ ಭಕ್ತರಿಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹಚ್ಚಿದ ಜನರು!
ಗುಜರಾತ್‌ನಲ್ಲಿ ಭಕ್ತರಿಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹಚ್ಚಿದ ಜನರು!
‘ದಸರಾದಲ್ಲಿ ಕಂಬಳ ಆಯೋಜಿಸುವುದು ಬೇಡ’ ಎಂದ ಪ್ರಮೋದಾದೇವಿ ಒಡೆಯರ್
‘ದಸರಾದಲ್ಲಿ ಕಂಬಳ ಆಯೋಜಿಸುವುದು ಬೇಡ’ ಎಂದ ಪ್ರಮೋದಾದೇವಿ ಒಡೆಯರ್
ಸ್ಯಾಂಡಲ್​ವುಡ್ ಮಯೂರ ಎಂಬ ಬಿರುದು ನೀಡಿದ್ದಕ್ಕೆ ಕಾರಣ ತಿಳಿಸಿದ ವಿಜಯ್
ಸ್ಯಾಂಡಲ್​ವುಡ್ ಮಯೂರ ಎಂಬ ಬಿರುದು ನೀಡಿದ್ದಕ್ಕೆ ಕಾರಣ ತಿಳಿಸಿದ ವಿಜಯ್
ಕಬ್ಬನ್ ಪಾರ್ಕ್​ಗೂ ಪ್ರವೇಶ ಶುಲ್ಕ?; ತೋಟಗಾರಿಕೆ ಇಲಾಖೆ ಚಿಂತನೆ
ಕಬ್ಬನ್ ಪಾರ್ಕ್​ಗೂ ಪ್ರವೇಶ ಶುಲ್ಕ?; ತೋಟಗಾರಿಕೆ ಇಲಾಖೆ ಚಿಂತನೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ