Women’s T20 Asia Cup: ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್‌

Women's T20 Asia Cup 2026: ದುಬೈನಲ್ಲಿ ಇಂದಿನಿಂದ (ಆಗಸ್ಟ್ 30) ಆರಂಭವಾದ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಭಾರತ ತಂಡ ತನ್ನ ಅಭಿಯಾನವನ್ನು ಥೈಲ್ಯಾಂಡ್ ವಿರುದ್ಧ ಆರಂಭಿಸಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಲು ಎದುರು ನೋಡುತ್ತಿದೆ. ಗಾಯಗೊಂಡ ಜೆಮಿಮಾ ರಾಡ್ರಿಗಸ್ ಬದಲಿಗೆ ಪ್ರತಿಕಾ ರಾವಲ್ ಟಿ20ಗೆ ಪದಾರ್ಪಣೆ ಮಾಡಿದ್ದು, ತಮ್ಮ ಆಯ್ಕೆಯನ್ನು ಸಾಬೀತುಪಡಿಸುವ ಒತ್ತಡದಲ್ಲಿದ್ದಾರೆ. ಥೈಲ್ಯಾಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.

Womens T20 Asia Cup: ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್‌
India Women

Updated on: Aug 30, 2026 | 8:01 PM

ದುಬೈನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ(Women’s Asia Cup 2026) ಭಾರತ ತಂಡ ಇಂದಿನಿಂದ ಅಂದರೆ ಆಗಸ್ಟ್ 30 ರಿಂದ ತನ್ನ ಅಭಿಯಾನವನ್ನು ಆರಂಭಿಸುತ್ತಿದೆ. ತನ್ನ ಮೊದಲ ಪಂದ್ಯದಲ್ಲಿ ಥೈಲ್ಯಾಂಡ್ (India vs Thailand) ಮಹಿಳಾ ತಂಡವನ್ನು ಎದುರಿಸುತ್ತಿರುವ ಹರ್ಮನ್‌ಪ್ರೀತ್ ಕೌರ್ ಪಡೆ ಗೆಲುವಿನೊಂದಿಗೆ ಟೂರ್ನಿಯನ್ನು ಆರಂಭಿಸಲು ಎದುರು ನೋಡುತ್ತಿದೆ. ಟೀಂ ಇಂಡಿಯಾಕ್ಕೆ ಹೋಲಿಸಿದರೆ, ಥೈಲ್ಯಾಂಡ್ ತಂಡ ಅಷ್ಟು ಬಲಿಷ್ಠವಾಗಿಲ್ಲದಿದ್ದರೂ ಯಾವುದೇ ತಂಡವನ್ನು ಕಡಿಮೆ ಅಂದಾಜು ಮಾಡುವಂತಿಲ್ಲ. ಪಂದ್ಯದ ದಿನದಂದು ಯಾರು ಉತ್ತಮ ಪ್ರದರ್ಶನ ನೀಡುತ್ತಾರೋ ಅವರಿಗೆ ಗೆಲುವು ಖಚಿತ. ಹೀಗಾಗಿ ಟೀಂ ಇಂಡಿಯಾ ಪ್ರತಿ ಪಂದ್ಯದಲ್ಲೂ ತನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಬೇಕಿದೆ.

ಪ್ರತಿಕಾ ರಾವಲ್ ಪಾದಾರ್ಪಣೆ

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಉಭಯ ತಂಡಗಳ ನಡುವಿನ ಈ ಪಂದ್ಯದಲ್ಲಿ ಟಾಸ್ ಗೆದ್ದ ಥೈಲ್ಯಾಂಡ್ ಬೌಲಿಂಗ್ ಆಯ್ದುಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್‌ ಮಾಡಲಿದೆ. ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಟೀಂ ಇಂಡಿಯಾ ಪರ ಪ್ರತಿಕಾ ರಾವಲ್​ಗೆ ಟಿ20 ಕ್ರಿಕೆಟ್​ಗೆ ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕಿದೆ. ಇದಕ್ಕೆ ಕಾರಣ ತಂಡದ ಅನುಭವಿ ಬ್ಯಾಟರ್ ಜೆಮಿಮಾ ರಾಡ್ರಿಗಸ್ ಗಾಯದಿಂದಾಗಿ ಈ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಬದಲಿಗೆ ಪ್ರತೀಕಾ ರಾವಲ್​ಗೆ ಆಡುವ ಅವಕಾಶ ಸಿಕ್ಕಿದೆ.

ಏಕದಿನ ತಂಡದಲ್ಲಿ ತಮ್ಮ ಛಾಪು ಮೂಡಿಸಿರುವ ಪ್ರತೀಕಾ ರಾವಲ್ ಅವರನ್ನು ಟಿ20 ತಂಡಕ್ಕೆ ಆಯ್ಕೆ ಮಾಡಿರುವ ಬಗ್ಗೆ ಪ್ರಶ್ನೆಗಳು ಎದ್ದಿರುವುದರಿಂದ ಅವರು ಈಗ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಬೇಕಾಗಿದೆ. ಪ್ರತೀಕಾ ಅವರ ಸ್ಟ್ರೈಕ್ ರೇಟ್ ಪ್ರಶ್ನಾರ್ಹವಾಗಿದ್ದು, ಈಗ ಅವರು ತಮ್ಮ ಟೀಕಾಕಾರರ ಬಾಯಿ ಮುಚ್ಚಿಸಬೇಕಾಗುತ್ತದೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆಗಳಿಲ್ಲ.

ಏಷ್ಯಾಕಪ್​ನಲ್ಲಿ ಕೈಕುಲುಕುತ್ತಾರಾ ಭಾರತ- ಪಾಕ್ ಆಟಗಾರ್ತಿಯರು?

ಉಭಯ ತಂಡಗಳ ಪ್ಲೇಯಿಂಗ್ 11

ಟೀಂ ಇಂಡಿಯಾ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಪ್ರತೀಕಾ ರಾವಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಭಾರತಿ ಫುಲ್ಮಾಲಿ, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪ್ರೇಮಾ ರಾವತ್, ಎನ್ ಶ್ರೀ ಚರಣಿ, ಕ್ರಾಂತಿ ಗೌಡ್, ನಂದಿನಿ ಶರ್ಮಾ.

ಥೈಲ್ಯಾಂಡ್: ನತ್ತಕನ್ ಚಂತಮ್, ನನ್ನಪತ್ ಕೊಂಚರೊಯೆಂಕೈ (ವಿಕೆಟ್ ಕೀಪರ್), ಚನಿದಾ ಸುತ್ತಿರುಯಾಂಗ್, ಸುಲೀಪೋರ್ನ್ ಲಾವೋಮಿ, ಒನ್ನಿಚಾ ಕಮ್ಚೊಂಫು, ತಿಪಾಟ್ಚಾ ಪುಟ್ಟವಾಂಗ್ (ನಾಯಕಿ), ಫನ್ನಿತಾ ಮಾಯಾ, ಅಫಿಸಾರಾ ಸುವಾಂಚೊನ್ರಾತಿ, ಸುನಿದಾ ಚತುರೋಂಗ್ರಟ್ಟನಾ, ನನ್ನಫಟ್ ಚೈಹಾನ್ ಮತ್ತು ನವೋಮಿ ಹ್ಯಾಮಿಲ್ಟನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us