ಮಹಿಳಾ ಟಿ20 ವಿಶ್ವಕಪ್ನ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡವು ಮುಗ್ಗರಿಸಿದೆ. ಶಾರ್ಜಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ 9 ರನ್ಗಳಿಂದ ಸೋಲೊಪ್ಪಿಕೊಂಡಿದೆ. ಈ ಸೋಲಿನೊಂದಿಗೆ ಭಾರತ ತಂಡದ ಟಿ20 ವಿಶ್ವಕಪ್ ಕನಸು ಬಹುತೇಕ ಕಮರಿದೆ. ಆದರೆ ಹೊರಬಿದ್ದಿಲ್ಲ ಎಂಬುದು ವಿಶೇಷ. ಅಂದರೆ ಇಂದು ನಡೆಯುವ ಪಾಕಿಸ್ತಾನ್ ಹಾಗೂ ನ್ಯೂಝಿಲೆಂಡ್ ನಡುವಣ ಪಂದ್ಯದಲ್ಲಿ ಟೀಮ್ ಇಂಡಿಯಾದ ಟಿ20 ವಿಶ್ವಕಪ್ ಭವಿಷ್ಯ ನಿರ್ಧಾರವಾಗಲಿದೆ.
ಗ್ರೂಪ್-ಎ ಅಂಕ ಪಟ್ಟಿಯಲ್ಲಿ 8 ಅಂಕಗಳನ್ನು ಕಲೆಹಾಕಿರುವ ಆಸ್ಟ್ರೇಲಿಯಾ ತಂಡ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಇನ್ನು ದ್ವಿತೀಯ ಸ್ಥಾನಕ್ಕಾಗಿ ಈಗ ಭಾರತ, ಪಾಕಿಸ್ತಾನ್ ಹಾಗೂ ನ್ಯೂಝಿಲೆಂಡ್ ತಂಡಗಳ ನಡುವೆ ಪೈಪೋಟಿ ಇದೆ.
ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ +0.322 ನೆಟ್ ರನ್ ರೇಟ್ ಹೊಂದಿರುವ ಟೀಮ್ ಇಂಡಿಯಾ ದ್ವಿತೀಯ ಸ್ಥಾನದಲ್ಲಿದೆ. ಹಾಗೆಯೇ +0.282 ನೆಟ್ ರನ್ ರೇಟ್ ಹೊಂದಿರುವ ನ್ಯೂಝಿಲೆಂಡ್ ತೃತೀಯ ಸ್ಥಾನದಲ್ಲಿದೆ. ಇನ್ನು -0.488 ನೆಟ್ ರನ್ ರೇಟ್ ಹೊಂದಿರುವ ಪಾಕಿಸ್ತಾನ್ ನಾಲ್ಕನೇ ಸ್ಥಾನದಲ್ಲಿದೆ.
ಇಲ್ಲಿ ಭಾರತ (+0.322) ಮತ್ತು ನ್ಯೂಝಿಲೆಂಡ್ (+0.282) ತಂಡಗಳಿಗೆ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿದ್ದರೂ ಅದನ್ನು ನಿರ್ಧರಿಸುವುದು ಪಾಕಿಸ್ತಾನ್ ತಂಡ ಎಂಬುದು ವಿಶೇಷ. ಅಂದರೆ ನ್ಯೂಝಿಲೆಂಡ್ ಹಾಗೂ ಪಾಕಿಸ್ತಾನ್ ನಡುವಣ ಪಂದ್ಯದ ಫಲಿತಾಂಶವೇ ಇಲ್ಲಿ ನಿರ್ಣಾಯಕ.
ಈ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಪಾಕಿಸ್ತಾನ್ ತಂಡ ಗೆದ್ದರೆ, ನೆಟ್ ರನ್ ರೇಟ್ ನೆರವಿನಿಂದ ಭಾರತ ತಂಡ ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ನ್ಯೂಝಿಲೆಂಡ್ ಗೆದ್ದರೆ 6 ಅಂಕಗಳೊಂದಿಗೆ ಸೆಮೀಸ್ಗೆ ಎಂಟ್ರಿ ಕೊಡಲಿದೆ. ಇತ್ತ ಟೀಮ್ ಇಂಡಿಯಾ ಹೊರಬೀಳಲಿದೆ.
ಇನ್ನು ನ್ಯೂಝಿಲೆಂಡ್ ವಿರುದ್ಧ ಭಾರೀ ಅಂತರದಿಂದ ಗೆದ್ದರೆ ಪಾಕಿಸ್ತಾನ್ ತಂಡಕ್ಕೂ ಸೆಮಿಫೈನಲ್ಗೆ ಪ್ರವೇಶಿಸುವ ಅವಕಾಶವಿದೆ. ಹಾಗಿದ್ರೆ ಈ ಮೂರು ತಂಡಗಳು ಸೆಮಿಫೈನಲ್ಗೆ ಪ್ರವೇಶಿಸುವುದು ಹೇಗೆ ಎಂದು ನೋಡೋಣ…
ಇದನ್ನೂ ಓದಿ: ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಟೀಮ್ ಇಂಡಿಯಾ
ಅಂದರೆ ಇಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ಗೆ ಅರ್ಹತೆ ಪಡೆಯಬೇಕಿದ್ದರೆ ನ್ಯೂಝಿಲೆಂಡ್ ತಂಡ ಸೋಲಬೇಕು. ಪಾಕಿಸ್ತಾನ್ ತಂಡ ಭಾರೀ ಅಂತರದಿಂದ ಗೆಲ್ಲಬಾರದು. ಹೀಗಾದರೆ ಭಾರತ ತಂಡವು ನೆಟ್ ರನ್ ರೇಟ್ನಲ್ಲಿ ಎರಡೂ ತಂಡಗಳನ್ನು ಹಿಂದಿಕ್ಕಿ ಸೆಮಿಫೈನಲ್ಗೆ ಪ್ರವೇಶಿಸಬಹುದು.