T20 World Cup 2026
ಕೆಲವು ದಿನಗಳ ಹಿಂದೆ ಮಹಿಳೆಯರ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟಿಸಿದ್ದ ಐಸಿಸಿ, ಇದೀಗ ಮುಂದಿನ ವರ್ಷ ಅಂದರೆ 2026 ರಲ್ಲಿ ನಡೆಯಲ್ಲಿರುವ ಮಹಿಳಾ ಟಿ20 ವಿಶ್ವಕಪ್ ವೇಳಾಪಟ್ಟಿಯನ್ನು (Women’s T20 World Cup 2026) ಸಹ ಬಿಡುಗಡೆ ಮಾಡಿದೆ. ಪ್ರಕಟಗೊಂಡಿರುವ ವೇಳಾಪಟ್ಟಿಯ ಪ್ರಕಾರ ಪಂದ್ಯಾವಳಿ ಜೂನ್ 12 ರಂದು ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯ ಜುಲೈ 5 ರಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ. ಈ ವೇಳಾಪಟ್ಟಿಯಲ್ಲಿನ ದೊಡ್ಡ ಸುದ್ದಿಯೆಂದರೆ ಭಾರತ ಮತ್ತು ಪಾಕಿಸ್ತಾನ (India vs Pakistan) ಈ ಪಂದ್ಯಾವಳಿಯಲ್ಲಿ ಒಂದೇ ಗುಂಪಿನಲ್ಲಿವೆ. ಈ ಪಂದ್ಯಾವಳಿಯಲ್ಲಿ ಎರಡೂ ತಂಡಗಳು ಯಾವಾಗ ಮುಖಾಮುಖಿಯಾಗುತ್ತವೆ ಮತ್ತು ಈ ಎರಡೂ ತಂಡಗಳು ಎಷ್ಟು ಬಾರಿ ಮುಖಾಮುಖಿಯಾಗಬಹುದು ಎಂಬುದರ ವಿವರ ಇಲ್ಲಿದೆ.
ಜೂನ್ 14 ರಂದು ಭಾರತ-ಪಾಕ್ ಫೈಟ್
2026 ರ ಮಹಿಳಾ ಟಿ20 ವಿಶ್ವಕಪ್‌ನ ಮಹತ್ವದ ಪಂದ್ಯವು ಭಾರತ ಮತ್ತು ಪಾಕಿಸ್ತಾನ ನಡುವೆ ಜೂನ್ 14 ರಂದು ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2:30 ಕ್ಕೆ ಆರಂಭವಾಗಲಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸುತ್ತಿದ್ದು, ತಲಾ 6 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಅದರಂತೆ ಭಾರತ ಮತ್ತು ಪಾಕಿಸ್ತಾನ ಜೊತೆಗೆ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಎರಡು ಅರ್ಹತಾ ತಂಡಗಳು ಗುಂಪು 1 ರಲ್ಲಿ ಸ್ಥಾನ ಪಡೆದಿದ್ದರೆ, ಗುಂಪು 2 ರಲ್ಲಿ ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಎರಡು ಅರ್ಹತಾ ತಂಡಗಳು ಸೇರಿವೆ.
ಟಿ20 ವಿಶ್ವಕಪ್ ವೇಳಾಪಟ್ಟಿ
- ಶುಕ್ರವಾರ ಜೂನ್ 12: ಇಂಗ್ಲೆಂಡ್ vs ಶ್ರೀಲಂಕಾ, ಎಡ್ಜ್‌ಬಾಸ್ಟನ್
- ಜೂನ್ 13 ಶನಿವಾರ: ಕ್ವಾಲಿಫೈಯರ್ಸ್ vs ಕ್ವಾಲಿಫೈಯರ್ಸ್, ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ
- ಜೂನ್ 13 ಶನಿವಾರ: ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ, ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ
- ಜೂನ್ 13 ಶನಿವಾರ: ವೆಸ್ಟ್ ಇಂಡೀಸ್ vs ನ್ಯೂಜಿಲೆಂಡ್, ಹ್ಯಾಂಪ್‌ಶೈರ್ ಬೌಲ್
- ಜೂನ್ 14 ಭಾನುವಾರ: ಕ್ವಾಲಿಫೈಯರ್ vs ಕ್ವಾಲಿಫೈಯರ್, ಎಡ್ಜ್‌ಬಾಸ್ಟನ್
- ಜೂನ್ 14 ಭಾನುವಾರ: ಭಾರತ vs ಪಾಕಿಸ್ತಾನ, ಎಡ್ಜ್‌ಬಾಸ್ಟನ್
- ಮಂಗಳವಾರ ಜೂನ್ 16: ನ್ಯೂಜಿಲೆಂಡ್ vs ಶ್ರೀಲಂಕಾ, ಹ್ಯಾಂಪ್‌ಶೈರ್ ಬೌಲ್
- ಮಂಗಳವಾರ ಜೂನ್ 16: ಇಂಗ್ಲೆಂಡ್ vs ಕ್ವಾಲಿಫೈಯರ್ ತಂಡ, ಹ್ಯಾಂಪ್‌ಶೈರ್ ಬೌಲ್
- ಬುಧವಾರ ಜೂನ್ 17: ಆಸ್ಟ್ರೇಲಿಯಾ vs ಕ್ವಾಲಿಫೈಯರ್ ತಂಡ, ಹೆಡಿಂಗ್ಲೆ
- ಬುಧವಾರ ಜೂನ್ 17: ಭಾರತ vs ಕ್ವಾಲಿಫೈಯರ್ ತಂಡ, ಹೆಡಿಂಗ್ಲೆ
- ಬುಧವಾರ ಜೂನ್ 17: ದಕ್ಷಿಣ ಆಫ್ರಿಕಾ vs ಪಾಕಿಸ್ತಾನ, ಎಡ್ಜ್‌ಬಾಸ್ಟನ್
- ಗುರುವಾರ ಜೂನ್ 18: ವೆಸ್ಟ್ ಇಂಡೀಸ್ vs ಕ್ವಾಲಿಫೈಯರ್ ತಂಡ, ಹೆಡಿಂಗ್ಲೆ
- ಶುಕ್ರವಾರ ಜೂನ್ 19: ನ್ಯೂಜಿಲೆಂಡ್ vs ಕ್ವಾಲಿಫೈಯರ್ ತಂಡ, ಹ್ಯಾಂಪ್‌ಶೈರ್ ಬೌಲ್
- ಜೂನ್ 19 ಶನಿವಾರ: ಆಸ್ಟ್ರೇಲಿಯಾ vs ಕ್ವಾಲಿಫೈಯರ್ ತಂಡ, ಹ್ಯಾಂಪ್‌ಶೈರ್ ಬೌಲ್
- ಜೂನ್ 19 ಶನಿವಾರ: ಪಾಕಿಸ್ತಾನ vs ಕ್ವಾಲಿಫೈಯರ್ ತಂಡ, ಹ್ಯಾಂಪ್‌ಶೈರ್ ಬೌಲ್
- ಜೂನ್ 20 ಶನಿವಾರ: ಇಂಗ್ಲೆಂಡ್ vs ಕ್ವಾಲಿಫೈಯರ್ ತಂಡ, ಹೆಡಿಂಗ್ಲೆ
- ಜೂನ್ 21 ಭಾನುವಾರ: ವೆಸ್ಟ್ ಇಂಡೀಸ್ vs ಶ್ರೀಲಂಕಾ, ಬ್ರಿಸ್ಟಲ್ ಕೌಂಟಿ ಮೈದಾನ
- ಜೂನ್ 21 ಭಾನುವಾರ: ದಕ್ಷಿಣ ಆಫ್ರಿಕಾ vs ಭಾರತ, ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ
- ಮಂಗಳವಾರ ಜೂನ್ 23: ನ್ಯೂಜಿಲೆಂಡ್ vs ಕ್ವಾಲಿಫೈಯರ್ ತಂಡ, ಬ್ರಿಸ್ಟಲ್ ಕೌಂಟಿ ಮೈದಾನ
- ಮಂಗಳವಾರ ಜೂನ್ 23: ಶ್ರೀಲಂಕಾ vs ಕ್ವಾಲಿಫೈಯರ್ ತಂಡ, ಬ್ರಿಸ್ಟಲ್ ಕೌಂಟಿ ಮೈದಾನ
- ಮಂಗಳವಾರ ಜೂನ್ 23: ಆಸ್ಟ್ರೇಲಿಯಾ vs ಪಾಕಿಸ್ತಾನ, ಹೆಡಿಂಗ್ಲೆ
- ಬುಧವಾರ ಜೂನ್ 24: ಇಂಗ್ಲೆಂಡ್ vs ವೆಸ್ಟ್ ಇಂಡೀಸ್, ಲಾರ್ಡ್ಸ್ ಕ್ರಿಕೆಟ್ ಮೈದಾನ
- ಗುರುವಾರ ಜೂನ್ 25: ಭಾರತ vs ಕ್ವಾಲಿಫೈಯರ್ ತಂಡ, ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ
- ಗುರುವಾರ ಜೂನ್ 25: ದಕ್ಷಿಣ ಆಫ್ರಿಕಾ v ಕ್ವಾಲಿಫೈಯರ್ ತಂಡ, ಬ್ರಿಸ್ಟಲ್ ಕೌಂಟಿ ಮೈದಾನ
- ಶುಕ್ರವಾರ ಜೂನ್ 26: ಶ್ರೀಲಂಕಾ vs ಕ್ವಾಲಿಫೈಯರ್, ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ
- ಶನಿವಾರ ಜೂನ್ 27: ಪಾಕಿಸ್ತಾನ vs ಕ್ವಾಲಿಫೈಯರ್, ಬ್ರಿಸ್ಟಲ್ ಕೌಂಟಿ ಮೈದಾನ
- ಜೂನ್ 27 ಶನಿವಾರ: ವೆಸ್ಟ್ ಇಂಡೀಸ್ vs ಕ್ವಾಲಿಫೈಯರ್ ತಂಡ, ಬ್ರಿಸ್ಟಲ್ ಕೌಂಟಿ ಮೈದಾನ
- ಶನಿವಾರ ಜೂನ್ 27: ಇಂಗ್ಲೆಂಡ್ vs ನ್ಯೂಜಿಲೆಂಡ್, ದಿ ಓವಲ್
- ಜೂನ್ 28 ಭಾನುವಾರ: ದಕ್ಷಿಣ ಆಫ್ರಿಕಾ vs ಕ್ವಾಲಿಫೈಯರ್ ತಂಡ, ಲಾರ್ಡ್ಸ್ ಕ್ರಿಕೆಟ್ ಮೈದಾನ
- ಭಾನುವಾರ ಜೂನ್ 28: ಆಸ್ಟ್ರೇಲಿಯಾ vs ಭಾರತ, ಲಾರ್ಡ್ಸ್ ಕ್ರಿಕೆಟ್ ಮೈದಾನ
- ಮಂಗಳವಾರ ಜೂನ್ 30: ಸೆಮಿಫೈನಲ್ 1, ದಿ ಓವಲ್
- ಗುರುವಾರ ಜುಲೈ 2: ಸೆಮಿಫೈನಲ್ 2, ದಿ ಓವಲ್
- ಜುಲೈ 5 ಭಾನುವಾರ: ಫೈನಲ್ ಪಂದ್ಯ, ಲಾರ್ಡ್ಸ್ ಕ್ರಿಕೆಟ್ ಮೈದಾನ