IND vs ENG: ಮೊದಲ ಟೆಸ್ಟ್ಗೂ ಮುನ್ನ ತಂಡ ಸೇರಿಕೊಂಡ ಗೌತಮ್ ಗಂಭೀರ್
Gautam Gambhir Joins Team India for England Test Series: ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಮುಂಚಿತವಾಗಿ ತಂಡವನ್ನು ಸೇರಿಕೊಂಡಿದ್ದಾರೆ. ಇದು ತಂಡದ ಮನೋಬಲ ಹೆಚ್ಚಿಸಿದೆ. ಶುಭ್‌ಮನ್ ಗಿಲ್ ನಾಯಕತ್ವ ವಹಿಸಿದ್ದು, ರಿಷಭ್ ಪಂತ್ ಉಪನಾಯಕರಾಗಿದ್ದಾರೆ. ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಭಾರತಕ್ಕೆ ದೊಡ್ಡ ಸವಾಲು. ಈ ಸರಣಿಯ ಗೆಲುವು 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಪ್ರಮುಖವಾಗಿದೆ.

ಜೂನ್ 20 ರಿಂದ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಮುಂಚಿತವಾಗಿ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಜೂನ್ 18 ರಂದು ತರಬೇತಿಯ ಸಮಯದಲ್ಲಿ ಗೌತಮ್ ಗಂಭೀರ್ ಟೀಂ ಇಂಡಿಯಾ (Team India) ಜೊತೆ ಮಾತನಾಡುತ್ತಿರುವುದು ಕಂಡುಬಂದಿದೆ. ಗಂಭೀರ್ ಅವರು ತಂಡಕ್ಕೆ ಮತ್ತೆ ಸೇರ್ಪಡೆಗೊಂಡಿರುವುದು ಭಾರತೀಯ ಆಟಗಾರರ ಮನೋಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಲೀಡ್ಸ್‌ನಲ್ಲಿ ನಡೆಯಲಿದೆ. ಈ ಟೆಸ್ಟ್ ಸರಣಿಯಲ್ಲಿ, ಟೀಂ ಇಂಡಿಯಾವನ್ನು ಶುಭ್‌ಮನ್ ಗಿಲ್ (Shubman Gill) ಮುನ್ನಡೆಸುತ್ತಿದ್ದು, ರಿಷಭ್ ಪಂತ್ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ.
ತಂಡ ಸೇರಿಕೊಂಡ ಗಂಭೀರ್
ಗೌತಮ್ ಗಂಭೀರ್ ಜೂನ್ 11 ರಂದು ಭಾರತಕ್ಕೆ ವಾಪಸ್ಸಾಗಿದ್ದರು. ವಾಸ್ತವವಾಗಿ ಅವರ ತಾಯಿಗೆ ಹೃದಯಾಘಾತವಾಗಿತ್ತು, ಇದರಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಕಾರಣಕ್ಕಾಗಿ, ಭಾರತ ಎ ವಿರುದ್ಧ ನಡೆದ ಇಂಟ್ರಾ-ಸ್ಕ್ವಾಡ್ ಪಂದ್ಯದಲ್ಲಿ ಗೌತಮ್ ಗಂಭೀರ್ ಟೀಂ ಇಂಡಿಯಾ ಜೊತೆ ಇರಲಿಲ್ಲ. ಈಗ ಗೌತಮ್ ಗಂಭೀರ್ ಅವರ ತಾಯಿಯ ಆರೋಗ್ಯ ಮೊದಲಿಗಿಂತ ಉತ್ತಮವಾಗಿದ್ದು, ಅದಕ್ಕಾಗಿಯೇ ಅವರು ಮೊದಲ ಟೆಸ್ಟ್ ಪಂದ್ಯಕ್ಕೂ ಮೊದಲು ಮತ್ತೆ ಟೀಂ ಇಂಡಿಯಾವನ್ನು ಸೇರಿಕೊಂಡಿದ್ದಾರೆ. ಗೌತಮ್ ಗಂಭೀರ್ ತಂಡದೊಂದಿಗೆ ಇಲ್ಲದಿದ್ದಾಗ, ಸಹಾಯಕ ತರಬೇತುದಾರರಾದ ಸೀತಾಂಶು ಕೊಟಕ್ ಮತ್ತು ರಯಾನ್ ಟೆನ್ ಡೋಸ್ಚೇಟ್ ತರಬೇತಿಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಅವರೊಂದಿಗೆ ಬೌಲಿಂಗ್ ಕೋಚ್ ಮೋರ್ನೆ ಮಾರ್ಕೆಲ್ ಕೂಡ ಪ್ರಮುಖ ಪಾತ್ರ ವಹಿಸಿದರು.
ಟೀಂ ಇಂಡಿಯಾಕ್ಕೆ ಕಠಿಣ ಗುರಿ
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಭಾರತ ತಂಡದ 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕೂಡ ಆರಂಭವಾಗಲಿದೆ. ಹೀಗಾಗಿ ಸರಣಿ ಗೆಲುವಿನೊಂದಿಗೆ 4ನೇ ಆವೃತ್ತಿಯನ್ನು ಆರಂಭಿಸುವ ಇರಾದೆಯಲ್ಲಿರುವ ಟೀಂ ಇಂಡಿಯಾದಲ್ಲಿ ಅನೇಕ ಪ್ರತಿಭಾವಂತ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ತಂಡದ ಆಟಗಾರರು ಇಂಗ್ಲೆಂಡ್ ವಿರುದ್ಧ ಎಲ್ಲಾ ವಿಭಾಗಗಳಲ್ಲಿಯೂ ಬಲಿಷ್ಠ ಕ್ರಿಕೆಟ್ ಆಡಬೇಕಾಗುತ್ತದೆ. ಹಾಗಾದರೆ ಮಾತ್ರ ಆಂಗ್ಲರನ್ನು ಅವರ ನೆಲದಲ್ಲೇ ಮಣಿಸಲು ಸಾಧ್ಯ, ಇಲ್ಲದಿದ್ದರೆ, ತಂಡಕ್ಕೆ ಎಂದಿನಂತೆ ನಿರಾಶೆ ಎದುರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
IND vs ENG: ಅಮ್ಮನನ್ನು ಐಸಿಯುನಲ್ಲೇ ಬಿಟ್ಟು ಇಂಗ್ಲೆಂಡ್ಗೆ ತೆರಳಲಿರುವ ಗೌತಮ್ ಗಂಭೀರ್
ಮುಖಾಮುಖಿ ದಾಖಲೆ
ಈ ಎರಡೂ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ಜುಲೈ 2 ರಿಂದ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದ್ದು, ಮೂರನೇ ಟೆಸ್ಟ್ ಜುಲೈ 10 ರಿಂದ ಲಂಡನ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ನಾಲ್ಕನೇ ಪಂದ್ಯ ಜುಲೈ 23 ರಿಂದ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದರೆ, ಐದನೇ ಮತ್ತು ಅಂತಿಮ ಟೆಸ್ಟ್ ಜುಲೈ 31 ರಿಂದ ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯಲಿದೆ. ಕಳೆದ 18 ವರ್ಷಗಳಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್‌ನಲ್ಲಿ ಒಂದೇ ಒಂದು ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಭಾರತ ಕೊನೆಯ ಬಾರಿಗೆ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ, 5 ಪಂದ್ಯಗಳ ಟೆಸ್ಟ್ ಸರಣಿ 2-2 ಡ್ರಾದಲ್ಲಿ ಕೊನೆಗೊಂಡಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
