ODI World Cup 2025: ಭಾರತದಲ್ಲಿ ನಡೆಯಲ್ಲಿರುವ ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ
Women’s ODI World Cup 2025: ಐಸಿಸಿ 2025ರ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್‌ನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್ನಲ್ಲಿ ಸೆಪ್ಟೆಂಬರ್ 30ರಿಂದ ನವೆಂಬರ್ 2ರವರೆಗೆ 28 ಲೀಗ್ ಪಂದ್ಯಗಳು ಮತ್ತು 3 ನಾಕೌಟ್ ಪಂದ್ಯಗಳು ನಡೆಯಲಿವೆ. ಭಾರತ-ಪಾಕಿಸ್ತಾನ ಪಂದ್ಯ ಅಕ್ಟೋಬರ್ 5ರಂದು ಕೊಲಂಬೊದಲ್ಲಿ ನಡೆಯಲಿದೆ. ಪಾಕಿಸ್ತಾನದ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಫೈನಲ್ ಪಂದ್ಯ ನವೆಂಬರ್ 2ರಂದು ನಡೆಯಲಿದೆ.

ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲ್ಲಿರುವ ಮಹಿಳೆಯರ ಏಕದಿನ ವಿಶ್ವಕಪ್ ( Women’s ODI World Cup 2025) ವೇಳಾಪಟ್ಟಿಯನ್ನು ಐಸಿಸಿ (ICC) ಇಂದು ಬಿಡುಗಡೆ ಮಾಡಿದೆ. ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್ ಸೆಪ್ಟೆಂಬರ್ 30 ರಂದು ಬೆಂಗಳೂರಿನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಈ ಪಂದ್ಯಾವಳಿಯಲ್ಲಿ 8 ತಂಡಗಳು ಭಾಗವಹಿಸಲಿದ್ದು, ಈ ಪಂದ್ಯಾವಳಿಯಲ್ಲಿ ಒಟ್ಟು 28 ಲೀಗ್ ಪಂದ್ಯಗಳು ನಡೆಯಲಿವೆ. ಇದರ ನಂತರ, ಮೂರು ನಾಕೌಟ್ ಪಂದ್ಯಗಳನ್ನು ಆಡಲಾಗುತ್ತದೆ. 2013 ರ ನಂತರ ಮೊದಲ ಬಾರಿಗೆ ಭಾರತದಲ್ಲಿ ಮಹಿಳಾ ಏಕದಿನ ವಿಶ್ವಕಪ್ ಆಯೋಜಿಸಲಾಗುತ್ತಿದ್ದು, ಈ ಪಂದ್ಯಾವಳಿಯ ಫೈನಲ್ ಪಂದ್ಯವು ನವೆಂಬರ್ 2 ರಂದು ನಡೆಯಲಿದೆ. ಇದಲ್ಲದೆ, ಪಾಕಿಸ್ತಾನದ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಉಭಯ ದೇಶಗಳ ತಂಡಗಳು ಇನ್ನು ಮುಂದೆ ಕ್ರಿಕೆಟ್ನಲ್ಲಿ ಮುಖಾಮುಖಿಯಾಗುವುದು ಅನುಮಾನ ಎನ್ನಲಾಗುತ್ತಿತ್ತು. ಆದರೆ ಐಸಿಸಿ ನಿಯಮಗಳಿಗೆ ಬದ್ಧರಾಗಿರುವ ಕಾರಣ ಟೀಂ ಇಂಡಿಯಾ, ಪಾಕಿಸ್ತಾನದ ವಿರುದ್ಧ ಪಂದ್ಯವನ್ನು ಆಡಲೇಬೇಕಾಗಿದೆ. ಹೀಗಾಗಿ ಏಕದಿನ ವಿಶ್ವಕಪ್ನಲ್ಲಿ ಉಭಯ ತಂಡಗಳ ನಡುವಿನ ಹೈವೋಲ್ಟೇಜ್ ಕದನ ಅಕ್ಟೋಬರ್ 5 ರಂದು ಕೊಲಂಬೊದಲ್ಲಿ ನಡೆಯಲಿದೆ.
ಪಾಕಿಸ್ತಾನ ಭಾರತದಲ್ಲಿ ಆಡುವುದಿಲ್ಲ
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು, ಪಾಕಿಸ್ತಾನ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಬಿಸಿಸಿಐ ಮತ್ತು ಪಿಸಿಬಿ ನಡುವಿನ ಹೈಬ್ರಿಡ್ ಮಾದರಿಯ ಒಪ್ಪಂದದ ಪ್ರಕಾರ, ಪಾಕಿಸ್ತಾನ ತಂಡ ತನ್ನೇಲ್ಲ ಪಂದ್ಯಗಳನ್ನು ಕೊಲಂಬೊದಲ್ಲಿ ಆಡುತ್ತದೆ. ಈ ವರ್ಷದ ಆರಂಭದಲ್ಲಿ, ಭಾರತವು ಚಾಂಪಿಯನ್ಸ್ ಟ್ರೋಫಿಯ ಎಲ್ಲಾ ಪಂದ್ಯಗಳನ್ನು ಪಾಕಿಸ್ತಾನದ ಬದಲಿಗೆ ದುಬೈನಲ್ಲಿ ಆಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನವು ಮುಂದಿನ ದಿನಗಳಲ್ಲಿ ಭಾರತದಲ್ಲಿ ಯಾವುದೇ ಪಂದ್ಯವನ್ನು ಆಡುವುದಿಲ್ಲ ಎಂದು ಪಿಸಿಬಿ ಹೇಳಿತ್ತು.
The countdown begins ⏳
The full schedule for the ICC Women’s Cricket World Cup 2025 is out 🗓
Full details ➡ https://t.co/lPlTaGmtat pic.twitter.com/JOsl2lQYpy
— ICC (@ICC) June 16, 2025
ನವೆಂಬರ್ 2 ರಂದು ಪ್ರಶಸ್ತಿ ಪಂದ್ಯ
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಅಕ್ಟೋಬರ್ 1 ರಂದು ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಇದು ತನ್ನ ಮೊದಲ ಪಂದ್ಯವನ್ನು ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಇದರ ನಂತರ, ತಂಡವು ಅಕ್ಟೋಬರ್ 8 ರಂದು ಕೊಲಂಬೊದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಪ್ರಮುಖ ಪಂದ್ಯವು ಅಕ್ಟೋಬರ್ 22 ರಂದು ಇಂದೋರ್‌ನಲ್ಲಿ ನಡೆಯಲಿದೆ.
ವಿಶ್ವಕಪ್ ಪಂದ್ಯಗಳು ಭಾರತದ ಬೆಂಗಳೂರು, ಇಂದೋರ್, ಗುವಾಹಟಿ, ವಿಶಾಖಪಟ್ಟಣ ಮತ್ತು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿವೆ. ಮೊದಲ ಸೆಮಿಫೈನಲ್ ಅಕ್ಟೋಬರ್ 29 ರಂದು ಗುವಾಹಟಿ ಅಥವಾ ಕೊಲಂಬೊದಲ್ಲಿ ನಡೆಯಲಿದೆ. ಎರಡನೇ ಸೆಮಿಫೈನಲ್ ಅಕ್ಟೋಬರ್ 30 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಫೈನಲ್ ಪಂದ್ಯ ನವೆಂಬರ್ 2 ರಂದು ಬೆಂಗಳೂರು ಅಥವಾ ಕೊಲಂಬೊದಲ್ಲಿ ನಡೆಯಲಿದೆ. ಪಾಕಿಸ್ತಾನದ ಮಹಿಳಾ ತಂಡ ಸೆಮಿಫೈನಲ್ ಮತ್ತು ಫೈನಲ್ ತಲುಪಿದರೆ, ಈ ಪಂದ್ಯಗಳನ್ನು ಕೊಲಂಬೊದಲ್ಲಿ ಆಯೋಜಿಸಲಾಗುತ್ತದೆ.
ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿ ಇಲ್ಲಿದೆ
| ದಿನಾಂಕ | ಮುಖಾಮುಖಿ | ಸ್ಥಳ | ಸಮಯ |
| ಸೆಪ್ಟೆಂಬರ್ 30 | ಭಾರತ vs ಶ್ರೀಲಂಕಾ | ಬೆಂಗಳೂರು | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 1 | ಆಸ್ಟ್ರೇಲಿಯಾ vs ನ್ಯೂಜಿಲೆಂಡ್ | ಇಂದೋರ್ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 2 | ಬಾಂಗ್ಲಾದೇಶ vs ಪಾಕಿಸ್ತಾನ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 3 | ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ | ಬೆಂಗಳೂರು | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 4 | ಆಸ್ಟ್ರೇಲಿಯಾ vs ಶ್ರೀಲಂಕಾ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 5 | ಭಾರತ vs ಪಾಕಿಸ್ತಾನ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 6 | ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ | ಇಂದೋರ್ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 7 | ಇಂಗ್ಲೆಂಡ್ vs ಬಾಂಗ್ಲಾದೇಶ | ಗುವಾಹಟಿ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 8 | ಆಸ್ಟ್ರೇಲಿಯಾ vs ಪಾಕಿಸ್ತಾನ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 9 | ಭಾರತ vs ದಕ್ಷಿಣ ಆಫ್ರಿಕಾ | ವಿಶಾಖಪಟ್ಟಣಂ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 10 | ನ್ಯೂಜಿಲೆಂಡ್ vs ಬಾಂಗ್ಲಾದೇಶ | ವಿಶಾಖಪಟ್ಟಣಂ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 11 | ಇಂಗ್ಲೆಂಡ್ vs ಶ್ರೀಲಂಕಾ | ಗುವಾಹಟಿ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 12 | ಭಾರತ vs ಆಸ್ಟ್ರೇಲಿಯಾ | ವಿಶಾಖಪಟ್ಟಣಂ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 13 | ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ | ವಿಶಾಖಪಟ್ಟಣಂ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 14 | ನ್ಯೂಜಿಲೆಂಡ್ vs ಶ್ರೀಲಂಕಾ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 15 | ಇಂಗ್ಲೆಂಡ್ vs ಪಾಕಿಸ್ತಾನ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 16 | ಆಸ್ಟ್ರೇಲಿಯಾ vs ಬಾಂಗ್ಲಾದೇಶ | ವಿಶಾಖಪಟ್ಟಣಂ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 17 | ದಕ್ಷಿಣ ಆಫ್ರಿಕಾ vs ಶ್ರೀಲಂಕಾ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 18 | ನ್ಯೂಜಿಲೆಂಡ್ vs ಪಾಕಿಸ್ತಾನ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 19 | ಭಾರತ vs ಇಂಗ್ಲೆಂಡ್ | ಇಂದೋರ್ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 20 | ಶ್ರೀಲಂಕಾ vs ಬಾಂಗ್ಲಾದೇಶ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 21 | ದಕ್ಷಿಣ ಆಫ್ರಿಕಾ vs ಪಾಕಿಸ್ತಾನ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 22 | ಆಸ್ಟ್ರೇಲಿಯಾ vs ಇಂಗ್ಲೆಂಡ್ | ಇಂದೋರ್ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 23 | ಭಾರತ vs ನ್ಯೂಜಿಲೆಂಡ್ | ಗುವಾಹಟಿ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 24 | ಪಾಕಿಸ್ತಾನ vs ಶ್ರೀಲಂಕಾ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 25 | ಆಸ್ಟ್ರೇಲಿಯಾ vs ಶ್ರೀಲಂಕಾ | ಇಂದೋರ್ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 26 | ಇಂಗ್ಲೆಂಡ್ vs ನ್ಯೂಜಿಲೆಂಡ್ | ಗುವಾಹಟಿ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 27 | ಭಾರತ vs ಬಾಂಗ್ಲಾದೇಶ | ಬೆಂಗಳೂರು | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 29 | ಸೆಮಿಫೈನಲ್ 1 | ಗುವಾಹಟಿ/ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 30 | ಸೆಮಿಫೈನಲ್ 2 | ಬೆಂಗಳೂರು | ಮಧ್ಯಾಹ್ನ 3 ಗಂಟೆ |
| ನವೆಂಬರ್ 02 | ಫೈನಲ್ | ಕೊಲಂಬೊ/ಬೆಂಗಳೂರು | ಮಧ್ಯಾಹ್ನ 3 ಗಂಟೆ |
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:03 pm, Mon, 16 June 25
