Women’s World Cup 2022: ಪ್ರೇಕ್ಷಕರು ಮೂಕವಿಸ್ಮಿತ: ಮಿಂಚಿನ ವೇಗದಲ್ಲಿ ಅದ್ಭುತ ಕ್ಯಾಚ್
ಇನ್ನು ಈ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 48.5 ಓವರ್‌ಗಳಲ್ಲಿ 203 ರನ್‌ಗಳಿಗೆ ಆಲೌಟ್ ಆಗಿತ್ತು. 204 ರನ್ ಗಳ ಗುರಿ ಪಡೆದ ಇಂಗ್ಲೆಂಡ್ ಪರ ನಾಯಕಿ ಹೀದರ್ ನೈಟ್ 42 ರನ್ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು.
ಮಹಿಳಾ ವಿಶ್ವಕಪ್ ಅತ್ಯಾದ್ಭುತ ಫೀಲ್ಡಿಂಗ್ಗೆ ಸಾಕ್ಷಿಯಾಗುತ್ತಿದೆ. ಕಳೆದ ದಿನಗಳ ಹಿಂದೆಯಷ್ಟೇ ವೆಸ್ಟ್ ಇಂಡೀಸ್ ಆಟಗಾರ್ತಿ ಡೊಟಿನ್ ಅದ್ಭುತ ಡೈವಿಂಗ್ ಕ್ಯಾಚ್ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದ್ದರು. ಇದೀಗ ಇಂಗ್ಲೆಂಡ್ ತಂಡದ ನಾಯಕಿ ಹೀದರ್ ನೈಟ್ ಕೂಡ ರಾಕೆಟ್ ವೇಗದಲ್ಲಿ ಕ್ಯಾಚ್ ಹಿಡಿಯುವ ಮೂಲಕ ಎಲ್ಲರನ್ನು ಮೂಕವಿಸ್ಮಿತರನ್ನಾಗಿಸಿದ್ದಾರೆ. ಆಕ್ಲೆಂಡ್ನಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಿತ್ತು. ಮೊದಲ ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ಪಂದ್ಯದ 39ನೇ ಓವರ್ನ ಎರಡನೇ ಎಸೆತದಲ್ಲಿ ನ್ಯೂಜಿಲೆಂಡ್ ಆಟಗಾರ್ತಿ ಲೀ ತಾಹುಹು ಸ್ಟ್ರೈಟ್ ಹೊಡೆತಕ್ಕೆ ಮುಂದಾಗಿದ್ದರು. ಚೆಂಡು ಗಾಳಿಯಲ್ಲಿ ಚಿಮ್ಮುತ್ತಿದ್ದಂತೆ ಅಲ್ಲೇ ಫೀಲ್ಡಿಂಗ್ನಲ್ಲಿದ್ದ ಇಂಗ್ಲೆಂಡ್ ನಾಯಕಿ ಹೀದರ್ ನೈಟ್ ಗಾಳಿಯಲ್ಲಿ ಜಿಗಿದು ಒಂದೇ ಕೈಯಿಂದ ಚೆಂಡನ್ನು ಹಿಡಿದು ಕ್ಯಾಚ್ ತಮ್ಮದಾಗಿಸಿಕೊಂಡರು. ಈ ಅದ್ಭುತ ಕ್ಯಾಚ್ ನೋಡಿ ಎಲ್ಲರೂ ನಿಬ್ಬೆರಗಾದರು. ಇದೀಗ ಹೀದರ್ ನೈಟ್ ಹಿಡಿದಿರುವ ಅತ್ಯಾದ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
View this post on Instagram
ನ್ಯೂಜಿಲೆಂಡ್ ತಂಡ 203 ರನ್‌ಗಳಿಗೆ ಆಲೌಟ್: ಇನ್ನು ಈ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 48.5 ಓವರ್‌ಗಳಲ್ಲಿ 203 ರನ್‌ಗಳಿಗೆ ಆಲೌಟ್ ಆಗಿತ್ತು. 204 ರನ್ ಗಳ ಗುರಿ ಪಡೆದ ಇಂಗ್ಲೆಂಡ್ ಪರ ನಾಯಕಿ ಹೀದರ್ ನೈಟ್ 42 ರನ್ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಅಂತಿಮವಾಗಿ ಇಂಗ್ಲೆಂಡ್ ತಂಡವು 47.2 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟುವ ಮೂಲಕ ರೋಚಕ ಜಯ ತನ್ನದಾಗಿಸಿಕೊಂಡಿತು.
ಇದನ್ನೂ ಓದಿ: IPL 2022: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಇವರೇ..!
ಇದನ್ನೂ ಓದಿ: IPL 2022: ಐಪಿಎಲ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?
(Women’s World Cup 2022: Heather Knight pulls off an incredible one handed catch of Lea Tahuhu)