World Cup 2023: 4597 ದಿನಗಳ ನಂತರ ವಾಂಖೆಡೆಯಲ್ಲಿ ಭಾರತ- ಲಂಕಾ ಫೈಟ್..! ಮರುಕಳಿಸುತ್ತಾ ಇತಿಹಾಸ?
World Cup 2023: ವಾಸ್ತವವಾಗಿ ವಿಶ್ವಕಪ್ ವೇಳಾಪಟ್ಟಿಯ ಪ್ರಕಾರ ಭಾರತ ತಂಡ ನವೆಂಬರ್ 2 ರಂದು ಕ್ವಾಲಿಫೈಯರ್-2 ತಂಡವನ್ನು ವಾಂಖೆಡೆ ಮೈದಾನದಲ್ಲಿ ಎದುರಿಸಲಿದೆ.
ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ (ODI World Cup Qualifiers ) ಜಿಂಬಾಬ್ವೆಯನ್ನು ಸೋಲಿಸಿದ ಶ್ರೀಲಂಕಾ (Sri Lanka) ತಂಡ ಅಂತಿಮವಾಗಿ ವಿಶ್ವಕಪ್‌ಗೆ ತಮ್ಮ ಟಿಕೆಟ್ ಖಚಿತಪಡಿಸಿಕೊಂಡಿದೆ. ಭಾನುವಾರ ಬುಲವಾಯೊದಲ್ಲಿ ನಡೆದ ಶ್ರೀಲಂಕಾ ಮತ್ತು ಜಿಂಬಾಬ್ವೆ (Sri Lanka vs Zimbabwe) ನಡುವಿನ ಪಂದ್ಯ ವಿಶ್ವಕಪ್‌ಗೆ ಪ್ರವೇಶ ಪಡೆಯಲು ಉಭಯ ತಂಡಗಳಿಗೂ ಮಹತ್ವದ್ದಾಗಿತ್ತು. ಈ ಪಂದ್ಯದಲ್ಲಿ ಗೆದ್ದ ತಂಡವು 2023 ರ ವಿಶ್ವಕಪ್‌ಗೆ ಪ್ರವೇಶ ಪಡೆಯಲ್ಲಿತ್ತು. ಹೀಗಾಗಿ ಗೆಲ್ಲಲೇಬೇಕಾದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 9 ವಿಕೆಟ್‌ಗಳ ಏಕಪಕ್ಷೀಯ ಗೆಲುವು ಸಾಧಿಸಿದ ಲಂಕಾ ಪಡೆ ಇದೀಗ ವಿಶ್ವಕಪ್ ಆಡುವ 10 ತಂಡಗಳಲ್ಲಿ 9ನೇ ತಂಡವಾಗಿ ವಿಶ್ವ ಸಮರಕ್ಕೆ ಎಂಟ್ರಿಕೊಟ್ಟಿದೆ. ಇದರೊಂದಿಗೆ 4597 ದಿನಗಳ ಬಳಿಕ ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯಕ್ಕೆ ಆತಿಥ್ಯವಹಿಸಲು ಮುಂಬೈನ ವಾಂಖೆಡೆ ಸ್ಟೇಡಿಯಂ (Wankhede Stadium) ಸಾಕ್ಷಿಯಾಗಲಿದೆ.
ಇಲ್ಲೊಂದು ಅಚ್ಚರಿಯ ಸಂಗತಿಯೆಂದರೆ ಬರೋಬ್ಬರಿ 12 ವರ್ಷಗಳ ಹಿಂದೆ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇದೇ ಮೈದಾನದಲ್ಲಿ ಅಂದರೆ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ್ದ ಧೋನಿ ನಾಯಕತ್ವದ ಟೀಂ ಇಂಡಿಯಾ 28 ವರ್ಷಗಳ ನಂತರ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಇದೀಗ ಶ್ರೀಲಂಕಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಸೋಲಿಸಿ ವಿಶ್ವಕಪ್‌ಗೆ ತಮ್ಮ ಟಿಕೆಟ್ ಖಚಿತಪಡಿಸಿಕೊಂಡಿರುವುದರೊಂದಿಗೆ ಭಾರತದ ಎದುರು ವಾಂಖೆಡೆ ಮೈದಾನದಲ್ಲಿ ಸೆಣಸಾಡಲು ಮುಂದಾಗಿದೆ.
2nd APR, 2011 – India vs Sri Lanka at Wankhede.
2nd NOV, 2023 – India vs Sri Lanka at Wankhede.
? ICC via Getty Images pic.twitter.com/oCbG5OGGbA
— CricketGully (@thecricketgully) July 2, 2023
World Cup Qualifier: ಸ್ಕಾಟ್ಲೆಂಡ್ ಎದುರು ಸೋತ ವಿಂಡೀಸ್ ತಂಡಕ್ಕಿದೆ ವಿಶ್ವಕಪ್ ಆಡುವ ಕೊನೆಯ ಅವಕಾಶ! ಹೇಗೆ ಗೊತ್ತಾ?
4597 ದಿನಗಳ ನಂತರ ಮುಖಾಮುಖಿ
ವಾಸ್ತವವಾಗಿ ವಿಶ್ವಕಪ್ ವೇಳಾಪಟ್ಟಿಯ ಪ್ರಕಾರ ಭಾರತ ತಂಡ ನವೆಂಬರ್ 2 ರಂದು ಕ್ವಾಲಿಫೈಯರ್-2 ತಂಡವನ್ನು ವಾಂಖೆಡೆ ಮೈದಾನದಲ್ಲಿ ಎದುರಿಸಲಿದೆ. ಇದೀಗ ಶ್ರೀಲಂಕಾ ಕ್ವಾಲಿಫೈಯರ್-2 ತಂಡವಾಗಿ ವಿಶ್ವಕಪ್‌ಗೆ ಎಂಟ್ರಿಯಾಗಿದೆ. ಅದೇನೆಂದರೆ, ಒಟ್ಟು 4597 ದಿನಗಳ ಬಳಿಕ ಭಾರತ ಮತ್ತು ಶ್ರೀಲಂಕಾ ತಂಡಗಳು ವಿಶ್ವಕಪ್ನಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. 12 ವರ್ಷಗಳ ಹಿಂದೆ ಏಪ್ರಿಲ್ 2, 2011 ರಂದು ಇದೇ ಶ್ರೀಲಂಕಾ ತಂಡ ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಸೆಣಸಿತ್ತು.
?? Team India’s fixtures for ICC Men’s Cricket World Cup 2023 ??
#CWC23 #TeamIndia pic.twitter.com/LIPUVnJEeu
— BCCI (@BCCI) June 27, 2023
ಕ್ವಾಲಿಫೈಯರ್-1 ತಂಡ ಯಾವುದು?
ವಿಶ್ವಕಪ್‌ನ ಎರಡನೇ ತಂಡಕ್ಕೆ ಸಂಬಂಧಿಸಿದಂತೆ, ಇದಕ್ಕಾಗಿ ಜಿಂಬಾಬ್ವೆ ಮತ್ತು ಸ್ಕಾಟ್ಲೆಂಡ್ ನಡುವೆ ಹೋರಾಟ ನಡೆಯಲಿದೆ . ಸದ್ಯ ಜಿಂಬಾಬ್ವೆ ತಂಡ ಪಾಯಿಂಟ್ ಪಟ್ಟಿಯಲ್ಲಿ 6 ಅಂಕ ಹೊಂದಿದ್ದರೆ, ಸ್ಕಾಟ್ಲೆಂಡ್ 4 ಅಂಕ ಹೊಂದಿದೆ. ಆದರೆ ಸ್ಕಾಟ್ಲೆಂಡ್ ತಂಡದ ರನ್ ರೇಟ್ ಜಿಂಬಾಬ್ವೆಗಿಂತ ಹೆಚ್ಚಿದೆ. ಹೀಗಾಗಿ ಜುಲೈ 4 ರಂದು ನಡೆಯುವ ಈ ಎರಡೂ ತಂಡಗಳ ಮುಖಾಮುಖಿಯಲ್ಲಿ ಗೆದ್ದ ತಂಡ ವಿಶ್ವಕಪ್‌ಗೆ ಕ್ವಾಲಿಫೈಯರ್-1 ಆಗಿ ಎಂಟ್ರಿಕೊಡಲಿವೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:35 am, Mon, 3 July 23