WPL 2023 Auction: ಇಂದು ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ ಹರಾಜು: ಎಷ್ಟು ಗಂಟೆಗೆ?, ಯಾವುದರಲ್ಲಿ ನೇರಪ್ರಸಾರ?: ಇಲ್ಲಿದೆ ಮಾಹಿತಿ
Women’s Premier League 2023: ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಇಂದು ಮಧ್ಯಾಹ್ನ 2:30 ರಿಂದ ಪ್ರಾರಂಭವಾಗುತ್ತದೆ. ಇದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಆಯೋಜಿಸಲಾಗಿದೆ. ಟೂರ್ನಿಯ ಮೊದಲ ಸೀಸನ್‌ನಲ್ಲಿ ಒಟ್ಟು 5 ತಂಡಗಳಿದೆ.
ಬಹುನಿರೀಕ್ಷಿತ ಮಹಿಳೆಯ ಐಪಿಎಲ್ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಹರಾಜು ಪ್ರಕ್ರಿಯೆ ಇಂದು ನಡೆಯಲಿದೆ. ಈಗಾಗಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಚೊಚ್ಚಲ ಆವೃತ್ತಿಯ ಡಬ್ಲ್ಯೂಪಿಎಲ್ ಮಾರ್ಚ್ 4 ರಿಂದ ಆರಂಭಗೊಳ್ಳಲಿದೆ ಎಂದು ತಿಳಿಸಿದೆ. ಇದಕ್ಕೂ ಮುನ್ನ ಆಕ್ಷನ್(Auction) ಏರ್ಪಡಿಸಲಾಗಿದೆ. ಮಹಿಳಾ ಐಪಿಎಲ್ಗಾಗಿ (IPL) ಈಗಾಗಲೇ ಐದು ತಂಡಗಳು ಫ್ರಾಂಚೈಸಿ ಹಕ್ಕು ಪಡೆದುಕೊಂಡಿದ್ದು, ನೂರಾರು ಮಹಿಳಾ ಕ್ರಿಕೆಟಿಗರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಹಾಗಾದರೆ ಹರಾಜು ಪ್ರಕ್ರಿಯೆ ಎಷ್ಟು ಗಂಟೆಗೆ?, ಯಾವುದರಲ್ಲಿ ನೇರಪ್ರಸಾರ, ಆಟಗಾರರ ಬೆಲೆ ಎಷ್ಟು?, ಇಲ್ಲಿದೆ ಸಂಪೂರ್ಣ ಮಾಹಿತಿ.
ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಇಂದು ಮಧ್ಯಾಹ್ನ 2:30 ರಿಂದ ಪ್ರಾರಂಭವಾಗುತ್ತದೆ. ಇದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಆಯೋಜಿಸಲಾಗಿದೆ. ಟೂರ್ನಿಯ ಮೊದಲ ಸೀಸನ್‌ನಲ್ಲಿ ಒಟ್ಟು 5 ತಂಡಗಳಿದ್ದು, ಗುಜರಾತ್ ಜೈಂಟ್ಸ್ (ಅದಾನಿ ಸ್ಪೋರ್ಟ್ಸ್‌ಲೈನ್), ಮುಂಬೈ ಇಂಡಿಯನ್ಸ್ (ಇಂಡಿಯಾವಿನ್ ಸ್ಪೋರ್ಟ್ಸ್ ರಿಲಯನ್ಸ್), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ ಸ್ಪೋರ್ಟ್ಸ್), ಡೆಲ್ಲಿ ಕ್ಯಾಪಿಟಲ್ಸ್ (ಜಿಎಂಆರ್-ಜೆಎಸ್‌ಡಬ್ಲ್ಯೂ) ಮತ್ತು ಲಕ್ನೋದ ಯುಪಿ ವಾರಿಯರ್ಸ್ (ಕ್ಯಾಪ್ರಿ ಗ್ಲೋಬಲ್) ಆಗಿದೆ.
ಈ ಬಾರಿಯ ಹರಾಜಿನಲ್ಲಿ ಒಟ್ಟು 1525 ಆಟಗಾರ್ತಿಯರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಬಿಸಿಸಿಐ 409 ಆಟಗಾರ್ತಿಯರು ಅಂತಿಮ ಮಾಡಿದ್ದು ಇವರು ಮಾತ್ರ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರ. ಈ 409 ಪ್ಲೇಯರ್ಸ್ ಪೈಕಿ 246 ಭಾರತೀಯರು, 163 ವಿದೇಶಿಯರು ಇದ್ದಾರೆ. ಈ ವಿದೇಶಿಯರಲ್ಲಿ 8 ಆಟಗಾರ್ತಿಯರು ಸಹ ಸದಸ್ಯ ರಾಷ್ಟ್ರಗಳಿಂದ ಬಂದವರು. ಡಬ್ಲ್ಯುಪಿಎಲ್ ನಿಯಮದ ಪ್ರಕಾರ, ಒಂದು ತಂಡದಲ್ಲಿ ಗರಿಷ್ಠ 18 ಆಟಗಾರ್ತಿಯರು ಇರಬಹುದು. ಈ ರೀತಿಯಾಗಿ, ಐದು ಫ್ರಾಂಚೈಸಿಗಳು ಒಟ್ಟಾಗಿ 90 ಆಟಗಾರ್ತಿಯರನ್ನು ಮಾತ್ರ ಖರೀದಿಸಬಹುದಾಗಿದೆ. ಇದರಲ್ಲಿ ಒಟ್ಟು 30 ಆಟಗಾರ್ತಿಯರು ವಿದೇಶಿಯರಾಗಿರಲಿದ್ದು, ಈ ವಿದೇಶಿಯರಲ್ಲಿಯೂ ಸಹ, ಪ್ರತಿ ತಂಡವು ಕನಿಷ್ಠ ಒಬ್ಬ ಸಹಾಯಕ ಸದಸ್ಯರನ್ನಾದರೂ ಖರೀದಿಸಬೇಕಾಗುತ್ತದೆ.
IND vs AUS 2nd Test: ತಂಡದಿಂದ ಸ್ಟಾರ್ ಆಟಗಾರನನ್ನು ಕೈಬಿಟ್ಟ ಟೀಮ್ ಇಂಡಿಯಾ
? ? “It’s going to be a game changer.”
From @ImHarmanpreet & @mandhana_smriti to @Deepti_Sharma06 & @Danni_Wyatt – they are excited for the #WPLAuction ? ?
ARE YOU❓@wplt20 pic.twitter.com/mM3RAJuGTP
— BCCI Women (@BCCIWomen) February 12, 2023
ಇನ್ನು ಪ್ರತಿ ಫ್ರಾಂಚೈಸಿಯೂ 12 ಕೋಟಿ ರೂ. ಗಳ ಹರಾಜು ಪರ್ಸ್ ಹೊಂದಿದೆ. ಅಂದರೆ ಒಟ್ಟು 18 ಆಟಗಾರ್ತಿಯರನ್ನು ಖರೀದಿಸಲು ಪ್ರತಿ ಫ್ರಾಂಚೈಸಿಗೆ 12 ಕೋಟಿ ರೂ. ನೀಡಲಾಗುತ್ತದೆ. ಮೂಲ ಬೆಲೆಗೆ ಸಂಬಂಧಿಸಿದಂತೆ, ಹರಾಜಿನಲ್ಲಿ ಆಟಗಾರ್ತಿಯ ಅತ್ಯಧಿಕ ಮೂಲ ಬೆಲೆ 50 ಲಕ್ಷ ರೂ. ಆಗಿದೆ. ಇದರಲ್ಲಿ ಸ್ಮೃತಿ ಮಂದಾನ, ಹರ್ಮನ್ಪ್ರೀತ್ ಕೌರ್ ಸೇರಿದಂತೆ ಇತರೆ 8 ಭಾರತೀಯ ಆಟಗಾರರಿದ್ದಾರೆ. ಒಟ್ಟು 24 ಆಟಗಾರರಿದ್ದಾರೆ.
ಅಂತೆಯೆ 40 ಲಕ್ಷ, 20 ಲಕ್ಷ ಮತ್ತು 10 ಲಕ್ಷ ಮೂಲ ಬೆಲೆಯಲ್ಲಿಯೂ ಆಟಗಾರ್ತಿಯರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ನೆಟ್‌ವರ್ಕ್ 18 ನಲ್ಲಿ ಹರಾಜು ಪ್ರಕ್ರಿಯೆ ನೇರಪ್ರಸಾರ ಕಾಣಲಿದ್ದು, ಜಿಯೋ ಸಿನಿಮಾದ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ವೀಕ್ಷಿಸಬಹುದು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:23 am, Mon, 13 February 23