AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final 2023: ‘ಪ್ಲೀಸ್ ನಿವೃತ್ತಿ ಘೋಷಿಸಿ’; ಕಳಪೆ ಆಟದಿಂದಾಗಿ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ಪೂಜಾರ

WTC Final 2023: ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ14 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದ್ದ ಪೂಜಾರ, ಎರಡನೇ ಇನ್ನಿಂಗ್ಸ್​ನಲ್ಲಿ ಕೊಂಚ ಹೊತ್ತು ಮೈದಾನ ಕಚ್ಚಿ ಆಡಿದರಾದರೂ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ಅಂತಿಮವಾಗಿ ಪೂಜಾರ 27 ರನ್​ಗಳಿಗೆ ವಿಕೆಟ್ ಒಪ್ಪಿಸಿದರು.

WTC Final 2023: ‘ಪ್ಲೀಸ್ ನಿವೃತ್ತಿ ಘೋಷಿಸಿ’; ಕಳಪೆ ಆಟದಿಂದಾಗಿ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ಪೂಜಾರ
ಚೇತೇಶ್ವರ್ ಪೂಜಾರ
ಪೃಥ್ವಿಶಂಕರ
|

Updated on: Jun 10, 2023 | 10:48 PM

Share

ಲಂಡನ್‌ನ ಓವಲ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ಭಾರತ (India vs Australia) ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ICC World Test Championship) ಫೈನಲ್‌ ಸದ್ಯ ರೋಚಕ ಘಟ್ಟದತ್ತ ಸಾಗುತ್ತಿದೆ. ತನ್ನ 2ನೇ ಇನ್ನಿಂಗ್ಸ್​ನಲ್ಲಿ 8 ವಿಕೆಟ್ ಕಳೆದುಕೊಂಡು 270 ರನ್ ಕಲೆಹಾಕಿದ ಆಸ್ಟ್ರೇಲಿಯಾ, ಮೊದಲ ಇನ್ನಿಂಗ್ಸ್​ನ ಮುನ್ನಡೆಯನ್ನು ಸೇರಿಸಿದಂತೆ ಟೀಂ ಇಂಡಿಯಾಕ್ಕೆ ಬರೋಬ್ಬರಿ 444 ರನ್​ಗಳ ಗೆಲುವಿನ ಗುರಿ ನೀಡಿದೆ. ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿತ್ತಾದರೂ, ಆ ನಂತರ ಕೆಲವೇ ನಿಮಿಷಗಳಲ್ಲಿ ಒಂದರ ಹಿಂದೆ ಒಂದರಂತೆ ಪ್ರಮುಖ 3 ವಿಕೆಟ್​ಗಳು ಉರುಳಿದವು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಹಾಗೂ ಗಿಲ್ ಜೋಡಿ 41 ರನ್​ಗಳ ಜೊತೆಯಾಟದ ನಂತರ ಮುರಿದು ಬಿತ್ತು. ಇಲ್ಲಿ 18 ರನ್ ಬಾರಿಸಿದ್ದ ಗಿಲ್ ಮತ್ತೊಮ್ಮ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ಆ ಬಳಿಕ ನಾಯಕ ರೋಹಿತ್ ಕೂಡ 43 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಆ ಬಳಿಕ ಅಂದರೆ ಕೇವಲ 1 ಓವರ್ ಅಂತರದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ (Cheteshwar Pujara) ಕೂಡ ಪೆವಿಲಿಯನ್ ಸೇರಿಕೊಂಡಿದ್ದಾರೆ. ಇದು ಟೀಂ ಇಂಡಿಯಾ ಅಭಿಮಾನಿಗಳ ಕಣ್ಣು ಕೆಂಪಾಗುವಂತೆ ಮಾಡಿದೆ.

ಫೈನಲ್​ ಪಂದ್ಯದಲ್ಲಿ ಎಲ್ಲವೂ ಹುಸಿಯಾಗಿದೆ

ವಾಸ್ತವವಾಗಿ ಪೂಜಾರ ಇಷ್ಟು ಕಳಪೆಯಾಗಿ ವಿಕೆಟ್ ಒಪ್ಪಿಸಿದನ್ನು ಟೀಂ ಇಂಡಿಯಾ ಅಭಿಮಾನಿಗಳ ಕೈಯಲ್ಲಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣವೂ ಇದ್ದು, ಟೀಂ ಇಂಡಿಯಾದ ಇತರ ಆಟಗಾರರು ಐಪಿಎಲ್ ಆಡುತ್ತಿದ್ದರೆ, ಪೂಜಾರ ಮಾತ್ರ ಡಬ್ಲ್ಯುಟಿಸಿ ಫೈನಲ್ ತಯಾರಿಗಾಗಿಯೇ ಇಂಗ್ಲೆಂಡ್​ನಲ್ಲಿ ತಿಂಗಳಿಗೂ ಮುನ್ನವೇ ಕೌಂಟಿ ಕ್ರಿಕೆಟ್ ಆಡಲು ಆರಂಭಿಸಿದ್ದರು. ನಿರೀಕ್ಷೆಯಂತೆ ಪೂಜಾರ ಕೌಂಟಿ ಕ್ರಿಕೆಟ್​ನಲ್ಲೂ 3 ಶತಕ ಸಿಡಿಸಿ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದರು. ಆದರೆ ಆಸೀಸ್ ವಿರುದ್ಧದ ಈ ಫೈನಲ್​ ಪಂದ್ಯದಲ್ಲಿ ಎಲ್ಲವೂ ಹುಸಿಯಾಗಿದೆ.

WTC Final 2023: ನಿರೀಕ್ಷೆ ಹುಸಿಗೊಳಿಸಿದ ಐಪಿಎಲ್ ಹೀರೋ ಶುಭ್​ಮನ್ ಗಿಲ್

View this post on Instagram

A post shared by ICC (@icc)

ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳುವಂತೆ ಒತ್ತಾಯ

ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ14 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದ್ದ ಪೂಜಾರ, ಎರಡನೇ ಇನ್ನಿಂಗ್ಸ್​ನಲ್ಲಿ ಕೊಂಚ ಹೊತ್ತು ಮೈದಾನ ಕಚ್ಚಿ ಆಡಿದರಾದರೂ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ಅಂತಿಮವಾಗಿ ಪೂಜಾರ 27 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಟೀಂ ಇಂಡಿಯಾದ ಭರವಸೆಯ ಬ್ಯಾಟರ್ ಅತ್ಯಂತ ಪ್ರಮುಖ ಪಂದ್ಯದಲ್ಲಿ ಈ ರೀತಿಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಟೀಂ ಇಂಡಿಯಾ ಅಭಿಮಾನಿಗಳು ಕೋಪಗೊಳ್ಳುವಂತೆ ಮಾಡಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕೋಪ ತೊಡಿಕೊಂಡಿರುವ ಅಭಿಮಾನಿಗಳು ಪೂಜಾರ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳುವಂತೆ ಒತ್ತಾಯಿಸಿದ್ದಾರೆ. ಪೂಜಾರ ವಿರುದ್ಧ ಫ್ಯಾನ್ಸ್ ಯುದ್ಧ ಹೇಗಿದೆ ಎಂಬುದರ ಒಂದಿಷ್ಟು ಝಲಕ್ ಇಲ್ಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ