AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final 2023: ಫೈನಲ್​ನಲ್ಲಿ ಒಂದೇ ರೀತಿಯ ಅಪರೂಪದ ದಾಖಲೆ ಬರೆದ ರೋಹಿತ್, ಕಮ್ಮಿನ್ಸ್..!

WTC Final 2023, IND vs AUS: ಭಾರತ ಮತ್ತು ಆಸ್ಟ್ರೇಲಿಯ ನಡುವೆ ಇಂದಿನಿಂದ ಅಂದರೆ ಜೂನ್ 7 ರಿಂದ ಆರಂಭವಾಗಿರುವ ಟೆಸ್ಟ್ ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ ಮೂಲಕ ಉಭಯ ತಂಡದ ನಾಯಕರು ಒಟ್ಟಾಗಿ ಅರ್ಧಶತಕ ಪೂರೈಸಿದ್ದಾರೆ.

WTC Final 2023: ಫೈನಲ್​ನಲ್ಲಿ ಒಂದೇ ರೀತಿಯ ಅಪರೂಪದ ದಾಖಲೆ ಬರೆದ ರೋಹಿತ್, ಕಮ್ಮಿನ್ಸ್..!
ರೋಹಿತ್- ಕಮ್ಮಿನ್ಸ್
ಪೃಥ್ವಿಶಂಕರ
|

Updated on: Jun 07, 2023 | 3:43 PM

Share

ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಅಪರೂಪಕ್ಕೆ ಕಾಣಸಿಗುವ ದಾಖಲೆಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ (World Test Championship) ಫೈನಲ್‌ ಸಾಕ್ಷಿಯಾಗಿದೆ. ಭಾರತ ಮತ್ತು ಆಸ್ಟ್ರೇಲಿಯ (India and Australia) ನಡುವೆ ಇಂದಿನಿಂದ ಅಂದರೆ ಜೂನ್ 7 ರಿಂದ ಆರಂಭವಾಗಿರುವ ಟೆಸ್ಟ್ ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ ಮೂಲಕ ಉಭಯ ತಂಡದ ನಾಯಕರು ಒಟ್ಟಾಗಿ ಅರ್ಧಶತಕ ಪೂರೈಸಿದ್ದಾರೆ. ಅಂದರೆ, ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವು ಎರಡೂ ತಂಡಗಳ ನಾಯಕರಾದ ರೋಹಿತ್ ಶರ್ಮಾ (Rohit Sharma) ಮತ್ತು ಪ್ಯಾಟ್ ಕಮ್ಮಿನ್ಸ್ (Pat Cummins) ಅವರ ಟೆಸ್ಟ್ ವೃತ್ತಿಜೀವನದ 50 ನೇ ಟೆಸ್ಟ್ ಪಂದ್ಯವಾಗಿದೆ. ಇದೀಗ ಈ ಇಬ್ಬರೂ ನಾಯಕರು WTC ಫೈನಲ್‌ ಪ್ರಶಸ್ತಿಯನ್ನು ವಶಪಡಿಸಿಕೊಳ್ಳುವ ಮೂಲಕ ತಮ್ಮ 50 ನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಲು ಪ್ರಯತ್ನಿಸಲಿದ್ದಾರೆ.

ರೋಹಿತ್, ಕಮಿನ್ಸ್ ಟೆಸ್ಟ್ ದಾಖಲೆ

ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಇದುವರೆಗೆ ಆಡಿರುವ 49 ಟೆಸ್ಟ್‌ಗಳಲ್ಲಿ 217 ವಿಕೆಟ್‌ಗಳನ್ನು ಪಡೆದಿದ್ದಾರೆ. ಅದೇ ಸಮಯದಲ್ಲಿ, ಬ್ಯಾಟ್‌ನಿಂದ 924 ರನ್ ಕಲೆಹಾಕಿದ್ದಾರೆ. ಮತ್ತೊಂದೆಡೆ, ರೋಹಿತ್ ಶರ್ಮಾ 49 ಟೆಸ್ಟ್ ಪಂದ್ಯಗಳಲ್ಲಿ 3379 ರನ್ ಸಿಡಿಸಸಿದ್ದಾರೆ ಮತ್ತು ಬೌಲಿಂಗ್​ನಲ್ಲಿ 2 ವಿಕೆಟ್ ಪಡೆದಿದ್ದಾರೆ. ರೋಹಿತ್ ಶರ್ಮಾ ಈ 49 ಟೆಸ್ಟ್ ಪಂದ್ಯಗಳಲ್ಲಿ 1 ದ್ವಿಶತಕ, 9 ಶತಕ ಮತ್ತು 14 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.

India vs Australia Live Score, WTC Final 2023 Day 1: ಶೂನ್ಯಕ್ಕೆ ಖವಾಜಾ ಔಟ್; ಸಿರಾಜ್​ಗೆ ವಿಕೆಟ್

ರೋಹಿತ್-ಕಮ್ಮಿನ್ಸ್ ನಾಯಕತ್ವದ ಅಂಕಿಅಂಶಗಳು ಏನು ಹೇಳುತ್ತವೆ?

ಆದರೆ, ಈಗ 50ನೇ ಟೆಸ್ಟ್‌ನಲ್ಲಿ ತಮ್ಮ ತಂಡಗಳನ್ನು ಗೆಲ್ಲಿಸುವ ಸವಾಲು ಉಭಯ ನಾಯಕರ ಮುಂದಿದೆ. ರೋಹಿತ್‌ಗಿಂತ ಕಮ್ಮಿನ್ಸ್‌ಗೆ ಅನುಭವವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ರೋಹಿತ್ ಇದುವರೆಗೆ ನಾಯಕತ್ವ ವಹಿಸಿರುವ ಎಲ್ಲಾ ಟೆಸ್ಟ್‌ಗಳಲ್ಲಿ ಅವರ ದಾಖಲೆ ಅದ್ಭುತವಾಗಿದೆ.

ರೋಹಿತ್ ಶರ್ಮಾ ಇದುವರೆಗೆ 6 ಟೆಸ್ಟ್ ಪಂದ್ಯಗಳಲ್ಲಿ ಭಾರತದ ನಾಯಕತ್ವ ವಹಿಸಿದ್ದು, ಅದರಲ್ಲಿ 4 ಪಂದ್ಯಗಳನ್ನು ಗೆದ್ದಿದ್ದರೆ, 1 ಪಂದ್ಯದಲ್ಲಿ ಸೋತು, 1 ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ, ಪ್ಯಾಟ್ ಕಮ್ಮಿನ್ಸ್ ಇದುವರೆಗೆ 15 ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯಾವನ್ನು ಮುನ್ನಡೆಸಿದ್ದು, ಅದರಲ್ಲಿ 8 ಗೆಲುವು, 3 ಸೋಲು ಮತ್ತು 4 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ.

ಓವಲ್‌ನಲ್ಲಿ ರೋಹಿತ್ ಪ್ರದರ್ಶನ ಹೇಗಿದೆ?

ರೋಹಿತ್ ಶರ್ಮಾ ಅವರ ದಾಖಲೆ ಅತ್ಯುತ್ತಮವಾಗಿರುವ ಓವಲ್ ಮೈದಾನದಲ್ಲಿ ಡಬ್ಲ್ಯುಟಿಸಿ ಫೈನಲ್ ನಡೆಯುತ್ತಿರುವುದು ದೊಡ್ಡ ವಿಷಯ . ಇದೇ ಮೈದಾನದಲ್ಲಿ ಆಡಿದ ಕೊನೆಯ ಟೆಸ್ಟ್​ನಲ್ಲಿ ರೋಹಿತ್ ಶತಕ ಬಾರಿಸಿದ್ದರು. ಇಂಗ್ಲೆಂಡ್ ವಿರುದ್ಧ 127 ರನ್​ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದ ರೋಹಿತ್, ಈಗ ಅದೇ ಪ್ರದರ್ಶನವನ್ನು ಪುನರಾವರ್ತಿಸುವ ಅವಶ್ಯಕತೆಯಿದೆ. ಮತ್ತೊಂದೆಡೆ, ಮೊದಲ ಬಾರಿಗೆ ಡಬ್ಲ್ಯುಟಿಸಿ ಫೈನಲ್ ತಲುಪಿದ ಆಸ್ಟ್ರೇಲಿಯಾದ ನಾಯಕ, ಇಲ್ಲಿ ಪ್ರಶಸ್ತಿ ಜಯದೊಂದಿಗೆ ಇಂಗ್ಲೆಂಡ್ ವಿರುದ್ಧದ ಆಶಸ್ ಕದನಕ್ಕೆ ಸಜ್ಜಾಗಲು ಬಯಸುತ್ತಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ