AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final, AUS vs IND: ಮಿಸ್ಟ್ರಿ ಪಿಚ್​ನಲ್ಲಿ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್: ದಿ ಓವಲ್​ನಲ್ಲಿ ಭಾರತದ ದಾಖಲೆ ಹೇಗಿದೆ?

The Oval Pitch Report: ಓವಲ್‌ ಗ್ರೌಂಡ್‌ ಬೌಲರ್‌ಗಳಿಗೆ ಪಿಚ್‌ ಹೇಗೆ ವರ್ತಿಸುತ್ತದೆ ಎಂಬುದು ಇನ್ನೂ ಗೊತ್ತಾಗದ ಸಂಗತಿ. ಮಿಸ್ಟ್ರಿ ಪಿಚ್ ಎಂದೇ ಹೇಳಲಾಗುವ ಕೆನ್ನಿಂಗ್ಟನ್ ಓವಲ್​ನಲ್ಲಿ ವಿಶ್ವದ ಎರಡನೇ ಅತ್ಯಂತ ಹಳೆಯ ಕ್ರೀಡಾಂಗಣ.

WTC Final, AUS vs IND: ಮಿಸ್ಟ್ರಿ ಪಿಚ್​ನಲ್ಲಿ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್: ದಿ ಓವಲ್​ನಲ್ಲಿ ಭಾರತದ ದಾಖಲೆ ಹೇಗಿದೆ?
WTC Final The Oval Pitch
Vinay Bhat
|

Updated on:Jun 07, 2023 | 12:13 PM

Share

ಮುಖ್ಯಾಂಶಗಳು

  • 143 ವರ್ಷಗಳ ಇತಿಹಾಸ ಹೊಂದಿರುವ ಓವಲ್‌ ಗ್ರೌಂಡ್‌
  • 143 ವರ್ಷಗಳ ಇತಿಹಾಸ ಹೊಂದಿರುವ ಓವಲ್‌ ಗ್ರೌಂಡ್‌
  • ಇಲ್ಲಿದೆ ನೋಡಿ ಸಂಪೂರ್ಣ ಪಿಚ್ ರಿಪೋರ್ಟ್

ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಇಂದಿನಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ಶುರುವಾಗಲಿದೆ. ಒಟ್ಟು 5 ದಿನಗಳ ಕಾಲ ನಡೆಯಲಿರುವ ಎರಡನೇ ಆವೃತ್ತಿಯ ಡಬ್ಲ್ಯೂಟಿಸಿ 2023 ಫೈನಲ್ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಟೀಮ್ ಇಂಡಿಯಾದ ಎಲ್ಲ ಆಟಗಾರರು ಇದೀಗ ಲಂಡನ್​ನ ಓವಲ್ (The Oval) ಕ್ರೀಡಾಂಗಣಕ್ಕೆ ಕಾಲಿಟ್ಟಿದ್ದಾರೆ. 143 ವರ್ಷಗಳ ಇತಿಹಾಸ ಹೊಂದಿರುವ ಓವಲ್‌ ಗ್ರೌಂಡ್‌ನಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ ನಡೆಯುತ್ತಿರುವುದು ವಿಶೇಷ.

ಈ ಅಂಗಳದಲ್ಲಿ ಬೌಲರ್‌ಗಳಿಗೆ ಪಿಚ್‌ ಹೇಗೆ ವರ್ತಿಸುತ್ತದೆ ಎಂಬುದು ಇನ್ನೂ ಗೊತ್ತಾಗದ ಸಂಗತಿ. ಮಿಸ್ಟ್ರಿ ಪಿಚ್ ಎಂದೇ ಹೇಳಲಾಗುವ ಕೆನ್ನಿಂಗ್ಟನ್ ಓವಲ್​ನಲ್ಲಿ ವಿಶ್ವದ ಎರಡನೇ ಅತ್ಯಂತ ಹಳೆಯ ಕ್ರೀಡಾಂಗಣ. ಈ ಪಿಚ್ ಹಿಂದೆ ವೇಗಿಗಳಿಗೆ ಅನುಕೂಲಕರವಾಗಿದ್ದರೆ, ಕಳೆದ ಆರು ಪಂದ್ಯಗಳು ಇದಕ್ಕೆ ವಿರುದ್ಧವಾಗಿ ಕಂಡಿವೆ. 2016 ರಿಂದ ಓವಲ್‌ನಲ್ಲಿ ನಡೆದ ಕೊನೆಯ 6 ಟೆಸ್ಟ್‌ಗಳು ದಿನಗಳು ಕಳೆದಂತೆ ಪಿಚ್ ಕ್ರಮೇಣ ಉತ್ತಮಗೊಳ್ಳುತ್ತವೆ ಎಂದು ತೋರಿಸಿದೆ.

WTC 2023 Final, IND vs AUS: ಇಂದಿನಿಂದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್: ಭಾರತ-ಆಸ್ಟ್ರೇಲಿಯಾ ನಡುವೆ ರೋಚಕ ಕಾದಾಟ

ಕೆನ್ನಿಂಗ್ಟನ್ ಓವಲ್ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಯೋಜಿಸಿದ ದಾಖಲೆಯನ್ನು ಹೊಂದಿದೆ. ಇಂಗ್ಲೆಂಡಿನ ಹವಾಮಾನವು ಯಾವಾಗಲೂ ಬದಲಾಗುತ್ತಿರುತ್ತದೆ ಮತ್ತು ಅನಿರೀಕ್ಷಿತವಾಗಿರುವುದರಿಂದ ಚೆಂಡು ಮತ್ತು ಬ್ಯಾಟ್​ನ ಕಾಳಗದಲ್ಲಿ ಯಾರು ಗೆಲ್ಲುತ್ತಾರೆ ಎಂದು ನಿರೀಕ್ಷಿಸುವುದು ಕಷ್ಟ. ಟಾಸ್‌ನ ಫಲಿತಾಂಶ ನಿರ್ಣಾಯಕ ಎಂದು ಹೇಳಬಹುದು. ಪಂದ್ಯದ ಅಂತಿಮ ಎರಡು ದಿನಗಳಲ್ಲಿ ಸ್ಪಿನ್ನರ್‌ಗಳು ಹೆಚ್ಚು ಪರಿಣಾಮಕಾರಿ ಆಗುತ್ತಾರೆ. ಹಸಿರು ಮೇಲ್ಮೈ ಕೊರತೆಯಿಂದಾಗಿ ಇಲ್ಲಿ ವೇಗದ ಬೌಲರ್‌ಗಳ ದಾಖಲೆಗಳು ಉತ್ತಮವಾಗಿಲ್ಲ.

ಅಂಕಿಅಂಶಗಳು:

ಪಂದ್ಯಗಳು: 104

ತವರಿನ ತಂಡ (ಇಂಗ್ಲೆಂಡ್) ಗೆಲುವು: 43

ಪ್ರವಾಸಿ ತಂಡದ ಗೆಲುವು: 23

ಪಂದ್ಯ ಡ್ರಾ: 37

ಮೊದಲು ಬ್ಯಾಟಿಂಗ್ ಮಾಡಿದ ತಂಡ : 37 ಗೆಲುವು

ದ್ವಿತೀಯ ಬ್ಯಾಟಿಂಗ್ ಮಾಡಿದ ತಂಡ : 29 ಗೆಲುವು

ಗರಿಷ್ಠ ಸ್ಕೋರ್: 903/7

ಕನಿಷ್ಠ ಸ್ಕೋರ್: 44 ರನ್​ಗೆ ಆಲೌಟ್

ಸರಾಸರಿ 1 ನೇ ಇನ್ನಿಂಗ್ಸ್ ಸ್ಕೋರ್: 343

ಸರಾಸರಿ 2 ನೇ ಇನ್ನಿಂಗ್ಸ್ ಸ್ಕೋರ್: 304

ಸರಾಸರಿ 3 ನೇ ಇನ್ನಿಂಗ್ಸ್ ಸ್ಕೋರ್: 238

ಓವಲ್‌ನಲ್ಲಿ ಭಾರತವು ಅದ್ಭುತ ದಾಖಲೆ ಹೊಂದಿಲ್ಲ. ಇಲ್ಲಿ ಆಡಿದ 14 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ 2ರಲ್ಲಿ ಗೆಲುವು, 5ರಲ್ಲಿ ಸೋಲು, 7ರಲ್ಲಿ ಡ್ರಾ ಸಾಧಿಸಿದೆ. ಓವಲ್‌ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 157 ರನ್‌ಗಳಿಂದ ಸೋಲಿಸಿದೆ ಎಂಬುದು ಭಾರತದ ಹೆಮ್ಮೆಯ ಸಂಗತಿ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:11 pm, Wed, 7 June 23

Follow Us
Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
ಮುಂದಿನ ಪ್ಲ್ಯಾನ್ ಬಗ್ಗೆ ಮಾತಾಡಿದ ‘ಪ್ರೇಮದ ಊರಲಿ’ ನಟಿ ರಮಿಕಾ ಶಿವು
ಮುಂದಿನ ಪ್ಲ್ಯಾನ್ ಬಗ್ಗೆ ಮಾತಾಡಿದ ‘ಪ್ರೇಮದ ಊರಲಿ’ ನಟಿ ರಮಿಕಾ ಶಿವು
ಫಿಲಿಪೈನ್ಸ್ ಭೇಟಿ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ನರೇಂದ್ರ ಮೋದಿ
ಫಿಲಿಪೈನ್ಸ್ ಭೇಟಿ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ನರೇಂದ್ರ ಮೋದಿ
‘ಶಂಕರಾಭರಣ’ ಬಸ್ ಸಿಕ್ಕ ಬಳಿಕ ಶೈನ್ ಶೆಟ್ಟಿ ಬದುಕಿನಲ್ಲಿ ಚಮತ್ಕಾರ
‘ಶಂಕರಾಭರಣ’ ಬಸ್ ಸಿಕ್ಕ ಬಳಿಕ ಶೈನ್ ಶೆಟ್ಟಿ ಬದುಕಿನಲ್ಲಿ ಚಮತ್ಕಾರ
ಯಲ್ಲಮ್ಮ ದೇಗುಲದ ಗೋಡೆ ಮೇಲೆ ಅಶ್ಲೀಲ ಚಿಹ್ನೆ ಬಿಡಿಸಿ ವಿಕೃತಿ
ಯಲ್ಲಮ್ಮ ದೇಗುಲದ ಗೋಡೆ ಮೇಲೆ ಅಶ್ಲೀಲ ಚಿಹ್ನೆ ಬಿಡಿಸಿ ವಿಕೃತಿ
ಶಿವಣ್ಣನ ಜೊತೆ ಶಬರಿಮಲೆಗೆ ಹೋದ ಘಟನೆ ನೆನಪಿಸಿಕೊಂಡ ಪ್ರೇಮ್ ಪುತ್ರಿ ಅಮೃತಾ
ಶಿವಣ್ಣನ ಜೊತೆ ಶಬರಿಮಲೆಗೆ ಹೋದ ಘಟನೆ ನೆನಪಿಸಿಕೊಂಡ ಪ್ರೇಮ್ ಪುತ್ರಿ ಅಮೃತಾ
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ