Viral Video: ಕುಡಿದು ಮೈಮರೆತ್ರಾ ಚಹಾಲ್-ನೆಹ್ರಾ..?: ಮತ್ತೆ ಮ್ಯಾಚ್ ಫಿಕ್ಸಿಂಗ್ ಅನುಮಾನ
ರಾಜಸ್ಥಾನ್ ರಾಯಲ್ಸ್ ಫೈನಲ್‌ನಲ್ಲಿ ಸೋತಿರಬಹುದು. ಆದರೆ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಯುಜ್ವೇಂದ್ರ ಚಹಾಲ್ ಪರ್ಪಲ್ ಕ್ಯಾಪ್ ವಿನ್ನರ್ ಆಗಿ ಹೊರಹೊಮ್ಮಿದ್ದರು.
ಕಳೆದ ತಿಂಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಗುಜರಾತ್ ಟೈಟಾನ್ಸ್ ತನ್ನ ಚೊಚ್ಚಲ ಸೀಸನ್ನಲ್ಲೇ ಐಪಿಎಲ್ ಚಾಂಪಿಯನ್ ಆಗಿತ್ತು. ಈ ಗೆಲುವಿನ ನಂತರ ಭರ್ಜರಿ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಆಟಗಾರರೊಂದಿಗೆ ರಾಜಸ್ಥಾನ್ ರಾಯಲ್ಸ್ ಲೆಗ್-ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಕೂಡ ಕಾಣಿಸಿಕೊಂಡಿದ್ದರು. ಅದರಲ್ಲೂ ಪಾರ್ಟಿಯ ಬಳಿಕ ಗುಜರಾತ್ ತಂಡ ಕೋಚ್ ಆಶಿಶ್ ನೆಹ್ರಾ ಹಾಗೂ ಚಹಾಲ್ ಜೊತೆಯಾಗಿ ಕಾಣಿಸಿಕೊಂಡ ವಿಡಿಯೋವೊಂದು ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೊದಲ್ಲಿ, ಯುಜ್ವೇಂದ್ರ ಚಹಾಲ್ ಮತ್ತು ಆಶಿಶ್ ನೆಹ್ರಾ ಸಂಭಾಷಣೆಯಲ್ಲಿ ತೊಡಗಿರುವುದು ಕಂಡುಬರುತ್ತದೆ. ಅಲ್ಲದೆ ಇಬ್ಬರೂ ಅಮಲಿನಲ್ಲಿರುವಂತೆ ಭಾಸವಾಗುತ್ತೆ. ವೀಡಿಯೊದಲ್ಲಿ ನೆಹ್ರಾ ಚಹಾಲ್‌ಗೆ ತನ್ನೊಂದಿಗೆ ಬಸ್‌ನಲ್ಲಿ ಬರುವಂತೆ ಒತ್ತಾಯಿಸುವುದನ್ನು ಕಾಣಬಹುದು. ಆದರೆ ರಾಜಸ್ಥಾನ ರಾಯಲ್ಸ್ ಲೆಗ್ಗಿ ಪತ್ನಿ ಧನಶ್ರೀ ವರ್ಮಾ ಅವರೊಂದಿಗೆ ಕಾರಿನ್ಲಲಿ ಹೋಗಲು ಮುಂದಾಗಿದ್ದಾರೆ.
“ಅಬೆ ತು ಇಧಾರ್ ಬಸ್ ಮೇ ಆ ( ನೀ ನನ್ನೊಂದಿಗೆ ಬಸ್‌ನಲ್ಲಿ ಬಾ)” ಎಂದು ನೆಹ್ರಾ ಚಹಾಲ್‌ಗೆ ಹೇಳಿದಾಗ, “ಬಸ್ ಮೇ ನಹಿ ಜಾನಾ ಮುಝೆ (ನಾನು ಬಸ್‌ನಲ್ಲಿ ಬರಲ್ಲ)” ಎಂದು ಉತ್ತರಿಸಿದರು. ಅಲ್ಲದೆ “ಬಿವಿ ಕೊ ಕಹಾ ಚೋಡ್ದು ಮೈನ್ (ನಾನು ನನ್ನ ಹೆಂಡತಿಯನ್ನು ಎಲ್ಲಿ ಬಿಡಲಿಪಾ)”, ನೆಹ್ರಾ ಅವರನ್ನು ಕೇಳಿದರು. ಇದೇ ವೇಳೆ “ಬಿವಿ ಭಿ ಆಯೇಗಿ ಹುಮಾರೆ ಸಾಥ್ ಬಸ್ ಮೇ (ಅವಳು ಸಹ ನಮ್ಮೊಂದಿಗೆ ಬಸ್‌ನಲ್ಲಿ ಬರುತ್ತಾಳೆ)” ಎಂದು ನೆಹ್ರಾ ಉತ್ತರಿಸಿದರು.
ಇದೀಗ ಈ ಸಂಭಾಷಣೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಬ್ಬರೂ ಕುಡಿದು ಮೈಮರೆತಿದ್ದಾರೆ. ಎಲ್ಲರೂ ಸೋತ ದುಃಖದಲ್ಲಿ ಮನೆ ಸೇರಿದ್ದರೆ ಚಹಾಲ್ ಗುಜರಾತ್ ಟೈಟಾನ್ಸ್ ಜೊತೆ ಕುಡಿದು ಪಾರ್ಟಿ ಮಾಡಿದ್ದಾರೆ. ಚಹಾಲ್ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಎಂಬುದನ್ನೂ ಕೂಡ ನೆಹ್ರಾ ಮರೆತಿದ್ದಾರೆ ಎಂಬಿತ್ಯಾದಿ ಕಾಮೆಂಟ್ಗಳ ಮೂಲಕ ಅನೇಕರು ಪ್ರತಿಕ್ರಿಯಿಸಿದ್ದಾರೆ.
Watch this hilarious interaction between the Ashish Nehra and Yuzvendra Chahal?
Nehra: “Abe tu idhar bus mein aa (come with me in the bus)” Yuzi: “Bus mein nahi jaana mujhe (I don’t want to travel in the bus).” pic.twitter.com/QG1tGr3AhV
— Sanskruti Yadav (@SanskrutiYadav_) June 6, 2022
ರಾಜಸ್ಥಾನ್ ರಾಯಲ್ಸ್ ಫೈನಲ್‌ನಲ್ಲಿ ಸೋತಿರಬಹುದು. ಆದರೆ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಯುಜ್ವೇಂದ್ರ ಚಹಾಲ್ ಪರ್ಪಲ್ ಕ್ಯಾಪ್ ವಿನ್ನರ್ ಆಗಿ ಹೊರಹೊಮ್ಮಿದ್ದರು. ಚಹಾಲ್ ಐಪಿಎಲ್ 2022 ರಲ್ಲಿ 17 ಪಂದ್ಯಗಳಲ್ಲಿ 7.75 ರ ಎಕಾನಮಿಯಲ್ಲಿ 27 ವಿಕೆಟ್ ಪಡೆದು ಮಿಂಚಿದ್ದರು. ಇದಾಗ್ಯೂ ಫೈನಲ್ ಪಂದ್ಯದಲ್ಲಿ ಚಹಾಲ್ ಕಡೆಯಿಂದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಮೂಡಿಬಂದಿರಲಿಲ್ಲ. ಇದೀಗ ಚಹಾಲ್ ಗುಜರಾತ್ ಟೈಟಾನ್ಸ್ ಜೊತೆಗಿನ ಚಾಂಪಿಯನ್ ಪಾರ್ಟಿಯಲ್ಲಿ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಕೆಲವರು ಫಿಕ್ಸಿಂಗ್ ಮಾಡಿರಬಹುದಾ ಎಂಬ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.
ಏಕೆಂದರೆ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಗೆದ್ದ ಬಳಿಕ ಬಿಸಿಸಿಐ ಕಾರ್ಯದರ್ಶಿ ಸಂಭ್ರಮಿಸಿದ್ದು ಈ ಹಿಂದೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದರೂ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಬದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅಲ್ಲದೆ ಕಳಪೆ ಬ್ಯಾಟಿಂಗ್ ಮೂಲಕ ಕಡಿಮೆ ಸ್ಕೋರ್ಗಳ ಟಾರ್ಗೆಟ್ ನೀಡಿದ್ದರು. ಇತ್ತ ಗುಜರಾತ್ ಟೈಟಾನ್ಸ್ ತಂಡವು ಸುಲಭವಾಗಿ ಗೆದ್ದಿದ್ದರು.
ಅಷ್ಟೇ ಅಲ್ಲದೆ ಫೈನಲ್ ಪಂದ್ಯದ ವೇಳೆ ಮ್ಯಾಚ್ ಫಿಕ್ಸ್ ಆಗಿರುವ ಬಗ್ಗೆ ಗುಪ್ತಚರ ಇಲಾಖೆ ಕೂಡ ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ಇತ್ತೀಚೆಗೆಷ್ಟೇ ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ ಬಹಿರಂಗ ಹೇಳಿಕೆ ನೀಡಿದ್ದರು. ಇದಾಗ್ಯೂ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಬಿಸಿಸಿಐ ಕಾರ್ಯದರ್ಶಿ ಆಗಿರುವ ಕಾರಣ ತನಿಖೆ ಮಾಡುತ್ತಿಲ್ಲ ಎಂದಿದ್ದರು. ಇದೀಗ ಚಹಾಲ್ ಗುಜರಾತ್ ಟೈಟಾನ್ಸ್ ತಂಡದ ಪಾರ್ಟಿಯಲ್ಲಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಗುತ್ತಿದ್ದಂತೆ ಮತ್ತೊಮ್ಮೆ ಮ್ಯಾಚ್ ಫಿಕ್ಸಿಂಗ್ ಚರ್ಚೆಗಳು ಶುರುವಾಗಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:06 pm, Tue, 7 June 22