India vs England Test Series | ಐಪಿಎಲ್ ಆಡುವಾಗ ಬಹಳಷ್ಟು ಅಂಶಗಳನ್ನು ವಿದೇಶಿ ಆಟಗಾರರೊಂದಿಗೆ ನಾವು ಶೇರ್ ಮಾಡಲ್ಲ: ರಹಾನೆ
ಇಂಗ್ಲೆಂಡ್ನ ಪ್ರಮುಖ ಆಟಗಾರರಾಗಿರುವ ಬೆನ್ ಸ್ಟೋಕ್ಸ್ ಮತ್ತು ಜೊಫ್ರಾ ಆರ್ಚರ್ ಅವರೊಂದಿಗೆ ಹಲವಾರು ಬಾರಿ ಡ್ರೆಸಿಂಗ್ ರೂಮ್ ಶೇರ್ ಮಾಡಿದ್ದರೂ ಯಾವತ್ತೂ ಗೇಮ್ ಪ್ಲ್ಯಾನ್ ಕುರಿತು ಮಾತಾಡಿಲ್ಲವೆಂದು ಸುದ್ದಿಸಂಸ್ಥೆಯೊಂದಿಗೆ ಮಾತಾಡಿದ ರಹಾನೆ ಹೇಳಿದರು.
ಭಾರತದಲ್ಲಿ ಪ್ರತಿ ವರ್ಷ ನಡೆಯುವ ಇಂಡಿಯನ್ ಪ್ರಿಮೀಯರ್ ಲೀಗ್ ಭಾರತ ಮತ್ತು ಅಂತರರಾಷ್ಟ್ರೀಯ ಆಟಗಾರರ ನಡುವಿನ ಕಂದಕವನ್ನು ಕಮ್ಮಿ ಮಾಡಿ ಬಾಂಧವ್ಯವನ್ನು ಹೆಚ್ಚಿಸಿರಬಹುದು, ಆದರೆ ಅವರೊಂದಿಗೆ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುವ ಸಂದರ್ಭಗಳು ಎದುರಾಗುವುದರಿಂದ ಗೇಮ್ ಪ್ಲ್ಯಾನ್ ಹಾಗೂ ಇನ್ನಿತರ ಮಹತ್ತರ ಅಂಶಗಳನ್ನು ಶೇರ್ ಮಾಡುವುದಿಲ್ಲ ಎಂದು ಭಾರತದ ವೈಸ್-ಕ್ಯಾಪ್ಟನ್ ಅಜಿಂಕ್ಯಾ ರಹಾನೆ ಹೇಳಿದ್ದಾರೆ.
ಇಂಗ್ಲೆಂಡ್ನ ಪ್ರಮುಖ ಆಟಗಾರರಾಗಿರುವ ಬೆನ್ ಸ್ಟೋಕ್ಸ್ ಮತ್ತು ಜೊಫ್ರಾ ಆರ್ಚರ್ ಅವರೊಂದಿಗೆ ಹಲವಾರು ಬಾರಿ ಡ್ರೆಸಿಂಗ್ ರೂಮ್ ಶೇರ್ ಮಾಡಿದ್ದರೂ ಯಾವತ್ತೂ ಗೇಮ್ ಪ್ಲ್ಯಾನ್ ಕುರಿತು ಮಾತಾಡಿಲ್ಲವೆಂದು ಸುದ್ದಿಸಂಸ್ಥೆಯೊಂದಿಗೆ ಮಾತಾಡಿದ ರಹಾನೆ ಹೇಳಿದರು.
‘ಹೌದು, ನಾವು ಐಪಿಎಲ್ನಲ್ಲಿ ವಿದೇಶಿ ಆಟಗಾರರರೊಂದಿಗೆ ಆಡುತ್ತೇವೆ, ಆದರೆ ಐಪಿಲ್ ಮತ್ತು ಟೆಸ್ಟ್ ಕ್ರಿಕೆಟ್ ಎರಡು ಬಿನ್ನ ಆಯಾಮಗಳು. ಅವರ ಬೌಲರ್ಗಳು ಇಲ್ಲಿ ಹೇಗೆ ಬೌಲ್ ಮಾಡಲಿದ್ದಾರೆ ಅಂತ ನಮಗೆ ಗೊತ್ತಿಲ್ಲ. ಆದರೆ, ಟೆಸ್ಟ್ ಕ್ರಿಕೆಟ್ನಲ್ಲಿ ಬೌಲ್ ಮಾಡುವ ಲೆಂಗ್ತ್, ಬಿಳಿ ಚೆಂಡುಗಳಲ್ಲಿ ಬೌಲ್ ಮಾಡುವ ಲೆಂಗ್ತ್ಗಿಂತ ಸಂಪೂರ್ಣವಾಗಿ ಬೇರೆಯಾಗಿರುತ್ತದೆ,’ ಎಂದು ರಹಾನೆ ಹೇಳಿದರು.
ರಾಜಸ್ತಾನ್ ರಾಯಲ್ಸ್ಗೆ ಆಡುವಾಗ ಸ್ಟೋಕ್ಸ್ ಮತ್ತು ಆರ್ಚರ್ರೊಂದಿಗೆ ಬಹಳಷ್ಟು ಕ್ರಿಕೆಟ್ ಆಡಿರುವ ರಹಾನೆ ದೇಶವನ್ನು ಪ್ರತಿನಿಧಿಸುವಾಗ ಸನ್ನಿವೇಶಗಳು ಬದಲಾಗುತ್ತವೆ ಎಂದು ರಹಾನೆ ಹೇಳಿದರು.
‘ಐಪಿಎಲ್ನಲ್ಲಾಡುವಾಗ ಪ್ರಮುಖವೆನಿಸುವ ವಿಷಯಗಳನ್ನು ನಾವು ಅವರಿಗೆ ಹೇಳುವುದಿಲ್ಲ. ನಾವು ಜೊತೆಯಾಗಿ ಬಹಳ ಕ್ರಿಕೆಟ್ ಆಡಿರಬಹುದು, ಅದರೆ ದೇಶಕ್ಕಾಗಿ ಅಡುವಾಗ ಚಿತ್ರಣ ಬದಲಾಗುತ್ತದೆ. ವೈಯಕ್ತಿಕವಾಗಿಮತ್ತು ಒಂದು ತಂಡವಾಗಿ ಅದರ ಶ್ರೇಯಸ್ಸಿಗೆ ಅತ್ಯುತ್ತಮವಾದುದನ್ನು ನೀಡುವ ಪ್ರಯತ್ನ ನಮ್ಮದಾಗಿರುತ್ತದೆ’ ಎಂದು ರಹಾನೆ ಹೇಳಿದರು.
ಸ್ಟೋಕ್ಸ್ ಮತ್ತು ಆರ್ಚರ್ ಇಂಗ್ಲಿಷ್ ತಂಡದ ಪ್ರಮುಖ ಆಟಗಾರರಾಗಿದ್ದರೂ ಅದು ಅತ್ಯಂತ ಸಮತೋಲಿತ ತಂಡವಾಗಿರುವ ಅಂಶವನ್ನು ಯಾರೂ ಅಲ್ಲಗಳೆಯಲಾಗದು ಎಂದು ರಹಾನೆ ಹೇಳಿದರು.
‘ಬೆನ್ ಸ್ಟೋಕ್ಸ್ ಮತ್ತು ಜೊಫ್ರಾ ಆರ್ಚರ್ ನಿಸ್ಸಂದೇಹವಾಗಿ ಅತ್ಯುತ್ತಮ ಅಟಗಾರರಾಗಿದ್ದಾರೆ ಮತ್ತು ಇಂಗ್ಲೆಂಡ್ಗೆ ಹಲವು ಉತ್ಕೃಷ್ಟ ಪ್ರದರ್ಶನಗಳನ್ನು ನೀಡಿದ್ದಾರೆ. ಆದರೆ, ವೈಯಕ್ತಿಕ ಪ್ರರ್ದಶನಗಳಿಗಿಂತ ಸಾಂಘಿಕ ಪ್ರಯತ್ನ ಮತ್ತು ಪ್ರದರ್ಶನಗಳಿಗೆ ಹೆಚ್ಚು ಮಹತ್ವವಿರುತ್ತದೆ. ಇಂಗ್ಲೆಂಡ್ ಸಮತೋಲನದಿಂದ ಕೂಡಿದ ತಂಡವಾಗಿದೆ. ಶ್ರೀಲಂಕಾದಲ್ಲಿ ಅವರ ಪ್ರದರ್ಶನ ಅದ್ಭುತವಾಗಿತ್ತು, ಅಂತ ರಹಾನೆ ಹೇಳಿದರು
‘ನಾವು ಇಂಗ್ಲಿಷ್ ತಂಡದ ಎಲ್ಲ ಆಟಗಾರರ ಬಗ್ಗೆ ಯೋಜನೆ ಮಾಡಿಕೊಳ್ಳುತ್ತೇವೆ ಮತ್ತು ಒಂದು ತಂಡವಾಗಿ ನಮ್ಮ ಸಾಮರ್ಥ್ಯದ ಮೇಲೆ ಆತುಕೊಂಡು ಅದನ್ನು ಒರೆಗೆ ಹಚ್ಚುತ್ತೇವೆ,’ ಎಂದು ರಹಾನೆ ಮಾತು ಮುಗಿಸಿದರು.
ಭಾರತ ಮತ್ತು ಇಂಗ್ಲೆಂಡ್ ನಡುವೆ ಸರಣಿಯ ಮೊದಲ ಟೆಸ್ಟ್ ನಾಳೆಯಿಂದ (ಶುಕ್ರವಾರ) ಚೆನೈನ ಎಮ್ ಎ ಚಿದಂಬರಂ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಸರಣಿಯ ಎರಡನೇ ಟೆಸ್ಟ್ ಸಹ ಇದೆ ಇದೇ ಮೈದಾನದಲ್ಲಿ ಫೆಬ್ರುವರಿ 13 ರಿಂದ ಆಡಲಾಗುತ್ತದೆ.